ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Jodi No1: ಬರ್ತಿದೆ 'ಜೋಡಿ ನಂ1'; ಬಿಗ್ ಬಾಸ್ ಧನರಾಜ್-ಪ್ರಜ್ಞಾ ಸೇರಿದಂತೆ ಯಾರೆಲ್ಲ ಭಾಗಿ?

Jodi No1: ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ರಿಯಾಲಿಟಿ ಶೋಗಳಲ್ಲಿ ಜೋಡಿ ನಂಬರ್ 1 ಕೂಡ ಒಂದು. 'ಜೋಡಿ ನಂ 1' ಕಾರ್ಯಕ್ರಮದ ಪ್ರೋಮೋ ಔಟ್‌ ಆಗಿದೆ. ಮನರಂಜನೆಯನ್ನು ನೀಡುವ ಸೂಚನೆ ನೀಡಿದೆ. ತನ್ನೆಲ್ಲಾ ಕಾರ್ಯಕ್ರಮಗಳಲ್ಲೂ ತಾನೆಷ್ಟು ಭಿನ್ನ ಎನ್ನುವುದನ್ನು ನಿರೂಪಿಸುತ್ತಲೇ ಇರುವ ವಾಹಿನಿ ಈ ಬಾರಿಯೂ ಅದನ್ನು ಮುಂದುವರೆಸಿದ್ದು ಜೋಡಿಗಳನ್ನು ಆಯ್ಕೆ ಮಾಡುವುದರಲ್ಲಿ ಯಶಸ್ವಿಯಾಗಿದೆ.

ಬರ್ತಿದೆ 'ಜೋಡಿ ನಂ1'; ಬಿಗ್ ಬಾಸ್ ಧನರಾಜ್ ಸೇರಿದಂತೆ ಯಾರೆಲ್ಲ ಭಾಗಿ?

ಜೋಡಿ ನಂ 1 -

Yashaswi Devadiga
Yashaswi Devadiga Mar 24, 2026 10:31 AM

ಜೀ ಕನ್ನಡದಲ್ಲಿ (Zee Kannada) ಪ್ರಸಾರ ಆಗುತ್ತಿರುವ ರಿಯಾಲಿಟಿ ಶೋಗಳಲ್ಲಿ ಜೋಡಿ ನಂಬರ್ 1 (Jodi Number 1) ಕೂಡ ಒಂದು. 'ಜೋಡಿ ನಂ 1' ಕಾರ್ಯಕ್ರಮದ ಪ್ರೋಮೋ ಔಟ್‌ ಆಗಿದೆ. ಮನರಂಜನೆಯನ್ನು ನೀಡುವ ಸೂಚನೆ ನೀಡಿದೆ. ತನ್ನೆಲ್ಲಾ ಕಾರ್ಯಕ್ರಮಗಳಲ್ಲೂ (Programme) ತಾನೆಷ್ಟು ಭಿನ್ನ ಎನ್ನುವುದನ್ನು ನಿರೂಪಿಸುತ್ತಲೇ ಇರುವ ವಾಹಿನಿ ಈ ಬಾರಿಯೂ ಅದನ್ನು ಮುಂದುವರೆಸಿದ್ದು ಜೋಡಿಗಳನ್ನು ಆಯ್ಕೆ ಮಾಡುವುದರಲ್ಲಿ ಯಶಸ್ವಿಯಾಗಿದೆ.

ಪ್ರೋಮೋ ರಿಲೀಸ್

‘ಜೋಡಿ ನಂಬರ್ 1’ ಹೆಸರಿನ ರಿಯಾಲಿಟಿ ಶೋ ಕೂಡ ಬರುತ್ತಿದೆ. ಈ ಶೋನಲ್ಲಿ ಯಾರೆಲ್ಲ ಪಾಲ್ಗೊಳ್ಳಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅಮೃತವರ್ಷಿಣಿ ರಜಿನಿ, ಬಿಗ್ ಬಾಸ್ ಧನರಾಜ್ ಮೊದಲಾದವರು ಶೋನ ಭಾಗ ಆಗಲಿದ್ದಾರೆ ಎಂಬುದು ವಿಶೇಷ.

ಇದನ್ನೂ ಓದಿ: Amruthadhaare Serial: ಮಲ್ಲಿ ಮದುವೆಯಲ್ಲಿ ರೋಚಕ ಸತ್ಯದ ಮಹಾ ಸ್ಫೋಟ!

