ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kannada serial: ದಿಢೀರ್ ಅಂತ್ಯವಾಗ್ತಿದೆ ಈ ಸೀರಿಯಲ್! ಕಾರಣ ಇದು

Kannada serial: ಜಗದ್ಧಾತ್ರಿ’ ಧಾರಾವಾಹಿ ಬರ್ತಾ ಇರೋದು ಗೊತ್ತೇ ಇದೆ. ಈಗಾಗಲೇ ಸೀರಿಯಲ್‌ ಪ್ರೋಮೋ ಔಟ್‌ ಆಗಿದೆ. ಇದಕ್ಕಾಗಿ ಯಾವ ಸೀರಿಯಲ್​ ಅಂತ್ಯ ಆಗುತ್ತದೆ ಎನ್ನುವ ಬಗ್ಗೆ ಕುತೂಹಲ ಹೆಚ್ಚಿತ್ತು. ಅಮೃತಧಾರೆ ಸೀರಿಯಲ್​ ಕೆಲವು ದಿನಗಳ ಹಿಂದೆ ಅಂತ್ಯವಾಗುತ್ತದೆ ಎಂದೇ ಅಂದುಕೊಳ್ಳಲಾಗಿತ್ತು. ಆದರೆ ಈ ಧಾರಾವಾಹಿ ಅಂತ್ಯ ಆಗ್ತಿಲ್ಲ ಎನ್ನಲಾಗುತ್ತಿದೆ.

ದಿಢೀರ್ ಅಂತ್ಯವಾಗ್ತಿದೆ ಈ ಸೀರಿಯಲ್! ಕಾರಣ ಇದು

ಕನ್ನಡ ಧಾರಾವಾಹಿಗಳು -

Yashaswi Devadiga
Yashaswi Devadiga Jul 20, 2026 7:05 PM

‘ಜಗದ್ಧಾತ್ರಿ’ ( Jagadhatri Kannada Serial) ಧಾರಾವಾಹಿ ಬರ್ತಾ ಇರೋದು ಗೊತ್ತೇ ಇದೆ. ಈಗಾಗಲೇ ಸೀರಿಯಲ್‌ (Kannada Serial) ಪ್ರೋಮೋ ಔಟ್‌ ಆಗಿದೆ. ಮೋಕ್ಷಿತಾ ಪೈ, ವಿಜಯ್‌ ಸೂರ್ಯ, ಕವಿತಾ ಗೌಡ, ಹಿರಿಯ ನಟಿ ಗಿರಿಜಾ ಲೋಕೇಶ್‌, ಲಕ್ಷ್ಮೀ ಸಿದ್ದಯ್ಯ, ಚಂದನಾ, ‘ಮಹಾನಟಿ ಸೀಸನ್‌-2’ ರಿಯಾಲಿಟಿ ಶೋ ಖ್ಯಾತಿಯ ದೀಪಿಕಾ ಜಯಣ್ಣ, ಸಿಂಚನಾ ಗೌಡ ಅವರು ಸೇರಿದಂತೆ ದೊಡ್ಡ ತಾರಾಬಳಗ ಹೊಂದಿದೆ. ಇದಕ್ಕಾಗಿ ಯಾವ ಸೀರಿಯಲ್​ ಅಂತ್ಯ ಆಗುತ್ತದೆ ಎನ್ನುವ ಬಗ್ಗೆ ಕುತೂಹಲ ಹೆಚ್ಚಿತ್ತು. ಅಮೃತಧಾರೆ ಸೀರಿಯಲ್​ ಕೆಲವು ದಿನಗಳ ಹಿಂದೆ ಅಂತ್ಯವಾಗುತ್ತದೆ ಎಂದೇಅಂದುಕೊಳ್ಳಲಾಗಿತ್ತು. ಆದರೆ ಈ ಧಾರಾವಾಹಿ (Kannada serial End) ಅಂತ್ಯ ಆಗ್ತಿಲ್ಲ ಎನ್ನಲಾಗುತ್ತಿದೆ.

ಶ್ರಾವಣಿ ಸುಬ್ರಹ್ಮಣ್ಯ ಅಂತ್ಯ?

ಬ್ರಹ್ಮಗಂಟು ಸೀರಿಯಲ್​ ಮುಗಿಯುವ ಹಂತಕ್ಕೆ ಬಂದಿದೆ ಎನ್ನಲಾಗುತ್ತಿದೆ ದಿಶಾನೇ ದೀಪಾ ಎನ್ನುವುದು ಚಿರುಗೆ ತಿಳಿದಿದೆ. ಸೌಂದರ್ಯಳ ಅಸಲಿ ಮುಖ ತಿಳಿಯುವುದು ಹೆಚ್ಚು ಹೊತ್ತು ಬೇಕಿಲ್ಲ. ಆದರ ವರದಿಯ ಪ್ರಕಾರ ಸೀರಿಯಲ್‌ ಅಂತ್ಯವಾಗುತ್ತಿಲ್ಲವಂತೆ.

