Vijay Sethupathi: ಪುರಿ ಜಗನ್ನಾಥ್ -ವಿಜಯ್ ಸೇತುಪತಿ ಹೊಸ ಸಿನಿಮಾದ ಚಿತ್ರೀಕರಣ ಮುಕ್ತಾಯ
Directed by Puri Jagannath: ಪುರಿ ಜಗನ್ನಾಥ್ ಅವರು ತಮ್ಮದೇ ಪುರಿ ಕನೆಕ್ಟ್ಸ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಜೆಬಿ ನಾರಾಯಣ್ ರಾವ್ ಕೊಂಡ್ರೊಲ್ಲಾ ಅವರ ಜೆಬಿ ಮೋಷನ್ ಪಿಕ್ಚರ್ಸ್ ಬ್ಯಾನರ್ ಸಹಯೋಗದಲ್ಲಿ ಚಾರ್ಮಿ ಕೌರ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಸೂಪರ್ ಹಿಟ್ ಸಿನಿಮಾಗಳಾದ ಅರ್ಜುನ್ ರೆಡ್ಡಿ, ಕಬೀರ್ ಸಿಂಗ್, ಅನಿಮಲ್ ಸೇರಿದಂತೆ ಅನೇಕ ಚಿತ್ರಗಳಿಗೆ ಹರ್ಷವರ್ಧನ್ ಮ್ಯೂಸಿಕ್ ಒದಗಿಸಿದ್ದಾರೆ.
ವಿಜಯ್ ಸೇತುಪತಿ -
ನಿರ್ದೇಶಕ ಪುರಿ ಜಗನ್ನಾಥ್ (puri jagannath) ಹಾಗೂ ವಿಜಯ್ ಸೇತು ಪತಿ (Vijay Sethupathi) ಕಾಂಬಿನೇಶನ್‌ನಲ್ಲಿ ಹೊಸ ಸಿನಿಮಾದ ಶೂಟಿಂಗ್ ಮುಕ್ತಾಯಗೊಂಡಿದೆ. ಸ್ಪೆಷಲ್ ವಿಡಿಯೋ ಮೂಲಕ ಚಿತ್ರತಂಡ ಚಿತ್ರೀಕರಣ ಮುಗಿಸಿರುವ ಬಗ್ಗೆ ಮಾಹಿತಿ ನೀಡಿದೆ. ಮಾಸ್ ಆಕ್ಷನ್ ಎಂಟರ್ ಟೈನರ್ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ದೊಡ್ಡ ತಾರಾಬಳಗವಿದೆ. ಸಂಯುಕ್ತ ನಾಯಕಿಯಾಗಿ (Samyuktha) ನಟಿಸುತ್ತಿದ್ದು, ದುನಿಯಾ ವಿಜಯ್ ಕುಮಾರ್, ಟಬು (Tabu) ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬ್ರಹ್ಮನಂದ್ ಹಾಗೂ ವಿಟಿವಿ ಗಣೇಶ್ (VTV Ganesh) ಕೂಡ ತಾರಾಬಳಗದಲ್ಲಿದ್ದಾರೆ.
