ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gagana Bhari: ರಾಜಕುಮಾರಿ ಧಾರಾವಾಹಿಗೆ ಮಹಾನಟಿ ಗಗನಾ ಸೆಲೆಕ್ಟ್ ಆಗಿದ್ದು ಹೇಗೆ?

ತನ್ನ ಸಹಜ ಅಭಿನಯ, ಮುಗ್ಧ ನಟನೆಯ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ಗಗನಾಗೆ ಈಗ ಝೀ ಕನ್ನಡ ಬಹುದೊಡ್ಡ ಆಫರ್ ನೀಡಿದೆ. ಝೀ ಪವರ್ನಲ್ಲಿ ಮುಂದಿನ ಸೋಮವಾರದಿಂದ ಪ್ರಸಾರವಾಗಲಿರುವ ರಾಜಕುಮಾರಿ ಸೀರಿಯಲ್ಗೆ ಗಗನಾ ಅವರು ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ರಾಜಕುಮಾರಿ ಧಾರಾವಾಹಿಗೆ ಮಹಾನಟಿ ಗಗನಾ ಸೆಲೆಕ್ಟ್ ಆಗಿದ್ದು ಹೇಗೆ?

Gagana Bhari Rajakumari Serial

Profile Vinay Bhat Aug 21, 2025 7:31 AM

ಝೀ ಕನ್ನಡ ವಾಹಿನಿಯಲ್ಲಿ ನಡೆಯುವ ಶೋನಲ್ಲಿ ಪಾಲ್ಗೊಂಡು ಅದರಿಂದ ಫೇಮಸ್ ಆದವರು ಅನೇಕರಿದ್ದಾರೆ. ಝೀ ವಾಹಿನಿ ಅದೆಷ್ಟೊ ಕಲಾವಿದರನ್ನ ನಟನ ಕ್ಷೇತ್ರಕ್ಕೆ ಪರಿಚಯಿಸಿದೆ. ಈ ಪೈಕಿ ಮಹಾನಟಿ ಮೊದಲ ಸೀಸನ್​ನ ಗಗನಾ ಭಾರಿ (Gagana Bhari) ಕೂಡ ಒಬ್ಬರು. ಮಹಾನಟಿ ನಂತರ ಇವರು ಡಾನ್ಸ್ ಕರ್ನಾಟಕ ಡಾನ್ಸ್‌, ಭರ್ಜರಿ ಬ್ಯಾಚುಲರ್ಸ್‌ ಸೀಸನ್ 2ರಲ್ಲೂ ಭಾಗವಹಿಸುತ್ತಾರೆ. ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ರಲ್ಲಿ ಡ್ರೋನ್‌ ಪ್ರತಾಪ್‌ಗೆ ಜೋಡಿಯಾಗಿ ಮೂರನೇ ರನ್ನರ್ ಅಪ್ ಆದರು. ಇದಾದ ಬಳಿಕ ಈಗ ಗಗನಾ ಝೀ ಕನ್ನಡದ ಹೊಸ ಚಾನೆಲ್ ಝೀ ಪವರ್​ನ ಹೊಸ ಧಾರಾವಾಹಿಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ತನ್ನ ಸಹಜ ಅಭಿನಯ, ಮುಗ್ಧ ನಟನೆಯ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ಗಗನಾಗೆ ಈಗ ಝೀ ಕನ್ನಡ ಬಹುದೊಡ್ಡ ಆಫರ್ ನೀಡಿದೆ. ಝೀ ಪವರ್​ನಲ್ಲಿ ಮುಂದಿನ ಸೋಮವಾರದಿಂದ ಪ್ರಸಾರವಾಗಲಿರುವ ರಾಜಕುಮಾರಿ ಸೀರಿಯಲ್​ಗೆ ಗಗನಾ ಅವರು ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ಧಾರಾವಾಹಿ ಝೀ ಬಾಂಗ್ಲಾದ ಮಿಥೈ ಸೀರಿಯಲ್ ರಿಮೇಕ್ ಎಂದು ಹೇಳಲಾಗುತ್ತಿದೆ. ಈ ಧಾರಾವಾಹಿಯಲ್ಲಿ ಗಗನಾ ಲಂಗ ದಾವಣಿ ಧರಿಸಿ, ಎರಡು ಜಡೆ ಹಾಕಿ ಪಕ್ಕ ಹಳ್ಳಿ ಹುಡುಗಿ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಅಂದಹಾಗೆ ರಾಜಕುಮಾರಿ ಧಾರಾವಾಹಿಗೆ ಇವರು ಸೆಲೆಕ್ಟ್ ಆಗಿದ್ದೆ ಅಚಾನಕ್ ಆಗಿಯಂತೆ. ಈ ಬಗ್ಗೆ ಸ್ವತಃ ಗಗನಾ ಅವರೇ ಖಾಸಗಿ ಚಾನೆಲ್​ಗೆ ಮಾಹಿತಿ ನೀಡಿದ್ದು, ನನಗೆ ಈ ಚಾನ್ಸ್​ ಕೊಟ್ಟಿದ್ದೆ ಝೀ ಕನ್ನಡ. ಅಂದು ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಶೂಟಿಂಗ್​ ನಡೆಯುತ್ತಿತ್ತು. ನನ್ನ ಹತ್ತಿರ ಬಂದ ಝೀ ಕನ್ನಡ ಟೀಮ್​ ಈ ತರ ಒಂದು ಸೀರಿಯಲ್ ಅವಕಾಶ ಇದೆ ನೀನು ಮಾಡು ಅಂತ ಹೇಳಿದರು. ನಾನು ಆಗ ಯೋಚನೆ ಮಾಡಿದೆ. ನನಗೆ ಯಾವಾಗಲೂ ಒಳ್ಳೆಯ ಅವಕಾಶ ಕೊಡ್ತಾರೆ ಅಂತ. ಅದಕ್ಕೆ ಮಾಡ್ತೀನಿ ಅಂತ ಹೇಳಿದೆ. ಮತ್ತೆ ನಾನು ಆಡಿಷನ್ ಕೊಟ್ಟೆ. ಆ ಪಾತ್ರಕ್ಕೂ ಸೂಟ್​ ಆಗ್ತಾಳೆ ಎಂದು ನನ್ನನ್ನೇ ಸೆಲೆಕ್ಟ್​ ಮಾಡಿದ್ರು ಎಂದು ಹೇಳಿದ್ದಾರೆ.

