ಹೊಸ ಕೇಸ್‌ನೊಂದಿಗೆ ಅಖಾಡಕ್ಕಿಳಿದ ವಿಜಯ್ ರಾಘವೇಂದ್ರ; ಈ ಬಾರಿ ಯಾರೆಲ್ಲಾ ಸಾಥ್ ಕೊಟ್ರು ನೋಡಿ
‘ಸೀತಾರಾಮ್ ಬಿನೋಯ್’ ಸಿನಿಮಾದ ಯಶಸ್ಸಿನ ನಂತರ ವಿಜಯ್ ರಾಘವೇಂದ್ರ ಮತ್ತು ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಮತ್ತೊಮ್ಮೆ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಮೂಲಕ ಒಂದಾಗಿದ್ದಾರೆ. ಈ ಚಿತ್ರದ ಟೀಸರ್ ಅನ್ನು ಶಿವರಾಜ್ ಕುಮಾರ್, ಡಾಲಿ ಧನಂಜಯ್ ಹಾಗೂ ಭಾವನಾ ಮೆನನ್ ಸೇರಿದಂತೆ ಹಲವು ಗಣ್ಯರು ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.
-
ಸ್ಯಾಂಡಲ್‌ವುಡ್ ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ ನಟನೆಯ ಹೊಸ ಸಿನಿಮಾ ʻಸೆಕೆಂಡ್ ಕೇಸ್ ಆಫ್ ಸೀತಾರಾಮ್ʼ ಟೀಸರ್ ಬಿಡುಗಡೆಯಾಗಿದೆ. ಈ ಹಿಂದೆ ತೆರೆಕಂಡಿದ್ದ ಸೀತಾರಾಮ್ ಬಿನೋಯ್ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಈ ಬಾರಿ ʻಸೆಕೆಂಡ್ ಕೇಸ್ ಆಫ್ ಸೀತಾರಾಮ್ʼ ಚಿತ್ರಕ್ಕೆ ಹಲವು ಗಣ್ಯರು ಸಾಥ್ ನೀಡಿದ್ದಾರೆ. ಹೌದು, ಶಿವರಾಜ್ ಕುಮಾರ್, ಡಾಲಿ ಧನಂಜಯ್, ಉನ್ನಿ ಮುಕುಂದನ್, ಭಾವನಾ ಮೆನನ್ ಹಾಗೂ ನವೀನ್ ಶಂಕರ್ ಸೋಷಿಯಲ್ ಮೀಡಿಯಾದಲ್ಲಿ ಸೆಕೆಂಡ್ ಕೇಸ್ ಆಫ್ ಸೀತಾರಾಮ್ ಟೀಸರ್ ಅನ್ನು ರಿಲೀಸ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.
ಮತ್ತೊಮ್ಮೆ ಒಂದಾದ ದೇವಿ ಪ್ರಸಾದ್ ಶೆಟ್ಟಿ - ರಾಘು
"ಸೆಕೆಂಡ್ ಕೇಸ್ ಆಫ್ ಸೀತಾರಾಮ್" ಸಿನಿಮಾದ ಟೀಸರ್ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದೆ. ವಿಜಯ್ ರಾಘವೇಂದ್ರ, ಪೊಲೀಸ್ ಅಧಿಕಾರಿಯಾಗಿ ಮತ್ತೊಂದು ಪ್ರಕರಣವನ್ನು ಇಲ್ಲಿ ಕೈಗೆತ್ತಿಕೊಂಡಿದ್ದಾರೆ. 2021ರಲ್ಲಿ ತೆರೆಕಂಡ ವಿಜಯ ರಾಘವೇಂದ್ರ ನಟನೆಯ ‘ಸೀತಾರಾಮ್ ಬಿನೋಯ್’ ಸಿನಿಮಾದ ಸೀಕ್ವೆಲ್ ಇದಾಗಿದ್ದು, ಇದರಲ್ಲಿ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದ ವಿಜಯ ರಾಘವೇಂದ್ರ ಬಳಿಕ ಕೇಸ್ ಆಫ್ ಕೊಂಡಾಣ ಸಿನಿಮಾದಲ್ಲೂ ನಟಿಸಿದ್ದರು. ಅದನ್ನು ಕೂಡ ದೇವಿಪ್ರಸಾದ್ ಶೆಟ್ಟಿ ಅವರೇ ನಿರ್ದೇಶಿಸಿದ್ದರು. ಇದೀಗ ಮತ್ತೊಮ್ಮೆ ದೇವಿ ಪ್ರಸಾದ್ ಶೆಟ್ಟಿ ಹಾಗೂ ವಿಜಯ್ ರಾಘವೇಂದ್ರ ಜೊತೆಯಾಗಿ ಸಿನಿಮಾ ಮಾಡಿದ್ದಾರೆ.
