Puttakkana Makkalu: ಪುಟ್ಟಕ್ಕನ ಮಕ್ಕಳು ಮುಕ್ತಾಯ ಆಗುತ್ತೆ ಎಂದವರಿಗೆ ಮತ್ತೊಂದು ಟ್ವಿಸ್ಟ್ ಕೊಟ್ಟ ನಿರ್ದೇಶಕರು
ಸ್ನೇಹನ ಕರ್ಕೊಂಡು ಕಂಠಿ ಸಿನಿಮಾಕ್ಕೆ ಹೋಗಿದ್ದಾನೆ. ಆದರೆ, ಸಿನಿಮಾ ಮುಗಿಸಿ ರಾತ್ರಿ ದಾರಿಯಲ್ಲಿ ಬರುತ್ತಿರುವಾಗ ಯಾರೋ ಅಪರಿಚಿತರು ಕಂಠಿ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿದ್ದಾರೆ. ಅವರ ವಿರುದ್ಧ ಕಂಠಿ ಹೋರಾಡುತ್ತಾನೆ. ಆದರೆ, ಈ ಗಲಾಟೆಯಲ್ಲಿ ಕಂಠಿಗೆ ಚೂರಿ ಇರಿಯಲಾಗಿದ್ದು, ನಡು ರಸ್ತೆಯಲ್ಲೇ ಕುಸಿದು ಬಿದ್ದಿದ್ದಾನೆ.

Puttakkana Makkalu Serial

ಕೆಲವು ತಿಂಗಳುಗಳ ಹಿಂದೆ ಕನ್ನಡ ಧಾರಾವಾಹಿಗಳ ಟಿಆರ್ಪಿ ಲಿಸ್ಟ್ನಲ್ಲಿ ನಂಬರ್ ಸ್ಥಾನದಲ್ಲಿದ್ದು ಕಿರುತೆರೆ ಲೋಕವನ್ನು ಆಳುತ್ತಿದ್ದ ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಈಗ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಸೀರಿಯಲ್‌ನಲ್ಲಿ ಆದ ಪಾತ್ರಗಳ ಬದಲಾವಣೆ ಹಾಗೂ ಕಥೆಯಲ್ಲಿ ಏನೂ ದೊಡ್ಡ ಬದಲಾವಣೆ ಇಲ್ಲದ ಕಾರಣ ದೊಡ್ಡ ಹೊಡೆತ ಬಿದ್ದಿತು. ರೇಟಿಂಗ್ ಪಾತಾಳಕ್ಕೆ ಕುಸಿದ ಬಳಿಕ ನಿರ್ದೇಶಕರು ಧಾರಾವಾಹಿಯನ್ನು ಮೇಲಕ್ಕೆತ್ತಲು ನಾನಾ ಟ್ವಿಸ್ಟ್ ನೀಡಿ ಪ್ರಯತ್ನ ಪಟ್ಟರು, ಆದರೆ ಅದು ಯಾವುದೂ ಸಾಧ್ಯವಾಗಲಿಲ್ಲ. ಬಳಿಕ ಇತ್ತೀಚೆಗಷ್ಟೆ ಈ ಧಾರಾವಾಹಿ ಕಂಠಿ, ಸ್ನೇಹಾ ಮದುವೆ ಮೂಲಕ ಮುಕ್ತಾಯ ಕಾಣಲಿದೆ ಎಂದು ಹೇಳಲಾಗಿತ್ತು. ಆದರೀಗ ಇದರಲ್ಲಿ ನಿರ್ದೇಶಕರು ಬಿಗ್ ಟ್ವಿಸ್ಟ್ ನೀಡಿದ್ದಾರೆ.
ಇತ್ತೀಚೆಗೆ ಧಾರಾವಾಹಿ ತುಂಬಾನೆ ಡಲ್ ಆಗಿದೆ. ಧಾರಾವಾಹಿಯ ಸಮಯ ಬದಲಾವಣೆ, ಕಥೆಯ ಅನಾವಶ್ಯಕ ತಿರುವುಗಳು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈ ಕಾರಣಕ್ಕೆ ಧಾರಾವಾಹಿಯನ್ನು ಕೊನೆಗೊಳಿಸುವಂತೆ ಪ್ರೇಕ್ಷಕರ ಕಡೆಯಿಂದ ಕೂಡ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಕಮೆಂಟ್ಗಳು ಕೂಡ ಬಂದವು.
ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಸ್ನೇಹಾ ಪಾತ್ರ ಕಣ್ಮುಚ್ಚುತ್ತಿದ್ದಂತೆ, ಕಿರುತೆರೆ ವೀಕ್ಷಕರಿಗೆ ಈ ಸಾವಿನ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ನಿರ್ದೇಶಕರ ನಡೆಯ ಬಗ್ಗೆಯೂ ವಿರೋಧ ವ್ಯಕ್ತಪಡಿಸಿದ್ದರು. ಕಥಾ ನಾಯಕಿ ಸಂಜನಾ ಬುರ್ಲಿ ಅವರು ಧಾರಾವಾಹಿಯಿಂದ ಹೊರ ನಡೆದಿದ್ದು ಈ ಸೀರಿಯಲ್ ಡೌನ್ ಆಗಲು ಕಾರಣ ಎನ್ನಲಾಯಿತು. ಸ್ನೇಹಾ ಸಾವಿನ ಬಳಿಕ ಧಾರಾವಾಹಿ ಸಂಪೂರ್ಣವಾಗಿ ಹಳಿ ತಪ್ಪಿ ಹೇಗೇಗೊ ಸಾಗುತ್ತಿತ್ತು.
ಆದರೆ, ಇತ್ತೀಚೆಗಷ್ಟೆ ನಿರ್ದೇಶಕರು ಹಾಗೂ ನಿರ್ಮಾಪಕರು ರೇಟಿಂಗ್ ಚನ್ನಾಗಿ ಇರೋವಾಗಲೇ ಧಾರಾವಾಹಿಗೆ ಒಂದೋಳ್ಳೆ ಕ್ಲೈಮ್ಯಾಕ್ಸ್ ಕೊಟ್ಟು ಮುಗಿಸುತ್ತೇವೆ ಎಂದಿದ್ದರು. ಅದರಂತೆ ಸ್ಟೋರಿಯಲಿ ಕಂಠಿ, ಸ್ನೇಹಾ ಮದುವೆಗೆ ಅಡ್ಡಿಯಾಗಿದ್ದ ಆತಂಕಗಳು ದೂರಾಗಿ ಬಂಗಾರಮ್ಮ ಪುಟ್ಟಕ್ಕ ಒಂದಾಗಿ ಮದುವೆ ಮಾಡಿ ಹ್ಯಾಪಿ ಮ್ಯಾರೀಡ್ ಲೈಫ್ ಎಂದಿದ್ದಾರೆ. ಈ ಮೂಲಕ ಧಾರಾವಾಹಿ ಮುಗಿಯಲಿದೆ ಎಂದು ಹೇಳಲಾಗಿತ್ತು. ಆದರೀಗ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್ ಕೊಡಲಾಗಿದೆ.
ಸ್ನೇಹನ ಕರ್ಕೊಂಡು ಕಂಠಿ ಸಿನಿಮಾಕ್ಕೆ ಹೋಗಿದ್ದಾನೆ. ಆದರೆ, ಸಿನಿಮಾ ಮುಗಿಸಿ ರಾತ್ರಿ ದಾರಿಯಲ್ಲಿ ಬರುತ್ತಿರುವಾಗ ಯಾರೋ ಅಪರಿಚಿತರು ಕಂಠಿ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿದ್ದಾರೆ. ಅವರ ವಿರುದ್ಧ ಕಂಠಿ ಹೋರಾಡುತ್ತಾನೆ. ಆದರೆ, ಈ ಗಲಾಟೆಯಲ್ಲಿ ಕಂಠಿಗೆ ಚೂರಿ ಇರಿಯಲಾಗಿದ್ದು, ನಡು ರಸ್ತೆಯಲ್ಲೇ ಕುಸಿದು ಬಿದ್ದಿದ್ದಾನೆ. ಸ್ನೇಹ ಏನು ಮಾಡಬೇಕು ಎಂದು ತಿಳಿಯದೆ ಗಾಬರಿಯಲ್ಲಿ ಕಣ್ಣೀರಿಟ್ಟಿದ್ದಾಳೆ. ಸದ್ಯ ಈ ಟ್ವಿಸ್ಟ್ ಧಾರಾವಾಹಿಗೆ ಹೊಸ ರೂಪ ನೀಡಿದೆ. ಇನ್ನೇನು ಮುಗಿಯುತ್ತೆ ಅಂದುಕೊಂಡಿದ್ದ ಧಾರಾವಾಹಿಯಲ್ಲಿ ಇನ್ನು ಏನಾಗುತ್ತೆ ಎಂಬುದು ಕುತೂಹಲ ಕೆರಳಿಸಿದೆ.
Bhagya Lakshmi Serial: ಭಾಗ್ಯ ತೋಡಿದ ಹಳ್ಳಕ್ಕೆ ಸುಲಭವಾಗಿ ಬಿದ್ದ ತಾಂಡವ್ ಗೆಳತಿ: ಮುಂದಿದೆ ಮಾರಿಹಬ್ಬ