ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಡೆಡ್ಲಿ ಡಾಕ್ಟರ್‌ʼ ಆಗಿ ಬಂದ ತಲೈವಾ; ರಜನಿಕಾಂತ್‌ ನಟನೆಯ 173ನೇ ಸಿನಿಮಾದ ಟೈಟಲ್‌ - ಫಸ್ಟ್‌ ಲುಕ್‌ ರಿಲೀಸ್!

ʻಸೂಪರ್‌ ಸ್ಟಾರ್' ರಜನಿಕಾಂತ್ ಅವರ 173ನೇ ಚಿತ್ರಕ್ಕೆ ‘ಧರ್ಮನ್: ದಿ ಡೆಡ್ಲಿ ಡಾಕ್ಟರ್’ ಎಂದು ಹೆಸರಿಡಲಾಗಿದ್ದು, ಕೈಯಲ್ಲಿ ಸರ್ಜಿಕಲ್ ಬ್ಲೇಡ್ ಹಿಡಿದ ರಜನಿಕಾಂತ್‌ ಅವರ ಖಡಕ್ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಅಶ್ವತ್ ಮಾರಿಮುತ್ತು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಜ್ ಕಮಲ್ ಫಿಲ್ಮ್ಸ್ ಬ್ಯಾನರ್ ಅಡಿ ಕಮಲ್ ಹಾಸನ್ ನಿರ್ಮಾಣ ಮಾಡುತ್ತಿದ್ದಾರೆ.

ರಜನಿಕಾಂತ್ ಹೊಸ ಚಿತ್ರಕ್ಕೆ 'ಧರ್ಮನ್' ಟೈಟಲ್ ಫಿಕ್ಸ್: ‌ಅಶ್ವಥ್‌ಗೆ ಚಾನ್ಸ್

-

Avinash GR
Avinash GR Jun 24, 2026 12:44 PM

ʻಸೂಪರ್‌ ಸ್ಟಾರ್ʼ ರಜನಿಕಾಂತ್ ನಟಿಸುತ್ತಿರುವ 173ನೇ ಚಿತ್ರದ ಸುತ್ತ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಗಾಸಿಪ್‌ಗಳಿಗೆ ಕೊನೆಗೂ ತೆರೆ ಬಿದ್ದಿದೆ. ಆರಂಭದಲ್ಲಿ ಈ ಭಾರಿ ಆ್ಯಕ್ಷನ್ ಸಿನಿಮಾವನ್ನು ನಿರ್ದೇಶಕ ಸುಂದರ್ ಸಿ. ನಿರ್ದೇಶಿಸಲಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಗಿತ್ತು. ಆದರೆ, ಕೆಲವು ಅನಿವಾರ್ಯ ತಾಂತ್ರಿಕ ಕಾರಣಗಳಿಂದಾಗಿ ಅವರು ಈ ಚಿತ್ರದಿಂದ ಹೊರನಡೆದಿದ್ದರು. ಇದಾದ ಬಳಿಕ ಸಿಬಿ ಚಕ್ರವರ್ತಿ ಹೆಸರು ಚಾಲ್ತಿಯಲ್ಲಿತ್ತು. ಆದರೆ, ಅವರಿಗೂ ಚಾನ್ಸ್‌ ಸಿಗಲಿಲ್ಲ. ಅಂತಿಮವಾಗಿ ಆ ಮೆಗಾ ಆಫರ್ ಯುವ ನಿರ್ದೇಶಕ ಅಶ್ವತ್ ಮಾರಿಮುತ್ತು ಪಾಲಾಗಿದೆ.

‘ಧರ್ಮನ್: ದಿ ಡೆಡ್ಲಿ ಡಾಕ್ಟರ್’ ಫಸ್ಟ್ ಲುಕ್ ರಿಲೀಸ್!

ರಜನಿಕಾಂತ್‌ ನಟನೆಯ ಈ 173ನೇ ಸಿನಿಮಾಕ್ಕೆ ‘ಧರ್ಮನ್: ದಿ ಡೆಡ್ಲಿ ಡಾಕ್ಟರ್’ ಎಂಬ ಪವರ್‌ಫುಲ್ ಶೀರ್ಷಿಕೆಯನ್ನು ಇಡಲಾಗಿದೆ. ಟೈಟಲ್ ಜೊತೆಗೆ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಕೂಡ ರಿಲೀಸ್‌ ಆಗಿದೆ. ರಜನಿಕಾಂತ್ ಅವರು ಹಿಂದೆಂದೂ ಕಾಣದ ವಿಶಿಷ್ಟ ಹಾಗೂ ಪವರ್‌ಫುಲ್ ಡಾಕ್ಟರ್ ಗೆಟಪ್‌ನಲ್ಲಿ ದರ್ಶನ ನೀಡಿದ್ದಾರೆ. ಕೈಯಲ್ಲಿ ಸರ್ಜಿಕಲ್ ಬ್ಲೇಡ್ಸ್ ಹಿಡಿದು, ಕಣ್ಣುಗಳಲ್ಲಿ ರೌದ್ರಾವತಾರ ತಾಳಿ ರಜನಿ ನೀಡಿರುವ ಮಾಸ್ ಪೋಸ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

