ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Varanasi: ಆರಂಭದಲ್ಲೇ ರಾಜಮೌಳಿಗೆ ಎದುರಾಯ್ತು ವಿಘ್ನ; ಜಕ್ಕಣ್ಣ ವಿರುದ್ಧ ಪೊಲೀಸರಿಗೆ ದೂರು ನೀಡಿದ್ಯಾರು?

Police Complaint Against SS Rajamouli: ʻವಾರಣಾಸಿʼ ಸಿನಿಮಾವನ್ನು ಗ್ರ್ಯಾಂಡ್‌ ಆಗಿ ಶುರು ಮಾಡಿರುವ ನಿರ್ದೇಶಕ ಎಸ್‌ ಎಸ್‌ ರಾಜಮೌಳಿ ಇದೀಗ ವಿವಾದಕ್ಕೆ ಸಿಲುಕಿದ್ದಾರೆ. "ನನಗೆ ದೇವರ ಮೇಲೆ ದೊಡ್ಡ ನಂಬಿಕೆ ಏನೂ ಇಲ್ಲ" ಎಂದಿದ್ದರು. ಈ ಹೇಳಿಕೆಯಿಂದ ಹಿಂದೂಗಳ ಧಾರ್ಮಿಕ ನಂಬಿಕೆಗೆ ಧಕ್ಕೆ ಆಗಿದೆ ಎಂದು ರಾಷ್ಟ್ರೀಯ ವಾನರ ಸೇನೆ ಸರೂರ್‌ನಗರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬಹಿರಂಗ ಕ್ಷಮೆ ಕೇಳುವಂತೆ ಆಗ್ರಹಿಸಿದೆ.

ʻವಾರಣಾಸಿʼ ಡೈರೆಕ್ಟರ್ ರಾಜಮೌಳಿ ವಿರುದ್ಧ ದೂರು ದಾಖಲು! ಕಾರಣವೇನು?

-

Avinash GR
Avinash GR Nov 18, 2025 12:05 PM

ಖ್ಯಾತ ನಿರ್ದೇಶಕ ಎಸ್‌ ಎಸ್‌ ರಾಜಮೌಳಿ ಅವರು ʻವಾರಣಾಸಿʼ ಸಿನಿಮಾವನ್ನು ಗ್ರ್ಯಾಂಡ್‌ ಆಗಿ ಶುರು ಮಾಡಿದ್ದಾರೆ. ಮಹೇಶ್‌ ಬಾಬು ಮತ್ತು ಪ್ರಿಯಾಂಕಾ ಚೋಪ್ರಾ ಅಭಿನಯದ ಈ ಸಿನಿಮಾಕ್ಕೆ ಆಗಲೇ 60 ದಿನ ಶೂಟಿಂಗ್‌ ಮಾಡಲಾಗಿದೆ. ಸದ್ಯ ʻವಾರಣಾಸಿʼ ಸಿನಿಮಾಗೆ ವಿವಾದಗಳು ಬೆನ್ನು ಬಿದ್ದಿವೆ. ರಾಜಮೌಳಿ ಹೇಳಿದ ಮಾತಿನಿಂದ ಇದೀಗ ದೊಡ್ಡ ವಿವಾದವೇ ಉಂಟಾಗಿದೆ.

ರಾಜಮೌಳಿ ವಿರುದ್ಧ ದೂರು ದಾಖಲು

ಹಿಂದೂಗಳ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದ ಆರೋಪದ ಮೇಲೆ ನಿರ್ದೇಶಕ ರಾಜಮೌಳಿ ವಿರುದ್ಧ ದಾಖಲಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ರಾಷ್ಟ್ರೀಯ ವಾನರ ಸೇನೆಯು ರಾಜಮೌಳಿ ವಿರುದ್ಧ ಸರೂರ್‌ನಗರ್‌ ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದು, ರಾಜಮೌಳಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದೆ. ಅಷ್ಟಕ್ಕೂ ರಾಜಮೌಳಿ ನೀಡಿದ್ದ ಹೇಳಿಕೆ ಏನು?

SS Rajamouli: ʻನನಗೆ ದೇವರಲ್ಲಿ ನಂಬಿಕೆ ಇಲ್ಲʼ; ಎಸ್.ಎಸ್. ರಾಜಮೌಳಿ ಹೇಳಿಕೆ ವಿರುದ್ಧ ಭಾರಿ ಟೀಕೆ

ಏನಿದು ವಿವಾದ?

ಈಚೆಗೆ ಹೈದರಾಬಾದ್‌ನ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ʻವಾರಣಾಸಿʼ ಸಿನಿಮಾದ ಫಸ್ಟ್‌ ಲುಕ್‌ ಲಾಂಚ್‌ ಮಾಡಲಾಗಿತ್ತು. ಅದಕ್ಕಾಗಿ ಗ್ರ್ಯಾಂಡ್‌ ಇವೆಂಟ್‌ ಮಾಡಲಾಗಿತ್ತು. ಈ ವೇಳೆ ಒಂದಷ್ಟು ಟೆಕ್ನಿಕಲ್‌ ಸಮಸ್ಯೆಗಳು ನಡೆದವು. ಆ ಬಗ್ಗೆ ಮಾತನಾಡಿದ್ದ ರಾಜಮೌಳಿ, "ನನಗೆ ದೇವರ ಮೇಲೆ ದೊಡ್ಡ ನಂಬಿಕೆ ಏನೂ ಇಲ್ಲ. ಆದರೆ ನನ್ನ ತಂದೆ ಹನುಮಂತ ಇದ್ದಾನೆ, ಅವನು ಯಾವುದೇ ತೊಂದರೆ ಇಲ್ಲದೇ ಎಲ್ಲವನ್ನು ನಡೆಸಿಕೊಡುತ್ತಾನೆ ಎಂದಿದ್ದರು. ಆಗ ನನಗೆ ತಕ್ಷಣವೇ ಕೋಪ ಬಂದಿತ್ತು. ಈ ರೀತಿಯೇ ನಡೆಸಿಕೊಡುವುದು" ಎಂದು ಹೇಳಿದ್ದರು.