ಗಗನಾ ಭಾರಿ ಚಿತ್ರದುರ್ಗ ಮೂಲದವರು. ಮಧ್ಯಮ ವರ್ಗದ ಕುಟುಂಬದಿಂದ ಬಂದ ಇವರು ಎಂಜಿನಿಯರಿಂಗ್ ‍ಪದವಿಧರೆ. ಆದರೆ, ಗಗನಾಗೆ ಮೊದಲಿನಿಂದಲೂ ನಟನೆಯ ಮೇಲೆ ಒಲವಿತ್ತು. ಓದು ಮುಗಿಸಿದ ನಂತರ ಅವರು ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವಾಗ ಮಹಾನಟಿಗೆ ಆಡಿಷನ್ ಕೊಟ್ಟು ಸೆಲೆಕ್ಟ್ ಆದರು. ಬಳಿಕ ಐಟಿ ಕೆಲಸಕ್ಕೆ ರಿಸೈನ್ ಮಾಡಿ ಈಗ ತಮ್ಮ ನೆಚ್ಚಿನ ನಟನಾ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದಾರೆ.

Kempamma: ಕ್ವಾಟ್ಲೆ ಕಿಚನ್‌ ಶೋನಿಂದ ಕೆಂಪಮ್ಮ ದಿಢೀರ್ ಹೊರನಡೆದಿದ್ದೇಕೆ?: ಇಲ್ಲಿದೆ ಕಾರಣ