Actor Sridhar: 30 ವರ್ಷಗಳಿಂದ ಅಮ್ಮ, ತಮ್ಮನನ್ನು ನೋಡದ ಶ್ರೀಧರ್ಗೆ ಈಗ ಅವರೇ ಆಸರೆ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಧರ್ ಅವರು ಇತ್ತೀಚೆಗಷ್ಟೆ ಆರ್ಥಿಕ ಸಹಾಯಕ್ಕಾಗಿ ಮನವಿ ಕೂಡ ಮಾಡಿದ್ದಾರೆ. ಇದೀಗ ತಮ್ಮ ಜೀವನದ ಕಹಿ ಸತ್ಯವನ್ನು ವಿಶ್ವವಾಣಿ ಜೊತೆ ತೆರೆದಿಟ್ಟಿದ್ದಾರೆ. 30 ವರ್ಷ ಆದಮೇಲೆ ಅಮ್ಮ ನನ್ನನ್ನು ನೋಡಲು ಬಂದಿದ್ದಾರೆ. ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ತಮ್ಮಂದಿರು ಬಂದು ಹೋಗುತ್ತಿದ್ದಾರೆ, ಮಾತನಾಡಿಸುತ್ತಿದ್ದಾರೆ ಎಂದಿದ್ದಾರೆ.

Sridhar

ಕನ್ನಡಡ ಕಿರುತೆರೆಯ ಪಾರು, ವಧು ಸೀರಿಯಲ್ ನಟ ಶ್ರೀಧರ್ (Sridhar) ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ವಧು ಸೀರಿಯಲ್‌ನಲ್ಲಿ ನಾಯಕಿ ಡಿವೋರ್ಸ್ ಲಾಯರ್ ವಧು ಚಿಕ್ಕಪ್ಪನ ಪಾತ್ರದಲ್ಲಿ ಶ್ರೀಧರ್ ಅಭಿನಯಿಸುತ್ತಿದ್ದರು. ಆದರೆ, ದಿಢೀರ್ ಎಂದು ಅವರು ಆಸ್ಪತ್ರೆಯ ಬೆಡ್ ಮೇಲೆ ಮಲಗಿಕೊಂಡಿರುವ ಫೋಟೋ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಇನ್‌ಫೆಕ್ಷನ್‌ನಿಂದಾಗಿ ಶ್ರೀಧರ್ ತೀವ್ರ ಅಸ್ವಸ್ಥರಾಗಿದ್ದಾರೆ. ಶ್ರೀಧರ್ ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂದಾಗ ಅವರ ಅಮ್ಮ ಬಂದಿದ್ದಾರೆ. ಬೆಂಗಳೂರಿನ ಹೆಬ್ಬಾಳದಲ್ಲಿರುವ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಈಗ ಇವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಇತ್ತೀಚೆಗಷ್ಟೆ ಆರ್ಥಿಕ ಸಹಾಯಕ್ಕಾಗಿ ಮನವಿ ಕೂಡ ಮಾಡಿದ್ದಾರೆ. ಇದೀಗ ತಮ್ಮ ಜೀವನದ ಕಹಿ ಸತ್ಯವನ್ನು ವಿಶ್ವವಾಣಿ ಜೊತೆ ತೆರೆದಿಟ್ಟಿದ್ದಾರೆ. ‘‘30 ವರ್ಷ ಆದಮೇಲೆ ಅಮ್ಮ ನನ್ನನ್ನು ನೋಡಲು ಬಂದಿದ್ದಾರೆ. ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ತಮ್ಮಂದಿರು ಬಂದು ಹೋಗುತ್ತಿದ್ದಾರೆ, ಮಾತನಾಡಿಸುತ್ತಿದ್ದಾರೆ. ಜ್ವರ, ನೆಗಡಿ, ಕೆಮ್ಮು ಆತರಹ ಇದೆಲ್ಲಾ ಏನೂ ಬರುವುದಿಲ್ಲ ನನಗೆ. ಚಿಕ್ಕ ವಯಸ್ಸಿನಿಂದ ಸಂಬಂಧಗಳನ್ನು ಕಳೆದುಕೊಂಡು, ಆರ್ಥಿಕವಾಗಿ ನಷ್ಟ ತೆಗೆದುಕೊಂಡು, ಸಾಂಸಾರಿಕವಾಗಿ ದೂರವಾಗಿ, ಎಲ್ಲಾ ಅನುಭವಿಸಿಬಿಟ್ಟೆ’’ ಎಂದು ಹೇಳಿದ್ದಾರೆ.
