Ugramm Manju: ಗಿಲ್ಲಿ ಆಟದ ಬಗ್ಗೆ ಉಗ್ರಂ ಮಂಜು ಸ್ಫೋಟಕ ಮಾತು! ಭಾವಿ ಪತ್ನಿ ಪೋಸ್ಟ್ ಬಗ್ಗೆ ಹೇಳಿದ್ದೇನು?
Gilli Nata: ಬಿಗ್ಬಾಸ್ ಮಾಜಿ ಸ್ಪರ್ಧಿ ಮತ್ತು ನಟ ಉಗ್ರಂ ಮಂಜು ಅವರಿಗೆ ವಿವಾಹ ನಿಶ್ಚಯವಾಗಿದೆ. ಸಂಧ್ಯಾ ಎಂಬುವರೊಟ್ಟಿಗೆ ಮದುವೆ ಆಗಲಿದ್ದಾರೆ. ‘ಬಿಗ್ ಬಾಸ್’ ಮನೆಯಲ್ಲಿ ಉಗ್ರಂ ಮಂಜು ಹಾಗೂ ಗಿಲ್ಲಿ ನಟ ಮಧ್ಯೆ ಮಾತಿನ ಚಕಮಕಿ ನಡೆದಿತ್ತು.ಈ ಬಗ್ಗೆ ಪರ ವಿರೋಧ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆದಿತ್ತು. ಗಿಲ್ಲಿ ನಟಗೆ ಛೀಮಾರಿ ಹಾಕಿ ಉಗ್ರಂ ಮಂಜು ಪರ ಭಾವಿ ಪತ್ನಿ ಸಂಧ್ಯಾ ಕೂಡ ಪೋಸ್ಟ್ ಶೇರ್ ಮಾಡಿಕೊಂಡಿದ್ದರು. ಈಗ ಎಲ್ಲ ವಿಚಾರಗಳ ಬಗ್ಗೆ ವಿಶ್ವವಾಣಿ ಜೊತೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಉಗ್ರಂ ಮಂಜು -
ಬಿಗ್ಬಾಸ್ ಮಾಜಿ ಸ್ಪರ್ಧಿ ಮತ್ತು ನಟ ಉಗ್ರಂ ಮಂಜು (Ugram Manju) ಅವರಿಗೆ ವಿವಾಹ ನಿಶ್ಚಯವಾಗಿದೆ. ಸಂಧ್ಯಾ ಎಂಬುವರೊಟ್ಟಿಗೆ ಮದುವೆ ಆಗಲಿದ್ದಾರೆ. ‘ಬಿಗ್ ಬಾಸ್’ ಮನೆಯಲ್ಲಿ ಉಗ್ರಂ ಮಂಜು ಹಾಗೂ ಗಿಲ್ಲಿ (Gilli Nata) ನಟ ಮಧ್ಯೆ ಮಾತಿನ ಚಕಮಕಿ ನಡೆದಿತ್ತು.ಈ ಬಗ್ಗೆ ಪರ ವಿರೋಧ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆದಿತ್ತು. ಗಿಲ್ಲಿ ನಟಗೆ ಛೀಮಾರಿ ಹಾಕಿ ಉಗ್ರಂ ಮಂಜು ಪರ ಭಾವಿ ಪತ್ನಿ (Sandhya) ಸಂಧ್ಯಾ ಕೂಡ ಪೋಸ್ಟ್ ಶೇರ್ ಮಾಡಿಕೊಂಡಿದ್ದರು. ಈಗ ಎಲ್ಲ ವಿಚಾರಗಳ ಬಗ್ಗೆ ವಿಶ್ವವಾಣಿ ಜೊತೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಗಿಲ್ಲಿ ವ್ಯಕ್ತಿತ್ವ ಇಷ್ಟ ಪಡುವ ಒಂದು ವರ್ಗ ಇದೆ
