Talwar Movie: ಹೈ- ಆಕ್ಟೇನ್ ಆಕ್ಷನ್ ಥ್ರಿಲ್ಲರ್ 'ತಲ್ವಾರ್' ಗ್ಲಿಂಪ್ಸ್ ಬಿಡುಗಡೆ- ಪುರಿ ಜಗನ್ನಾಥ್ ಪುತ್ರನ ಹೊಸ ಅವತಾರ
Talwar Movie: ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್ ಅವರ ಪುತ್ರ ಆಕಾಶ್ ಜಗನ್ನಾಥ್ ‘ತಲ್ವಾರ್’ ಚಿತ್ರದಲ್ಲಿ ಆಕ್ಷನ್-ಪ್ಯಾಕ್ಡ್ ಅವತಾರದ ಮೂಲಕ ಅಭಿಮಾನಿಗಳನ್ನು ಮೋಡಿ ಮಾಡಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಇದೇ ಚಿತ್ರದ ಮೊದಲ ಗ್ಲಿಂಪ್ಸ್ ಬಿಡುಗಡೆ ಆಗಿದ್ದು, ಅಭಿಮಾನಿಗಳು ಮತ್ತು ವೀಕ್ಷಕರನ್ನು ಸೆಳೆದಿದೆ. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್ ಒಂದೇ ಭಾಷೆಗೆ ಸೀಮಿತವಾದ ನಿರ್ದೇಶಕರಲ್ಲ. ಭಾರತೀಯ ಚಿತ್ರೋದ್ಯಮದಲ್ಲಿ ದೊಡ್ಡ ಹೆಸರು ಮಾಡಿದ್ದವರು. ಇದೀಗ ಇದೇ ಪುರಿ ಜಗನ್ನಾಥ್ ಅವರ ಪುತ್ರ ಆಕಾಶ್ ಜಗನ್ನಾಥ್, ಅಪ್ಪನಂತೆ ಬಣ್ಣದ ಲೋಕದಲ್ಲಿ ಹೆಸರು ಮಾಡುವ ನಿಟ್ಟಿನಲ್ಲಿ ಮುಂದುವರಿಯುತ್ತಿದ್ದಾರೆ. ಬಾಲ ಕಲಾವಿದನಾಗಿ ನಟನಾ ಪ್ರಯಾಣ ಆರಂಭಿಸಿದ ಆಕಾಶ್, ನಾಯಕನಾಗಿಯೂ ಗುರುತಿಸಿಕೊಂಡಿದ್ದಾರೆ. ಇದೀಗ ʼತಲ್ವಾರ್ʼ ಚಿತ್ರದಲ್ಲಿ (Talwar Movie) ಆಕ್ಷನ್-ಪ್ಯಾಕ್ಡ್ ಅವತಾರದ ಮೂಲಕ ಅಭಿಮಾನಿಗಳನ್ನು ಮೋಡಿ ಮಾಡಲು ಸಜ್ಜಾಗಿದ್ದಾರೆ. ಇಎಲ್‌ವಿ (ELV) ಗ್ರೂಪ್ ಆಫ್ ಕಂಪನಿಸ್ ಮತ್ತು ವಾರ್ನಿಕ್ ಸ್ಟುಡಿಯೋಸ್‌ನ ಸ್ಥಾಪಕ ಮತ್ತು ಅಧ್ಯಕ್ಷ ಡಾ. ಭಾಸ್ಕರ್ ELV, ಬಿಗ್ ಬಜೆಟ್‌ನಲ್ಲಿ ನಿರ್ಮಿಸಿದ ಸಿನಿಮಾವಾಗಿದೆ. ಇದೇ ತಲ್ವಾರ್ ಸಿನಿಮಾವನ್ನು ಕಾಸಿ ಪರಸುರಾಮ್ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಇದೇ ಚಿತ್ರದ ಮೊದಲ ಗ್ಲಿಂಪ್ಸ್ ಬಿಡುಗಡೆ ಆಗಿದ್ದು, ಅಭಿಮಾನಿಗಳು ಮತ್ತು ವೀಕ್ಷಕರನ್ನು ಸೆಳೆದಿದೆ.
