Seetha Rama Serial: ಕೊನೆಗೂ ಸೀತಾಗೆ ಗೊತ್ತಾಯಿತು ಸಿಹಿಯ ಸಾವಿನ ರಹಸ್ಯ: ಭಾರ್ಗವಿಗೆ ಕಾದಿದೆ ಕಂಟಕ
ಸುಬ್ಬಿ-ಸಿಹಿ ಹಾಗೂ ಅಶೋಕ್ ಪ್ಲ್ಯಾನ್ ಮಾಡಿ ಭಾರ್ಗವಿಯ ಮುಖವಾಡ ಕಳಚಲು ಹಾಗೂ ನಿಜಾಂಶವನ್ನು ರಾಮನಿಗೆ ತಿಳಿಸಲು ಪ್ಲ್ಯಾನ್ ಮಾಡಿದ್ದರು. ಆದರೆ, ಇದು ಯಶಸ್ಸು ಕಾಣಲಿಲ್ಲ. ಭಾರ್ಗವಿ ಇದರಲ್ಲಿ ಗೆದ್ದು ಬಿಟ್ಟಳು. ಆದರೀಗ ಅಚಾನಕ್ ಆಗಿ ಸೀತಾಗೆ ಸಿಹಿಯ ಸಾವಿನ ಸುದ್ದಿ ಬರಸಿಡಿಲಿನಂತೆ ಕಿವಿಗೆ ಬಡಿದಿದೆ.

Seetha rama Serial

ಝೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಸೀತಾ ರಾಮ (Seetha Rama serial) ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡಲಾಗುತ್ತಿದೆ. ಸಮು ಬದಲಾವಣೆಯಿಂದ ಪಾತಾಳಕ್ಕೆ ಕುಸಿದ ಟಿಆರ್ಪಿಯನ್ನು ಮೇಲಕ್ಕೆತ್ತಲು ನಿರ್ದೇಶಕರು ಕಥೆಯನ್ನು ದೊಡ್ಡ ಟರ್ನಿಂಗ್ ಪಾಯಿಂಟ್ ನೀಡಿದ್ದಾರೆ. ಭಾರ್ಗವಿಯ ಪಿತೂರಿ ಜಗಜ್ಜಾಹೀರಾಗುವ ಎಲ್ಲ ಲಕ್ಷಣ ಕಾಣುತ್ತಿದೆ. ಈಗಾಗಲೇ ಅಶೋಕನಿಗೆ ಸಿಹಿಯ ಆತ್ಮ ಇರುವುದು ಗೊತ್ತಾಗಿದೆ. ಸುಬ್ಬಿ-ಸಿಹಿ ಹಾಗೂ ಅಶೋಕ್ ಪ್ಲ್ಯಾನ್ ಮಾಡಿ ಭಾರ್ಗವಿಯ ಮುಖವಾಡ ಕಳಚಲು ಹಾಗೂ ನಿಜಾಂಶವನ್ನು ರಾಮನಿಗೆ ತಿಳಿಸಲು ಪ್ಲ್ಯಾನ್ ಮಾಡಿದ್ದರು. ಆದರೆ, ಇದು ಯಶಸ್ಸು ಕಾಣಲಿಲ್ಲ. ಭಾರ್ಗವಿ ಇದರಲ್ಲಿ ಗೆದ್ದು ಬಿಟ್ಟಳು. ಆದರೀಗ ಅಚಾನಕ್ ಆಗಿ ಸೀತಾಗೆ ಸಿಹಿಯ ಸಾವಿನ ಸುದ್ದಿ ಬರಸಿಡಿಲಿನಂತೆ ಕಿವಿಗೆ ಬಡಿದಿದೆ.
ಭಾರ್ಗವಿಯ ಕೆಟ್ಟ ಕೆಲಸಗಳನ್ನು ಇಲ್ಲಿಯವರೆಗೂ ತನ್ನೊಳಗೆ ಹುದುಗಿಸಿಟ್ಟುಕೊಂಡಿದ್ದ ಸತ್ಯಜೀತ್, ಇದೀಗ ಅದೇ ಸತ್ಯವನ್ನು ಅಪ್ಪ ಸೂರ್ಯ ಪ್ರಕಾಶ್ ಮುಂದೆ ಹೇಳಲು ಬಂದು ನಿಂತಿದ್ದಾನೆ. "ನಿಮ್ಮೆಲ್ಲರಿಗೂ ಸತ್ಯ ಏನು ಅಂತ ಗೊತ್ತಾಗಬೇಕು. ಅದನ್ನು ಹೇಳಲೆಂದೇ ನಾನಿಲ್ಲಿ ಬಂದಿದ್ದೇನೆ" ಎಂದು ಸತ್ಯ ಹೇಳಿದ್ದಾನೆ. ಆದರೆ, ಇಲ್ಲಿ ಸತ್ಯಜೀತ್ ಹೇಳಲು ಬಂದಿರುವುದು ಅಣ್ಣ-ಅತ್ತಿಗೆಯ (ಅಶೋಕನ ತಂದೆ-ತಾಯಿ) ಸಾವಿನ ವಿಷಯ. ಇದರ ಮಧ್ಯೆ ಸಿಹಿಯ ಸಾವಿನ ಸುದ್ದಿಯೂ ಬಂದಿದೆ. ಇದು ಸೀತಾ ಕಿವಿಗೆ ಬಿದ್ದಿದೆ.
