ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ನಾನು ಇಂದಿಗೂ ಶಾರುಖ್ ಫ್ಯಾನ್, ನಮ್ಮ ಹಿರಿಯರಿಗಿಂತ ನಾನೇ ದೊಡ್ಡವನು ಅಂದುಕೊಂಡ ದಿನವೇ ನನ್ ಕಥೆ ಮುಗೀತು’; ‘ಆಪ್ ಕಿ ಅದಾಲತ್’ನಲ್ಲಿ ಯಶ್‌ ಓಪನ್‌ ಟಾಕ್!

ಹಿರಿಯ ಪತ್ರಕರ್ತ ರಜತ್ ಶರ್ಮಾ ನಡೆಸಿಕೊಡುವ 'ಆಪ್ ಕಿ ಅದಾಲತ್' ಕಾರ್ಯಕ್ರಮದ ಕಟಕಟೆಯಲ್ಲಿ ಕಾಣಿಸಿಕೊಂಡ ಮೊಟ್ಟಮೊದಲ ಕನ್ನಡ ನಟ ಎಂಬ ಹೆಗ್ಗಳಿಕೆಗೆ ರಾಕಿಂಗ್ ಸ್ಟಾರ್ ಯಶ್ ಪಾತ್ರರಾಗಿದ್ದಾರೆ. ಈ ಶೋನಲ್ಲಿ ಶಾರುಖ್ ಖಾನ್ ಅವರ 'ಝೀರೋ' ಎದುರು ಕೆಜಿಎಫ್ ಗೆದ್ದರೂ, ಹಿರಿಯ ನಟರನ್ನು ಗೌರವಿಸುವುದಾಗಿ ಯಶ್ ವಿನಮ್ರತೆ ಮೆರೆದಿದ್ದಾರೆ.

ʻಆಪ್ ಕಿ ಅದಾಲತ್‌ʼ ಶೋನಲ್ಲಿ ಶಾರುಖ್‌ ಖಾನ್ ಬಗ್ಗೆ ನಟ ಯಶ್ ಹೇಳಿದ್ದೇನು?

-

Avinash GR
Avinash GR Aug 14, 2026 12:50 PM

ʻರಾಕಿಂಗ್ ಸ್ಟಾರ್ʼ ಯಶ್ ತಮ್ಮ ಸಿನಿ ಪಯಣದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಹಿರಿಯ ಪತ್ರಕರ್ತ ರಜತ್ ಶರ್ಮಾ ಅವರ ಜನಪ್ರಿಯ ಟಿವಿ ಕಾರ್ಯಕ್ರಮ ‘ಆಪ್ ಕಿ ಅದಾಲತ್’ (Aap Ki Adalat) ಕಟಕಟೆಯಲ್ಲಿ ಕಾಣಿಸಿಕೊಂಡ ಮೊಟ್ಟಮೊದಲ ಕನ್ನಡ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಯಶ್ ಹೊಸ ಇತಿಹಾಸ ಬರೆದಿದ್ದಾರೆ.

ಕಾರ್ಯಕ್ರಮದ ಶೂಟಿಂಗ್ ಫೋಟೋಗಳನ್ನು ರಜತ್ ಶರ್ಮಾ ಅವರು ಹಂಚಿಕೊಂಡ ಬೆನ್ನಲ್ಲೇ ಬಿಡುಗಡೆಯಾಗಿರುವ ಪ್ರೋಮೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿವೆ. ಕಾರ್ಯಕ್ರಮದಲ್ಲಿ ಯಶ್ ಅವರ ನಟನೆ ಹಾಗೂ ಪರಿಶ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದ ರಜತ್ ಶರ್ಮಾ, "ಯಶ್ ಕೇವಲ ತೆರೆಯ ಮೇಲೆ ಬಂದು ಹೋಗುವ ನಟನಲ್ಲ, ಬದಲಾಗಿ ತಮ್ಮ ಅಪ್ರತಿಮ ನಟನೆಯ ಮೂಲಕ ತೆರೆಯನ್ನು ಸೀಳಿಕೊಂಡು ಬರುವ ಅದ್ಭುತ ಕಲಾವಿದ" ಎಂದು ಬಣ್ಣಿಸಿದ್ದಾರೆ.

Yash-Radhika Pandit: ಯಶ್​ ಮನೆಯಲ್ಲಿ ಕ್ರಿಸ್​ಮಸ್ ಸೆಲೆಬ್ರೇಷನ್​! ಚೆಂದದ ವಿಡಿಯೊ ಶೇರ್ ಮಾಡಿದ​ ರಾಧಿಕಾ ಪಂಡಿತ್

ಕಿರುತೆರೆಯಿಂದ ಪ್ಯಾನ್ ಇಂಡಿಯಾ ಸ್ಟಾರ್‌ವರೆಗೆ

ಈ ವಿಶೇಷ ಸಂಚಿಕೆಯಲ್ಲಿ, ಕಿರುತೆರೆಯ ಧಾರಾವಾಹಿಗಳಿಂದ ಆರಂಭವಾಗಿ ‘ಕೆಜಿಎಫ್’ ಸರಣಿಯ ಮೂಲಕ ಜಾಗತಿಕ ಮಟ್ಟದಲ್ಲಿ ಪ್ಯಾನ್-ಇಂಡಿಯಾ ಸೆನ್ಸೇಷನ್ ಆಗಿ ಬೆಳೆದ ಯಶ್ ಅವರ ಇಡೀ ಸಿನಿಮಾ ಪಯಣ ಅನಾವರಣಗೊಳ್ಳಲಿದೆ. ಇದರೊಂದಿಗೆ, ಶೂಟಿಂಗ್ ವೇಳೆ ನಡೆದ ಸ್ವಾರಸ್ಯಕರ ಪ್ರಸಂಗಗಳು ಮತ್ತು ಅವರ ಮುಂಬರುವ ಚಿತ್ರಗಳ ಬಗ್ಗೆಯೂ ಮುಕ್ತವಾಗಿ ಚರ್ಚಿಸಲಾಗಿದೆ.

