ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Raakshasa Web Series: ನಿರೂಪಕಿ ಅನುಶ್ರೀ ಮದುವೆಯಲ್ಲಿ ಆಗಿದ್ದೇನು? ವಿಜಯ್‌ ರಾಘವೇಂದ್ರ - ತರುಣ್‌ ಸುಧೀರ್‌ ಥ್ಯಾಂಕ್ಸ್‌ ಹೇಳಿದ್ದೇಕೆ? ಇಲ್ಲಿದೆ ಇಂಟರೆಸ್ಟಿಂಗ್‌ ಕಥೆ

ನಿರ್ಮಾಪಕ ತರುಣ್ ಸುಧೀರ್ ಮತ್ತು ನಟ ವಿಜಯ್ ರಾಘವೇಂದ್ರ ಅವರ ಈ ಬಹುನಿರೀಕ್ಷಿತ ರಾಕ್ಷಸ ವೆಬ್ ಸರಣಿ ಫೆಬ್ರವರಿ 20ರಿಂದ ಜೀ5ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಈ ಪ್ರಾಜೆಕ್ಟ್‌ಗೆ ವಿಜಯ್‌ ರಾಘವೇಂದ್ರ ಆಯ್ಕೆ ಆಗಿದ್ದು ನಿರೂಪಕಿ ಅನುಶ್ರೀ ಮದುವೆಯಲ್ಲಿ ಅನ್ನೋದು ವಿಶೇಷ. ಉತ್ತರ ಕರ್ನಾಟಕದ ಸೊಗಡಿನ ಕಥೆಯನ್ನು ಹೊಂದಿರುವ ಈ ಸರಣಿಯಲ್ಲಿ ಮಯೂರಿ ಕ್ಯಾತರಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಅನುಶ್ರೀ ಮದುವೆಯಲ್ಲಿ ಫಿಕ್ಸ್ ಆಗಿತ್ತು ವಿಜಯ್ ರಾಘವೇಂದ್ರ ವೆಬ್‌ ಸೀರೀಸ್!

-

Avinash GR
Avinash GR Feb 19, 2026 12:28 PM

ನಿರ್ದೇಶಕರಾಗಿ, ನಿರ್ಮಾಪಕರಾಗಿ ಫೇಮಸ್‌ ಆಗಿರುವ ತರುಣ್‌ ಕಿಶೋರ್‌ ಸುಧೀರ್‌ ಅವರು ಇದೀಗ ವೆಬ್‌ ಸರಣಿಯನ್ನು ನಿರ್ಮಾಣ ಮಾಡಿದ್ದಾರೆ. ʻರಾಕ್ಷಸʼ ಹೆಸರಿನ ಈ ವೆಬ್‌ ಸೀರೀಸ್‌ನಲ್ಲಿ ನಟ ವಿಜಯ್‌ ರಾಘವೇಂದ್ರ ಅವರು ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಈ ವೆಬ್‌ ಸೀರೀಸ್‌ಗೆ ವಿಜಯ್‌ ರಾಘವೇಂದ್ರ ಆಯ್ಕೆ ಆಗಿದ್ದೇ ಒಂದು ಇಂಟರೆಸ್ಟಿಂಗ್‌ ಕಥೆ.

