ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare serial: ಕೆಡಿ ಜೈದೇವ್‌ಗೆ ಮಲ್ಲಿ ವಾರ್ನ್‌; ಭೂಮಿ ಒಡಲ ಗುಟ್ಟು ಗೌತಮ್ ಎದುರು ಬಯಲು

Amruthadhaare serial: ಒಂದು ಕಡೆ ಭೂಮಿಗೆ ಕ್ಯಾನ್ಸರ್‌ (Bhoomika Cancer) ಇರೋ ವಿಚಾರ ಗೌತಮ್‌ಗೆ ಗೊತ್ತಾದರೆ, ಇನ್ನೊಂದು ಕಡೆ ಮಲ್ಲಿ ಜೈದೇವ್‌ಗೆ ವಾರ್ನಿಂಗ್‌ ಮಾಡಿದ್ದಾಳೆ. ಮಲ್ಲಿ ಮತ್ತೆ ಕಮ್‌ಬ್ಯಾಕ್‌ ಆಗಿದ್ದಾಳೆ. ಬರ್ತ್ ಡೇ ದಿನ ಕೇಕ್‌ನಲ್ಲಿ ಬಾಂಬ್ ಇಟ್ಟಿರೋ ವಿಷಯವನ್ನು ಮಕ್ಕಳು ಮಲ್ಲಿಗೆ ಹೇಳಿದ್ದರು. ಇದಾದ ನಂತರ ಎದುರಾದ ಜೈದೇವ್‌ಗೆ ಮಲ್ಲಿ ಖಡಕ್ ವಾರ್ನಿಂಗ್ ನೀಡಿದ್ದಾಳೆ. ಈ ಮೊದಲೇ ಮಲ್ಲಿ ತಂಟೆಗೆ ಹೋಗದಂತೆ ಮಗ ಜೈದೇವ್‌ಗೆ ಶಕುಂತಲಾ ಎಚ್ಚರಿಕೆ ನೀಡಿದ್ದಳು. ಆಕೆ ಮೊದಲಿನ ಮಲ್ಲಿ ಅಲ್ಲ ಎಂಬ ಸಲಹೆಯನ್ನು ಶಕುಂತಲಾ ಹೇಳಿದ್ದಳು.

Amruthadhaare serial: ಕೆಡಿ ಜೈದೇವ್‌ಗೆ ಮಲ್ಲಿ ವಾರ್ನ್‌!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Jul 20, 2026 10:25 AM

ಜೀ ಕನ್ನಡ ವಾಹಿನಿಯಲ್ಲಿ (Zee kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthdhaare) ಸದ್ಯ ಭೂಮಿ ಮೇಲೆ ಕಥೆ ಸಾಗುತ್ತಿದೆ. ಒಂದು ಕಡೆ ಭೂಮಿಗೆ ಕ್ಯಾನ್ಸರ್‌ (Bhoomika Cancer) ಇರೋ ವಿಚಾರ ಗೌತಮ್‌ಗೆ ಗೊತ್ತಾದರೆ, ಇನ್ನೊಂದು ಕಡೆ ಮಲ್ಲಿ ಜೈದೇವ್‌ಗೆ ವಾರ್ನಿಂಗ್‌ ಮಾಡಿದ್ದಾಳೆ. ಮಲ್ಲಿ ಮತ್ತೆ ಕಮ್‌ಬ್ಯಾಕ್‌ ಆಗಿದ್ದಾಳೆ. ಬರ್ತ್ ಡೇ ದಿನ ಕೇಕ್‌ನಲ್ಲಿ ಬಾಂಬ್ ಇಟ್ಟಿರೋ ವಿಷಯವನ್ನು ಮಕ್ಕಳು ಮಲ್ಲಿಗೆ ಹೇಳಿದ್ದರು.

ಇದಾದ ನಂತರ ಎದುರಾದ ಜೈದೇವ್‌ಗೆ ಮಲ್ಲಿ ಖಡಕ್ ವಾರ್ನಿಂಗ್ ನೀಡಿದ್ದಾಳೆ. ಈ ಮೊದಲೇ ಮಲ್ಲಿ ತಂಟೆಗೆ ಹೋಗದಂತೆ ಮಗ ಜೈದೇವ್‌ಗೆ ಶಕುಂತಲಾ ಎಚ್ಚರಿಕೆ ನೀಡಿದ್ದಳು. ಆಕೆ ಮೊದಲಿನ ಮಲ್ಲಿ ಅಲ್ಲ ಎಂಬ ಸಲಹೆಯನ್ನು ಶಕುಂತಲಾ ಹೇಳಿದ್ದಳು. ಹೊಸ ಗೆಳತಿ ಜೊತೆ ಮಾತನಾಡುತ್ತಿದ್ದ ಜೈದೇವ್ ಬಳಿ ಹೋಗಿರುವ ಮಲ್ಲಿ ವಾರ್ನ್‌ಗೆ ಜೈದೇವ್‌ಗೆ ಪಿತ್ತ ನೆತ್ತಿಗೇರಿದೆ.