ಅಶೋಕನ ತಂದೆ-ತಾಯಿ ಸಾವಿಗೆ ರಾಮನ ಚಿಕ್ಕಪ್ಪ ಸತ್ಯ ಕಾರಣ ಎಂದು ಎಲ್ಲರೂ ಅಂದುಕೊಂಡಿದ್ದರು. ಇದನ್ನು ಸುಳ್ಳು ಮಾಡುವ ಪ್ರಯತ್ನದಲ್ಲಿ ಸತ್ಯ ಇದ್ದಾನೆ. ಈ ಕಾರಣಕ್ಕೆ ಆತ ನೇರವಾಗಿ ಭಾರ್ಗವಿಯ ಹೆಸರನ್ನು ತೆಗೆದುಕೊಂಡಿದ್ದಾನೆ. ಇದರಿಂದ ಸಿಟ್ಟಾದ ಭಾರ್ಗವಿಯು ಕೋಪಗೊಂಡಿದ್ದಾಳೆ ಮತ್ತು ಕೂಗಾಡಿದ್ದಾಳೆ.
"ನಾನು ನನ್ನ ಅಣ್ಣ ಅತ್ತಿಗೆಯನ್ನು ಕೊಂದಿಲ್ಲ. ಅವರನ್ನು ಕೊಂದಿದ್ದು, ಈ ನಿಮ್ಮ.." ಎನ್ನುವಷ್ಟರಲ್ಲಿಯೇ ಭಾರ್ಗವಿ ಮಧ್ಯ ಪ್ರವೇಶಿಸಿದ್ದಾಳೆ. ಕೋಪಗೊಂಡ ಭಾರ್ಗವಿ, "ಆ ಕೊಲೆನಾ ನಾನು ಮಾಡಿದ್ದು ಅಂತಾನಾ? ಅಲ್ಲಿ ಆ ಅಶೋಕ ಸಿಹಿ ಸಾವಿಗೆ ನಾನೇ ಕಾರಣ ಅಂತ ಹೇಳ್ತಿದ್ದಾನೆ. ಇಲ್ಲಿ ವಾಣಿ- ಇಂದ್ರ ಕೊಲೆ ನಾನೇ ಮಾಡಿದ್ದು ಅಂತ ಹೇಳ್ತಿದ್ದಾನೆ" ಎಂದಿದ್ದಾಳೆ ಭಾರ್ಗವಿ. ಇಲ್ಲಿ ಸಿಹಿ ಸಾವಿಗೆ ನಾನೇ ಕಾರಣ ಅಂತ ಹೇಳ್ತಿದ್ದಾನೆ ಎಂಬ ಮಾತು ಬಂದಾಗ ಅಲ್ಲಿಗೆ ಸೀತಾ ಬಂದಿದ್ದಾಳೆ. ನಮ್ಮ ಸಿಹಿ ಸತ್ತು ಹೋಗಿದ್ದಾಳಾ ಎಂದು ಗಾಬರಿಯಲ್ಲಿಯೇ ಸೀತಾ ಪ್ರಶ್ನೆ ಮಾಡಿದ್ದಾಳೆ.
ಈಗಾಗಲೇ ಸುಬ್ಬಿಯು ಸಿಹಿ ಅಲ್ಲ ಎಂಬ ಅನುಮಾನ ಸೀತಾಗೆ ಬಂದಿದೆ. ಆಕೆಯ ವರ್ತನೆ, ಆಟ, ತುಂಟಾಟ ಎಲ್ಲವೂ ಬದಲಾಗಿದೆ. ಕೆಲವೊಮ್ಮೆ ಅವಳು ನಮ್ಮ ಸಿಹಿ ಹೌದ ಅಂತ ಅನ್ನೋ ಅನುಮಾನವೂ ಬರ್ತಿದೆ ಎಂದಿದ್ದಾಳೆ. ಸದ್ಯ ಈ ವಿಚಾರ ತಿಳಿದ ಸೀತಾಳ ಮುಂದಿನ ನಡೆ ಏನು? ಎಂಬುದು ರೋಚಕತೆ ಸೃಷ್ಟಿಸಿದೆ.
Chaithra Kundapura: ಮದುವೆಯಾದ ಬೆನ್ನಲ್ಲೇ ಹೆಸರು ಬದಲಾಯಿಸಿದ ಚೈತ್ರಾ ಕುಂದಾಪುರ