Yajamana Serial; ಇಂದಿನಿಂದ ನಿಮ್ಮ ಮನೆಗೆ ಬರಲಿದ್ದಾರೆ ಗಂಡಸರಂದ್ರೇನೇ ಆಗದ ಝಾನ್ಸಿ, ಹೆಣ್ಣನ್ನು ಪೂಜಿಸುವ ರಾಘವೇಂದ್ರ ...!
ಇಂದಿನಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿಗಳು ಆರಂಭವಾಗಲಿದೆ. ಒಂದು ಕಾಂಟ್ರ್ಯಾಕ್ಟ್ ಮ್ಯಾರೇಜ್ ಮದುವೆ ಕಥೆ ‘ಯಜಮಾನ’. ಈ ಸೀರಿಯಲ್ ಕಥೆ ಏನು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಬಿಗ್‌ಬಾಸ್(biggboss) ಕನ್ನಡ ಸೀಸನ್ 11ಗೆ ತೆರೆಬಿದ್ದಿದ್ದು, ಇದು ದೊಡ್ಮನೆ ಲವರ್ಸ್ ಗೆ ಇದು ಕೊಂಚ ಬೇಸರದ ಸಂಗತಿಯಾದರೂ ಸೀರಿಯಲ್ ಲವರ್ಸ್ ಗಳನ್ನು ಮನರಂಜಿಸಲು ಹೊಸ ಧಾರಾವಾಹಿಗಳು ಬರ್ತಾ ಇದೆ. ಹೌದು ಇಂದಿನಿಂದ ಕಲರ್ಸ್ ಕನ್ನಡ(Colors Kannada)ದಲ್ಲಿ 10 ಗಂಟೆಯ ಸ್ಲಾಟ್‌ಗೆ ಹೊಸ ಸೀರಿಯಲ್ ಪ್ರಸಾರವಾಗಲಿದ್ದು, ವಿಭಿನ್ನ ಕಥಾಹಂದರವುಳ್ಳ ಧಾರವಾಹಿಗಳ ಮೂಲಕ ವೀಕ್ಷಕರನ್ನು ಹಿಡಿದಿಟ್ಟುಕೊಂಡಿರುವ ಕಲರ್ಸ್ ಇದೀಗ ‘ಯಜಮಾನ’(Yajamana) ಎಂಬ ಸೀರಿಯಲ್ ಅನ್ನು ಪ್ರೇಕ್ಷಕ ಪ್ರಭುಗಳು ಮುಂದಿಡುತ್ತಿದೆ.
ಆಸ್ತಿ-ಸಿರಿವಂತಿಕೆಗಾಗಿ ಒಂದು ತಿಂಗಳ ಕಾಲಾವಧಿಗೆ ಮದುವೆ ಆಗೋ ಶ್ರೀಮಂತ ಯುವತಿಯ ಕಥೆ ಇದಾಗಿದ್ದು, ತಂಗಿಗಾಗಿಯೇ ಕಾಂಟ್ರಾಕ್ಟ್ ಮ್ಯಾರೇಜ್ ಆಗೋ ಯುವಕನ ವ್ಯಥ್ಯೆ ಇಲ್ಲಿ ವಿಭಿನ್ನವಾಗಿಯೇ ಕಾಣಿಸುತ್ತಿದೆ.
ಕಲರ್ಸ್ ಕನ್ನಡದಲ್ಲಿ ಕಳೆದ ವಾರಗಳಿಂದ ಯಜಮಾನ ಸೀರಿಯಲ್‌ನ ಪ್ರೋಮೋಗಳನ್ನು ಬಿಡುಗಡೆ ಮಾಡುತ್ತಿದ್ದು, ಹಿರಿಯ ನಟಿ ಶ್ರುತಿ, ನಟಿ ಸಪ್ತಮಿ ಗೌಡ ಹೊಸ ಯಜಮಾನ ಸೀರಿಯಲ್‌ಅನ್ನು ನಿರೂಪಣೆ ಮಾಡಿದ್ದರು. ಶ್ರೀಮಂತಿಕೆಯ ದರ್ಪ, ಬಡವನ ಕಷ್ಟ ಅನ್ನೋ ಕಾನ್ಸೆಪ್ಟ್‌ನಲ್ಲಿ ಯಜಮಾನ ಸೀರಿಯಲ್ ಮೂಡಿಬರಲಿದೆ ಎಂಬ ಸುಳಿವು ಸಿಕ್ಕಿತ್ತು. ಈಗ ಎರಡನೇ ಪ್ರೋಮೋ ಬಿಡುಗಡೆ ಆಗಿದ್ದು, ಕಥೆ ಹೇಗಿರಲಿದೆ ಎಂಬುದನ್ನು ಪ್ರೇಕ್ಷಕರ ಮುಂದಿಟ್ಟಿದೆ ಕಲರ್ಸ್ ಕನ್ನಡ ವಾಹಿನಿ.