ಮದುವೆ ತಯಾರಿ ಬಗ್ಗೆ ಮಾತನಾಡಿ, ʻಜನವರಿ 23 ಮದುವೆ ಫಿಕ್ಸ್ ಆಗಿದೆ. ನಮ್ಮ ಮನೆ ದೇವಸ್ಥಾನದಲ್ಲೇ. ಮಾಮೂಲಿ ತಯಾರಿ ಆಗ್ತಿದೆʼ ಎಂದರು. ʻಬಿಗ್ ಬಾಸ್ ಮನೆಗೆ ನನಗೆ ಬ್ಯಾಚುಲರ್ ಪಾರ್ಟಿ ಕೊಟ್ಟಿದ್ದರು. ಅನುಭವ ಚೆನ್ನಾಗಿತ್ತು. ಒಂದು ಟಾಸ್ಕ್ ಕೊಟ್ಟಿದ್ದರುʼ ಎಂದರು. ಗಿಲ್ಲಿ ಕುರಿತಾಗಿ ಮಾತನಾಡಿ, ʻಕಮೆಂಟ್ ಬಾಕ್ಸ್ ಅನ್ನು ಆಫ್ ನಾನು ಮಾಡಿಲ್ಲ. ಒಬ್ಬೊಬ್ಬರು ಒಂದೊಂದು ವ್ಯಕ್ತಿತ್ವವನ್ನ ಇಷ್ಟ ಪಡುತ್ತಾರೆ. ಗಿಲ್ಲಿ ವ್ಯಕ್ತಿತ್ವ ಇಷ್ಟ ಪಡುವ ಒಂದು ವರ್ಗ ಇದೆ. ಅವರು ಕೂಡ ಕಷ್ಟ ಪಟ್ಟೇ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲೇ ಎಲ್ಲವೂ ಹಾಕ್ತಾರೆ ಅನ್ನೋಕೆ ಆಗಲ್ಲ. ಇನ್ನು ನಾನು ಸೆಟ್ ಬಾಯ್ ಆಗೇ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು. ಗಿಲ್ಲಿ ಕೂಡ ಸೆಟ್ ಬಾಯ್ ಆಗೇʼ ಬಂದಿದ್ದಾರೆ.
ಸಂದರ್ಶನ ವಿಡಿಯೋ
ʻನಾವು ಮಾತನಾಡಿಕೊಂಡಿದ್ವಿ . ನನ್ನ ಮೇಲೆ ಅವನು ಮಲಗಿದ್ದ. ಅದೇನೂ ಹಾಕಿಲ್ಲ. ಗೇಮ್ಸ್ ಅದೆಲ್ಲ ಆಡಿದ್ದು ಟೆಲಿಕಾಸ್ಟ್ ಮಾಡಿಲ್ಲ. ನಮಗೆ ಒಂದು ಫ್ಯಾಮಿಲಿ ಇರತ್ತೆ, ಅವರಿಗೂ ಇರತ್ತೆ. ಕೆಲವೊಂದು ಮಾತುಗಳು ಹರ್ಟ್ ಆಗುತ್ತೆ. ಅದರ ಬಗ್ಗೆ ಅವನ ಬಳಿ ಚರ್ಚೆ ಮಾಡಿದ್ದೆ. ಅವನು ಗೆದ್ದು ಬಾ ಅಂತಲೇ ಹೇಳಿದೆ. ಅಲ್ಲಿ ಪ್ರತಿಯೊಬ್ಬರು ಚೆನ್ನಾಗಿʼ ಆಡುತ್ತಿದ್ದಾರೆ ಎಂದರು.
ಗಿಲ್ಲಿ ಅವರನ್ನೇ ಟಾರ್ಗೆಟ್ ಮಾಡಿದ್ರಾ?
