ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Toxic Movie: ಗರ್ಭಿಣಿ ಕಿಯಾರಾಗಾಗಿ ʼಟಾಕ್ಸಿಕ್‌ʼ ಚಿತ್ರೀಕರಣವನ್ನು ಬೆಂಗಳೂರಿನಿಂದ ಮುಂಬೈಗೆ ಸ್ಥಳಾಂತರಿಸಿದ್ದ ಯಶ್‌

Yash: ಸದ್ಯ ದೇಶಾದ್ಯಂತ ಕುತೂಹಲ ಕೆರಳಿಸಿದ ಚಿತ್ರಗಳಲ್ಲಿ ಯಶ್‌ ಅಭಿನಯದ ಟಾಕ್ಸಿಕ್‌ ಕೂಡ ಒಂದು. ಕನ್ನಡ ಜತೆಗೆ ಇಂಗ್ಲಿಷ್‌ನಲ್ಲೂ ತಯಾರಾಗುತ್ತಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಬಾಲಿವುಡ್‌ನ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಇದೀಗ ಅವರಿಗಾಗಿ ಯಶ್‌ ಚಿತ್ರೀಕರಣವನ್ನು ಬೆಂಗಳೂರಿನಿಂದ ಮುಂಬೈಗೆ ಸ್ಥಳಾಂತರಿಸಿದ್ದರು ಎನ್ನುವ ವಿಚಾರ ತಿಳಿದು ಬಂದಿದೆ.

ಕಿಯಾರಾಗಾಗಿ ʼಟಾಕ್ಸಿಕ್‌ʼ ಚಿತ್ರೀಕರಣವನ್ನು ಮುಂಬೈಗೆ ಸ್ಥಳಾಂತರಿಸಿದ್ದ ಯಶ್‌

ಕಿಯಾರಾ ಅಡ್ವಾಣಿ ಮತ್ತ ಯಶ್‌.

Ramesh B Ramesh B Jun 18, 2025 5:37 PM

ಮುಂಬೈ: ʼಕೆಜಿಎಫ್‌ʼ (KGF) ಸರಣಿ ಚಿತ್ರಗಳ ಮೂಲಕ ಸಿನಿಪ್ರಿಯರ ಗಮನ ಸೆಳೆದ ರಾಕಿಂಗ್‌ ಸ್ಟಾರ್‌ ಯಶ್‌ (Yash) ಸದ್ಯ ಬಾಲಿವುಡ್‌ನ 'ರಾಮಾಯಣ' (Ramayana) ಮತ್ತು ಪ್ಯಾನ್‌ ವರ್ಲ್ಡ್‌ ಸಿನಿಮಾ 'ಟಾಕ್ಸಿಕ್‌' (Toxic Movie) ಒಪ್ಪಿಕೊಂಡಿದ್ದಾರೆ. ಈಗಾಗಲೇ 'ಟಾಕ್ಸಿಕ್‌' ಚಿತ್ರೀಕರಣ ಪೂರೈಸಿರುವ ಅವರು ಸದ್ಯ ನಿತೇಶ್‌ ತಿವಾರಿ ನಿರ್ದೇಶನದ 'ರಾಮಾಯಣ'ದಲ್ಲಿ ರಾವಣನಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಈ ಚಿತ್ರದ ಶೂಟಿಂಗ್‌ ಈಗಾಗಲೇ ಆರಂಭವಾಗಿದೆ. ಈ ಮಧ್ಯೆ ಗೀತು ಮೋಹನ್‌ದಾಸ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ʼಟಾಕ್ಸಿಕ್‌ʼ ಸಿನಿಮಾ ಬಗ್ಗೆ ಅಪರೂಪದ ವಿಚಾರವೊಂದು ಹೊರ ಬಿದ್ದಿದೆ. ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ (Kiara Advani) ಅವರಿಗಾಗಿ ಯಶ್‌ ಶೂಟಿಂಗ್‌ ಸ್ಪಾಟ್‌ ಅನ್ನು ಬೆಂಗಳೂರಿನಿಂದ ಮುಂಬೈಗೆ ಸ್ಥಳಾಂತರಿಸಿದ್ದರು ಎನ್ನಲಾಗಿದೆ.

ಹೌದು, ʼಟಾಕ್ಸಿಕ್‌ʼ ಚಿತ್ರದಲ್ಲಿ ಅಭಿನಯಿಸುವ ಜತೆಗೆ ಯಶ್‌ ನಿರ್ಮಾಣದಲ್ಲಿಯೂ ಕೈ ಜೋಡಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸಿದ್ದವಾಗುತ್ತಿರುವ ಈ ಗ್ಯಾಂಗ್‌ಸ್ಟರ್‌ ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾದಲ್ಲಿ ನಾಯಕಿಯಾಗಿ ಬಾಲಿವುಡ್‌ನ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಅವರು ಫೆಬ್ರವರಿಯಲ್ಲಿ ಗರ್ಭಿಣಿಯಾಗಿರುವ ಗುಡ್‌ನ್ಯೂಸ್‌ ಹಂಚಿಕೊಂಡಿದ್ದರು.

