ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karna Serial: ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಕಾಣಿಸ್ತಿಲ್ಲ, ಸ್ಕ್ರೀನ್ ಸ್ಪೇಸ್ ಇಲ್ಲ ಎಂದವರಿಗೆ ನಮ್ರತಾ ಗೌಡ ಹೇಳಿದ್ದೇನು?

ಇತ್ತೀಚಿನ ಎಪಿಸೋಡ್ನಲ್ಲಿ ನಿತ್ಯಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಮ್ರತಾ ಗೌಡ ಹೆಚ್ಚೇನು ಕಾಣಿಸಿಕೊಳ್ಳುತ್ತಿಲ್ಲ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅಭಿಮಾನಿಯ ಕಳಕಳಿಯನ್ನು ಅರ್ಥ ಮಾಡಿಕೊಂಡ ನಮ್ರತಾ ಗೌಡ ಈ ಪ್ರಶ್ನೆಗೆ ಉತ್ತರ ಕೂಡ ಕೊಟ್ಟಿದ್ದಾರೆ.

ನಿತ್ಯಾ ಕಾಣಿಸ್ತಿಲ್ಲ ಎಂದವರಿಗೆ ನಮ್ರತಾ ಹೇಳಿದ್ದೇನು?

Namrutha Gowda

Profile Vinay Bhat Aug 25, 2025 8:07 AM

ಝೀ ಕನ್ನಡ ವಾಹಿನಿಯಲ್ಲಿ ಆರಂಭದಲ್ಲಿ ವಿವಾದಗಳ ಮೂಲಕ ಸುದ್ದಿಯಾಗಿದ್ದ ಕರ್ಣ ಧಾರಾವಾಹಿ (Karna Serial) ಈಗ ಶುರುವಾಗಿ ಧೂಳೆಬ್ಬಿಸುತ್ತಿದೆ. ಕಿರುತೆರೆ ಲೋಕದಲ್ಲಿ ಸತತ ಏಳನೇ ವಾರವೂ ನಂಬರ್ ಒನ್ ಧಾರಾವಾಹಿ ಆಗಿ ಕರ್ಣ ಇತಿಹಾಸ ನಿರ್ಮಿಸಿದ್ದಾನೆ. ಎಲ್ಲ ಅಡೆತಡೆಗಳನ್ನು ದಾಟಿ ಕರ್ಣ ಅದ್ಧೂರಿ ಪ್ರಸಾರ ಕಾಣುತ್ತಿದೆ. ಜನರು ಕೂಡ ಈ ಧಾರಾವಾಹಿಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ.

ಕಿರಣ್ ರಾಜ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿಯಲ್ಲಿ ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಕೂಡ ಇದ್ದಾರೆ. ಕರ್ಣ ತ್ರಿಕೋನ ಪ್ರೇಮಕಥೆಯ ಧಾರಾವಾಹಿ ಎಂದು ಆರಂಭದಲ್ಲಿ ಹೇಳಲಾಗಿತ್ತು. ಶ್ರುತಿ ನಾಯ್ಡು ಅವರ ನಿರ್ಮಾಣ ಸಂಸ್ಥೆಯಲ್ಲಿ ಮೂಡಿ ಬಂದಿರುವ ಕರ್ಣ ಧಾರಾವಾಹಿಯಲ್ಲಿ ನಾಗಾಭರಣ, ಹಿರಿಯ ನಟಿ ಆಶಾ ರಾಣಿ, ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ನಟಿಸಿದ್ದ ವರಲಕ್ಷ್ಮೀ ಶ್ರೀನಿವಾಸ್ ಮತ್ತು ಶ್ಯಾಮ್ ಸಿಮ್ರನ್‌ ಕೂಡ ಇದ್ದಾರೆ.

