Vinay Gowda: ರಜತ್ ಎರಡನೇ ಬಾರಿ ಜೈಲಿಗೆ ಹೋದ ಬಗ್ಗೆ ವಿನಯ್ ಗೌಡ ಏನಂದ್ರು..?
ರಜತ್ ಅವರಿಗೆ ಏಪ್ರಿಲ್ 29ನೇ ತಾರೀಖಿನವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಆದರೆ, ನಗರದ 24ನೇ ಎಸಿಜೆಎಂ ಕೋರ್ಟ್ ರಜತ್ ಕಿಶನ್‌ಗೆ ಜಾಮೀನು ಮಂಜೂರು ಮಾಡಿದೆ. ಇದರಿಂದ ಪ್ರಕರಣದಲ್ಲಿ ರಜತ್ ಕಿಶನ್ಗೆ ಬಿಗ್ ರಿಲೀಫ್ ಸಿಕ್ಕಂತೆ ಆಗಿದೆ. ಇದೀಗ ರಜತ್ ಎರಡನೇ ಬಾರಿ ಅರೆಸ್ಟ್ ಆದ ಕುರಿತು ವಿನಯ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.

Vinay Gowda

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ರಜತ್ ಕಿಶನ್ (Rajath Kishan) ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡ ಒಂದೇ ಒಂದು ರೀಲ್ಸ್ ಅವರನ್ನು ಮತ್ತೆ ಸಂಕಷ್ಟಕ್ಕೆ ದೂಡಿದೆ. ಕೇವಲ ರಜತ್ ಮಾತ್ರವಲ್ಲದೆ ವಿನಯ್ ಗೌಡ ಕೂಡ ಇದರಿಂದ ದೊಡ್ಡ ತೊಂದರೆಗೆ ಸಿಲುಕಿಕೊಂಡರು. ಜೈಲಿಗೆ ಹೋಗಬೇಕಾದ ಸಂದರ್ಭ ಕೂಡ ಬಂತು. ಶಸ್ತ್ರಾಸ್ತ್ರ ಕಾಯ್ದೆ ಅಡಿ ಇಬ್ಬರನ್ನೂ ಬಂಧಿಸಲಾಗಿತ್ತು. ಬಳಿಕ ಈ ಪ್ರಕರಣದಲ್ಲಿ ಇಬ್ಬರಿಗೂ ರಿಲೀಫ್ ಸಿಕ್ಕಿತ್ತು. ಆದರೆ ಬುಧವಾರ ರಜತ್ ಮತ್ತೆ ಅರೆಸ್ಟ್ ಆದರು.
ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜನ್‌ನನ್ನು ಮತ್ತೆ ಬಸವೇಶ್ವರನಗರ ಪೊಲೀಸರು ಪುನಃ ಬಂಧಿಸಿದರು. ಈ ಕೇಸ್ ವಿಚಾರಣೆ ನಡೆಸಿದ ಕೋರ್ಟ್ ರಜತ್ ಅವರಿಗೆ ಏಪ್ರಿಲ್ 29ನೇ ತಾರೀಖಿನವರೆಗೆ ನ್ಯಾಯಾಂಗ ಬಂಧನ ಕೂಡ ವಿಧಿಸಿತು. ಆದರೆ, ನಗರದ 24ನೇ ಎಸಿಜೆಎಂ ಕೋರ್ಟ್ ರಜತ್ ಕಿಶನ್‌ಗೆ ಜಾಮೀನು ಮಂಜೂರು ಮಾಡಿದೆ. ಇದರಿಂದ ಪ್ರಕರಣದಲ್ಲಿ ರಜತ್ ಕಿಶನ್ಗೆ ಬಿಗ್ ರಿಲೀಫ್ ಸಿಕ್ಕಂತೆ ಆಗಿದೆ.
ಇದೀಗ ರಜತ್ ಎರಡನೇ ಬಾರಿ ಅರೆಸ್ಟ್ ಆದ ಕುರಿತು ವಿನಯ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. ‘‘ಯಾರೇ ಆಗಲಿ.. ಜೈಲಿಗೆ ಹೋದರೆ ನೋವು ಆಗುತ್ತದೆ. ರಜತ್ ನನ್ನ ಸ್ನೇಹಿತ, ನನ್ನ ಸಹೋದರ. ನನ್ನ ತಮ್ಮನನ್ನ ನಾನು ಹೇಗೆ ಬಿಟ್ಟುಕೊಡಲಿ.? ಈ ರೀಲ್ಸ್ ಬೇರೆ. ನಮ್ಮ ಸಂಬಂಧವೇ ಬೇರೆ. ಏನೇ ಆಗಲಿ ಅವನು ನನ್ನ ತಮ್ಮ. ರಜತ್ ಬಗ್ಗೆ ನನಗೆ ಕೋಪ ಇದೆ, ಸಿಟ್ಟು ಇದೆ. ಆದರೆ ಬೇಜಾರಿಲ್ಲ. ಸ್ನೇಹದಲ್ಲಿ ಇದೆಲ್ಲಾ ಸಹಜ. ಅದು ಸರಿ ಹೋಗುತ್ತದೆ. ಅವನಿಗೆ ಕಸ್ಟಡಿ ಆಗಿರೋದು ನನಗೆ ಬೇಜಾರಾಗುತ್ತಿದೆ. ಚಿಕ್ಕ ವಿಷಯಕ್ಕೆ ಇಷ್ಟೊಂದು ತೊಂದರೆ ಆಗುತ್ತಿದೆ ಎಂದು ವಿನಯ್ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
Lakshmi Baramma: ಕ್ಲೈಮ್ಯಾಕ್ಸ್ ವಾರದಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿಗೆ ಸಿಕ್ಕ ಟಿಆರ್ಪಿ ಎಷ್ಟು?
ರಜತ್ ಅವರು ಕೋರ್ಟ್ ವಿಚಾರಣೆಗೆ ಹಾಜರಿ ಹಾಕಿಲ್ಲದ ಕಾರಣ ಇವರಿಗೆ ಜಾಮೀನು ರದ್ದು ಮಾಡಿ ಕೋರ್ಟ್ ವಾರೆಂಟ್ ಜಾರಿ ಮಾಡಿತ್ತು. ಆದರೆ, ವಿನಯ್ ಗೌಡ ಅವರು ವಿನಾಯಿತಿ ಅರ್ಜಿ ಹಾಕಿದ್ದರು. ಅತ್ತ ರಜತ್ ಕಿಶನ್ ಅವರು ವಿನಾಯಿತಿ ಅರ್ಜಿಯನ್ನು ಹಾಕಿರಲಿಲ್ಲ. ಹೀಗಾಗಿ ವಾರೆಂಟ್ ಜಾರಿ ಮಾಡಿದ್ದ ಕೋರ್ಟ್ ರಜತ್ ಅವರನ್ನು ಮಾತ್ರ ನ್ಯಾಯಾಂಗ ಬಂಧನಕ್ಕೆ ವಿಧಿಸಿತ್ತು.