ಅನುಶ್ರೀ ಮದುವೆಯಲ್ಲಿ ನಡೀತು ಮಾತುಕತೆ

ಸಾಮಾನ್ಯವಾಗಿ ಒಂದು ಪ್ರಾಜೆಕ್ಟ್‌ಗೆ ಕಲಾವಿದರನ್ನು ಆಯ್ಕೆ ಮಾಡುವುದು ಆಫೀಸ್‌ಗಳಲ್ಲೋ, ಕಾಫಿ ಡೇಗಳಲ್ಲೋ ಮೀಟಿಂಗ್‌ ಮಾಡಿ, ಆಯ್ಕೆ ಮಾಡುತ್ತಾರೆ. ಆದರೆ ರಾಕ್ಷಸ ವೆಬ್‌ ಸರಣಿಗೆ ವಿಜಯ್‌ ರಾಘವೇಂದ್ರ ಆಯ್ಕೆ ಆಗಿದ್ದು ಅನುಶ್ರೀ ಮದುವೆಯಲ್ಲಿ! ಹೌದು, ಖ್ಯಾತ ನಿರೂಪಕಿ ಮತ್ತು ನಟಿ ಅನುಶ್ರೀ ಅವರು 2025ರ ಆಗಸ್ಟ್ 28 ರಂದು ವಿವಾಹವಾದರು. ಆ ಮದುವೆಗೆ ತರುಣ್‌, ವಿಜಯ್‌ ರಾಘವೇಂದ್ರ ಕೂಡ ಆಗಮಿಸಿದ್ದರು. ಜೊತೆಗೆ ಜೀ5 ತಂಡ ಕೂಡ ಆಗಮಿಸಿತ್ತು. ಆ ಮದುವೆಯಲ್ಲಿಯೇ ವಿಜಯ್‌ ರಾಘವೇಂದ್ರಗೆ ರಾಕ್ಷಸ ವೆಬ್‌ ಸರಣಿ ಬಗ್ಗೆ ಹೇಳಿ, ಓಕೆ ಮಾಡಲಾಯ್ತಂತೆ.

ಹೊಸ ಕೇಸ್‌ನೊಂದಿಗೆ ಅಖಾಡಕ್ಕಿಳಿದ ವಿಜಯ್‌ ರಾಘವೇಂದ್ರ; ಈ ಬಾರಿ ಯಾರೆಲ್ಲಾ ಸಾಥ್‌ ಕೊಟ್ರು ನೋಡಿ

ಈ ಘಟನೆಯನ್ನು ಬಹಳ ಫನ್ನಿಯಾಗಿ ಹೇಳುವ ವಿಜಯ್‌ ರಾಘವೇಂದ್ರ ಮತ್ತು ತರುಣ್‌ ಸುಧೀರ್‌, ಈ ವೆಬ್‌ ಸೀರೀಸ್‌ ಆಗಿರುವುದಕ್ಕೆ ಅನುಶ್ರೀಗೆ ಥ್ಯಾಂಕ್ಸ್‌ ಹೇಳಬೇಕು ಅಂತಾರೆ. ಉತ್ತರ ಕರ್ನಾಟಕ ಸೊಗಡಿನ ಮೊದಲ ವೆಬ್‌ ಸರಣಿ ಇದಾಗಿದ್ದು, ಫೆ.20ರಿಂದ ಸ್ಟ್ರೀಮಿಂಗ್‌ ಆರಂಭವಾಗಲಿದೆ. ಸುಹಾನ್‌ ಪ್ರಸಾದ್‌ ಇದರ ನಿರ್ದೇಶನದ ಹೊಣೆಯನ್ನು ಹೊತ್ತುಕೊಂಡಿದ್ದಾರೆ.

ಉತ್ತರ ಕರ್ನಾಟಕ ಸೊಗಡಿನ ʻರಾಕ್ಷಸʼ ವೆಬ್‌ ಸರಣಿಯ ಟ್ರೇಲರ್‌ ರಿಲೀಸ್;‌ ಸವದತ್ತಿಯ ಕಥೆ ಹೇಳೋಕೆ ಬಂದ್ರು ವಿಜಯ್‌ ರಾಘವೇಂದ್ರ

ತರುಣ್‌ ಸುಧೀರ್‌ ಹೇಳಿದ್ದೇನು?

