ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗೋವಾದಲ್ಲಿ ಲೆಜೆಂಡ್ಸ್ ಪ್ರೊ ಟಿ20 ಲೀಗ್; ಶಿಖರ್ ಧವನ್, ಹರ್ಭಜನ್ ಸಿಂಗ್ ಭಾಗಿ!

ಎಸ್‌ಜಿ ಗ್ರೂಪ್‌ನ ಲೆಜೆಂಡ್ಸ್ ಪ್ರೊ ಟಿ20 ಲೀಗ್ ಟೂರ್ನಿಯನ್ನು ಗೋವಾದಲ್ಲಿ ಆಯೋಜಿಸಲಾಗುತ್ತಿದೆ. ಈ ಟೂರ್ನಿಯಲ್ಲಿ ಭಾರತ ಸೇರಿದಂತೆ ವಿಶ್ವದ ಮಾಜಿ ಕ್ರಿಕೆಟಿಗರನ್ನು ಸೇರಿಸಲಿದೆ. ಶಿಖರ್ ಧವನ್, ಹರ್ಭಜನ್ ಸಿಂಗ್, ಶೇನ್ ವ್ಯಾಟ್ಸನ್ ಮತ್ತು ಡೇಲ್ ಸ್ಟೇನ್ ಅವರಂತಹ ದಿಗ್ಗಜ ಆಟಗಾರರು ಈ ಟೂರ್ನಿಯಲ್ಲಿ ಆಡಲಿದ್ದಾರೆ. ತಮ್ಮ ಸ್ಟಾರ್‌ ಆಟಗಾರರ ಆಟವನ್ನು ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳಿಗೆ ಉತ್ತಮ ಅವಕಾಶ ಲಭಿಸಿದೆ.

ಗೋವಾದಲ್ಲಿ ಲೆಜೆಂಡ್ಸ್ ಪ್ರೊ ಟಿ20 ಲೀಗ್!

ಗೋವಾದಲ್ಲಿ ಲೆಜೆಂಡ್ಸ್ ಪ್ರೊ ಟಿ20 ಲೀಗ್ -

Profile
Ramesh Kote Nov 24, 2025 10:10 PM

ನವದೆಹಲಿ: ಎಸ್‌ಜಿ ಗುಂಪು ಪ್ರಚಾರ ಮಾಡುತ್ತಿರುವ ಲೆಜೆಂಡ್ಸ್ ಪ್ರೊ ಟಿ20 ಲೀಗ್ (Legends Pro T20 League) ಸಾಮಾನ್ಯ ಲೆಜೆಂಡ್ಸ್ ಟೂರ್ನಿ ಮಾತ್ರವಲ್ಲಿ, ಇದು ವಿಶ್ವ ದಿಗ್ಗಜ ಕ್ರಿಕೆಟಿಗರನ್ನು ಗೌರವಿಸುವಂತೆ ರೂಪುಗೊಂಡಿರುವ ಅದ್ಭುತ ಜಾಗತಿಕ ಕ್ರಿಕೆಟ್ ಆಗಿದೆ. ಶಿಖರ್ ಧವನ್ ( Shikhar Dhawan), ಹರ್ಭಜನ್ ಸಿಂಗ್ (Harbhajan Singh), ಶೇನ್ ವಾಟ್ಸನ್ ಮತ್ತು ಡೇಲ್ ಸ್ಟೇನ್ ಮೊದಲಾದ ಕ್ರಿಕೆಟಿಗರೊಂದಿಗೆ, ಈ ಲೀಗ್ ಅಭಿಮಾನಿಗಳಿಗೆ ಹೊಸ ವರ್ಷದ ರೋಮಾಂಚಕ ಮತ್ತು ಉತ್ಸಾಹಭರಿತ ಆರಂಭವನ್ನು ನೀಡಲಿದೆ. ಲೆಜೆಂಡ್ಸ್ ಪ್ರೊ ಟಿ20 ಲೀಗ್ ಕ್ರಿಕೆಟ್ ಶ್ರೇಷ್ಠತೆಯ ಆಚರಣೆಯಾಗಿದ್ದು ಅತ್ಯುತ್ತಮ ಆಟಗಾರರನ್ನು ಒಟ್ಟುಗೂಡಿಸಲಿದೆ.

