Bhagya Lakshmi Serial: ತಾಂಡವ್ ಮನೆಯಲ್ಲೇ ಸೆಟಲ್ ಆದ ತನ್ವಿ: ಯಾವುದೇ ಕಾರಣಕ್ಕೂ ಕರ್ಕೊಂಡು ಬರಲ್ಲ ಎಂದ ತನ್ವಿ
ಭಾಗ್ಯ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾಳೆ. ನಾನು ಯಾವುದೇ ಕಾರಣಕ್ಕೂ ಅವಳನ್ನು ಅಲ್ಲಿಂದ ಕರ್ಕೊಂಡು ಬರಲ್ಲ.. ನಾನು ಅಲ್ಲಿಗೆ ಹೋಗೋದು ಇಲ್ಲ.. ನಾನು ಅವಳಿಗೆ ಹೊಡೆದಿರುವುದು ತಪ್ಪು ಮಾಡಿದ್ದಕ್ಕೆ.. ಸರಿ ದಾರಿಗೆ ಬರಲಿ ಎಂದು.. ಆದರೆ ಅವಳಿಗೆ ಇದು ಅರ್ಥ ಆಗದೆ ಆ ಶ್ರೇಷ್ಠಾ ಜೊತೆ ತೆರಳಿದ್ದಾಳೆ ಎಂದು ಕೋಪ ಮಾಡಿಕೊಂಡಿದ್ದಾಳೆ.

Bhagya Lakshmi Serial -

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾ ಮಗಳು ತನ್ವಿ ತಂದೆ ತಾಂಡವ್ ಮನೆಯಲ್ಲಿ ಇದ್ದಾಳೆ. ಯಾರಿಗೂ ಹೇಳದೆ ಶ್ರೇಷ್ಠಾ ಜೊತೆ ಆಕೆ ಮನೆಗೆ ತೆರಳಿದ್ದಾಳೆ. ಬಳಿಕ ಅಜ್ಜಿಗೆ ಕಾಲ್ ಮಾಡಿ ತಾನು ಪಪ್ಪನ ಮನೆಯಲ್ಲಿರುವ ಸುದ್ದಿ ಹೇಳಿದ್ದಾಳೆ. ಇದನ್ನು ಕೇಳಿ ಭಾಗ್ಯ ಮನೆಯವರಿಗೆ ಶಾಕ್ ಆಗಿದೆ. ಇದರ ಮಧ್ಯೆ ಈ ವಿಷಯಕ್ಕೆ ಆದೀಶ್ವರ್ ಕೂಡ ಎಂಟ್ರಿ ಆಗಿದ್ದಾನೆ. ಇದೆಲ್ಲ ಶ್ರೇಷ್ಠಾ ಮಾಡಿರುವ ಮಾಸ್ಟರ್ ಪ್ಲ್ಯಾನ್ ಎಂಬುದು ಇನ್ನೂ ಯಾರಿಗೂ ಅರ್ಥ ಆಗಿಲ್ಲ. ಭಾಗ್ಯಾಳನ್ನು ಹೇಗಾದರು ಮಾಡಿ ಕುಗ್ಗಿಸಬೇಕೆಂದು ಶ್ರೇಷ್ಠಾ ಇಷ್ಟೆಲ್ಲ ನಾಟಕವಾಡುತ್ತಿದ್ದಾಳೆ.