ಇದನ್ನೂ ಓದಿ: Salman Khan: ಸಲ್ಲು ಆರೋಗ್ಯದ ಬಗ್ಗೆ ವದಂತಿ; ಸಲ್ಮಾನ್‌ ಖಾನ್‌ ಏಕಾಏಕಿ ಪೋಸ್ಟ್‌!

ಈಗ ಮುಗಿಯುತ್ತಿರುವ ಸೀರಿಯಲ್​ ಎಂದರೆ ಶ್ರಾವಣಿ ಸುಬ್ರಹ್ಮಣ್ಯ ಎನ್ನಲಾಗಿದೆ. ಇನ್ನೇನು ಮುಗಿಯತ್ತೆ ಎನ್ನುವಾಗ ಹೊಸ ಪಾತ್ರದ ಎಂಟ್ರಿ ಆಗಿದ್ದು, ಸುಬ್ರಹ್ಮಣ್ಯ ಜೊತೆ ಮದುವೆಗೂ ಸಿದ್ಧ ಮಾಡಲಾಗಿತ್ತು. ಆದರೆ ಇದೀಗ ಎಲ್ಲವೂ ಸುಸೂತ್ರವಾಗಿ ಸೀರಿಯಲ್​ ಮುಗಿಸಲಾಗುತ್ತಿದೆ. ಈ ಸೀರಿಯಲ್​ 2024ರ ಮಾರ್ಚ್‌ 18ರಿಂದ ಆರಂಭವಾಗಿತ್ತು. ಆಗಸ್ಟ್‌ ಮೊದಲ ವಾರದಲ್ಲಿ ಧಾರಾವಾಹಿ ಮುಕ್ತಾಯವಾಗಲಿದೆ ಎನ್ನುವ ಮಾಹಿತಿ ವೈರಲ್‌ ಆಗುತ್ತಿದೆ.

‘ಜಗದ್ಧಾತ್ರಿ’ ಧಾರಾವಾಹಿ

ಇನ್ನು ‘ಜಗದ್ಧಾತ್ರಿ’ ಧಾರಾವಾಹಿ ಶೀಘ್ರದಲ್ಲೇ ಬರಲಿದೆ. ‘ಅಗ್ನಿಸಾಕ್ಷಿ,’ ‘ದೃಷ್ಟಿಬೊಟ್ಟು’, ‘ನಮ್ಮ ಲಚ್ಚಿ’, ‘ಪ್ರೇಮಲೋಕ’ ಸೇರಿದಂತೆ ಅನೇಕ ಧಾರಾವಾಹಿಗಳಿಗೆ ಬಣ್ಣ ಹಚ್ಚಿರುವ ನಟ ವಿಜಯ್ ಸೂರ್ಯ ಅವರು, ಇದುವರೆಗೂ ವಿಭಿನ್ನ ಪಾತ್ರಗಳನ್ನ ಮಾಡಿದ್ದಾರೆ. ಸದ್ಯ ‘ಜಗದ್ದಾತ್ರೀ’ಯಲ್ಲಿ ಪಕ್ಕಾ ಆಕ್ಷನ್‌ ಹೀರೋ ಆಗಿ ಎಂಟ್ರಿಕೊಟ್ಟಿದ್ದಾರೆ.

ನಟಿ ಕವಿತಾ ಗೌಡ ಹೊಸ ಲುಕ್‌, ಹೊಸ ಪಾತ್ರದ ಮೂಲಕ ತೆರೆಗೆ ಬಂದಿದ್ದಾರೆ. ತಾಯ್ತನಕ್ಕೆ ಬ್ರೇಕ್‌ ತಗೊಂಡಿದ್ದ ನಟಿ, ಅಮ್ಮನಾಗಿಯೇ ತೆರೆಮೇಲೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Amruthadhaare serial: ಕೆಡಿ ಜೈದೇವ್‌ಗೆ ಮಲ್ಲಿ ವಾರ್ನ್‌; ಭೂಮಿ ಒಡಲ ಗುಟ್ಟು ಗೌತಮ್ ಎದುರು ಬಯಲು

ಧ್ವನಿ ಎಂಬ ಮಗುವಿಗೆ ತಾಯಿ ಆಗಿದ್ದಾರೆ. ಲಕ್ಷ್ಮೀ ಸಿದ್ದಯ್ಯ ಮತ್ತು ಕವಿತಾ ಗೌಡ ದಶಕದ ನಂತರ ತೆರೆಹಂಚಿಕೊಂಡಿರುವುದು ‘ಜಗದ್ಧಾತ್ರಿ’ಯ ವಿಶೇಷತೆ.