'ತಲ್ವಾರ್' ಪ್ಯಾನ್-ಇಂಡಿಯನ್ ಚಿತ್ರವಾಗಿ ನಿರ್ಮಾಣವಾಗುತ್ತಿದೆ. ಜೂನ್ ವೇಳೆಗೆ ಶೂಟಿಂಗ್ ಮುಗಿಸಿಕೊಂಡು, ಸೆಪ್ಟೆಂಬರ್- ಅಕ್ಟೋಬರ್ ವೇಳೆಗೆ ಆಡಿಯೋ ಬಿಡುಗಡೆ ಆಗಲಿದೆ. ಈ ವರ್ಷದ ಅಂತ್ಯಕ್ಕೆ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ತಲ್ವಾರ್ ಪಕ್ಕಾ ಆಕ್ಷನ್ ಸಿನಿಮಾ ಆಗಿದ್ದು, ಬೇರೆ ಬೇರೆ ಕಡೆಗಳಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದೆ. ಜತೆಗೆ ಮಾಸ್ ಆಕ್ಷನ್ ದೃಶ್ಯಗಳೂ ಹೇರಳವಾಗಿರಲಿವೆ.
ಆಕಾಶ್ ಜಗನ್ನಾಥ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಪ್ರಕಾಶ್ ರಾಜ್, ಪುರಿ ಜಗನ್ನಾಥ್, ಅನಸೂಯಾ ಭಾರದ್ವಾಜ್, ಶೈನ್ ಟಾಮ್ ಚಾಕೊ, ಅಜಯ್ ಮತ್ತು ಇತರ ಹಲವಾರು ಪ್ರಮುಖ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಇದಲ್ಲದೆ ಬಾಲಿವುಡ್ ನಟರು ಸಹ ಈ ಚಿತ್ರದ ಭಾಗವಾಗಲಿದ್ದಾರೆ.
ಈ ಸುದ್ದಿಯನ್ನೂ ಓದಿ | IDBI Bank Recruitment 2025: ಐಡಿಬಿಐ ಬ್ಯಾಂಕ್‌ನಲ್ಲಿದೆ 650 ಹುದ್ದೆ; ಮಾ. 1ರಿಂದ ಅಪ್ಲೈ ಮಾಡಿ
ಚಲನಚಿತ್ರ ನಿರ್ಮಾಪಕ ಕಾಶಿ ಪರಸುರಾಮ್ ಪ್ರೇಕ್ಷಕರಿಗೆ ಅದ್ಭುತವಾದ ಸಿನಿಮೀಯ ಅನುಭವವನ್ನು ಸೃಷ್ಟಿಸುತ್ತಿದ್ದಾರೆ ಎಂದು ವಾರ್ನಿಕ್ ಸ್ಟುಡಿಯೋಸ್‌ನ ನಿರ್ಮಾಣ ಮುಖ್ಯಸ್ಥ ಜಾನಿ ಬಾಷಾ ಹೇಳುತ್ತಾರೆ. ಕೇಶವ ಕಿರಣ್ ಅವರ ಸಂಗೀತ ಸಂಯೋಜನೆ, ತ್ರಿಲೋಕ್ ಸಿದ್ದು ಅವರ ಛಾಯಾಗ್ರಹಣ ಮತ್ತು ದಿನೇಶ್ ಕಾಶಿ ನೃತ್ಯ ಸಂಯೋಜನೆಯಲ್ಲಿನ ಅದ್ಭುತ ಸಾಹಸ ದೃಶ್ಯಗಳು ಮೂಡಿಬರಲಿವೆ. ಈ ಚಿತ್ರವನ್ನು ತಮಿಳು, ತೆಲುಗು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ನಿರ್ಮಿಸಲಾಗುತ್ತಿದೆ.