ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಮ್ಯಾರೇಜ್ ಪಾರ್ಟಿʼ ಫಸ್ಟ್ ಲುಕ್ ರಿಲೀಸ್‌; ಚಯನ್ ಶೆಟ್ಟಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ತುಳು ನಟ ವಿನೀತ್‌ ಕುಮಾರ್‌

‘ಅಧಿಪತ್ರ’ ಚಿತ್ರದ ನಂತರ ನಿರ್ದೇಶಕ ಚಯನ್ ಶೆಟ್ಟಿ ಸಂಪೂರ್ಣ ಭಿನ್ನವಾದ ಪಕ್ಕಾ ಹಾಸ್ಯಪ್ರಧಾನ ‘ಮ್ಯಾರೇಜ್ ಪಾರ್ಟಿ’ ಚಿತ್ರದೊಂದಿಗೆ ಬಿಡುಗಡೆಗೆ ಸಜ್ಜಾಗಿದ್ದು, ಆಕರ್ಷಕ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಂಡಿದೆ. ಶ್ರೀ ವಾರಾಹಿ ಫಿಲಂಸ್ ಅಡಿಯಲ್ಲಿ ಸಂತೋಷ್ ವಿ ನಿರ್ಮಿಸಿರುವ ಈ ಚಿತ್ರದ ಮೂಲಕ ತುಳು ನಟ ವಿನೀತ್ ಕುಮಾರ್ ಕನ್ನಡಕ್ಕೆ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

ಚಯನ್ ಶೆಟ್ಟಿ ನಿರ್ದೇಶನದ ʻಮ್ಯಾರೇಜ್ ಪಾರ್ಟಿʼ ಸಿನಿಮಾ ಫಸ್ಟ್ ಲುಕ್ ರಿಲೀಸ್‌

-

Avinash GR
Avinash GR Jul 13, 2026 11:59 AM

ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಹಾಗೂ ನವೀನ ಮಾದರಿಯ ಸಿನಿಮಾಗಳು ತೆರೆಗೆ ಬರಲು ಸಜ್ಜಾಗುತ್ತಿದ್ದು, ಆ ಸಾಲಿಗೆ ಈಗ ‘ಮ್ಯಾರೇಜ್ ಪಾರ್ಟಿ’ ಚಿತ್ರವೂ ಸೇರ್ಪಡೆಯಾಗಿದೆ. ಯುವ ನಿರ್ದೇಶಕ ಚಯನ್ ಶೆಟ್ಟಿ ಆಕ್ಷನ್ ಕಟ್ ಹೇಳಿರುವ ಈ ಚಿತ್ರವು ಇದೀಗ ಬಿಡುಗಡೆಯ ಹೊಸ್ತಿಲಲ್ಲಿದ್ದು, ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಹಂತ ಹಂತವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಚಿತ್ರತಂಡ, ಇತ್ತೀಚೆಗಷ್ಟೇ ಸಿನಿಮಾದ ಆಕರ್ಷಕ ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಿದೆ. ಚಿತ್ರದ ಒಟ್ಟಾರೆ ಕಥೆಯ ಧಾಟಿಯನ್ನು ತೆರೆದಿಡುವಂತೆ ವಿನ್ಯಾಸಗೊಳಿಸಲಾಗಿರುವ ಈ ಪೋಸ್ಟರ್, ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇದು ಪಕ್ಕಾ ಹಾಸ್ಯಪ್ರಧಾನ ಚಿತ್ರ

ಈ ಹೈ-ಬಜೆಟ್ ಮತ್ತು ಮನರಂಜನಾತ್ಮಕ ಚಿತ್ರವನ್ನು ಶ್ರೀ ವಾರಾಹಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಅತ್ಯಂತ ಯಶಸ್ವಿಯಾಗಿ ನಿರ್ಮಾಪಕ ಸಂತೋಷ್ ವಿ ಅವರು ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಚಯನ್ ಶೆಟ್ಟಿ ಅವರು ಈ ಹಿಂದೆ ಬಿಗ್ ಬಾಸ್ ಖ್ಯಾತಿಯ ನಟ ರೂಪೇಶ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ‘ಅಧಿಪತ್ರ’ ಚಿತ್ರವನ್ನು ನಿರ್ದೇಶಿಸಿದ್ದರು. ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಶೈಲಿಯ ಆ ಚಿತ್ರಕ್ಕೆ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಅತ್ಯಂತ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ, ತಮ್ಮ ಎರಡನೇ ಸಿನಿಮಾದಲ್ಲಿ ಸಂಪೂರ್ಣವಾಗಿ ಭಿನ್ನ ಪಥದತ್ತ ಹೊರಳಿಕೊಂಡಿರುವ ಚಯನ್ ಶೆಟ್ಟಿ, ಈ ಬಾರಿ ಗಟ್ಟಿ ಕಥೆ ಜೊತೆಗೆ ಪಕ್ಕಾ ಹಾಸ್ಯಪ್ರಧಾನ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

