Yash Ramayana: ಟಾಕ್ಸಿಕ್ ಚಿತ್ರದ ನಡುವೆ ಮತ್ತೊಂದು ಮೆಗಾ ಚಿತ್ರಕ್ಕೆ ಯಶ್ ಸಜ್ಜು: ರಾಕಿಂಗ್ ಸ್ಟಾರ್ ಫ್ಯಾನ್ಸ್ಗೆ ಭರ್ಜರಿ ಸುದ್ದಿ
ಸದ್ಯ ಬಂದಿರುವ ದೊಡ್ಡ ಅಪ್ಡೇಟ್ ಏನೆಂದರೆ ಈ ಚಿತ್ರದ ಚಿತ್ರೀಕರಣ ಮೇ ತಿಂಗಳಿನಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಯಶ್ ಪ್ರಸ್ತುತ ಟಾಕ್ಸಿಕ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಚಿತ್ರೀಕರಣ ಮುಗಿಸಿದ ನಂತರ, ಯಶ್ ಮೇ ತಿಂಗಳಿನಲ್ಲಿ ರಾಮಾಯಣ ಚಿತ್ರದ ಚಿತ್ರೀಕರಣಕ್ಕೆ ಸೇರಿಕೊಳ್ಳಲಿದ್ದಾರೆ.

Yash

ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ KGF- 2 ಸಿನಿಮಾ ಬಂದೋಗಿ ಮೂರು ವರ್ಷವಾಯಿತು. ಆ ಬಳಿಕ ಅವರ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಸದ್ಯ ಟಾಕ್ಸಿಕ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ ಹಾಗೂ ಯಶ್ ಅವರ ಮೊನ್‌ಸ್ಟರ್ ಮೈಂಡ್ ಕ್ರಿಯೆಶನ್ ನಿರ್ಮಾಣ ಮಾಡುತ್ತಿದೆ. ಹೀಗಾಗಿ ಕುತೂಹಲ ಮತ್ತಷ್ಟು ಹೆಚ್ಚಿದೆ. ಗೀತು ಮೋಹನದಾಸ್ ನಿರ್ದೇಶಿಸುತ್ತಿರುವ ಟಾಕ್ಸಿಕ್ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಯಶ್ ಹುಟ್ಟು ಹಬ್ಬದ ದಿನ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯಾದ ಕೆಲವೇ ನಿಮಿಷದಲ್ಲಿ ಟ್ರೇಲರ್ ದಾಖಲೆ ಕೂಡ ಬರೆದಿತ್ತು. ಸದ್ಯ ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾಯುತ್ತಿದ್ದಾರೆ.
ಇದರ ಮಧ್ಯೆ ಯಶ್ ಅಭಿಮಾನಿಗಳಿಗೆ ಮತ್ತೊಂದು ಬಿಗ್ ನ್ಯೂಸ್ ಬಂದಿದೆ. ಟಾಕ್ಸಿಕ್ ಚಿತ್ರದ ಮಧ್ಯೆ ಯಶ್ ಮತ್ತೊಂದು ದೊಡ್ಡ ಬಜೆಟ್ ಚಿತ್ರಕ್ಕೆ ಸಿದ್ಧರಾಗಿದ್ದಾರೆ. ಈ ಬಾರಿ ಅವರು ರಾಮಾಯಣದ ಕಥೆಯಾಧಾರಿತ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ನಿತೇಶ್ ತಿವಾರಿ ನಿರ್ದೇಶನದ ಚಿತ್ರವಾಗಿದೆ. ಬಹಳ ದೊಡ್ಡಮಟ್ಟದಲ್ಲಿ ರಾಮಾಯಣ ಕಾವ್ಯವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತಾಮಾತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಇನ್ನು ಲಕ್ಷ್ಮಣನಾಗಿ ರವಿ ದುಬೆ, ಹನುಮಂತನಾಗಿ ಸನ್ನಿ ಡಿಯೋಲ್ ಬಣ್ಣ ಹಚ್ಚಿದ್ದಾರೆ. ರಾವಣನ ಅವತಾರದಲ್ಲಿ ಯಶ್ ಇದ್ದಾರೆ.
ಸದ್ಯ ಬಂದಿರುವ ದೊಡ್ಡ ಅಪ್ಡೇಟ್ ಏನೆಂದರೆ ಈ ಚಿತ್ರದ ಚಿತ್ರೀಕರಣ ಮೇ ತಿಂಗಳಿನಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಯಶ್ ಪ್ರಸ್ತುತ ಟಾಕ್ಸಿಕ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಬೆಂಗಳೂರು ಶೆಡ್ಯೂಲ್ ಮುಗಿದಿದ್ದು, ಸೋಮವಾರದಿಂದ ಮುಂಬೈನಲ್ಲಿ ಒಂದು ತಿಂಗಳ ಕಾಲ ಚಿತ್ರೀಕರಣ ನಡೆಯಲಿದೆ. ಮುಂಬೈನಲ್ಲಿ ಟಾಕ್ಸಿಕ್ ಚಿತ್ರೀಕರಣ ಮುಗಿಸಿದ ನಂತರ, ಯಶ್ ಮೇ ತಿಂಗಳಿನಲ್ಲಿ ರಾಮಾಯಣ ಚಿತ್ರದ ಚಿತ್ರೀಕರಣಕ್ಕೆ ಸೇರಿಕೊಳ್ಳಲಿದ್ದಾರೆ. ಬಳಿಕ ಯಶ್ 2 ತಿಂಗಳ ಕಾಲ ಮುಂಬೈನಲ್ಲಿ ಉಳಿಯಲಿದ್ದಾರೆ.
L2E Empuraan Movie: ಕರ್ನಾಟಕದಲ್ಲಿ ಮಲಯಾಳಂನ ‘L2E- ಎಂಪುರಾನ್’ ಚಿತ್ರ ವಿತರಿಸಲಿದೆ ಹೊಂಬಾಳೆ ಫಿಲಂಸ್
ರಾಮಾಯಣ ಸಿನಿಮಾ ಬರೋಬ್ಬರಿ 835 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ. ಇಂಡಿಯನ್ ಸಿನಿಮಾದ ಬಿಗ್ ಬಜೆಟ್ ಚಿತ್ರದಲ್ಲಿ ನಟಿಸುವ ಮೂಲಕ ವಿಲನ್ ರೂಪದಲ್ಲಿ ಯಶ್ ಕಾಣಿಸಿಕೊಳ್ಳುತ್ತಿದ್ದಾರೆ. ಯಶ್ ಅವರೇ ಸಿನಿಮಾದ ಸಹ-ನಿರ್ಮಾಪಕರು ಆಗಿದ್ದಾರೆ. ಇನ್ನು ಸಂಭಾವನೆ ವಿಷಯ ನೋಡೋದಾದ್ರೆ ಯಶ್ 100 ಕೋಟಿ ರೂಪಾಯಿ ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.