ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SRGMP Grand Finale: ತಲುಪಿತು ಸರಿಗಮಪ ಅಂತಿಮ ಘಟ್ಟ; ಯಾರಿಗೆ ಸಿಗಲಿದೆ ವಿನ್ನರ್ ಪಟ್ಟ?

ಜನಮನ್ನಣೆ ಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಝೀ ಕನ್ನಡದ ಸರಿಗಮಪ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. 6 ವರ್ಷದಿಂದ 60 ವರ್ಷದವರೆಗಿನ ವಯೋಮಿತಿಯ ಸ್ಪರ್ಧಿಗಳು ಭಾಗವಹಿಸಿದ ಈ ಆವೃತ್ತಿ ಗಮನ ಸೆಳೆದಿದೆ. ಜತೆಗೆ ಉತ್ತಮ ಟಿಆರ್‌ಪಿಯೂ ಪಡೆದುಕೊಂಡಿದೆ. ಅಂತಿಮ ಹಂತ ತಲುಪಿದ 6 ಸ್ಪರ್ಧಿಗಳಲ್ಲಿ ಸರಿಗಮಪ ಟೈಟಲ್ ಯಾರ ಮುಡಿಗೇರಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಈ ಪ್ರಶ್ನೆಗೆ ಉತ್ತರ ಜೂ. 7ರ ಸಂಜೆ 6 ಗಂಟೆಗೆ ಸಿಗಲಿದೆ.

ಸರಿಗಮಪ ಸೀಸನ್ 21ರ ವಿನ್ನರ್ ಯಾರಾಗಲಿದ್ದಾರೆ?

Sa Re Ga Ma Pa Final

Profile Pushpa Kumari Jun 6, 2025 7:44 PM

ಬೆಂಗಳೂರು: ಕನ್ನಡದ ಟಿ.ವಿ. ಇತಿಹಾಸದಲ್ಲಿ ಅತೀಹೆಚ್ಚು ಜನಮನ್ನಣೆ ಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಅಂದ್ರೆ ಅದು ಝೀ ಕನ್ನಡದ ಸರಿಗಮಪ (SRGMP). 6 ವರ್ಷದಿಂದ 60 ವರ್ಷ ವಯೋಮಿತಿಯ ಸ್ಪರ್ಧಿಗಳು ಭಾಗವಹಿಸಿದ ಈ ಆವೃತ್ತಿ ವೀಕ್ಷಕರ ಪ್ರಶಂಸೆಗೆ ಪಾತ್ರವಾಗಿದೆ. ಇನ್ನು ಈ ಆವೃತ್ತಿಯ ಅಂತಿಮ ಘಟ್ಟ ತಲುಪಿದ್ದು 6 ಸ್ಪರ್ಧಿಗಳಲ್ಲಿ ಸರಿಗಮಪ ಟೈಟಲ್ ಯಾರ ಮುಡಿಗೇರಲಿದೆ ಎಂಬ ಕುತೂಹಲ ಜನರಲ್ಲಿ ಹೆಚ್ಚಾಗಿದೆ. ಈ ಕುತೂಹಲಕ್ಕೆ ಬ್ರೇಕ್ ಇದೇ ಜೂ. 7ರ ಸಂಜೆ 6 ಗಂಟೆಗೆ ಸಿಗಲಿದೆ.

ಈ ಆವೃತ್ತಿಯಲ್ಲಿ ಸ್ಪರ್ಧಿಗಳ ನಡುವೆ ಕೇವಲ ಪೈಪೋಟಿ ಮಾತ್ರವಲ್ಲದೇ ಅವರ ಸ್ಪೂರ್ತಿದಾಯಕ ಕಥೆಗಳು ಕೂಡ ಜನರನ್ನು ಮತ್ತಷ್ಟು ಪ್ರೇರೇಪಿಸಿದೆ. ಕಾರ್ಯಕ್ರಮದಲ್ಲಿ ಕರ್ನಾಟಕದ ಮತ್ತು ದೇಶದ ಹಲವು ಭಾಗಗಳಿಂದ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಇನ್ನು ಫಿನಾಲೆಯಲ್ಲಿ ದ್ಯಾಮೇಶ, ಬಾಳು ಬೆಳಗುಂದಿ, ಶಿವಾನಿ, ಆರಾಧ್ಯ ರಾವ್, ರಶ್ಮಿ, ಅಮೋಘ ವರ್ಷ ನಡುವೆ ಪೈಪೋಟಿ ನಡೆಯಲಿದ್ದು ವಿನ್ನರ್ ಪಟ್ಟ ಯಾರಿಗೆ ಸಿಗಲಿದೆ ಎಂದು ಕಾದು ನೋಡಬೇಕಿದೆ.

ಇದನ್ನು ಓದಿ: Saregamapa Show: Zee5ನಲ್ಲಿ ಸರಿಗಮಪ ಫಿನಾಲೆ; ಟಿವಿಗಿಂತ ಮೊದಲೇ ನೋಡಿ

ಸರಿಗಮಪ ಫಿನಾಲೆ ಜೂ. 5ರಂದು ನಡೆದಿದ್ದು, ನಿರೂಪಣಾ ಜವಾಬ್ದಾರಿಯನ್ನು ಎಂದಿನಂತೆ ಅನುಶ್ರೀ ಹೊತ್ತಿದ್ದರು. ತೀರ್ಪುಗಾರರಾದ ವಿಜಯ ಪ್ರಕಾಶ್, ರಾಜೇಶ್ ಕೃಷ್ಣನ್ ಮತ್ತು ಅರ್ಜುನ್ ಜನ್ಯ ಫಿನಾಲೆಯಲ್ಲಿಯೂ ತಮ್ಮ ಗೈಡೆನ್ಸ್ ನೀಡಿದ್ದಾರೆ. ಅಷ್ಟೇ ಅಲ್ಲದೇ ವೀಕ್ಷಕರು ಫಿನಾಲೆಯನ್ನು ಲೈವ್ ಆಗಿ Zee5 OTT ಫ್ಲಾಟ್‌ಫಾರ್ಮ್‌ ಮೂಲಕ ವೀಕ್ಷಿಸಬಹುದಾಗಿದೆ.

ಇನ್ನು Zee5ನಲ್ಲಿ ಲೈವ್ ನೋಡಲು ಮಿಸ್ ಮಾಡಿದವರು ಬೇಸರ ಪಡಬೇಕಾದ ಅವಶ್ಯಕತೆ ಇಲ್ಲ. ತಮ್ಮ ನೆಚ್ಚಿನ ಶೋ ‌ಸರಿಗಮಪ ಫಿನಾಲೆಯ ಸಂಭ್ರಮದ ಕ್ಷಣಗಳನ್ನು7ರಂದು ಸಂಜೆ 6 ಗಂಟೆಗೆ ಝೀ ಕನ್ನಡ ವಾಹಿನಿಯಲ್ಲಿ ನೋಡಬಹುದು.