Su From So records: ಒಂದೇ ವಾರದಲ್ಲಿ ಹಲವು ದಾಖಲೆ ಉಡೀಸ್‌ ಮಾಡಿದ 'ಸು ಫ್ರಂ ಸೋ'

ಕನ್ನಡ ಸಿನಿಮಾಕ್ಕೆ ಬಂದ ತುಳು ನಟ ವಿನೀತ್

ಇನ್ನು, ತುಳು ಚಿತ್ರರಂಗದಲ್ಲಿ ಈಗಾಗಲೇ ಒಂದಷ್ಟು ವಿಭಿನ್ನ ಪಾತ್ರಗಳ ಮೂಲಕ ಕರಾವಳಿ ಜನರ ಮನ ಗೆದ್ದಿರುವ ನಟ ವಿನೀತ್ ಕುಮಾರ್, ಈ ‘ಮ್ಯಾರೇಜ್ ಪಾರ್ಟಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪೂರ್ಣ ಪ್ರಮಾಣದ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ಇಡೀ ಸಿನಿಮಾವನ್ನು ಕರಾವಳಿ ಭಾಗದ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದ್ದು, ಅಲ್ಲಿನ ಸಾಂಸ್ಕೃತಿಕ ನೇಟಿವಿಟಿ ಹಾಗೂ ರಸವತ್ತಾದ ಹಾಸ್ಯದ ಕಥಾನಕವನ್ನು ಚಿತ್ರ ಒಳಗೊಂಡಿದೆಯಂತೆ.

ಹಾಡು ಬರೆದ ಪ್ರಮೋದ್‌ ಮರವಂತೆ

ಚಿತ್ರದ ತಾಂತ್ರಿಕ ವರ್ಗದಲ್ಲಿ ಹೆಸರಾಂತ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಶ್ರೀಕಾಂತ್ ಅವರ ಅದ್ಭುತ ಛಾಯಾಗ್ರಹಣ ಚಿತ್ರಕ್ಕಿದ್ದು, ರಿತ್ವಿಕ್ ಮುರಳೀಧರ್ ಅವರು ಚಿತ್ರದ ಹಾಡುಗಳಿಗೆ ‌ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಸು ಫ್ರಂ ಸೋ’ ಖ್ಯಾತಿಯ ನಿತಿನ್ ಶೆಟ್ಟಿ ಸಂಕಲನದ ಜವಾಬ್ದಾರಿ ಹೊತ್ತಿದ್ದರೆ, ಚಿತ್ರದ ಹಾಡುಗಳಿಗೆ ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ಸಾಹಿತ್ಯ ಬರೆದಿದ್ದಾರೆ.

ಹಾಸ್ಯ ಕಲಾವಿದರ ದಂಡೇ ಇದೆ

ಈ ಚಿತ್ರದಲ್ಲಿ ಕರಾವಳಿ ಹಾಗೂ ಸ್ಯಾಂಡಲ್‌ವುಡ್‌ನ ದಿಗ್ಗಜ ಹಾಸ್ಯ ಕಲಾವಿದರ ದಂಡೇ ಇದೆ. ಪ್ರಕಾಶ್ ತುಮಿನಾಡು, ದೀಪಕ್ ರೈ, ನವೀನ್ ಡಿ ಪಡೀಲ್, ರಕ್ಷಿತಾ, ನಮಿತಾ ಕಿರಣ್, ರಾಮ್‌ದಾಸ್, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್, ಜ್ಯೋತಿಷ್ ಶೆಟ್ಟಿ, ರಾಧಾಕೃಷ್ಣ, ಪಿಡಿ ಸತೀಶ್ಚಂದ್ರ ಹಾಗೂ ಭೀಮ್ ರಾವ್ ಸೇರಿದಂತೆ ಪ್ರಮುಖ ತಾರಾಗಣ ಈ ಚಿತ್ರದಲ್ಲಿದೆ. ಬಹುಭಾಷಾ ಪ್ರೇಕ್ಷಕರನ್ನು ತಲುಪುವ ಉದ್ದೇಶದಿಂದ ಚಿತ್ರತಂಡ ಈ ಸಿನಿಮಾವನ್ನು ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಅದ್ಧೂರಿಯಾಗಿ ಬಿಡುಗಡೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.