Rashmika Mandanna: ರಶ್ಮಿಕಾ ಮಂದಣ್ಣ ಹಂಚಿಕೊಂಡ ತನ್ನ ಎಕ್ಸ್ ರೇಯಲ್ಲಿ ರಿವೀಲ್ ಆಯ್ತು ಶಾಕಿಂಗ್ ವಿಷ್ಯ
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚಿಗೆ ಕಾಲಿಗೆ ಪೆಟ್ಟು ಮಾಡಿಕೊಂಡಿರೋದು ಗೊತ್ತೇ ಇದೆ. ಇದೀಗ ಇನ್ಸ್ಟಾಗ್ರಾಮ್ ನಲ್ಲಿ ಅವರ ಕಾಲಿನ ಎಕ್ಸ್ ರೇ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಆ ಚಿತ್ರದಲ್ಲಿ ಕಾಲಿಗೆ 3 ಫ್ರಾಕ್ಚರ್ ಆಗಿರುವುದು ಗೋಚರವಾಗುತ್ತಿದ್ದು, ಕೊಡಗಿನ ಬ್ಯೂಟಿ ಹಂಚಿಕೊಂಡಿರುವ ಪೋಸ್ಟ್ ನಲ್ಲಿ ಕಾಲು ಮೂಳೆ ಮುರಿದಿರೋದು ಸ್ಪಷ್ಟವಾಗಿ ಕಾಣಿಸಿದೆ.
ಬೆಂಗಳೂರು: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚಿಗೆ ಕಾಲಿಗೆ ಪೆಟ್ಟು ಮಾಡಿಕೊಂಡಿರೋದು ಗೊತ್ತೇ ಇದೆ. ಛಾವಾ ಸಿನಿಮಾದ ಟ್ರೈಲರ್ ಲಾಂಚ್ಗೆ ಕುಂಟಿಕೊಂಡೇ ಬಂದಿರೋ ರಶ್ಮಿಕಾ ಕಮಿಟ್ಮೆಂಟ್ನ ಎಲ್ಲರೂ ಕೊಂಡಾಡ್ತಾ ಇದ್ದಾರೆ. ಆದ್ರೆ ರಶ್ಮಿಕಾ ಮಾತ್ರ ಆ ನೋವಿನಿಂದ ಇನ್ನೂ ಹೊರಬಂದಂತೆ ಕಾಣುತ್ತಿಲ್ಲ.
ಹೌದು ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಪೆಟ್ಟು ಮಾಡಿಕೊಂಡಿದ್ದ ನಟಿ ರಶ್ಮಿಕಾ ಮಂದಣ್ಣ ಇದೀಗ ಅಭಿಮಾನಿಗಳೊಂದಿಗೆ ತಮ್ಮ ಆರೋಗ್ಯದ ಕುರಿತು ಹೊಸ ಆಪ್ಡೇಟ್ ಹಂಚಿಕೊಂಡಿದ್ದು, ಇನ್ಸ್ಟಾಗ್ರಾಮ್ ನಲ್ಲಿ ಅವರ ಕಾಲಿನ ಎಕ್ಸರೇ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಆ ಚಿತ್ರದಲ್ಲಿ ಕಾಲಿಗೆ 3 ಫ್ರಾಕ್ಚರ್ ಆಗಿರುವುದು ಗೋಚರವಾಗುತ್ತಿದ್ದು, ಕೊಡಗಿನ ಬ್ಯೂಟಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಕಾಲು ಮೂಳೆ ಮುರಿದಿರೋದು ಸ್ಪಷ್ಟವಾಗಿ ಕಾಣಿಸಿದೆ. ಇದರಿಂದ ಬೇಸರಗೊಂಡಿರುವ ಕಿರಿಕ್ ಬೆಡಗಿ ಈ ಫೋಟೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ನೋವನ್ನು ಹೊರ ಹಾಕಿದ್ದು, ಕಳೆದ 2 ವಾರದಿಂದ ನನ್ನ ಕಾಲನ್ನು ನೆಲದ ಮೇಲೆ ಇಟ್ಟಿಲ್ಲ. ನನ್ನ ಸ್ವಂತ ಕಾಲಿನ ಮೇಲೆ ನಡೆಯುವುದನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ ಎಂದಿದ್ದು, ಆರೋಗ್ಯ ತುಂಬಾ ಮುಖ್ಯ. ಎಲ್ಲರೂ ನಿಮ್ಮನ್ನ ನೀವು ತುಂಬಾ ಕೇರ್ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.
ಜ.12ರಂದು ತಮ್ಮ ಬಲಗಾಲಿಗೆ ಪೆಟ್ಟಾಗಿರುವ ಫೋಟೊವನ್ನು ಹಂಚಿಕೊಂಡಿದ್ದ 'ಪುಷ್ಪ 2' ಚಿತ್ರದ ತಾರೆ ರಶ್ಮಿಕಾ, ವರ್ಕೌಟ್ ಮಾಡುವ ವೇಳೆ ಜಿಮ್‌ನಲ್ಲಿ ಗಾಯಗೊಂಡಿದ್ದು, ಇದೀಗ ವಿಶ್ರಾಂತಿ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದರು. 'ಹೊಸ ವರ್ಷವು ನೋವಿನಿಂದಲೇ ಆರಂಭವಾಯಿತು, ನನ್ನ ಪವಿತ್ರ ಜಿಮ್ ದೇಗುಲದಲ್ಲಿ ನಾನು ಗಾಯಗೊಂಡಿದ್ದೇನೆ' ಎಂದು ಶೀರ್ಷಿಕೆ ನೀಡಿದ್ದ ನಟಿ, ಗಾಯದಿಂದಾಗಿ ಚಿತ್ರೀಕರಣ ವಿಳಂಬವಾಗುತ್ತಿರುವುದಕ್ಕಾಗಿ ತಮ್ಮ ಮುಂಬರುವ ಚಿತ್ರಗಳಾದ ಥಾಮ, ಸಿಕಂದರ್ ಮತ್ತು ಕುಬೇರ ಚಿತ್ರದ ನಿರ್ದೇಶಕರ ಬಳಿ ಕ್ಷಮೆಯನ್ನು ಯಾಚಿಸಿದ್ದರು.
