ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

TVK ಪಕ್ಷದ ಗೆಲುವಿನ ಎಫೆಕ್ಟ್‌‌, ʻಜನ ನಾಯಗನ್‌ʼ ಚಿತ್ರದ ಟೈಟಲ್‌ ಕಾರ್ಡ್‌ನಲ್ಲಿ ಭರ್ಜರಿ ಚೇಂಜ್: ವಿಜಯ್‌ ಫ್ಯಾನ್ಸ್‌ ಸಖತ್‌ ಥ್ರಿಲ್!

ತಮಿಳುನಾಡು ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಭರ್ಜರಿ ಜಯ ಸಾಧಿಸಿರುವ ಬೆನ್ನಲ್ಲೇ, ಅವರ ಕೊನೆಯ ಸಿನಿಮಾ 'ಜನ ನಾಯಗನ್' ಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿರುವ ಜಾಹೀರಾತುಗಳಲ್ಲಿ "ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್" ಎಂದು ಸಂಬೋಧಿಸಲಾಗಿದ್ದು, ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.

ʻಜನ ನಾಯಗನ್ʼ ಟೈಟಲ್ ಕಾರ್ಡ್ ಚೇಂಜ್; ʻದಳಪತಿʼ ವಿಜಯ್ ಫ್ಯಾನ್ಸ್ ಥ್ರಿಲ್

-

Avinash GR
Avinash GR May 7, 2026 7:58 PM

ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವು ಭರ್ಜರಿ ಗೆಲುವು ಕಂಡಿದ್ದು, ತಮಿಳುನಾಡಿನಲ್ಲಿ ಹೊಸ ಸರ್ಕಾರವನ್ನು ರಚಿಸುವ ಸನ್ನಾಹದಲ್ಲಿದೆ. ವಿಜಯ್‌ ಅವರನ್ನು ಮುಖ್ಯಮಂತ್ರಿಯನ್ನಾಗಿ ನೋಡಲು ಅವರ ಫ್ಯಾನ್ಸ್‌ ಕಾಯುತ್ತಿದ್ದಾರೆ. ಈ ನಡುವೆ ʻಜನ ನಾಯಗನ್‌ʼ ಚಿತ್ರದ ಮೇಲೂ ಫ್ಯಾನ್ಸ್‌ಗೆ ಇನ್ನಿಲ್ಲದಂತಹ ಕುತೂಹಲ ಇದೆ. ಯಾಕೆಂದರೆ, ಇದು ವಿಜಯ್‌ ಅವರ ಕೊನೆಯ ಸಿನಿಮಾ. ಇದೀಗ ವಿಜಯ್‌ ಚುನಾವಣೆಯಲ್ಲಿ ಗೆದ್ದ ಬಳಿಕ ʻಜನ ನಾಯಗನ್‌ʼ ಚಿತ್ರದ ಪ್ರೋಮೋ ಟೈಟಲ್‌ ಕಾರ್ಡ್‌ನಲ್ಲಿ ಭಾರಿ ಬದಲಾವಣೆ ಆಗಿದೆ. ಆ ಕುರಿತ ವಿಡಿಯೋ ವೈರಲ್‌ ಆಗಿದೆ.

‌ಸಿಎಂ ಸಿ. ಜೋಸೆಫ್ ವಿಜಯ್‌‌!

ಹೌದು, ಚಿತ್ರಮಂದಿರಗಳಲ್ಲಿ ಜನ ನಾಯಗನ್‌ ಸಿನಿಮಾದ ಪ್ರೋಮೋ ಪ್ರದರ್ಶನವಾಗುತ್ತಿವೆ. ಅದರಲ್ಲಿ "ತಮಿಳುನಾಡಿನ ಮಾನ್ಯ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನಟಿಸಿರುವ ಜನ ನಾಯಗನ್..." ಎಂದು ಸಂಬೋಧಿಸುವ ಹೊಸ 'ಟೈಟಲ್ ಕಾರ್ಡ್' ಪ್ರದರ್ಶನಗೊಳ್ಳುತ್ತಿವೆ. ಚಿತ್ರಮಂದಿರವೊಂದರಲ್ಲಿ ಈ ಹೊಸ ಟೈಟಲ್‌ ಕಾರ್ಡ್‌ ಪ್ರದರ್ಶನವಾದ ಬೆನ್ನಲ್ಲೇ ಅಭಿಮಾನಿಗಳ ಸಡಗರ ಮುಗಿಲು ಮುಟ್ಟಿದೆ. ಥಿಯೇಟರ್‌ಗಳ ಒಳಗೆ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಾ, ಸೀಟಿ ಹಾಕುತ್ತಾ ಥ್ರಿಲ್‌ ಆಗಿ ಸಂಭ್ರಮಿಸುತ್ತಿದ್ದಾರೆ ಫ್ಯಾನ್ಸ್‌.