ಗಿಲ್ಲಿ ಅವರನ್ನೇ ಟಾರ್ಗೆಟ್ ಮಾಡಲು ಬಂದಿದ್ದಾರಾ ಅನ್ನೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ʻ ಟಾಸ್ಕ್ ಟಾಸ್ಕ್ ರೀತಿ ನೋಡಬೇಕು. ಟಾಸ್ಕ್ ಇಲ್ಲದೇ ಇದ್ದಾಗ, ಧನುಷ್ ಅವರೆಲ್ಲರ ಜೊತೆ ಬೆರೆತ್ತಿದ್ದೇನೆ. ಕೆಲವೊಂದು ಗಿಲ್ಲಿಯಿಂದ ಇರಿಟೇಟ್ ಆಗಿತ್ತು. ಗಿಲ್ಲಿ ಟಾರ್ಗೆಟ್ ಮಾಡಿದ್ದಲ್ಲ, ನಾನು ಟಾಸ್ಕ್ ಆಗಿ ಅಷ್ಟೇ ನೋಡ್ತಿದ್ದೆ. ಟಾಸ್ಕ್ ಹೊರತಾಗಿ ಬೇರೆ ಎಲ್ಲವೂ ಮಾತಾಡಿದ್ದೇವೆ. ನಾವು ಎಲ್ಲರೂ ಕಲಾವಿದರೆ. ನಮಗೆ ಯಾರು ಕಪ್ ಎತ್ತುಕೊಂಡು ಹೋದರೆ ನನಗೇನು? ಪ್ರೀತಿ ಮಾಡೋ ವರ್ಗ ನನಗೆ ಇದೆ. ಟಾಸ್ಕ್ ಕೊಟ್ಟಿದ್ದು, ಮಾಡಿ ಬಂದೆʼ ಎಂದರು.
ʻಇನ್ನು ಮನೆಯಲ್ಲಿಯೂ ಕೆಲವರು ನನ್ನನ್ನು ಇಷ್ಟ ಪಟ್ಟಿದ್ದಾರೆ. ನಾನು ಇಷ್ಟ ಇಲ್ಲದ ವ್ಯಕ್ತಿಗಳಿಂದ ಆದಷ್ಟು ದೂರನೇ ಇರ್ತೀನಿ. ನಮ್ಮತ್ರ ಹೇಗೆ ಬಿಹೇವ್ ಮಾಡಿರ್ತಾರೆ ಅನ್ನೋದು ಕೂಡ ಮುಖ್ಯ. ಆಚೆ ಕಡೆಯಿಂದ ಗಿಲ್ಲಿಯನ್ನ ತುಂಬಾ ಇಷ್ಟ ಪಟ್ಟಿದ್ದೀನಿ. ಆದರೆ ಗಿಲ್ಲಿ ಅಲ್ಲಿ ಕೆಲವೊಂದು ಅರ್ಥ ಮಾಡಿಕೊಂಡಿಲ್ಲ. ಎಲ್ಲರೂ ಒಳ್ಳೆಯವರೇ ಆದರೆ ಆಯಾ ಪರಿಸ್ಥಿತಿ ಹಾಗೇ ಮಾಡುತ್ತೆʼ ಎಂದರು.
ಭಾವಿ ಪತ್ನಿ ಪೋಸ್ಟ್
ಇನ್ನು ಭಾವಿ ಪತ್ನಿ ಪೋಸ್ಟ್ ಬಗ್ಗೆ ಮಾತನಾಡಿ, ಯಾರೋ ಹಾಕಿಕೊಂಡ ಪೋಸ್ಟ್‌ವನ್ನು ಹಾಕಿಕೊಂಡಿದ್ದಾಳೆ. ಅವಳಿಗೆ ಸೋಷಿಯಲ್ ಮೀಡಿಯಾ, ಸಿನಿಮಾ ಇದೆಲ್ಲ ಹೊಸತು. ನನ್ನ ಸಿನಿಮಾವನ್ನೇ ಅವಳು ಇನ್ನು ನೋಡಿಲ್ಲ, ಅವಳಿಗೆ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಗೊತ್ತಿಲ್ಲ. ಬ್ಯಾಡ್ ಕಮೆಂಟ್ ಬಂದಾಗ ಡಿಲಿಟ್ ಮಾಡಿದ್ದಾಳೆʼ ಎಂದಿದ್ದಾರೆ.