ಮೊದಲ ಆವೃತ್ತಿ 2026ರ ಜನವರಿ 26ರಿಂದ ಫೆಬ್ರವರಿ 4ರವರೆಗೆ ಗೋವಾದಲ್ಲಿ ನಡೆಯಲಿದ್ದು, ಆರು ಫ್ರಾಂಚೈಸಿ ತಂಡಗಳು ಮತ್ತು 90 ದಿಗ್ಗಜ ಕ್ರಿಕೆಟಿಗರು ಭಾಗವಹಿಸಲಿದ್ದಾರೆ. ವೆರ್ನಾದಲ್ಲಿ ಹೊಸದಾಗಿ ಉದ್ಘಾಟಿಸಲಾದ 1919 ಸ್ಪೋರ್ಟ್ಜ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಲೀಗ್ ನಡೆಯಲಿದೆ.

ಸತತ ಎರಡನೇ ಬಾರಿ ಕಬಡ್ಡಿ ವಿಶ್ವಕಪ್‌ ಮುಡಿಗೇರಿಸಿಕೊಂಡ ಭಾರತ ಮಹಿಳಾ ತಂಡ!

ಆಸ್ಟ್ರೇಲಿಯಾ ನಾಯಕ ಮೈಕೆಲ್ ಕ್ಲಾರ್ಕ್ ಅವರನ್ನು ಲೀಗ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ಅವರು "ಕ್ರಿಕೆಟ್‌ ಭಾರತೀಯರ ಹೃದಯಕ್ಕೆ ಹತ್ತಿರವಾಗಿದ್ದು, ಹಳೆಯ ಸ್ನೇಹಿತರೊಂದಿಗೆ ಮತ್ತು ಹಳೆಯ ಪ್ರತಿಸ್ಪರ್ಧಿಗಳೊಂದಿಗೆ ಮತ್ತೆ ಒಂದಾಗುವ ಅವಕಾಶ ನನಗೆ ಸಂಭ್ರಮ ತಂದಿದೆ," ಎಂದರು.

ಎಸ್‌ಜಿ ಗ್ರೂಪ್‌ನ ರೋಹನ್ ಗುಪ್ತಾ ಮಾತನಾಡಿ "ಲೆಜೆಂಡ್ಸ್ ಪ್ರೊ ಟಿ20 ಲೀಗ್ ಮೂಲಕ ಕ್ರಿಕೆಟ್ ಪರಂಪರೆಯನ್ನು ಗೌರವಿಸುವುದರ ಜೊತೆಗೆ ಅಭಿಮಾನಿಗಳಿಗೆ ಸ್ಪರ್ಧಾತ್ಮಕ ಮತ್ತು ಆಕರ್ಷಕ ಅನುಭವ ಒದಗಿಸುವುದಾಗಿದೆ. ವಿಶ್ವದ ಶ್ರೇಷ್ಠ ಕ್ರಿಕೆಟಿಗರನ್ನು ಗೋವಾಕ್ಕೆ ತರಲು ಸಾಧ್ಯವಾಗಿರುವುದು ನಮಗೆ ಹೆಮ್ಮೆಯ ವಿಷಯ," ಎಂದು ತಿಳಿಸಿದ್ದಾರೆ.

ಲೆಜೆಂಡ್ಸ್ ಪ್ರೊ ಟಿ20 ಲೀಗ್ ಲೆಜೆಂಡ್ಸ್ ಕ್ರಿಕೆಟ್‌ನಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದು, ಶೀಘ್ರದಲ್ಲೇ ತಂಡಗಳ ಹೆಸರು ಮತ್ತು ಟಿಕೆಟ್ ವಿವರಗಳನ್ನು ಘೋಷಿಸಲಾಗುತ್ತದೆ.