Thalaivar 173: ತಲೈವಾ-173 ಸಿನಿಮಾಗಾಗಿ ಒಂದಾದ ರಜನಿಕಾಂತ್-ಕಮಲ್ ಹಾಸನ್

ಈ ಕ್ರೇಜಿ ಪ್ರಾಜೆಕ್ಟ್ ಅನ್ನು 'ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಶನಲ್' ಬ್ಯಾನರ್ ಅಡಿಯಲ್ಲಿ ನಟ ಕಮಲ್ ಹಾಸನ್ ಮತ್ತು ಆರ್. ಮಹೇಂದ್ರನ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ರಜನಿಕಾಂತ್ ಅವರಿಗೆ ಜೋಡಿಯಾಗಿ ಹಿರಿಯ ನಟಿ ಸಿಮ್ರಾನ್ ನಟಿಸುತ್ತಿದ್ದು, ಪ್ರಮುಖ ಪಾತ್ರಗಳಲ್ಲಿ ಯುವ ನಟಿ ರಾಶಿ ಖನ್ನಾ ಹಾಗೂ ಯೋಗಿ ಬಾಬು ಕಾಣಿಸಿಕೊಳ್ಳುತ್ತಿದ್ದಾರೆ.‌

Rajinikanth-Kamal Haasan: ಬರೋಬ್ಬರಿ 4 ದಶಕಗಳ ಬಳಿಕ ತೆರೆಮೇಲೆ ಒಂದಾಗಲಿದ್ದಾರೆ ರಜನಿಕಾಂತ್‌-ಕಮಲ್‌ ಹಾಸನ್‌

ರಿಲೀಸ್‌ ಡೇಟ್‌ ಘೋಷಣೆ ಆಗಿಲ್ಲ

ಚಿತ್ರತಂಡ ಧರ್ಮನ್‌ ಪೋಸ್ಟರ್‌ನಲ್ಲಿ ಎಲ್ಲಿಯೂ ಕೂಡ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಿಲ್ಲ.‌ ಆರಂಭದಲ್ಲಿ ಈ ಚಿತ್ರವನ್ನು 2027ರ ಸಂಕ್ರಾಂತಿ ಹಬ್ಬದ ಉಡುಗೊರೆಯಾಗಿ ತೆರೆಗೆ ತರಲು ಯೋಜಿಸಲಾಗಿತ್ತು. ಆದರೆ ರಜನಿಕಾಂತ್ ನಟನೆಯ ಮತ್ತೊಂದು ಬಹುನಿರೀಕ್ಷಿತ ಸೀಕ್ವೆಲ್ ‘ಜೈಲರ್ 2’ ಇದೇ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ. ಬ್ಯಾಕ್-ಟು-ಬ್ಯಾಕ್ ಎರಡು ದೊಡ್ಡ ಸಿನಿಮಾಗಳು ಬಂದರೆ ಬಾಕ್ಸ್ ಆಫೀಸ್ ಗಳಿಕೆಯ ಮೇಲೆ ಪ್ರಭಾವ ಬೀರಬಹುದು ಎಂಬ ಕಾರಣಕ್ಕೆ, ‘ಜೈಲರ್ 2’ ಬಿಡುಗಡೆಯಾದ ನಂತರ ಸ್ವಲ್ಪ ಗ್ಯಾಪ್ ಕೊಟ್ಟು, ‘ಧರ್ಮನ್’ ಚಿತ್ರವನ್ನು 2027ರ ಏಪ್ರಿಲ್‌ ವೇಳೆಗೆ ರಿಲೀಸ್‌ ಮಾಡಲು ನಿರ್ಮಾಪಕರು ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ, ಸಂಕ್ರಾಂತಿ ಹಬ್ಬಕ್ಕೆ ಕಮಲ್‌ ಅವರದ್ದೇ ಮತ್ತೊಂದು ಸಿನಿಮಾ ʻಸೆಯೋನ್‌ʼ ತೆರೆಗೆ ಬರುತ್ತಿದೆ.

ಧರ್ಮನ್‌ ಸಿನಿಮಾದ ಫಸ್ಟ್‌ ಲುಕ್‌

ಅಶ್ವಥ್‌ಗೆ ಬಿಗ್‌ ಚಾನ್ಸ್

ರಜನಿಕಾಂತ್‌ಗೆ ನಿರ್ದೇಶನ ಮಾಡುವ ಬಂಪರ್ ಚಾನ್ಸ್ ಪಡೆದಿರುವ ಅಶ್ವಥ್‌ ಮಾರಿಮುತ್ತು ತಮಿಳು ಚಿತ್ರರಂಗದಲ್ಲಿ ಕ್ರೇಜಿ ಡೈರೆಕ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. 'ಓ ಮೈ ಕಡವುಳೇ' (2020) ಮೂಲಕ ಹೊಸ ಮಾದರಿಯ ಫ್ಯಾಂಟಸಿ ಲವ್ ಸ್ಟೋರಿ ನೀಡಿ ಬ್ಲಾಕ್‌ಬಸ್ಟರ್ ಯಶಸ್ಸು ಕಂಡಿದ್ದ ಅಶ್ವಥ್‌, ನಂತರ ಪ್ರದೀಪ್ ರಂಗನಾಥನ್ ನಟನೆಯ 'ಡ್ರ್ಯಾಗನ್' ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದರು. ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿತ್ತು. ಈಗ ರಜನಿಕಾಂತ್ ಅವರ 'ಧರ್ಮನ್' ನಂತಹ ಬಿಗ್ ಬಜೆಟ್ ಸಿನಿಮಾವನ್ನು ನಿರ್ದೇಶಿಸುವ ಅವಕಾಶ ಪಡೆದುಕೊಂಡಿದ್ದಾರೆ.