ಸದ್ಯ ರಶ್ಮಿಕಾ ವಿಶ್ರಾಂತಿ ಮೂಡ್‌ನಲ್ಲಿರುವ ಅವರು ಆದಷ್ಟು ಬೇಗ ಚೇತರಿಸಿಕೊಳ್ಳುವಂತೆ ಆಗಲಿ ಎಂದು ಫ್ಯಾನ್ಸ್ ಹಾರೈಸಿದ್ದಾರೆ. ಬುಧವಾರ ಮುಂಬೈನಲ್ಲಿ ಛಾವಾ ಸಿನಿಮಾದ ಟ್ರೇಲರ್ ಲಾಂಚ್ ಇವೆಂಟ್ ಇದ್ದಿದ್ದರಿಂದ, ಅದರಲ್ಲಿ ಭಾಗಿಯಾಗಲು ರಶ್ಮಿಕಾ ಕಾಲು ನೋವಿನ ನಡುವೆಯೂ ಮುಂಬೈಗೆ ಬಂದಿದ್ದಾರೆ.
ಅದಕ್ಕೂ ಮುನ್ನ ಕಾಲು ನೋವಿನ ಬಗ್ಗೆ ಅವರು ಪೋಸ್ಟ್ ಹಂಚಿಕೊಂಡಿದ್ದರು. "ತಾವು ಮೊದಲಿನಂತಾಗಲು ಕೆಲವು ವಾರಗಳು ಅಥವಾ ತಿಂಗಳುಗಳೇ ಬೇಕಾಗಬಹುದು ಅಥವಾ ದೇವರಿಗೇ ಗೊತ್ತು. ಕಾಲು ಯಾವಾಗ ಗುಣವಾಗುತ್ತದೆ ಎಂದು ಗೊತ್ತಿಲ್ಲ. ಆದ್ದರಿಂದ ನಾನೀಗ ನಂಬಿಕೆಯ ಮೋಡ್‌ನಲ್ಲಿದ್ದೇನೆ. ‘ಥಾಮ’, ‘ಸಿಕಂದರ್’ ಮತ್ತು ‘ಕುಬೇರ’ ಸಿನಿಮಾ ಸೆಟ್‌ಗಳಿಗೆ ಮರಳುವ ಭರವಸೆಯಲ್ಲಿದ್ದೇನೆ" ಎಂದು ನಟಿ ರಶ್ಮಿಕಾ ಹೇಳಿಕೊಂಡಿದ್ದರು.
ಈ ಸುದ್ದಿಯನ್ನು ಓದಿ: Yajamana Serial; ಇಂದಿನಿಂದ ನಿಮ್ಮ ಮನೆಗೆ ಬರಲಿದ್ದಾರೆ ಗಂಡಸರಂದ್ರೇನೇ ಆಗದ ಝಾನ್ಸಿ, ಹೆಣ್ಣನ್ನು ಪೂಜಿಸುವ ರಾಘವೇಂದ್ರ ...!
"ತಡವಾಗುತ್ತಿರುವುದಕ್ಕೆ ಕ್ಷಮೆಯಿರಲಿ ಎಂದು ನಿರ್ದೇಶಕರಲ್ಲಿ ಕೇಳಿಕೊಳ್ಳುತ್ತೇನೆ. ನನ್ನ ಕಾಲುಗಳು ಆ್ಯಕ್ಷನ್ ದೃಶ್ಯಗಳಿಗೆ ಫಿಟ್ ಆಗಿವೆ ಎಂದು ಖಾತರಿಯಾದ ಮೇಲೆ ತಕ್ಷಣವೇ ಸೆಟ್‌ಗೆ ಮರಳುವೆ" ಎಂದು ರಶ್ಮಿಕಾ ಹೇಳಿಕೊಂಡಿದ್ದರು. ಇನ್ನು, ‘ಛಾವಾ’ ಸಿನಿಮಾದಲ್ಲಿ ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ನಟಿಸಿದ್ದಾರೆ. "ಪ್ರತಿ ಪರಾಕ್ರಮಿ ದೊರೆಯ ಹಿಂದೆ ಒಬ್ಬಳು ಸರಿಸಾಟಿಯಿಲ್ಲದ ಶಕ್ತಿಯಿರುವ ರಾಣಿಯಿರುತ್ತಾಳೆ. ರಶ್ಮಿಕಾ ಮಂದಣ್ಣರನ್ನು ಸ್ವರಾಜ್ಯದ ಹೆಮ್ಮೆ ಮಹಾರಾಣಿ ಯೇಸುಬಾಯಿಯಾಗಿ ಪರಿಚಯಿಸುತ್ತಿದ್ದೇವೆ" ಎಂದು ಚಿತ್ರತಂಡ ಹೇಳಿಕೊಂಡಿದೆ.