ಈ ಸುದ್ದಿಯನ್ನೂ ಓದಿ: Bigg Boss Kannada 11: 20 ಲಕ್ಷ ರೂ. ನಿರಾಕರಿಸಿದ ಬಿಗ್ ಬಾಸ್ ಸ್ಪರ್ಧಿಗಳು; ಕಿಚ್ಚ ಹೇಳಿದ್ದೇನು?
ಗಂಡನ್ನು ದ್ವೇಷಿಸೋ ಹೆಣ್ಣಿನ ಕಥೆ
ಜೀವನದಲ್ಲಿ ಕ್ಷಣ ಕ್ಷಣಕ್ಕೂ ಆಶ್ಚರ್ಯ ನಡೆಯುತ್ತೆ. ಅದೇ ರೀತಿ ಎಸ್ ಎಂ ಕಂಪನಿಯ ಅಕೌಂಟಂಟ್ ಜಾಬ್‌ಗೆ ಇಂಟರ್ವ್ಯೂ ನಡೆಯುತ್ತಿದೆ. ಆದರೆ, ಇದು ಝಾನ್ಸಿ ಗಂಡನ ಪೊಸಿಷನ್‌ಗೆ ನಡೆಯುತ್ತಿರುವ ಸಂದರ್ಶನ ಎಂಬುದು ಕಥಾನಾಯಕನಿಗೆ ಗೊತ್ತಾಗುತ್ತೆ. ಇತ್ತ ಐಶಾರಾಮಿ ಕಾರ್‌ನಿಂದ ಇಳಿದ ಝಾನ್ಸಿ ಕಾಲಿನ ಮೇಲೆ ಟೀ ಗ್ಲಾಸ್ ಬೀಳುತ್ತೆ. ಅದೇ ಗ್ಲಾಸ್ ಎತ್ತಿಡಲು, ಗಂಡಸರನ್ನು ನೇಮಿಸಿಕೊಂಡಿರ್ತಾಳೆ ಝಾನ್ಸಿ. "ಇಂಥ ಚಿಲ್ಲರೆ ಕೆಲಸ ಮಾಡೋಕೆ ಅಂತಾನೇ, ನಿನ್ನಂಥ ಗಂಡ ಜಾತಿಯನ್ನ ನನ್ನ ಆಫೀಸ್‌ನಲ್ಲಿ ಇಟ್ಕೊಂಡಿರೋದು" ಎಂಬ ದರ್ಪದ ಮಾತು ಝಾನ್ಸಿ ಬಾಯಿಂದ ಬರುತ್ತೆ.
ಆದರೆ ಚೂರೂ ಸ್ವಾರ್ಥವಿಲ್ಲದ ಸರಳ ವ್ಯಕ್ತಿ ರಘುಗೆ ತನ್ನ ಕುಟುಂಬದ ಪ್ರೀತಿ ಗಳಿಸುವ ಮಹದಾಸೆ. ಕಷ್ಟದಲ್ಲಿರುವ ತನ್ನ ಕುಟುಂಬದ ಒಳಿತಿಗೆ ಈ ಮದುವೆ ದಾರಿಯಾದೀತೆಂದು ಬಗೆಯುವ ರಘು ಮದುವೆಗೆ ಒಪ್ಪುತ್ತಾನೆ. ಮದುವೆಯ ನಂತರ ಅನೇಕ ಅನೂಹ್ಯ ತಿರುವುಗಳು ಬಂದು ಕತೆಯನ್ನು ಮತ್ತೆಲ್ಲಿಗೋ ಸೆಳೆದೊಯ್ಯುತ್ತವೆ. ರಘು ಮತ್ತು ಝಾನ್ಸಿ ತಮ್ಮ ವ್ಯಕ್ತಿತ್ವದಲ್ಲಿರುವ ಭಿನ್ನತೆಯನ್ನು ಎದುರಿಸಬೇಕಾಗುತ್ತದೆ. ಅನುಕೂಲಕ್ಕೆಂದು ಆರಂಭವಾದ ಅವರಿಬ್ಬರ ಸಂಬಂಧ ಈಗ ಗಾಢವಾಗುತ್ತಾ ಬೆಳೆದರೂ ಯಾವುದೇ ಕ್ಷಣದಲ್ಲೂ ಒಡೆದುಹೋಗುವ ಭಯವನ್ನೂ ಹುಟ್ಟಿಸುತ್ತದೆ.