ಇದನ್ನೂ ಓದಿ: Aishwarya Sindogi : ಅವಹೇಳನಕಾರಿ ಕಮೆಂಟ್; ದೂರು ದಾಖಲಿಸಿದ ಐಶ್ವರ್ಯಾ ಸಿಂಧೋಗಿ

ಮಲ್ಲಿ ಹೋಗ್ತಿದ್ದಂತೆ ಹೊಸ ಗರ್ಲ್‌ಫ್ರೆಂಡ್, ಇಷ್ಟೊತ್ತು ನಗುತ್ತಿದ್ದವರು ಆಕೆ ಬಂದು ಹೋದ್ಮೇಲೆ ಎಲ್ಲಾ ಬದಲಾಯ್ತು. ಯಾರು ಆಕೆ ಎಂದು ಪ್ರಶ್ನೆ ಮಾಡ್ತಾಳೆ. ಇದಕ್ಕೆ ಜೈದೇವ್, ಅದು ನನ್ನ ಪರ್ಸನಲ್ ವಿಷಯ. ನನ್ನ ಪರ್ಸನಲ್ ವಿಷಯದ ಬಗ್ಗೆ ಬೇರೆಯವರು ಮಾತನಾಡೋದು ನನಗೆ ಇಷ್ಟ ಆಗಲ್ಲ ಎಂದು ಹೊಸ ಗೆಳತಿ ಮೇಲೆ ಕೆಡಿ ಗುಡುಗಿದ್ದಾನೆ. ಜೈದೇವ್‌ನಲ್ಲಿ ಬದಲಾವಣೆ ಕಂಡ ಹೊಸ ಗೆಳತಿ, ನಾನು ಪ್ರಶ್ನೆ ಮಾಡಬಾರದಾ? ನೀನು ಕರೆದಾಗೆಲ್ಲಾ ಬರೋದು? ನಿನಗೆ ಬೇಕಾದಾಗ ಟೈಂ ಕೊಡೋದು ನನ್ನ ಕೆಲಸನಾ? ನಿನ್ನ ಮತ್ತೊಂದು ಮುಖ ನೋಡಿದೆ ಎಂದು ಹೇಳಿ ಆಕೆ ಅಲ್ಲಿಂದ ಹೋಗಿದ್ದಾಳೆ.

ಮತ್ತೊಂದು ಕಡೆ ಭೂಮಿಗೆ ಕ್ಯಾನ್ಸರ್‌ ಇರೋ ವಿಚಾರ ಗೌತಮ್‌ಗೆ ಗೊತ್ತಾಗಿದೆ. ಗೌತಮ್‌ಗೆ ಅನುಮಾನ ಬಂದು ವೈದ್ಯರ ಬಳಿ ಹೋಗಿ ಭೂಮಿ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಆಗ ಭೂಮಿಗೆ ಬ್ರೆಸ್ಟ್‌ ಕ್ಯಾನ್ಸರ್‌ ಇರೋ ಬಗ್ಗೆ ಹೇಳಿದ್ದಾರೆ. ಗೌತಮ್‌ ಗಾಬರಿ ಆಗಿದ್ದಾನೆ. ಗೌತಮ್‌ ಈ ಬಗ್ಗೆ ಭೂಮಿ ಬಳಿ ಚರ್ಚಿಸಿದ್ದಾರೆ. ನಮ್ಮ ಪ್ರೀತಿ ಮುಂದೆ ಇದನ್ನು ಗೆಲ್ಲುತ್ತೇವೆ ಎಂದು ಭರವಸೆ ಕೊಟ್ಟಿದ್ದಾನೆ. ಭೂಮಿ ತನ್ನೆಲ್ಲಾ ಜವಾಬ್ದಾರಿಗಳನ್ನು ಗೌತಮ್ ಹೆಗಲಿಗೆ ರವಾನಿಸುವ ಕೆಲಸವನ್ನು ಭೂಮಿಕಾ ಮಾಡುತ್ತಿದ್ದಾಳೆ. ಈ ನಡುವೆ ಸಿಸ್ಟರ್ ಶಕುಂತಲಾ ಬೆನ್ನ ಹಿಂದೆಯೇ ಸೋದರ ಲಕ್ಷ್ಮೀಕಾಂತ್ ಬಿದ್ದಿದ್ದಾನೆ.



ಧಾರಾವಾಹಿ ಇನ್ನೇನು ಮುಗಿಯುತ್ತದೆ. ಕೇಡಿ ಜೈದೇವ್‌ಗೆ ಶಿಕ್ಷೆಯಾಗೋದು ಬಾಕಿ ಇದೆ ಎಂದೇ ವೀಕ್ಷಕರು ಭಾವಿಸಿದ್ದರು. ಅದರ ಮಧ್ಯೆ, ನಾಯಕಿ ಭೂಮಿಕಾಗೆ ಬ್ರೆಸ್ಟ್‌ ಕ್ಯಾನ್ಸರ್‌ ಬಂದಿರೋದನ್ನ ವೀಕ್ಷಕರು ಸಹಿಸುತ್ತಿಲ್ಲ. ನೀವು ಕ್ಯಾನ್ಸರ್‌ಗೆ ಚಿಕಿತ್ಸೆ ಇಲ್ಲವೆಂಬಂತೆ ಹೇಳುತ್ತ, ಅನೇಕ ಕ್ಯಾನ್ಸರ್‌ ರೋಗಿಗಳಲ್ಲೂ ಭಯ ಹುಟ್ಟಿಸುತ್ತಿದ್ದೀರಿ ಎಂದೂ ತಕರಾರು ತೆಗೆಯುತ್ತಿದ್ದಾರೆ.

ಇದನ್ನೂ ಓದಿ: Amruthadhaare Serial: ಗೌತಮ್ - ಭೂಮಿಕಾಗೆ ವಿಧಿಯ ಸವಾಲು! ಮಲ್ಲಿ ಖಡಕ್ ಮಾತಿಗೆ ಶಕುಂತಲಾ ಶಾಕ್‌

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