ಈ ಪ್ರೋಮೋ ರಿಲೀಸ್ ಆದ ಬೆನ್ನಲ್ಲೇ ಮತ್ತೊಂದು ಪ್ರೋಮೋ ಬಿಡುಗಡೆ ಆಗಿದ್ದು, ಇದರಲ್ಲಿ ಜೋಡಿ ನಂಬರ್ 1 ರಿಯಾಲಿಟಿ ಶೋ ಬಗ್ಗೆ ಮಾಹಿತಿ ನೀಡಲಾಗಿದೆ. ಎಲ್ಲಿ ಜಗಳ ಇರುತ್ತದೆಯೋ ಅಲ್ಲಿ ಪ್ರೀತಿ ಇರುತ್ತದೆ ಎಂಬ ಮಾತಿದೆ. ಇದನ್ನು ತೋರಿಸುವ ರೀತಿಯಲ್ಲಿ ‘ಜೋಡಿ ನಂಬರ್ 1’ ಬರುತ್ತಿದೆ.

‘ಜೋಡಿ ನಂಬರ್ 1’ ರಿಯಾಲಿಟಿ ಶೋನಲ್ಲಿ ಧನರಾಜ್ ಹಾಗೂ ಅವರ ಪತ್ನಿ ಪ್ರಜ್ಞಾ ಆಗಮಿಸಲಿದ್ದಾರೆ. ಇವರು ರೀಲ್ಸ್ ಮಾಡಿ ಟ್ರೆಂಡ್ ಆದವರು. ಇನ್ನು, ರಂಜನಿ ಹಾಗೂ ಅರುಣ್ ಗೌಡ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ರೆ. ಕೋಟೆ ಪ್ರಭಾಕರ್-ಮಾಲತಿ, ಜಯರಾಮ್​-ಗೀತಾ ಭಾರತಿ, ನಿರೀಕ್ಷಾ-ರುದ್ರ ಶೋನ ಭಾಗ ಆಗಲಿದ್ದಾರೆ.

ಹೊಸ ಹೊಸ ಶೋ

ಈ ರಿಯಾಲಿಟಿ ಶೋವಿನ ನಿರೂಪಕರಾಗಿ ಕುರಿ ಪ್ರತಾಪ್ ಹಾಗೂ ಶ್ವೇತಾ ಚೆಂಗಪ್ಪ ಸಾರಥ್ಯ ವಹಿಸಲಿದ್ದಾರೆ. ಇನ್ನು ಈ ಮುಂಚೆ ನಟಿ ಮಾಳವಿಕಾ ಅವಿನಾಶ್ ಹಾಗೂ ನಟ ನೆನಪಿರಲಿ ಖ್ಯಾತಿಯ ಪ್ರೇಮ್ ಅವರು ಈ ಕಾರ್ಯಕ್ರಮದ ತೀರ್ಪುಗಾರರಾಗಿದ್ದರು.ಈ ಬಾರಿ ಇವರೇ ಇರಲಿದ್ದಾರಾ ಅನ್ನೋದು ಕಾದು ನೋಡಬೇಕಿದೆ. ಇದೇ ಏಪ್ರಿಲ್ 4ರಿಂದ ರಾತ್ರಿ 9ಕ್ಕೆ ಪ್ರಸಾರ ಕಾಣಲಿದೆ.

ಮತ್ತೊಂದು ಕಡೆ ಸಂಗೀತ ಲೋಕದಲ್ಲಿ ಮನರಂಜನೆಯ ಜೊತೆಗೆ ನಾದ ಸುಧೆ ಹರಿಸುತ್ತಿರುವ ಕಾರ್ಯಕ್ರಮ ಸರಿಗಮಪ ಹೊಸ ಆವೃತ್ತಿ ಬರುತ್ತಿದೆ. ಸರಿಗಮಪ ಕನ್ನಡದ ಕಾರ್ಯಕ್ರಮ ಈಗಾಗಲೇ 20ಕ್ಕೂ ಹೆಚ್ಚು ಸೀಸನ್‌ಗಳನ್ನ ಪೂರೈಸಿದೆ.

ಇದನ್ನೂ ಓದಿ: Sitaare Zameen Par OTT: ಕೊನೆಗೂ ಒಟಿಟಿಗೆ ಬರ್ತಿದೆ ʻಸೀತಾರೆ ಜಮೀನ್ ಪರ್ʼ; ಸ್ಟ್ರೀಮಿಂಗ್‌ ಎಲ್ಲಿ?

ಸರಿಗಮಪ ಸೀನಿಯರ್ ಸೀಸನ್, ಸರಿಗಮಪ ಲಿಟಲ್ ಚಾಂಪ್ಸ್, ಸರಿಗಮಪ ಚಾಂಪಿಯನ್ಸ್‌ ರೀ-ಯೂನಿಯನ್ ಸೇರಿದಂತೆ ಹಲವು ಭಾಗವಾಗಿ ಸಂಗೀತದ ಸವಿ ನೀಡಿದೆ ಕಾರ್ಯಕ್ರಮ (Programme). ಸರಿಗಮಪ ಹೊಸ ಸೀಸನ್‌ನ ಕುರಿತು ಪ್ರೋಮೋ ರಿಲೀಸ್ ಮಾಡಿದೆ ತಂಡ.