ಶಾರುಖ್ ಖಾನ್ ಬಗ್ಗೆ ಯಶ್ ಮಾರ್ಮಿಕ ಮಾತು

‘ಕೆಜಿಎಫ್: ಚಾಪ್ಟರ್ 1’ ಬಿಡುಗಡೆಯಾದ ಸಂದರ್ಭದಲ್ಲಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ‘ಝೀರೋ’ (Zero) ಸಿನಿಮಾ ಎದುರು ಬಾಕ್ಸ್ ಆಫೀಸ್‌ನಲ್ಲಿ ಕ್ಲಾಶ್ ಆಗಿದ್ದ ವಿಚಾರ ಪ್ರೋಮೋದಲ್ಲಿ ಪ್ರಮುಖವಾಗಿ ಚರ್ಚೆಗೆ ಬಂದಿದೆ. ಈ ಬಗ್ಗೆ ಮಾತನಾಡಿದ ಯಶ್, "ನಾನು ಇಂದಿಗೂ ಶಾರುಖ್ ಖಾನ್ ಅವರ ದೊಡ್ಡ ಅಭಿಮಾನಿ. ಅಂದು ನಮ್ಮ ಸಿನಿಮಾ ಚಿಕ್ಕದಾಗಿತ್ತು, ಶಾರುಖ್ ಸರ್ ಅವರ ಚಿತ್ರ ತುಂಬ ದೊಡ್ಡ ಮಟ್ಟದ್ದಾಗಿತ್ತು. ಆದರೂ ಧೈರ್ಯ ಮಾಡಿ ನಮ್ಮ ಸಿನಿಮಾವನ್ನು ಅದೇ ಸಮಯದಲ್ಲಿ ರಿಲೀಸ್ ಮಾಡಿದೆವು" ಎಂದು ನೆನಪಿಸಿಕೊಂಡಿದ್ದಾರೆ.

Yash-Radhika Pandit: ರಾಕಿ ಭಾಯ್‌‌ಗೆ ಮದುವೆ ಆನಿವರ್ಸರಿ ಸಂಭ್ರಮ; ಯಶ್-ರಾಧಿಕಾ ಜೋಡಿ ದಾಂಪತ್ಯ ಜೀವನಕ್ಕೆ ಈಗ ಎಂಟರ ನಂಟು!

ಆ ದಿನವೇ ನನ್ನ ಕಥೆ ಮುಗಿಯಿತು

ತಮ್ಮ ಚಿತ್ರವು 'ಝೀರೋ'ಗಿಂತ ಹೆಚ್ಚು ಕಲೆಕ್ಷನ್ ಮಾಡಿದರೂ, ಅದನ್ನು ತಲೆಗೆ ಏರಿಸಿಕೊಳ್ಳದ ಯಶ್, "ಅವರು ನಿಜವಾದ ಸೂಪರ್‌ಸ್ಟಾರ್. ನನ್ನ ಹಿರಿಯ ನಟರಿಗಿಂತ ನಾನು ದೊಡ್ಡವನು ಎಂದು ಅಂದುಕೊಂಡ ದಿನವೇ ನನ್ನ ಕಥೆ ಮುಗಿಯಿತು ಎಂದರ್ಥ" ಎಂದು ಹಿರಿಯ ಕಲಾವಿದರ ಬಗ್ಗೆ ತಮ್ಮಲ್ಲಿರುವ ಅಪಾರ ಗೌರವವನ್ನು ಹೊರಹಾಕಿದ್ದಾರೆ.

'ರಾಮಾಯಣ' - 'ಟಾಕ್ಸಿಕ್' ಹವಾ

ಒಂದೆಡೆ ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ಪೌರಾಣಿಕ ಚಿತ್ರ ‘ರಾಮಾಯಣ’ದಲ್ಲಿ 'ರಾವಣ'ನ ಪಾತ್ರ ಮಾಡುವ ಮೂಲಕ ಯಶ್ ಬಾಲಿವುಡ್‌ಗೆ ಭರ್ಜರಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. 2 ಭಾಗಗಳಲ್ಲಿ ಮೂಡಿಬರುತ್ತಿರುವ ಈ ಮಹಾಕಾವ್ಯದ ಮೊದಲ ಭಾಗ ‘ರಾಮಾಯಣ: ಭಾಗ 1’ 2026ರ ದೀಪಾವಳಿಗೆ ತೆರೆಕಾಣಲಿದೆ.

ಮತ್ತೊಂದೆಡೆ, ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ (Toxic) ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣದ ಈ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಮತ್ತು ಹುಮಾ ಖುರೇಷಿ ಮುಂತಾದ ದೊಡ್ಡ ತಾರಾಗಣವಿದ್ದು, ಆಗಸ್ಟ್ 26 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಅಪ್ಪಳಿಸಲಿದೆ.