‘‘ಮನೆಯಲ್ಲಿ ತುಂಬಾ ಕಷ್ಟ ಇತ್ತು. ನನಗೆ 22 ವರ್ಷ ವಯಸ್ಸಿದ್ದಾಗ ನಾನು ಆರ್ಟಿಸ್ಟ್ ಆಗಬೇಕು ಅಂತ ಮನೆಯಿಂದ ಹೊರ ಬಂದೆ. 30 ವರ್ಷ ಆದಮೇಲೆ ಇವತ್ತು ನನ್ನನ್ನು ನೋಡಲು ಅಮ್ಮ ಮತ್ತು ತಮ್ಮಂದಿರು ಬಂದಿದ್ದಾರೆ. ಸಂಪಾದನೆ ಇರಲಿಲ್ಲ, ನಾನು ಆರನೇ ತರಗತಿಯಲ್ಲಿದ್ದಾಗಲೇ ನನ್ನ ತಂದೆ ತೀರಿಕೊಂಡರು. ನಾವು ಬೀದಿಗೆ ಬಂದುಬಿಟ್ಟಿದ್ದೆವು. ಅಮ್ಮ ಕೆಲಸ ಮಾಡಿಕೊಂಡು ಒಂದು ಚಿಕ್ಕ ಮನೆಯಲ್ಲಿ ನಮ್ಮನ್ನೆಲ್ಲಾ ಸಾಕುತ್ತಿದ್ದರು. ಜೀವನದಲ್ಲಿ ಬದುಕಬೇಕು ಅನ್ನೋದಿತ್ತು ನನಗೆ ಆ ಆಸೆ ಈಗಿನ್ನೂ ಜಾಸ್ತಿಯಾಗಿದೆ. ನಾನು ಖಂಡಿವಾಗಿಯೂ ರೆಡಿಯಾಗಿ ಹಳೆಯ ಶ್ರೀಧರ್ ಆಗಿ ಬರುತ್ತೇನೆ. ಈ ವರ್ಷಕ್ಕೆ 50 ವರ್ಷ ತುಂಬುತ್ತದೆ ನನಗೆ. ಐವತ್ತು ವರ್ಷ ಬರೀ ಕಷ್ಟಗಳನ್ನೇ ನೋಡಿದ್ದೇನೆ’’ ಎಂದು ಶ್ರೀಧರ್ ಹೇಳಿದರು.
‘‘ಈಗ ಚೇತರಿಸಿಕೊಳ್ಳುತ್ತಿದ್ದೀನಿ ಎಂದು ಡಾಕ್ಟರ್ ಹೇಳಿದ್ದಾರೆ. ನನ್ನನ್ನು ಕೇಳುವವರು ಯಾರಿದ್ದಾರೆ ಅಂದುಕೊಂಡಿದ್ದೆ. ದೇವರ ರೂಪದಲ್ಲಿ ದೇವರು ತುಂಬಾ ಜನರನ್ನು ಕಳುಹಿಸಿದ್ದಾನೆ. ನನಗೆ ಮನುಷ್ಯರ ಮೇಲೆ ನಂಬಿಕೆ ಇರಲಿಲ್ಲ. ನಾನು ನಂಬೋದೆ ದೇವರನ್ನ, ಆದರೆ ಅವರು ಮನುಷ್ಯರಲ್ಲ ದೇವರ ರೂಪದಲ್ಲಿ ಬಂದು ಸಹಾಯ ಮಾಡುತ್ತಿದ್ದಾರೆ. ದಿನಕ್ಕೆ ಈಗ 15 ಸಾವಿರ ರೂಪಾಯಿ ಖರ್ಚಾಗುತ್ತಿದೆ. ಇಲ್ಲಿಯವರೆಗೂ ಮಾತ್ರೆಗೆ ಒಂದೂವರೆ ಲಕ್ಷ ರೂಪಾಯಿ ಖರ್ಚಾಗಿದೆ’’ ಎಂದರು.
Karna Serial: ಕರ್ಣ ಧಾರಾವಾಹಿ ಬಗ್ಗೆ ಮೊದಲ ಬಾರಿ ಮಾತನಾಡಿದ ಭವ್ಯಾ ಗೌಡ: ಏನಂದ್ರು ನೋಡಿ