ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Thalaivar 173: ಯಂಗ್‌ ಡೈರೆಕ್ಟರ್‌ಗೆ ಚಾನ್ಸ್‌ ಕೊಟ್ಟ ರಜನಿಕಾಂತ್;‌ ಅನುಭವಕ್ಕಿಂತ ಟ್ಯಾಲೆಂಟ್‌ ದೊಡ್ಡದು ಎಂದ್ರು 'ತಲೈವಾ' ಫ್ಯಾನ್ಸ್!‌

Thalaivar 173 Updates: ರಜನಿಕಾಂತ್‌ ಅವರ 173ನೇ ಸಿನಿಮಾವನ್ನು ಯಾರು ನಿರ್ದೇಶಿಸುತ್ತಾರೆ ಎಂಬ ಗೊಂದಲಕ್ಕೆ ಈಗ ತೆರೆಬಿದ್ದಿದೆ. 'ಡಾನ್' ಖ್ಯಾತಿಯ ನಿರ್ದೇಶಕ ಸಿಬಿ ಚಕ್ರವರ್ತಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ವಿಶೇಷವೆಂದರೆ ಈ ಚಿತ್ರವನ್ನು ನಟ ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ನಿರ್ಮಾಣ ಮಾಡುತ್ತಿದೆ.

Thalaivar 173: ಕಮಲ್ ಹಾಸನ್ ನಿರ್ಮಾಣದ ರಜನಿ ಚಿತ್ರಕ್ಕೆ ಹೊಸ ಡೈರೆಕ್ಟರ್‌!

-

Avinash GR
Avinash GR Jan 4, 2026 1:06 PM

ʻಸೂಪರ್‌ ಸ್ಟಾರ್‌ʼ ರಜನಿಕಾಂತ್‌ ಅಭಿನಯದ 173ನೇ ಸಿನಿಮಾ ಕುರಿತು ಈಚೆಗೊಂದಿಷ್ಟು ಗೊಂದಲಗಳು ಉಂಟಾಗಿದ್ದವು. ಈ ಚಿತ್ರವನ್ನು ಯಾರು ನಿರ್ದೇಶನ ಮಾಡಲಿದ್ದಾರೆ ಎಂಬ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿದ್ದವು. ಅಂತಿಮವಾಗಿ ಇದೆಲ್ಲದಕ್ಕೂ ತಾರ್ಕಿಕ ಅಂತ್ಯ ಸಿಕ್ಕಿದೆ. ರಜನಿಕಾಂತ್‌ ಅವರ 173ನೇ ಸಿನಿಮಾವನ್ನು ಸಿಬಿ ಚಕ್ರವರ್ತಿ ನಿರ್ದೇಶನ ಮಾಡಲಿದ್ದಾರೆ.

ಯಾರು ಈ ಸಿಬಿ ಚಕ್ರವರ್ತಿ?

2022ರಲ್ಲಿ ತೆರೆಕಂಡ ಶಿವಕಾರ್ತಿಕೇಯನ್‌ ನಟನೆಯ ʻಡಾನ್ʼ‌ ಸಿನಿಮಾವನ್ನ ನಿರ್ದೇಶಿಸಿದ್ದು ಇದೇ ಸಿಬಿ ಚಕ್ರವರ್ತಿ. ಈ ಹಿಂದೆ ನಿರ್ದೇಶಕ ಅಟ್ಲೀ ಅವರ ಜೊತೆಗೆ ಕೆಲಸ ಮಾಡಿಕೊಂಡಿದ್ದ ಸಿಬಿ, ಡಾನ್‌ ಮೂಲಕ ಮೊದಲ ಯತ್ನದಲ್ಲೇ ಬ್ಲಾಕ್‌ ಬಸ್ಟರ್‌ ಸಕ್ಸಸ್‌ ಕೊಟ್ಟಿದ್ದರು. ಆದರೆ ಆನಂತರ ಯಾವುದೇ ಸಿನಿಮಾ ಮಾಡಿರಲಿಲ್ಲ. ಬಳಿಕ ಶಿವಕಾರ್ತಿಕೇಯನ್‌ ಜತೆಗೆ ಇನ್ನೊಂದು ಸಿನಿಮಾ ಮಾಡಲಿದ್ದಾರೆ ಎಂಬ ಟಾಕ್‌ ಇತ್ತಾದರೂ, ಆ ಸಿನಿಮಾ ಎಷ್ಟೇ ಕಾದರೂ ಸೆಟ್ಟೇರಲಿಲ್ಲ. ಇದೀಗ ಸಿಬಿಗೆ ರಜನಿಕಾಂತ್‌ ಅವರ ಸಿನಿಮಾವನ್ನ ನಿರ್ದೇಶನ ಮಾಡುವ ಚಾನ್ಸ್‌ ಸಿಕ್ಕಿದೆ.