ಹರ್ಷವರ್ಧನ್ ಮ್ಯೂಸಿಕ್
ಪುರಿ ಜಗನ್ನಾಥ್ ಅವರು ತಮ್ಮದೇ ಪುರಿ ಕನೆಕ್ಟ್ಸ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಜೆಬಿ ನಾರಾಯಣ್ ರಾವ್ ಕೊಂಡ್ರೊಲ್ಲಾ ಅವರ ಜೆಬಿ ಮೋಷನ್ ಪಿಕ್ಚರ್ಸ್ ಬ್ಯಾನರ್ ಸಹಯೋಗದಲ್ಲಿ ಚಾರ್ಮಿ ಕೌರ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಸೂಪರ್ ಹಿಟ್ ಸಿನಿಮಾಗಳಾದ ಅರ್ಜುನ್ ರೆಡ್ಡಿ, ಕಬೀರ್ ಸಿಂಗ್, ಅನಿಮಲ್ ಸೇರಿದಂತೆ ಅನೇಕ ಚಿತ್ರಗಳಿಗೆ ಹರ್ಷವರ್ಧನ್ ಮ್ಯೂಸಿಕ್ ಒದಗಿಸಿದ್ದಾರೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿಯನ್ನೇ ನಾಮಿನೇಟ್ ಮಾಡಿದ ರಕ್ಷಿತಾ! ಅಶ್ವಿನಿ, ಜಾಹ್ನವಿ ಫೇಕ್ ಅಂದು ಅಬ್ಬರಿಸಿದ ಧ್ರುವಂತ್
Just 4 moments of Actor Vijay Sethupathi being cute with his cute soft voice ☺️❤️
— Sherlene Wee (@snowlene) November 24, 2025
1. "I feel little sad"
2. "Enduku promise"
3. "I like your jacket, Sir"
4. "Madam, stop"
Looking forward for #PuriSethupathi ✨️#VijaySethupathi #Makkalselvan #VJS https://t.co/9xjZlSEXUm pic.twitter.com/Y8SQfUu8zK
ಸಿನಿಮಾಗೆ ಶೀರ್ಷಿಕೆ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಅದನ್ನು ತಿಳಿಯಲು ಕೂಡ ಅಭಿಮಾನಿಗಳಿಗೆ ಕುತೂಹಲ ಇದೆ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪ್ರಚಾರ ಕಾರ್ಯ ನಡೆಸಲು ಯೋಜನೆ ಹಾಕಿಕೊಂಡಿದೆ.
ಶೀಘ್ರದಲ್ಲೇ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆ ಮಾಡಲಿದೆ. . ಈ ಪ್ಯಾನ್-ಇಂಡಿಯಾ ಯೋಜನೆಯು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಪುರಿ ಜಗನ್ನಾಥ್ ಅವರ ಪುರಿ ಕನೆಕ್ಟ್ಸ್ ಬ್ಯಾನರ್ ಅಡಿ ಹಾಗೂ ಜೆಬಿ ನಾರಾಯಣ್ ರಾವ್ ಕೊಂಡ್ರೊಲ್ಲಾ ಅವರ ಜೆಬಿ ಮೋಷನ್ ಪಿಕ್ಚರ್ಸ್ ಹಾಗೂ ಚಾರ್ಮಿ ಕೌರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ದುನಿಯಾ ವಿಜಯ್
ದುನಿಯಾ ವಿಜಯ್ ಅವರು ‘ವೀರ ಸಿಂಹ ರೆಡ್ಡಿ’ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಈಗ ಅವರು ನಟಿಸುತ್ತಿರುವ ಎರಡನೇ ಟಾಲಿವುಡ್ ಸಿನಿಮಾ ಇದಾಗಿದೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ಬಗ್ಗೆ 'ವಂಶದ ಕುಡಿ' ಹೀಗೆ ಹೇಳೋದಾ? ಚಿಕ್ಕ ಕೆಲ್ಸ ಅಂದಿದಕ್ಕೆ ಚಳಿ ಬಿಡಿಸಿದ ರಕ್ಷಿತಾ ಶೆಟ್ಟಿ
ಬಾಲಿವುಡ್ ನಟಿ ಟಬು ಕೂಡ ಇತ್ತೀಚೆಗಷ್ಟೇ ಚಿತ್ರತಂಡಕ್ಕೆ ಎಂಟ್ರಿ ಆಗಿದ್ದಾರೆ. ಘಟಾನುಘಟಿ ಕಲಾವಿದರ ಎಂಟ್ರಿಯಿಂದಾಗಿ ಪಾತ್ರವರ್ಗದ ತೂಕ ಹೆಚ್ಚುತ್ತಿದೆ.