Rajamouli: 120 ದೇಶಗಳಲ್ಲಿ SSMB 29 ರಿಲೀಸ್‌! ಬ್ಯುಸಿ ಶೂಟಿಂಗ್‌ ನಡುವೆಯೇ ಕೀನ್ಯಾ ಸಚಿವರನ್ನು ಭೇಟಿಯಾದ ರಾಜಮೌಳಿ

ದೇವರನ್ನು ದೂಷಿಸಿದ್ದು ಸರಿಯೇ?

ನಂತರ ಮಾತು ಮುಂದುವರಿಸಿದ್ದ ಅವರು, "ನನ್ನ ಪತ್ನಿ ರಮಾ ಅವರು ಆಂಜನೇಯನ ದೊಡ್ಡ ಭಕ್ತೆ. ಒಮ್ಮೊಮ್ಮೆ ಆಕೆ ಆಂಜನೇಯನ ಜೊತೆ ಫ್ರೆಂಡ್ಸ್‌ ರೀತಿ ಸಂವಹನ ಮಾಡುತ್ತಾಳೆ. ನನಗೆ ಆಗಾಗ ಆಕೆಯ ಮೇಲೂ ಕೋಪ ಬರುತ್ತದೆ" ಎಂದಿದ್ದರು. ಹೀಗೆ ಚಿತ್ರತಂಡದಲ್ಲಿ ನಡೆದ ತಾಂತ್ರಿಕ ಸಮಸ್ಯೆಗೆ ದೇವರನ್ನು ದೂಷಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಕೇಳಿಬಂದಿದೆ.

ರಾಜಮೌಳಿ ಕ್ಷಮೆ ಕೇಳಬೇಕು!

ಸದ್ಯ ಈ ಹೇಳಿಕೆಯಿಂದ ದೊಡ್ಡ ವಿವಾದವೇ ಶುರುವಾಗಿದೆ. ರಾಜಮೌಳಿ ಅವರು ತಮ್ಮ ಹೇಳಿಕೆಗೆ ತಕ್ಷಣವೇ ಬಹಿರಂಗ ಕ್ಷಮೆ ಕೇಳಬೇಕು ಎಂದು ಆಗ್ರಹ ಕೇಳಿಬಂದಿದೆ. ಈ ಬಗ್ಗೆ ರಾಜಮೌಳಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಇನ್ನು, ʻವಾರಣಾಸಿʼ ಸಿನಿಮಾದ ಬಗ್ಗೆ ಹೇಳಬೇಕೆಂದರೆ, ಈ ಚಿತ್ರವು 2027ರ ಮಾರ್ಚ್‌ ಅಥವಾ ಏಪ್ರಿಲ್‌ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಮಹೇಶ್‌ ಬಾಬು, ಪ್ರಿಯಾಂಕಾ ಚೋಪ್ರಾ ಜೊತೆಗೆ ಪೃಥ್ವಿರಾಜ್‌ ಸುಕುಮಾರನ್‌ ಅವರು ನಟಿಸುತ್ತಿದ್ದಾರೆ. ಮಿಕ್ಕಂತೆ ಈ ಸಿನಿಮಾದಲ್ಲಿ ಯಾರೆಲ್ಲಾ ಇದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಎಂ ಎಂ ಕೀರವಾಣಿ ಸಂಗೀತ ನೀಡಿದ್ದು, ಪಿಎಸ್‌ ವಿನೋದ್‌ ಛಾಯಾಗ್ರಹಣ ಮಾಡುತ್ತಿದ್ದಾರೆ. ‘ವಾರಣಾಸಿ’ ಚಿತ್ರದ ಟೈಟಲ್‍ ಟೀಸರ್ ರಿಲೀಸ್‌ ಸಮಾರಂಭದಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವುದರ ಜೊತೆಗೆ ದೇಶ-ವಿದೇಶಗಳಿಂದ ಮಾಧ್ಯಮದವರು ಸಾಕ್ಷಿಯಾಗಿದ್ದರು. 110/130 ಅಡಿಯ ಬೃಹತ್ತಾದ ಎಲ್‍.ಇ.ಡಿ ಪರದೆಯನ್ನು ಈ ಕಾರ್ಯಕ್ರಮಕ್ಕಾಗಿ ಸೃಷ್ಟಿಸಲಾಗಿತ್ತು. ಅದಕ್ಕಾಗಿ 45 ಜನರೇಟರ್ ಗಳನ್ನು ಬಳಸಲಾಗಿತ್ತು. ವೇದಿಕೆಯ ಮೇಲೆ ವಾರಣಾಸಿಯ ಮಣಿಕರ್ಣಿಕಾ ಘಾಟ್ ಅನ್ನು ಪ್ರತಿನಿಧಿಸುವ ಸೆಟ್‍ಗಳನ್ನು ನಿರ್ಮಿಸಲಾಗಿತ್ತು.