ಭಾಗ್ಯಾಳನ್ನು ಹೇಗಾದರು ಮಾಡಿ ಸೋಲಿಸಬೇಕು ಅವಳು ದುಃಖದಲ್ಲಿ ಇರುವುದನ್ನು ನರಳಬೇಕೆಂದು ಹಾಗೂ ಇದಕ್ಕೋಸ್ಕರ ಒಂದೊಳ್ಳೆ ಅವಕಾಶಕ್ಕೆ ಶ್ರೇಷ್ಠಾ ಬಹಳ ದಿನಗಳಿಂದ ಕಾಯುತ್ತಿದ್ದಳು. ಹೀಗಿರಯವಾಗ ತನ್ವಿಯ ಕಾಲೆಂಜ್ ಬಂಕ್ ಮ್ಯಾಟರ್ ಹಿಡಿದುಕೊಂಡು ಶ್ರೇಷ್ಠಾ ಹೊಸ ನಾಟಕ ಶುರುಮಾಡಿದಳು. ತಾಂಡವ್ನನ್ನು ಒಪ್ಪಿಸಿ ತನ್ವಿಯ ಕಾಲೇಜ್ಗೆ ಬಂದು ಪ್ರಿನ್ಸಿ ಜೊತೆ ಮಾತನಾಡಿ ಎಲ್ಲ ಸಮಸ್ಯೆ ಬಗೆ ಹರಿಸಿದಳು. ಬಳಿಕ ಈ ವಿಷಯ ಭಾಗ್ಯಾಗೆ ಗೊತ್ತಾಗುವ ತರ ಮಾಡಿದಳು.
ಭಾಗ್ಯ ಈ ವಿಷಯ ತಿಳಿದು ಅದರಲ್ಲೂ ಶ್ರೇಷ್ಠಾ ಜೊತೆ ಹೋದೆ ಎಂಬ ವಿಷಯ ತಿಳಿದು ಕೋಪದಲ್ಲಿ ತನ್ವಿಯ ಕೆನ್ನೆಗೆ ಒಂದೇಟು ಕೂಡ ಹೊಡೆದಿದ್ದಾಳೆ. ಅಮ್ಮ ಹೊಡೆದಿರುವ ವಿಚಾರ ತನ್ವಿ ಶ್ರೇಷ್ಠಾಗೆ ಹೇಳಿದ್ದಾಳೆ. ಇಲ್ಲಿಂದ ಮತ್ತೊಂದು ನಾಟಕ ಶುರುಮಾಡಿದ ಶ್ರೇಷ್ಠಾ ನೀನು ನಮ್ಮ ಮನೆಗೆ ಬಾ.. ನಿನಗೆ ಬೇಕಾದಂತೆ ಇರಬಹುದು ಎಂದು ಕರೆದುಕೊಂಡು ಹೋಗಿದ್ದಾಳೆ. ಅತ್ತ ಭಾಗ್ಯ ಮನೆಯಲ್ಲಿ ತನ್ವಿ ಬರದಿರುವುದನ್ನು ಕಂಡು ಟೆನ್ಶನ್ ಶುರುವಾಗಿದೆ. ಮೊಬೈಲ್ ಕೂಡ ಸ್ವಿಚ್ ಆಗಿರುತ್ತದೆ.
ಏನು ಮಾಡಬೇಕೆಂದು ತಿಳಿಯದೆ ಕುಸುಮಾ ಆದೀಶ್ವರ್ಗೆ ಕಾಲ್ ಬರೋಕೆ ಹೇಳಿದ್ದಾಳೆ. ಆದೀ ಬಂದೊಡನೆ ವಿಷಯ ತಿಳಿದು ನಾವು ಪೊಲೀಸ್ ಕಂಪ್ಲೆಂಟ್ ಕೊಡೋಣ ಎಂದಿದ್ದಾನೆ. ಆಗ ಭಾಗ್ಯ, ಪೊಲೀಸ್ ವಿಚಾರ ಬೇಡ.. ಅವರ ಬಳಿ ಹೋದ್ರೆ ಮನೆಗೆ ಬರುತ್ತಾರೆ ಹಾಗೂ ವಯಸ್ಸಿಗೆ ಬಂದ ಹುಡುಗಿ ಕಾಣೆ ಆಗಿದ್ದಾಳೆ ಅಂದ್ರೆ ಒಂದೊಂದು ಕಥೆ ಕಟ್ಟುತ್ತಾರೆ ಎಂದಿದ್ದಾಳೆ. ಇದಕ್ಕೆ ಸರಿ ಎಂದ ಆದೀ, ನನ್ನ ಕಾಂಟೆಕ್ಟ್ ಮೂಲಕ ವಿಚಾರಿಸುತ್ತೇನೆ ಎಂದಿದ್ದಾನೆ.