Rajinikanth-Kamal Haasan: ಬರೋಬ್ಬರಿ 4 ದಶಕಗಳ ಬಳಿಕ ತೆರೆಮೇಲೆ ಒಂದಾಗಲಿದ್ದಾರೆ ರಜನಿಕಾಂತ್‌-ಕಮಲ್‌ ಹಾಸನ್‌

ಇದು ಕಮಲ್‌ ಹಾಸನ್‌ ನಿರ್ಮಾಣದ ಸಿನಿಮಾ

ರಜನಿಕಾಂತ್‌ ಅವರ 173ನೇ ಸಿನಿಮಾವನ್ನು ನಟ ಕಮಲ್‌ ಹಾಸನ್‌ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆ ನಿರ್ಮಾಣ ಮಾಡುತ್ತಿರುವುದು ವಿಶೇಷ. ಆರಂಭದಲ್ಲಿ ಈ ಪ್ರಾಜೆಕ್ಟ್‌ ಘೋಷಣೆಯದಾಗ, ನಿರ್ದೇಶಕ ಸುಂದರ್‌ ಸಿ. ಅವರಿಗೆ ಚಾನ್ಸ್‌ ನೀಡಲಾಗಿತ್ತು. ರಜನಿಕಾಂತ್‌ ಸಿನಿಮಾವನ್ನ ಸುಂದರ್‌ ಮಾಡಲಿದ್ದಾರೆ ಎಂದಾಗ ನಿರೀಕ್ಷೆ ಡಬಲ್‌ ಆಗಿತ್ತು. ಆದರೆ ಸಿನಿಮಾ ಘೋಷಣೆಯಾದ ಕೆಲವೇ ದಿನಗಳಲ್ಲಿ ಸುಂದರ್‌ ಸಿ. ಆ ಪ್ರಾಜೆಕ್ಟ್‌ನಿಂದ ಹೊರಬಂದರು. ಇದು ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿತ್ತು.

ರಜನಿಕಾಂತ್‌ ಹೊಸ ಸಿನಿಮಾ ಕುರಿತ ಪೋಸ್ಟ್‌

ನಂತರ ರಜನಿಕಾಂತ್‌ ನಟನೆಯ ಮತ್ತು ಕಮಲ್‌ ಹಾಸನ್‌ ನಿರ್ಮಾಣದ ಈ ಸಿನಿಮಾವನ್ನು ಯಾರು ನಿರ್ದೇಶಿಸಬಹುದು ಎಂಬ ಬಗ್ಗೆ ಭಾರಿ ಚರ್ಚೆಗಳು ನಡೆದವು. ಕಮಲ್‌ ಹಾಸನ್‌ ಕೂಡ, "ಸ್ಕ್ರಿಪ್ಟ್‌ನಿಂದ ನನ್ನ ಸ್ಟಾರ್‌ ತೃಪ್ತರಾಗುವವರೆಗೂ, ನಾವು ಉತ್ತಮ ಸ್ಕ್ರಿಪ್ಟ್‌ ಹುಡುಕಾಟ ನಡೆಸುತ್ತಲೇ ಇರುತ್ತೇವೆ" ಎಂದಿದ್ದರು. ಇದೀಗ ಸಿಬಿ ಚಕ್ರವರ್ತಿಗೆ ಆ ಚಾನ್ಸ್ ಸಿಕ್ಕಿದೆ.

Rajinikanth: ಬರೋಬ್ಬರಿ 34 ವರ್ಷಗಳ ಬಳಿಕ ಒಂದಾಗಲಿದ್ದಾರೆ ರಜನಿಕಾಂತ್‌-ಮಣಿರತ್ನಂ

ಅಚ್ಚರಿ ಮೂಡಿಸಿದ ಸಿಬಿ ಚಕ್ರವರ್ತಿ ಆಯ್ಕೆ

ಯಾರೇ ನಿರ್ದೇಶಕರಾಗಲಿ, ರಜನಿಕಾಂತ್‌ ಸಿನಿಮಾ ನಿರ್ದೇಶನ ಮಾಡುವಾಸೆ ಇದ್ದೇ ಇರುತ್ತದೆ. ಎಷ್ಟೋ ಅನುಭವಿ ನಿರ್ದೇಶಕರಿಗೂ ಆ ಚಾನ್ಸ್‌ ಸಿಕ್ಕಿರುವುದಿಲ್ಲ. ಆದರೆ ಸಿಬಿ ಚಕ್ರವರ್ತಿ ಒಂದು ಸಿನಿಮಾ ಮಾಡಿರುವ ಯುವ ನಿರ್ದೇಶಕ. ಇಷ್ಟು ಬೇಗ ಅವರಿಗೆ ರಜನಿ ಸಿನಿಮಾವನ್ನು ನಿರ್ದೇಶಿಸುವ ಅವಕಾಶ ಸಿಕ್ಕಿರುವುದು ಅಚ್ಚರಿಯೇ ಸರಿ. ಅನುಭವ ಮುಖ್ಯವಲ್ಲ, ಪ್ರತಿಭೆ ಮುಖ್ಯ ಎಂಬುದು ರಜನಿಕಾಂತ್‌ ಫ್ಯಾನ್ಸ್‌ ಮಾತು. ಒಟ್ಟಿನಲ್ಲಿ ರಜನಿ ಮತ್ತು ಸಿಬಿ ಕಾಂಬಿನೇಷನ್‌ನಲ್ಲಿ ಒಂದು ಪಕ್ಕಾ ಫ್ಯಾಮಿಲಿ ಆಕ್ಷನ್‌ ಸಿನಿಮಾ ಬರುವುದು ಖಚಿತ ಎಂಬ ಸೂಚನೆ ಫಸ್ಟ್‌ಲುಕ್‌ನಿಂದಲೇ ಗೊತ್ತಾಗಿದೆ. ಅಂದಹಾಗೆ, ಈ ಸಿನಿಮಾವು 2027ರ ಪೊಂಗಲ್‌ಗೆ ರಿಲೀಸ್‌ ಆಗಲಿದೆ.