ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Udho Udho Sri Renuka Yellamma: ಪರಶುರಾಮನ ಅಧ್ಯಾಯದ ಕಥೆ ಇದೇ ಸೋಮವಾರದಿಂದ ಸ್ಟಾರ್ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಆರಂಭ!

Udho Udho Sri Renuka Yellamma: ಪ್ರಸ್ತುತ ಸ್ಟಾರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ" ಧಾರಾವಾಹಿ ಪ್ರೇಕ್ಷಕರ ಮನಗೆದ್ದು ಯಶಸ್ಸಿನಿಂದ ಸಾಗುತ್ತಿದೆ. ಇನ್ಮುಂದೆ ವಿಷ್ಣುವಿನ ಮಹಾವತಾರ ಪರಶುರಾಮನ ಕಥೆಯನ್ನು ಹೇಳಲು ಸ್ಟಾರ್ ಸುವರ್ಣ ಸಜ್ಜಾಗಿದೆ.

ಪರುಶುರಾಮನ ಅಧ್ಯಾಯದ ಕಥೆ ಸ್ಟಾರ್ ವಾಹಿನಿಯಲ್ಲಿ ಶುರು!

-

Profile Pushpa Kumari Sep 27, 2025 4:03 PM

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ವೀಕ್ಷಕರಿಗೆ ಪುರಾಣ, ಆಧ್ಯಾತ್ಮ ಮತ್ತು ಮೌಲ್ಯಾಧಾರಿತ ಕಥೆಗಳನ್ನು ನೀಡುತ್ತಾ ಬಂದಿದೆ. ಪ್ರಸ್ತುತ ಸ್ಟಾರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ" (Udho Udho Sri Renuka Yellamma) ಧಾರಾವಾಹಿ ಪ್ರೇಕ್ಷಕರ ಮನಗೆದ್ದು ಯಶಸ್ಸಿನಿಂದ ಸಾಗುತ್ತಿದೆ. ಇನ್ಮುಂದೆ ವಿಷ್ಣುವಿನ ಮಹಾವತಾರ ಪರಶುರಾಮನ ಕಥೆಯನ್ನು ಹೇಳಲು ಸ್ಟಾರ್ ಸುವರ್ಣ ಸಜ್ಜಾಗಿದೆ.

ಅಪ್ಪಟ ಕನ್ನಡ ಮಣ್ಣಿನ ಪೌರಾಣಿಕ ಕಥಾವಸ್ತುವನ್ನಿಟ್ಟುಕೊಂಡು ಶುರುವಾದ ಈ ಧಾರಾವಾಹಿ ಆರಂಭದಿಂದಲೂ ಕಿರುತೆರೆಯಲ್ಲಿ ಹೊಸ ಸಂಚಲನವನ್ನು ಮೂಡಿಸುತ್ತಿದೆ. ರೇಣುಕೆ ಹಾಗೂ ಯಲ್ಲಮ್ಮನ ಪಾತ್ರಕ್ಕೆ ಜೀವ ತುಂಬಿದವರು ಅದ್ಭುತವಾಗಿ ನಟಿಸಿ ಅಭಿಮಾನಿಗಳ ಮನಗೆದ್ದು ಮನೆ ಮಾತಾಗಿದ್ದರು. ಆದರೆ ಇನ್ಮುಂದೆ ಈ ಕಥೆಯು "ಪರಶುರಾಮನ ಅಧ್ಯಾಯ"ವನ್ನು ಹೇಳಲು ತಯಾರಾಗಿದೆ. ಕನ್ನಡ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ವಿಷ್ಣುವಿನ ಮಹಾವತಾರ ಪರಶುರಾಮನ ಕಥೆಯನ್ನು ಹೇಳುತ್ತಿರುವ ಹೆಗ್ಗಳಿಕೆ ಸ್ಟಾರ್ ಸುವರ್ಣ ವಾಹಿನಿಗೆ ಸಲ್ಲುತ್ತದೆ.

ಬಾಲ್ಯದಿಂದಲೂ ಕಷ್ಟಗಳನ್ನೇ ಎದುರಿಸುತ್ತಾ ಬಂದಿರುವ ರೇಣುಕಾ-ಯಲ್ಲಮ್ಮರ ಬಾಳಿನಲ್ಲಿ 10 ವರ್ಷಗಳ ಬಳಿಕ ಏನೆಲ್ಲಾ ಆಗಲಿದೆ? ಪರಶುರಾಮನ ಜನನ, ಬಾಲ್ಯ, ವಿದ್ಯಾಭ್ಯಾಸ ಹೇಗೆಲ್ಲ ಸಾಗಲಿದೆ? ಕಾರಾಗೃಹದಿಂದ ಹೊರ ಬಂದಿರೋ ಯಲ್ಲಮ್ಮನ ಜೀವನದ ದಿಕ್ಕು ಯಾವೆಲ್ಲ ಸವಾಲಿನಿಂದ ಕೂಡಿರಲಿದೆ? ಮೊದಲಿನಂತೆ ರೇಣುಕಾ ಯಲ್ಲಮ್ಮರ ಸ್ನೇಹ ಮುಂದುವರಿಯಲಿದೆಯಾ? ಎಂಬುದೇ ಈ ಧಾರಾವಾಹಿಯ ಮುಂದಿನ ರೋಚಕ ಕಥಾಹಂದರ.

ಇದನ್ನು ಓದಿ:Bhagya Lakshmi Serial: ತಾಂಡವ್ ಮನೆಯಲ್ಲೇ ಸೆಟಲ್ ಆದ ತನ್ವಿ: ಯಾವುದೇ ಕಾರಣಕ್ಕೂ ಕರ್ಕೊಂಡು ಬರಲ್ಲ ಎಂದ ತನ್ವಿ

ಈಗಾಗಲೇ ಹೊಸ ಅಧ್ಯಾಯದ ಚಿತ್ರೀಕರಣ ಶುರುವಾಗಿದ್ದು, ರೇಣುಕೆಯಾಗಿ ವರ್ಷ, ಯಲ್ಲಮ್ಮನ ಪಾತ್ರದಲ್ಲಿ ಮಾನಸ ಅಭಿನಯಿಸುತ್ತಿದ್ದಾರೆ. ಅಮೋಘ ವಿನ್ಯಾಸದ ಸೆಟ್‌ ಮತ್ತು ಗ್ರಾಫಿಕ್ಸ್‌ನಿಂದ ಪ್ರಸಾರವಾಗುತ್ತಿರುವ ಧಾರಾವಾಹಿಯ ಪ್ರೋಮೋಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. "ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ - ಪರಶುರಾಮ ಅಧ್ಯಾಯ" ಇದೇ ಸೋಮವಾರದಿಂದ ರಾತ್ರಿ 9 ಗಂಟೆಗೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗಲಿದೆ.