Vaishnavi Gowda: ಮದುವೆಯಾದ್ರೂ ತಾಳಿ ಯಾಕೆ ಹಾಕಿಲ್ಲ ಎಂದವರಿಗೆ ಸ್ಪಷ್ಟನೆ ಕೊಟ್ಟ ವೈಷ್ಣವಿ ಗೌಡ
ಹನಿಮೂನ್ ಫೋಟೋವನ್ನು ವೈಷ್ಣವಿ ಗೌಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಸಂದರ್ಭ ವೈಷ್ಣವಿ ಅವರ ಕೊರಳಿನಲ್ಲಿ ತಾಳಿ ಇರಲಿಲ್ಲ. ಇದನ್ನು ಗಮನಿಸಿದ ಫ್ಯಾನ್ಸ್, ಮದುವೆ ಬಳಿಕ ನೀವು ಯಾಕೆ ತಾಳಿ ಹಾಕ್ಲಿಲ್ಲ ಎಂದು ಕಾಮೆಂಟ್ ಕಾಮೆಂಟ್ ಮಾಡಿದ್ದರು. ಇದೀಗ ಈ ಪ್ರಶ್ನೆಗೆ ವೈಶು ಉತ್ತರ ಕೊಟ್ಟಿದ್ದಾರೆ.

Vaishnavi Gowda

ಅಗ್ನಿಸಾಕ್ಷಿ, ಸೀತಾ ರಾಮ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದ ನಟಿ ವೈಷ್ಣವಿ ಗೌಡ (Vaishnavi Gowda) ಇತ್ತೀಚೆಗಷ್ಟೆ ಹಸೆಮಣೆ ಏರಿದ್ದರು. ಏಪ್ರಿಲ್ 14ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ವೈಶು, ಅನುಕೂಲ್ ಮಿಶ್ರಾ ಜೊತೆಗೆ ಜೂನ್ 4 ರಂದು ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ ಈ ಜೋಡಿ ಉತ್ತರಾಖಂಡ ಋಷಿಕೇಶ್, ಮನಾಲಿಗೆ ಹೋಗಿ ಹನಿಮೂನ್ ಮುಗಿಸಿ ಬಂದಿದ್ದಾರೆ.
ಹನಿಮೂನ್ ಫೋಟೋವನ್ನು ವೈಷ್ಣವಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಸಂದರ್ಭ ವೈಷ್ಣವಿ ಅವರ ಕೊರಳಿನಲ್ಲಿ ತಾಳಿ ಇರಲಿಲ್ಲ. ಇದನ್ನು ಗಮನಿಸಿದ ಫ್ಯಾನ್ಸ್, ಮದುವೆ ಬಳಿಕ ನೀವು ಯಾಕೆ ತಾಳಿ ಹಾಕ್ಲಿಲ್ಲ. ತಾಳಿ ಹಾಕದೇ ನಮ್ಮ ಸಂಪ್ರದಾಯಕ್ಕೆ ಗೌರವ ಕೊಡಲ್ವಾ? ಮದುವೆ ಯಾಕ್ ಬೇಕಿತ್ತು, ತಾಳಿ ಹಾಕದೇ ಇದ್ದಮೇಲೆ ಎಂದು ಕಾಮೆಂಟ್ ಕೆಲವರು ಕಾಮೆಂಟ್ ಮಾಡಿದ್ದರು. ಇದೀಗ ಈ ಎಲ್ಲ ಪ್ರಶ್ನೆಗೆ ವೈಶು ಉತ್ತರ ಕೊಟ್ಟಿದ್ದಾರೆ.