Vijay Raghavendra: ಮೇಘನಾ ಜೊತೆ ಎರಡನೇ ಮದುವೆ; ಈ ಬಗ್ಗೆ ವಿಜಯ್ ರಾಘವೇಂದ್ರ ಏನಂದ್ರು?
ಚಿತ್ರತಂಡಕ್ಕೆ ಜೊತೆಯಾದ ನಿರ್ದೇಶಕ ಪವನ್ ಒಡೆಯರ್
ಈ ಸಿನಿಮಾಕ್ಕೆ ದೇವಿಪ್ರಸಾದ್ ಅವರೇ ಈ ಸಿನಿಮಾದ ಕಥೆ ಬರೆದಿದ್ದು, ನಿರ್ದೇಶನದ ಜೊತೆಗೆ ನಿರ್ಮಾಣದಲ್ಲಿ ಸಾತ್ವಿಕ್ ಹೆಬ್ಬಾರ್ ಜೊತೆ ಕೈಜೋಡಿಸಿದ್ದಾರೆ. ನಿರ್ದೇಶಕ ಪವನ್ ಒಡೆಯರ್ ಸಿನಿಮಾವನ್ನು ಪ್ರಸ್ತುಪಡಿಸುತ್ತಿರುವುದು ವಿಶೇಷ. "ಸೆಕೆಂಡ್ ಕೇಸ್ ಆಫ್ ಸೀತಾರಾಮ್" ಚಿತ್ರಕ್ಕೆ ಹೇಮಂತ್ ಆಚಾರ್ ಛಾಯಾಗ್ರಹಣ, ನವನೀತ್ ಶ್ಯಾಮ್ ಸಂಗೀತ ನಿರ್ದೇಶನ, ಶಶಾಂಕ್ ನಾರಾಯಣ್ ಸಂಕಲನ, ಭವಾನಿ ಶಂಕರ್ ಕಲಾ ನಿರ್ದೇಶನವಿದೆ.
Daali Dhananjaya: ತಂದೆ ಆಗ್ತಿದ್ದಾರೆ ಡಾಲಿ ಧನಂಜಯ್; ವೇದಿಕೆಯಲ್ಲೇ ಸಂತೋಷದ ವಿಚಾರ ಹಂಚಿಕೊಂಡ ನಟ
ಖುಷಿಪಟ್ಟ ಶಿವಣ್ಣ
ಇನ್ನು, ಟೀಸರ್ ರಿಲೀಸ್ ಮಾಡಿದ ಶಿವರಾಜ್‌ಕುಮಾರ್, ಸಾಕಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. "ರಾಘು ಅಭಿನಯದ ಚಿತ್ರಗಳಲ್ಲಿ 'ಸೀತಾರಾಮ್ ಬಿನೋಯ್' ನನ್ನ ನೆಚ್ಚಿನ ಚಿತ್ರ. ಹೊಸ ತಂಡ ಸೇರಿಕೊಂಡು ಒಂದೊಳ್ಳೇ ಸಿನಿಮಾ ಮಾಡಿದ್ರು. ಈಗ ಆ ತಂಡ ಮತ್ತೆ ಜೊತೆಗೂಡಿ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಚಿತ್ರ ತೆರೆ ಮೇಲೆ ತರಲು ರೆಡಿ ಆಗಿದ್ದಾರೆ. ಪವನ್ ವಡೆಯರ್ ಹಾಗೂ ಇಡೀ ತಂಡಕ್ಕೆ ಶುಭವಾಗಲಿ" ಎಂದು ಶಿವಣ್ಣ ಹೇಳಿದ್ದಾರೆ.