"ಈ ಪ್ರಾಜೆಕ್ಟ್ ಮಾಡಿರುವುದು ಬಹಳ ಖುಷಿ ಇದೆ. ಜೀ5 ಇಡೀ ಟೀಂಗೆ ಧನ್ಯವಾದಗಳು. ಒಂದು ಫ್ಲಾಟ್ ಫಾರ್ಮ್ ಸಪೋರ್ಟ್ ಮಾಡಿದಾಗ ಇಂಡಸ್ಟ್ರಿ ಬೆಳೆಯಲು ಆಗುವುದು. ಬೇರೆ ಇಂಡಸ್ಟ್ರಿಯಲ್ಲಿ ಫ್ಲಾಟ್ ಫಾರ್ಮ್ ಸಪೋರ್ಟ್ ಮಾಡಿದ್ದಕ್ಕೆ ಅಲ್ಲಿ ವೆಬ್ ಸಿರೀಸ್ ಸಂಪ್ರದಾಯ ಶುರುವಾಗಿದೆ. ಇಲ್ಲಿ ಈಗ ಅದನ್ನು ಜೀ5 ಮಾಡುತ್ತಿದೆ. ಸುಹಾಸ್ ಹೇಳಿದ ಲೈನ್ ಇಷ್ಟವಾಯ್ತು. ನನಗೆ ಉತ್ತರ ಕರ್ನಾಟಕದ ಎಲಿಮೆಂಟ್ ನನ್ನ ಸಿನಿಮಾದಲ್ಲಿ ಇರಬೇಕು. ಅದನ್ನು ನನ್ನ ಸಿನಿಮಾದಲ್ಲಿ ಅಳವಡಿಸಿದ್ದೇನೆ.‌ ಉತ್ತರ ಕರ್ನಾಟಕ ನಮ್ಮ ಕುಟುಂಬಕ್ಕೆ ನೀಡಿರುವ ಕೊಡುಗೆ, ಪ್ರೀತಿ ತುಂಬಾ. ಅದನ್ನು ಈ ರೀತಿ ವಾಪಸ್ ನೀಡುತ್ತಿದ್ದೇನೆ. ಒಂದೊಳ್ಳೆ ತಂಡ ಈ ಸಿರೀಸ್‌ನಲ್ಲಿ ಕೆಲಸ ಮಾಡಿದೆ. 89 ಪಾತ್ರಗಳು ಇಲ್ಲಿವೆ. ‌ಅವದರಲ್ಲಿ ಬಹುತೇಕರು ಉತ್ತರ ಕರ್ನಾಟಕ ಭಾಗದವರು" ಎನ್ನುತ್ತಾರೆ ತರುಣ್‌ ಸುಧೀರ್.

"ಜೀ5 ವೆಬ್ ಸಿರೀಸ್ ಜರ್ನಿ ಶುರು ಮಾಡಿದಾಗ, ಶೃತಿ ನಾಯ್ಡು ‌ಪ್ರೊಡಕ್ಷನ್, ಪಿಆರ್ ಕೆ, ಕೆಆರ್ ಜಿ ಈಗ ತರುಣ್ ಸುಧೀರ್ ಅವರು ಸಾಥ್ ಕೊಟ್ಟಿದ್ದಾರೆ. ನಾವು ಕೇಳಿದಾಗ ಸಿರೀಸ್ ಮಾಡಲು ಮುಂದೆ ಬಂದರು. ಈ ಒಂದು ವರ್ಷ ನಾವು ಸಾಕಷ್ಟು ಕಲಿತಿದ್ದೇವೆ. ಈ ಕಲಿಯುವಿಕೆ ಇಷ್ಟು ಕೊಂಡು ಮುಂದಿನ ವರ್ಷ ಸಾಕಷ್ಟು ಜಾನರ್ ನೊಂದಿಗೆ ಬರುತ್ತಿದ್ದೇವೆ. ಸಿರೀಸ್ ಜೊತೆಗೆ ನಾನ್ ಫಿಕ್ಷನ್, ಟಿವಿ‌ ಫ್ಲಸ್ ಫ್ಲಸ್ ಸೇರಿದಂತೆ ಹಲವು ಫಾರ್ಮೆಟ್ ಜಾರಿಗೆ ತರುತ್ತೇವೆ" ಎನ್ನುತ್ತಾರೆ ಜೀ5 ಬ್ಯುಸಿನೆಸ್ ಹೆಡ್ ದೀಪಕ್ ಶ್ರೀರಾಮುಲು.‌

ಯಾರೆಲ್ಲಾ ನಟಿಸಿದ್ದಾರೆ?

ʻರಾಕ್ಷಸʼವೆಬ್‌ ಸರಣಿಯಲ್ಲಿ ವಿಜಯ್‌ ರಾಘವೇಂದ್ರಗೆ ನಾಯಕಿಯಾಗಿ ಮಯೂರಿ ಕ್ಯಾತರಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅವಿನಾಶ್, ಅಪ್ಪಣ್ಣ ರಾಮದುರ್ಗ, ಜಂಹಾಗೀರ್‌, ಅಭಿಜಿತ್, ಮಹಾದೇವ ಹಡಪದ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.