ಆದೀ ತಕ್ಷಣವೆ ತಾಂಡವ್ಗೆ ಕಾಲ್ ಮಾಡಿ ನಾಳೆ ನಾನು ಆಫೀಸ್ ಬರೋಕೆ ಆಗಲ್ಲ.. ಒಂದು ಪ್ರಾಬ್ಲಂ ನಲ್ಲಿದ್ದೇನೆ ಎಂದಿದ್ದಾನೆ. ಆಗ ತಾಂಡವ್, ಬ್ರೋ ಏನಾಯಿತು?, ನಾನು ಹೆಲ್ಪ್ ಮಾಡ್ತೇನೆ ಎಂದಾಗ ಆದೀ ಎಲ್ಲ ವಿಷಯ ಹೇಳಿದ್ದಾನೆ. ಭಾಗ್ಯ ಅವರ ಮಗಳು ತನ್ವಿ ಮಿಸ್ಸಿಂಗ್ ಆಗಿದ್ದಾಳೆ.. ನಾವು ಪೊಲೀಸ್ ಕಂಪ್ಲೆಂಟ್ ಕೊಡಬೇಕು ಅಂದುಕೊಂಡಿದ್ದೇವೆ ಎಂದು ಹೇಳುತ್ತಾನೆ. ಪೊಲೀಸ್ ಕಂಪ್ಲೆಂಟ್ ವಿಷಯ ತಿಳಿದು ತಾಂಡವ್ಗೆ ನಡುಕ ಶುರುವಾಗಿದೆ.
ತಾಂಡವ್ ಕಾಲ್ ಕಟ್ ಮಾಡಿ ತನ್ವಿ ಬಳಿ ಹೋಗಿ ಕೂಡಲೇ ಅಜ್ಜಿಗೆ ಕಾಲ್ ಮಾಡಿ ನಾನು ಪಪ್ಪ ಮನೆಯಲ್ಲಿದ್ದೇನು ಎಂದು ಹೇಳು ಎಂದಿದ್ದಾನೆ. ಅದರಂತೆ ತನ್ವಿ ಕುಸುಮಾಗೆ ಕಾಲ್ ಮಾಡಿ, ನನ್ನ ಹುಡುಕುವ ಪ್ರಯತ್ನ ಮಾಡಬೇಡಿ.. ನಾನು ಪಪ್ಪ ಮನೆಯಲ್ಲಿ ಸೇಫ್ ಆಗಿದ್ದೇನೆ.. ನಾನು ಇಲ್ಲೇ ಇರುತ್ತೇನೆ ಎಂದು ಹೇಳಿದ್ದಾಳೆ. ಇದನ್ನ ಕೇಳಿ ಭಾಗ್ಯ ಮನೆಯವರಿಗೆ ಶಾಕ್ ಆಗಿದೆ. ನಮಗೆ ಇಷ್ಟೆಲ್ಲ ದ್ರೋಹ ಮಾಡಿರುವ ಆ ತಾಂಡವ್ ಮನೆಗೆ ಹೋಗಿದ್ದಾಳ ಅವಳು ಎಂದು ಭಾಗ್ಯ ಹೇಳಿದ್ದಾಳೆ.
ಅಲ್ಲದೆ ಈ ಸಂದರ್ಭ ಭಾಗ್ಯ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾಳೆ. ನಾನು ಯಾವುದೇ ಕಾರಣಕ್ಕೂ ಅವಳನ್ನು ಅಲ್ಲಿಂದ ಕರ್ಕೊಂಡು ಬರಲ್ಲ.. ನಾನು ಅಲ್ಲಿಗೆ ಹೋಗೋದು ಇಲ್ಲ.. ನಾನು ಅವಳಿಗೆ ಹೊಡೆದಿರುವುದು ತಪ್ಪು ಮಾಡಿದ್ದಕ್ಕೆ.. ಸರಿ ದಾರಿಗೆ ಬರಲಿ ಎಂದು.. ಆದರೆ ಅವಳಿಗೆ ಇದು ಅರ್ಥ ಆಗದೆ ಆ ಶ್ರೇಷ್ಠಾ ಜೊತೆ ತೆರಳಿದ್ದಾಳೆ ಎಂದು ಕೋಪ ಮಾಡಿಕೊಂಡಿದ್ದಾಳೆ.
