Sandhya Arakere: 'ಸು ಫ್ರಮ್ ಸೋ' ಸಿನಿಮಾ ನಟಿ ಸಂಧ್ಯಾ ಅರಕೆರೆಗೆ ಸೀಮಂತ ಸಂಭ್ರಮ; ಇಲ್ಲಿವೆ ನೋಡಿ ಚೆಂದದ ಫೋಟೋಗಳು
2025ರಲ್ಲಿ ಹೆಚ್ಚು ಗಮನ ಸೆಳೆದ ಸಿನಿಮಾಗಳ ಪೈಕಿ ಜೆ ಪಿ ತುಮಿನಾಡ್ ನಿರ್ದೇಶನದ, ರಾಜ್ ಬಿ ಶೆಟ್ಟಿ, ಶನೀಲ್ ಗೌತಮ್ ಮುಖ್ಯಭೂಮಿಕೆಯಲ್ಲಿದ್ದ ‘ಸು ಫ್ರಮ್ ಸೋ’ ಕೂಡ ಒಂದು. ಈ ಸಿನಿಮಾದಲ್ಲಿ ರಂಗಭೂಮಿ ಹಿನ್ನೆಲೆಯ ನಟಿ ಸಂಧ್ಯಾ ಅರಕೆರೆ ಅವರು ಭಾನು ಎಂಬ ಪಾತ್ರದಲ್ಲಿ ಸೊಗಸಾಗಿ ನಟಿಸಿ, ಸಿನಿಪ್ರಿಯರ ಮೆಚ್ಚುಗೆ ಗಳಿಸಿದ್ದರು. ಇದೀಗ ನಟಿ ಸಂಧ್ಯಾ ಅರಕೆರೆ ಅವರು ತಾಯಿ ಆಗುತ್ತಿದ್ದಾರೆ. ಶೋಧನ್ ಬಸ್ರೂರ್ ಅವರೊಂದಿಗೆ ದಾಂಪತ್ಯ ಜೀವನ ನಡೆಸುತ್ತಿರುವ ಸಂಧ್ಯಾ ಅರಕೆರೆ ತುಂಬು ಗರ್ಭಿಣಿಯಾಗಿದ್ದು, ಇತ್ತೀಚೆಗೆ ಅವರ ಸೀಮಂತ ಶಾಸ್ತ್ರವನ್ನು ಕುಟುಂಬಸ್ಥರು ಅದ್ಧೂರಿಯಾಗಿ ನೆರವೇರಿಸಿದ್ದಾರೆ.
-
Avinash GR
Dec 10, 2025 7:55 PM
1/5
ರಂಗಭೂಮಿ ಹಿನ್ನೆಲೆಯ ನಟಿ ಸಂಧ್ಯಾ 'ಸು ಫ್ರಮ್ ಸೋ' ಸಿನಿಮಾದಲ್ಲಿ ಭಾನು ಪಾತ್ರಕ್ಕೆ ಜೀವ ತುಂಬಿ ಮೆಚ್ಚುಗೆ ಗಳಿಸಿದ್ದರು
2/5
ಸು ಫ್ರಮ್ ಸೋ ನಟಿ ಸಂಧ್ಯಾ ಅರಕೆರೆಗೆ ಇತ್ತೀಚೆಗೆ ಅದ್ದೂರಿ ಸೀಮಂತ ನೆರವೇರಿದೆ
3/5
ಸಂಧ್ಯಾ ಅರಕೆರೆ ಮತ್ತು ಪತಿ ಶೋಧನ್ ಬಸ್ರೂರ್ ತಮ್ಮ ಮಗುವಿನ ನಿರೀಕ್ಷೆಯಲ್ಲಿದ್ದಾರೆ
4/5
ತುಂಬು ಗರ್ಭಿಣಿಯಾಗಿರುವ ನಟಿ ಸಂಧ್ಯಾ ಅವರ ಸೀಮಂತ ಫೋಟೋಗಳು ವೈರಲ್ ಆಗಿವೆ
5/5
ಸ್ಯಾಂಡಲ್ವುಡ್ನ ಭರವಸೆಯ ನಟಿಯರಲ್ಲಿ ಸಂಧ್ಯಾ ಅರಕೆರೆ ಕೂಡ ಒಬ್ಬರು