ಇಂದಿನಿಂದ ರಾತ್ರಿ 10ಕ್ಕೆ ಯಜಮಾನ
ಗಂಡಸರನ್ನ ದ್ವೇಷಿಸೋ ಹೆಣ್ಣಿಗೆ, ಹೆಣ್ಣನ್ನ ಪೂಜಿಸೋ ಗಂಡೇ ಯಜಮಾನ… ಅನ್ನೋ ಹೊಸ ಕಾನ್ಸೆಪ್ಟ್‌ನಲ್ಲಿ ಯಜಮಾನ ಸೀರಿಯಲ್ ಮೂಡಿಬರುತ್ತಿದೆ. ಇನ್ನೇನು ಕಲರ್ಸ್ ಕನ್ನಡದಲ್ಲಿ ಜನವರಿ 27ರಿಂದ ರಾತ್ರಿ 10 ಗಂಟೆಗೆ ಈ ಸೀರಿಯಲ್ ಪ್ರಸಾರ ಆರಂಭಿಸಲಿದೆ. ಇನ್‌ಸ್ಟಾಗ್ರಾಂ ಇನ್‌ಪ್ಲುಯೆನ್ಸರ್ ಮಧುಶ್ರೀ ಈ ಧಾರಾವಾಹಿ ನಾಯಕಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿಕೊಡುತ್ತಿದ್ದಾರೆ. ಇದೇ ಸೀರಿಯಲ್‌ನಲ್ಲಿ ಡೆಲಿವರಿ ಬಾಯ್ ಪಾತ್ರದಲ್ಲಿ ಹರ್ಷ ಬಿಎಸ್ ಯಜಮಾನ ಧಾರಾವಾಹಿಯಲ್ಲಿದ್ದಾರೆ.
ಕಥೆಯ ಹಿಂಡು ಕೊಟ್ಟ ಪ್ರೋಮೋ..!
"30 ದಿನದ ಪ್ರಪಂಚದ ಕಣ್ಣಿಗೆ ನೀನು ಗಂಡನಾಗಿರಬೇಕು. ತಾಳಿ ಕಟ್ಟೋದಕ್ಕೂ ಸಹ ನೀನು ನನ್ನನ್ನ ಟಚ್ ಮಾಡೋ ಹಾಗಿಲ್ಲ. ಬೆಡ್ ಅಲ್ಲ ನನ್ನ ಬೆಡ್‌ರೂಮ್‌ಗೂ ನಿನಗೆ ಎಂಟ್ರಿ ಇರಲ್ಲ. 31ನೇ ದಿನ ನೀನು ಜೀವನದಲ್ಲಿಯೇ ನೋಡಿರಲ್ಲ ಅಷ್ಟು ದುಡ್ಡು ನೋಡ್ತಿಯಾ. ಇಷ್ಟ ಇದ್ರೆ ಈ ಕಾಂಟ್ರ್ಯಾಕ್ಟ್‌ಗೆ ಸಹಿ ಮಾಡು. ಇಲ್ಲ ಅಂದ್ರೆ ಗೆಟ್ ಔಟ್" ಎಂದು ಝಾನ್ಸಿ ಆವಾಜ್ ಹಾಕ್ತಾಳೆ. ಇತ್ತ, "ಈ ಒಂದು ಸೈನ್‌ನಿಂದ ನನ್ನ ಬದುಕು ಹೇಗೆ ಬೇಕಾದರೂ ಬದಲಾಗಬಹುದು. ಏನು ಬೇಕಾದರೂ ಕಳೆದುಕೊಳ್ಳಬಹುದು. ನನ್ನ ತಂಗಿ ಮದುವೆಗೋಸ್ಕರ ಸ್ವಾಭಿಮಾನ ಕಳೆದುಕೊಳ್ಳಬೇಕಾ?" ಈ ರೀತಿಯ ಹಳಿಯ ಮೇಲೆ ಸಾಗಲಿದೆ ಯಜಮಾನ ಧಾರಾವಾಹಿ.
ಪ್ರೀತಿ, ಮಹತ್ವಾಕಾಂಕ್ಷೆ ಮತ್ತು ಸ್ವಾರ್ಥದ ಆಟ ‘ಯಜಮಾನ’ದ ಕತೆ ಹೋಗಲಿದ್ದು, ರಘು ಮತ್ತು ಝಾನ್ಸಿ ಎಂದಾದರೂ ಬದುಕು ತಮಗೆ ಒಡ್ಡುವ ಸವಾಲುಗಳನ್ನು ಗೆಲ್ಲುತ್ತಾರಾ? ಅಥವಾ ಅವರ ವ್ಯಕ್ತಿತ್ವದಲ್ಲಿರುವ ಭಿನ್ನತೆಯೇ ಅವರನ್ನು ದೂರಾಗಿಸುತ್ತದೆಯಾ? ಉತ್ತರಕ್ಕೆ ಸಂಚಿಕೆಗಳನ್ನು ಕಾದು ನೋಡಬೇಕು.
ಇನ್ನು ಹೊಸ ಮುಖಗಳಾದ ಹರ್ಷ ಬಿ. ಎಸ್. ಮತ್ತು ಮಧುಶ್ರೀ ಭೈರಪ್ಪ ‘ಯಜಮಾನ’ದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅವರಿಗೆ ಬೆಂಬಲವಾಗಿ ರಮೇಶ್ ಭಟ್, ನಾಗಾಭರಣ, ಮಂಜುಳ, ಅಂಕಿತಾ ಜೈರಾಮ್, ತಿಲಕ್, ಸ್ಪೂರ್ತಿ, ಪ್ರದೀಪ್ ಮತ್ತು ವಿಶ್ವ ಇಲ್ಲಿದ್ದಾರೆ.