‘‘ನಮ್ಮ ಸಂಪ್ರದಾಯಕ್ಕೆ ಗೌರವ ಕೊಡೋದಿಲ್ವಾ? ತಾಳಿ ಬೇಡ ಅಂದ್ರೆ ಯಾಕೆ ಮದುವೆ ಆದ್ರಿ ಅಂತ ಕೆಲವರು ಕೇಳಿದ್ದಾರೆ. ಹುಡುಗನ ಮನೆಯಲ್ಲಿ ಯಾವ ಪದ್ಧತಿ ಇದೆಯೋ ಅದನ್ನೇ ಹುಡುಗಿ ಕೂಡ ಅನುಸರಿಸುತ್ತಾಳೆ. ಅದೇ ಪದ್ಧತಿ ರೂಢಿಯಲ್ಲಿದೆ. ಹೀಗಾಗಿ ಹುಡುಗನ ಪದ್ಧತಿಯಂತೆ ನಮ್ಮ ಮದುವೆ ಆಯ್ತು. ತಾಳಿ ಹಾಕಿಲ್ಲ ಅಂತ ಕೆಲವರು ಕೇಳಿದ್ದೀರಾ. ನನ್ನ ಅತ್ತೆ ಕೂಡ ಇದುವರೆಗೂ ತಾಳಿ ಹಾಕಿಲ್ಲ. ತಾಳಿ ಹಾಕುವ ಪದ್ಧತಿ ನಮ್ಮಲ್ಲಿ ಇಲ್ಲ’’ ಎಂದು ವೈಷ್ಣವಿ ಗೌಡ ಹೇಳಿದ್ದಾರೆ.
Bhagya Lakshmi Serial: ಮದುವೆ ನಿಲ್ಲಿಸಲು ಬಂದ ತಾಂಡವ್ನ ಕೆನ್ನೆಗೆ ಬಾರಿಸಿ ಹೊರದಬ್ಬಿದ ರಾಮ್ದಾಸ್
‘‘ತಾಳಿ ಹಾಕೋದು ಅವರ ಪದ್ಧತಿಯಲ್ಲಿ ಇಲ್ಲ, ಅದು ನಮಗೆ ಮುಖ್ಯ ಅಲ್ಲ ಎಂದರು. ಮೂಗು ಚುಚ್ಚಿಸಿರಬೇಕು, ಕೈಯಲ್ಲಿ ಗಾಜಿನ ಬಳೆ ಇರಬೇಕು, ಕೈಯಲ್ಲಿ ಒಂದು ದಾರ ಇರಬೇಕು, ಕಾಲುಂಗುರ ಹಾಕಿರಬೇಕು. ನಮ್ಮ ಸಂಪ್ರದಾಯ, ಸಂಸ್ಕೃತಿ ಬಗ್ಗೆ ನನಗೆ ಗೌರವವಿದೆ. ಆದರೆ ಅವರ ಮನೆಯಲ್ಲಿ ಈ ಪದ್ಧತಿ ಇಲ್ಲ ಎಂದು ಹಾಕುತ್ತಿಲ್ಲ ಅಷ್ಟೇ’’ ಎಂದು ವೈಷ್ಣವಿ ಗೌಡ ಹೇಳಿದ್ದಾರೆ.
ವೈಷ್ಣವಿ ಅವರು ಶೀಘ್ರದಲ್ಲೇ ಅದ್ಭುತವಾದ ಯೋಜನೆಯೊಂದಿಗೆ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಹೇಳಿದ್ದಾರೆ. ಸೀತಾ ರಾಮ ಸೀರಿಯಲ್ ಮುಗಿಯುತ್ತಿದ್ದಂತೆ ವೈಷ್ಣವಿ ಮತ್ತೆ ತೆರೆ ಮೇಲೆ ಬರೋದಕ್ಕೆ ಸಜ್ಜಾಗಿರಬಹುದು ಎಂದು ಹೇಳಲಾಗುತ್ತಿದೆ. ಅಲ್ಲದೆ ವೈಷ್ಣವಿ ಅವರು ನಾನು ಕರ್ನಾಟಕ, ಕನ್ನಡ ಭಾಷೆ ಬಿಟ್ಟು ಬೇರೆ ಎಲ್ಲೂ ಹೋಗುವುದಿಲ್ಲ ಎಂದೂ ಹೇಳಿದ್ದರು.