ಆದರೆ, ಇತ್ತೀಚಿನ ಎಪಿಸೋಡ್​ನಲ್ಲಿ ನಿತ್ಯಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಮ್ರತಾ ಗೌಡ ಹೆಚ್ಚೇನು ಕಾಣಿಸಿಕೊಳ್ಳುತ್ತಿಲ್ಲ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ನಮ್ರತಾ ಅವರು ಮೊದಲಿಗೆ ಬಾಲ ನಟಿಯಾಗಿ ಸೀರಿಯಲ್, ಸಿನಿಮಾಗಳಲ್ಲಿ ನಟಿಸಿ ಗುರುತಿಸಿಕೊಂಡವರು. ಬಳಿಕ ಪುಟ್ಟ ಗೌರಿ ಮದುವೆ, ನಾಗಿಣಿ ಧಾರವಾಹಿ ಮೂಲಕ ಹೆಚ್ಚಿನ ಜನಪ್ರಿಯತೆ ಸಿಕ್ಕಿತು. ಬಿಗ್ ಬಾಸ್‌ ಶೋಗೆ ಹೋಗಿಬಂದ ನಂತರ ಅವರ ಅಭಿಮಾನಿಗಳ ಬಳಗ ಕೂಡ ಹೆಚ್ಚಾಗಿದೆ.

ಈ ಹಿಂದೆ ಲೀಡ್‌ ಪಾತ್ರದ ಮೂಲಕ ಜನರಿಗೆ ಹತ್ತಿರ ಆಗಿದ್ದ ನಮ್ರತಾ ಗೌಡ ಕರ್ಣ ಧಾರಾವಾಹಿಯಲ್ಲಿ ವೀಕ್ಷಕರಿಗೆ ಜಾಸ್ತಿ ಹೊತ್ತು ತೆರೆ ಮೇಲೆ ನೋಡುವ ಆಸೆ ಇದೆ. ಆದರೆ ನಿತ್ಯಾ ಪಾತ್ರವು ಅಷ್ಟಾಗಿ ಕಾಣಿಸುತ್ತಿಲ್ಲ. ಹೀಗಾಗಿ ಅಭಿಮಾನಿಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ, ನಾವು ನಿಮಗೋಸ್ಕರ ಕರ್ಣ ಧಾರಾವಾಹಿ ನೋಡುತ್ತಿದ್ದೆವು, ಆದರೆ ನಿತ್ಯಾ ಪಾತ್ರಕ್ಕೆ ಸ್ಕ್ರೀನ್‌ಸ್ಪೇಸ್‌ ಇಲ್ಲ. ಬಹಳ ಬೇಜಾರಾಗಿದೆ ಎಂದು ಕಾಮೆಂಟ್‌ ಮಾಡಿದ್ದಾರೆ.

Dhanraj Achar: ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ಧನರಾಜ್ ಆಚಾರ್

ಅಭಿಮಾನಿಯ ಕಳಕಳಿಯನ್ನು ಅರ್ಥ ಮಾಡಿಕೊಂಡ ನಮ್ರತಾ ಗೌಡ ಈ ಪ್ರಶ್ನೆಗೆ ಉತ್ತರ ಕೂಡ ಕೊಟ್ಟಿದ್ದಾರೆ. ‘ನಿತ್ಯಾ ಪಾತ್ರವನ್ನು ಕಡೆಗಣಿಸಲಾಗಿದೆ, ಸ್ಕ್ರೀನ್‌ಸ್ಪೇಸ್‌ ಇಲ್ಲ ಎಂದು ಅನೇಕರು ಬೇಸರ ಮಾಡಿಕೊಂಡಿದ್ದಾರೆ, ಚಿಂತಿಸುತ್ತಿದ್ದಾರೆ. ಈ ಬಗ್ಗೆ ವಾಹಿನಿಯು ಗಮನ ತಗೊಡು ಸ್ಕ್ರೀನ್‌ಪ್ಲೇ ಬರೆಯುತ್ತಿದೆ. ನೀವು ಬೇಜಾರಾಗಬೇಡಿ, ದ್ವೇಷವನ್ನು ಹರಡಬೇಡಿ’ ಎಂದು ಹೇಳಿದ್ದಾರೆ. ಧಾರಾವಾಹಿ ಆರಂಭವಾಗುವ ಹೊತ್ತಿಗೆ ಸ್ವತಃ ನಮ್ರತಾ ಅವರೇ, ‘ಈ ಸೀರಿಯಲ್​ನಲ್ಲಿ ಆರಂಭದಲ್ಲಿ ನನಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಇಲ್ಲ.. ನಂತರದಲ್ಲಿ ನನ್ನ ಪಾತ್ರಕ್ಕೆ ಹೆಚ್ಚಿನ ಮಹತ್ವ ಇದೆ’ ಎಂದು ಹೇಳಿದ್ದರು.