Jana Nayagan postponed: 'ಜನ ನಾಯಗನ್‌' ಸಿನಿಮಾ ರಿಲೀಸ್‌ ಮುಂದೂಡಿಕೆ ; ದಳಪತಿ ವಿಜಯ್ ಫ್ಯಾನ್ಸ್‌ ಬೇಸರ

ವಿಜಯ್‌ಗೆ ವಿಶ್‌ ಮಾಡಿದ ಜನ ನಾಯಗನ್‌ ನಿರ್ಮಾಪಕರು

ಜನ ನಾಯಗನ್‌ ಸಿನಿಮಾದ ಈ ಟೈಟಲ್‌ ಕಾರ್ಡ್‌ನ ವಿಡಿಯೋಗಳು ವೈರಲ್ ಆಗುತ್ತಿದ್ದಂತೆಯೇ, ನೆಟ್ಟಿಗರು ಇದನ್ನು ವಿವಿಧ ರೀತಿಯಲ್ಲಿ ಬಣ್ಣಿಸುತ್ತಿದ್ದಾರೆ. "ಭಾರತದ ನಟನೊಬ್ಬನಿಗೆ ಸಿಕ್ಕ ಮೊದಲ 'ಸಿಎಂ' ಟೈಟಲ್ ಕಾರ್ಡ್" ಎಂದು ಕರೆದಿದ್ದಾರೆ. ಸದ್ಯಕ್ಕಂತೂ ಜನ ನಾಯಗನ್‌ ಸಿನಿಮಾ ಯಾವಾಗ ರಿಲೀಸ್‌ ಆಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಮೇ ತಿಂಗಳಲ್ಲೇ ಈ ಸಿನಿಮಾವನ್ನು ರಿಲೀಸ್‌ ಮಾಡಬೇಕು ಎಂಬ ಪ್ಲ್ಯಾನ್‌ನಲ್ಲಿ ನಿರ್ಮಾಪಕರು ಇದ್ದಾರೆ ಎನ್ನಲಾಗುತ್ತಿದೆ.

TVK Vijay: ಜನರಿಗೆ ಮೋಸ ಮಾಡುವುದೇ ಡಿಎಂಕೆ ಕೆಲಸ; ಪುದುಚೇರಿಯಲ್ಲಿ ವಿಜಯ್‌ ವಾಗ್ದಾಳಿ

ಚುನಾವಣೆಯಲ್ಲಿ ಗೆದ್ದ ವಿಜಯ್‌ಗೆ ವಿಶ್‌ ಮಾಡಿದ್ದ 'ಜನ ನಾಯಗನ್' ನಿರ್ಮಾಪಕ ವೆಂಕಟ್ ಕೆ. ನಾರಾಯಣ, "ಇದು ತಲೆಮಾರುಗಳ ಕಾಲ ನೆನಪಿನಲ್ಲಿ ಉಳಿಯುವ ಐತಿಹಾಸಿಕ ಕ್ರಾಂತಿ" ಎಂದು ಶ್ಲಾಘಿಸಿದ್ದರು.

ಸೆನ್ಸಾರ್‌ನಿಂದ ತಡವಾಗಿರುವ ಸಿನಿಮಾದ ಬಿಡುಗಡೆ

ಎಚ್. ವಿನೋದ್ ನಿರ್ದೇಶನದ‌, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ 'ಜನ ನಾಯಗನ್' ಸಿನಿಮಾದಲ್ಲಿ ಪೂಜಾ ಹೆಗ್ಡೆ, ಪ್ರಿಯಾಮಣಿ, ಬಾಬಿ ಡಿಯೋಲ್, ಪ್ರಕಾಶ್‌ ರಾಜ್‌, ಮತ್ತು ಮಮಿತಾ ಬೈಜು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿರುದ್ಧ್‌ ರವಿಚಂದರ್‌ ಅವರು ಈ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ.

ಜನ ನಾಯಗನ್‌ ಹೊಸ ಪ್ರೋಮೋ ವೈರಲ್



ಆರಂಭದಲ್ಲಿ ಜನ ನಾಯಗನ್‌ ಸಿನಿಮಾವು ಜನವರಿ 9 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್‌ ಸಮಸ್ಯೆಯಿಂದ ಅದು ವಿಳಂಬವಾಯಿತು. ಚಿತ್ರದಲ್ಲಿ ರಾಜಕೀಯ ಉಲ್ಲೇಖಗಳಿರುವುದರಿಂದ ಮತ್ತು ಮಾರ್ಚ್ 15 ರಿಂದ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದರಿಂದ, ಬಿಡುಗಡೆ ಮತ್ತಷ್ಟು ತಡವಾಯಿತು. ಈಗಲೂ ಈ ಚಿತ್ರಕ್ಕೆ ಸೆನ್ಸಾರ್‌ನಿಂದ ಪ್ರಮಾಣ ಪತ್ರ ಸಿಕ್ಕಿಲ್ಲ.