ಈ ಸುದ್ದಿಯನ್ನೂ ಓದಿ: Toxic Movie: ಹಾಲಿವುಡ್‌ ಲೆವೆಲ್‌ನಲ್ಲಿ ತಯಾರಾಗುತ್ತಿದೆ ʼಟಾಕ್ಸಿಕ್‌ʼ; ಇಂಗ್ಲಿಷ್‌ನಲ್ಲೂ ಶೂಟಿಂಗ್‌

ಗರ್ಭಿಣಿ ಕಿಯಾರಾ ಅವರಿಗಾಗಿ ಯಶ್‌ ಬಹುದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದ್ದರು. ಕಿಯಾರಾ ಗರ್ಭಿಯಾಗಿರುವ ವಿಚಾರ ತಿಳಿದ ಅವರು ಚಿತ್ರೀಕರಣವನ್ನು ಬೆಂಗಳೂರಿನಿಂದ ಮುಂಬೈಗೆ ಸ್ಥಳಾಂತರಿಸುವಂತೆ ನಿರ್ದೇಶಕಿ ಗೀತು ಮೋಹನ್‌ದಾಸ್‌ ಅವರಿಗೆ ಮನವಿ ಮಾಡಿದ್ದರು. ಅದರಂತೆ ನಿರ್ಮಾಪಕ ವೆಂಕಟ್‌ ಕೆ. ನಾರಾಯಣ್‌ ಸಂಪೂರ್ಣ ಚಿತ್ರಕರಣವನ್ನು ಮುಂಬೈಗೆ ಶಿಫ್ಟ್‌ ಮಾಡಿಸಿದ್ದರು ಎಂದು 123ತೆಲುಗು ವೆಬ್‌ಸೈಟ್‌ ವರದಿ ಮಾಡಿದೆ

ಕಿಯಾರಾ ಮುಂಬೈಯಲ್ಲಿ ನೆಲೆಸಿದ್ದು, ಅಲ್ಲಿಂದ ಶೂಟಿಂಗ್‌ಗಾಗಿ ಅವರಿಗೆ ಬೆಂಗಳೂರಿಗೆ ಓಡಾಡಲು ತೊಂದರೆಯಾಗಬಹುದು ಎನ್ನುವ ಕಾರಣಕ್ಕೆ ಯಶ್‌ ಲೋಕೋಷನ್‌ ಅನ್ನು ಬದಲಾಯಿಸಿದ್ದಾರೆ ಎನ್ನಲಾಗಿದೆ. ಜತೆಗೆ ಯಶ್‌ ಮುಂಬೈಯ ಚಿತ್ರೀಕರಣಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದರು. ಈ ಬಗ್ಗೆ ಅವರು ಪ್ರೊಡಕ್ಷನ್‌ ಟೀಮ್‌ ಜತೆಗೆ ನಿರಂತರವಾಗಿ ಸಮಾಲೋಚನೆ ನಡೆಸಿದ್ದರು. ಇದರಿಂದ ಅನಗತ್ಯ ಖರ್ಚು ವೆಚ್ಚ ಕಡಿಮೆ ಮಾಡಲು ಸಾಧ್ಯವಾಯಿತು ಎಂದು ಮೂಲಗಳು ತಿಳಿಸಿವೆ.

ವರದಿಗಳ ಪ್ರಕಾರ ಗೋವಾದಲ್ಲಿ 90ರ ದಶಕದಲ್ಲಿ ನಡೆಯುವ ಡ್ರಗ್‌ ಮಾಫಿಯಾದ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ನಯನತಾರಾ ಕೂಡ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಯಶ್ ಜತೆಗೆ ಅವರ ಪಾತ್ರಕ್ಕೂ ಸಾಕಷ್ಟು ಪ್ರಾಮುಖ್ಯತೆ ನೀಡಲಾಗಿದೆಯಂತೆ. ಇವರೊಂದಿಗೆ ಬಾಲಿವುಡ್‌ ತಾರೆಯರಾದ ಹುಮಾ ಖುರೇಷಿ, ತಾರಾ ಸುತಾರಿಯಾ, ಅಕ್ಷಯ್‌ ಓಬೇರಾಯ್‌ ಮತ್ತಿತರರು ಅಭಿನಯಿಸುತ್ತಿದ್ದಾರೆ. ಸದ್ಯ ಚಿತ್ರೀಕರಣ ಪೂರ್ಣವಾಗಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಆರಂಭವಾಗಿದೆ. ಯುಗಾದಿ ಪ್ರಯುಕ್ತ 2026ರ ಮಾ. 19ರಂದು ʼಟಾಕ್ಸಿಕ್‌ʼ ವಿಶ್ವಾದ್ಯಂತ ತೆರೆಗೆ ಬರಲಿದೆ. ಹಾಲಿವುಡ್‌ ಶೈಲಿಯಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ರಿಲೀಸ್‌ ಆಗಿರುವ ಟೀಸರ್‌ ಗಮನ ಸೆಳೆದಿದೆ.