ಮರುದಿನ ತನ್ವಿ ತಾಂಡವ್ ಬಳಿ, ನನಗೆ ಒಮ್ಮೆ ಅಮ್ಮನ ಮನೆಗೆ ಹೋಗಿ ಬರಬೇಕು ಅಲ್ಲಿ ನನ್ನ ಕಾಲೇಜ್ ಡ್ರೆಸ್, ಬುಕ್ಸ್ ಎಲ್ಲ ಇದೆ ಎಂದಿದ್ದಾಳೆ. ಅದಕ್ಕೆ ತಾಂಡವ್ ನೀನು ಪುನಃ ಅಲ್ಲಿಗೆ ಹೋಗೋದು ಬೇಡ.. ನಾನು ಬರೋವಾಗ ನಿನಗೆ ಹೊಸ ಡ್ರೆಸ್ ತರುತ್ತೇನೆ ಎಂದಿದ್ದಾನೆ. ಒಕೆ ಪಪ್ಪ ಆದ್ರೆ ಬುಕ್ಸ್ ಬೇಕಲ್ವಾ ಎಂದು ತನ್ವಿ ಕೇಳಿದ್ದಕ್ಕೆ ಶ್ರೇಷ್ಠಾ, ನಾನು ನಿನ್ನ ಜೊತೆ ಬರ್ತಿದ್ದೆ ಆದ್ರೆ ಆ ಮನೆಯವರು ನನಗೆ ತುಂಬಾ ಅವಮಾನ ಮಾಡಿದ್ದಾರೆ.. ಈಗ ಬಂದ್ರುಕೂಡ ಪುನಃ ನನಗೆ ಅವಮಾನ ಮಾಡುತ್ತಾರೆ ಹಾಗಾಗಿ ನಾನು ಮನೆಯೊಳಗೆ ಬರಲ್ಲ.. ರೋಡ್ ಸೈಡ್ನಲ್ಲಿ ನಿಂತಿರುತ್ತೇನೆ.. ನೀನು ಹೋಗಿ ಬುಕ್ಸ್ ತೆಗೊಂದು ಬಾ ಎಂದಿದ್ದಾಳೆ.
ಸದ್ಯ ಮುಂದಿನ ಎಪಿಸೋಡ್ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ತನ್ವಿ ಮನೆಗೆ ಹೋದಾಗ ಪುನಃ ತನ್ನ ಮನಸ್ಸು ಬದಲಾಯಿಸುತ್ತಾಳಾ?, ಭಾಗ್ಯ, ಕುಸುಮಾ ಏನು ಹೇಳುತ್ತಾರೆ? ಎಂಬುದು ನೋಡಬೇಕಿದೆ. ಮತ್ತೊಂದೆಡೆ ಭಾಗ್ಯ ಆಫೀಸ್ನಲ್ಲೇ ಶ್ರೇಷ್ಠಾಗೆ ಕನ್ನಿಕಾ ಸಹಾಯದಿಂದ ಫೈನಾನ್ಸ್ ಕೆಲಸ ಸಿಕ್ಕಿದೆ. ಆದರೆ, ಈ ಹುದ್ದೆ ಬರುತ್ತಿರುವುದು ಶ್ರೇಷ್ಠಾ ಎಂಬ ವಿಚಾರ ಭಾಗ್ಯಾಗೆ ತಿಳಿದಿಲ್ಲ.. ಇವರಿಬ್ಬರ ಮುಖಾಮುಖಿ ಹೇಗಿರುತ್ತದೆ ಎಂಬುದು ನೋಡಬೇಕಿದೆ.
Sanjana Galrani: ತೆಲುಗು ಬಿಗ್ ಬಾಸ್ನಲ್ಲಿ ಧೂಳೆಬ್ಬಿಸುತ್ತಿರುವ ಸಂಜನಾ: ನಾಮಿನೇಟ್ ಆದಷ್ಟು ಬಾರಿ ಸೇಫ್