Nanjegowa Nanjunda Column: ನಾಥ ಪರಂಪರೆಯ ವಿರಾಗಿ ಸಂತ ಶ್ರೀಬಾಲಗಂಗಾಧರ ಸ್ವಾಮೀಜಿ

ನಾಥ ಸಂಪ್ರದಾಯದ ಮೂಲಕ ಸನಾತನ ಸಂಸ್ಕೃತಿಯನ್ನು ಪ್ರಕಾಶಮಾನಗೊಳಿಸಿದ ಶತಮಾನದ ಸಂತ ಬಾಲಗಂಗಾಧರನಾಥ ಮಹಾಸ್ವಾಮೀಜಿ ಯವರು ಅನ್ನ, ಅಕ್ಷರ, ಆರೋಗ್ಯ ಕ್ಷೇತ್ರವನ್ನು ತಮ್ಮ ಮೂಲ ಮಂತ್ರವಾಗಿಸಿಕೊಂಡು ರೈತರಿಗೆ, ದೀನರಿಗೆ, ದಲಿತರಿಗೆ ನೀಡಿದ ಸೇವೆ ಅವಿಸ್ಮರಣೀಯ

nanjegowda Nanjunda column
Profile Ashok Nayak January 18, 2025

Source : Vishwavani Daily News Paper

ತನ್ನಿಮಿತ್ತ

ನಂಜೇಗೌಡ ನಂಜುಂಡ

ಇಂದು ಶ್ರೀಗಳ 80ನೇ ಜಯಂತ್ಯುತ್ಸವ

ರಾಷ್ಟ್ರ ಕಂಡ ಮಾನವೀಯ ಹೃದಯದ ಮಾತೃ ಸಂತ, ಬಡವರ, ನಿರ್ಗತಿಕರ, ನೊಂದವರ ಪಾಲಿನ ಆರಾಧ್ಯಧೈವ ಶ್ರೀಬಾಲಗಂಗಾಧರನಾಥ ಮಹಾಸ್ವಾಮೀಜಿಯವರು. ನಾಥ ಸಂಪ್ರ ದಾಯದ ಮೂಲಕ ಸನಾತನ ಸಂಸ್ಕೃತಿಯನ್ನು ಪ್ರಕಾಶಮಾನಗೊಳಿಸಿದ ಶತಮಾನದ ಸಂತ ಬಾಲಗಂಗಾಧರನಾಥ ಮಹಾಸ್ವಾಮೀಜಿ ಯವರು ಅನ್ನ, ಅಕ್ಷರ, ಆರೋಗ್ಯ ಕ್ಷೇತ್ರ ವನ್ನು ತಮ್ಮ ಮೂಲ ಮಂತ್ರವಾಗಿಸಿಕೊಂಡು ರೈತರಿಗೆ, ದೀನರಿಗೆ, ದಲಿತರಿಗೆ ನೀಡಿದ ಸೇವೆ ಅವಿಸ್ಮರಣೀಯ.

ಶ್ರೀಗಳು ಕುವೆಂಪು ಅವರಂತೆ ವಿಶ್ವಮಾನವ ಪರಿಕಲ್ಪನೆಯನ್ನು, ಬಸವಣ್ಣನವರಂತೆ ಸರ್ವ ರಿಗೂ ಸಮಬಾಳು ಮತ್ತು ಮದರ್ ಥೆರೆಸಾ ಅವರಂತೆ ಮಾತೃ ಹೃದಯದ ಸೇವಕರಾಗಿ ಸರ್ವರಿಗೂ ಸೇವೆ ಸಲ್ಲಿಸಿದ ಕೀರ್ತಿ ಪಡೆದುಕೊಂಡಿದ್ದಾರೆ.

ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಎಪ್ಪತ್ತೆರಡನೇ ಪೀಠಾಧ್ಯಕ್ಷರಾಗಿದ್ದ ಜಗದ್ಗುರುಗಳಾದ ಪದ್ಮಭೂಷಣ ಡಾ. ಶ್ರೀಬಾಲಗಂಗಾಧರನಾಥ ಮಹಾಸ್ವಾಮಿಗಳವರು ನಿಷ್ಕಾಮ ಕರ್ಮಯೊಗಿಗಳು. ಶ್ರೀಮಠದ ಸಿದ್ಧಸಿಂಹಾಸನವನ್ನೇರಿದ ಆ ಅಮೃತ ಘಳಿಗೆ ಹೊಸ ಮನ್ವಂತರಕ್ಕೆ ನಾಂದಿಯಾಯಿತು.

ಭೈರವನ ಭಕ್ತರಿಗಷ್ಟೆ ಸೀಮಿತವಾಗಿದ್ದ ಶ್ರೀಕ್ಷೇತ್ರವನ್ನು ಕೇವಲ ಮೂರೂವರೆ ದಶಕಗಳಲ್ಲಿ ಮಹಾಕ್ಷೇತ್ರವನ್ನಾಗಿಸಿದ್ದು ವಿಶೇಷ. ತ್ರಿವಿಧ ದಾಸೊಹಿಗಳೆಂದೇ ಜನಮಾನಸದಲ್ಲಿ ನೆಲೆ ಯಾಗಿರುವ ಸ್ವಾಮಿಗಳವರು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಹತ್ತು ಹಲವು ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಸೇವೆಗೈದಿದ್ದಾರೆ. ಶ್ರೀಗಳು ಭಿಕ್ಷಾಟನೆ ಮತ್ತು ಬರಿಗಾಲಿನಲ್ಲಿ ನಡೆಯುವ ಮೂಲಕ ಚುಂಚನ ಗಿರಿ ಬೆಟ್ಟವನ್ನು ಪುಣ್ಯ ಕ್ಷೇತ್ರವನ್ನಾಗಿ ಮಾಡಿದ್ದರು.

ಅಪ್ರತಿಮ ಶಿಕ್ಷಣ ಪ್ರೇಮಿ

Education is the most powerful weapon. which you can use to change the world ಎನ್ನುವಂತೆ ಬಾಲಗಂಗಾಧರನಾಥ ಸ್ವಾಮಿಗಳು ಪ್ರಾರಂಭದ ದಿನಗಳಲ್ಲಿ ಎಲ್ಲೂ ದೇವಾ ಲಯಗಳನ್ನು ಕಟ್ಟಲಿಲ್ಲ. ಜ್ಞಾನಪ್ರಸಾರದಿಂದ ಮಾತ್ರ ಸಮಾಜದ ಉನ್ನತಿ ಸಾಧ್ಯ ಎಂದ ರಿತು ಶಿಕ್ಷಣ ಕ್ಷೇತ್ರವನ್ನು ಆರಿಸಿಕೊಂಡರು.

ಗ್ರಾಮಿಣ ಜನತೆ ಉದ್ಧಾರವಾಗಬೇಕಾದರೆ ಮೊದಲು ಆ ಪ್ರದೇಶದ ಬಡಮಕ್ಕಳು ವಿದ್ಯಾ ವಂತರಾಗಬೇಕು ಎಂಬ ದೃಷ್ಟಿಯಿಂದ ಹಳ್ಳಿಹಳ್ಳಿಗಳಲ್ಲೂ ವಿದ್ಯಾಸಂಸ್ಥೆಗಳನ್ನು ತೆರೆದರು.

ನಾಡಿನಾದ್ಯಂತ 550ಕ್ಕೂ ಹೆಚ್ಚು ಶಾಲಾ ಕಾಲೇಜುಗಳನ್ನು, ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದರು. ಇಂದು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿವರ್ಷ 1.45 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಾರೆ, ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿದ್ದಾರೆ.

ಗೋಮಾತೆಯ ಆರಾಧಕರು

ರೈತಾಪಿವರ್ಗದ ನೋವನ್ನು ಹತ್ತಿದಿಂದ ಕಂಡ ಶ್ರೀಗಳು, ಬರಪೀಡಿತ ಪ್ರದೇಶಗಳಿಂದ ಜಾನುವಾರುಗಳು ಕಸಾಯಿಖಾನೆಗೆ ಹೊಗುವುದನ್ನು ತಪ್ಪಿಸಲು ಮಂಡ್ಯ, ಬೆಂಗಳೂರು ಮತ್ತು ಚಿತ್ರದುರ್ಗಗಳಲ್ಲಿ ಅತ್ಯಾಧುನಿಕ ಗೊಶಾಲೆಗಳನ್ನು ತೆರೆದರು. ಅನಾಥ ಮತ್ತು ಅಂಧ ಮಕ್ಕಳು ಮಹಾ ಪೋಷಕರು ಶ್ರೀಗಳು ತಮ್ಮ ಜೀವನದಲ್ಲಿ ಕಂಡ ಹಸಿವು, ನೋವು, ಅವಮಾನಗಳು ಮುಂದೆ ಅಂಧಮಕ್ಕಳ ವಸತಿ ಶಾಲೆ, ಅನಾಥಾಲಯ, ವೃದ್ಧಾಶ್ರಮ, ಮಹಿಳಾ ಸೇವಾಶ್ರಮಗಳನ್ನು ಸ್ಥಾಪಿಸಲು ನೆರವಾದವು ಅಪ್ಪಟ ಪರಿಸರ ಪ್ರೇಮಿಗಳು

ಸ್ವಾಮಿ ಗಳವರು ಪರಿಸರ ಸಂರಕ್ಷಣೆಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.

ಮಾತ್ರವಲ್ಲದೆ, ತಮ್ಮ ಅಧ್ಯಕ್ಷತೆಯಲ್ಲಿ ನಾಡಿನ ವಿವಿಧ ಮಠಾಧಿಪತಿಗಳು ಹಾಗೂ ಧರ್ಮ ಗುರು ಗಳನ್ನೊಳಗೊಂಡ ಕರ್ನಾಟಕ ವನಸಂವರ್ಧನ ಟ್ರ(ರಿ.) ರಚಿಸಿ, ತನ್ಮೂಲಕ ನಾಡಿನ ಐದು ಕೊಟಿ ಜನಸಂಖ್ಯೆಗೆ ಅನುಗುಣವಾಗಿ ಐದು ಕೊಟಿಗೂ ಹೆಚ್ಚು ಸಸಿಗಳನ್ನು ನೆಟ್ಟು ವನ ಸಂವರ್ಧನೆಗೆ ನೀಡಿದ ಕೊಡುಗೆ ಅನುಪಮವಾದುದು.

ಧರ್ಮ ಪ್ರಭುಗಳು

ಚಿತ್ರದುರ್ಗದ ಶ್ರೀಕಬೀರಾನಂದಾ ಶ್ರಮ, ಹಿರಿಯೂರಿನ ಆದಿಜಾಂಬವಮಠ, ಪಟ್ಟ ನಾಯಕನ ಹಳ್ಳಿಯ ಶ್ರೀಗುರುಗುಂಡ ಬ್ರಹ್ಮಾಂಡೇಶ್ವರ ಮಠ, ಮಳವಳ್ಳಿಯ ಶ್ರೀರಾಮಾ ರೂಢ ಮಠ, ಬೆಂಗಳೂರಿನ ಶ್ರೀಗೊಸಾಯಿ ಮಠ ಮುಂತಾದ ಹಿಂದುಳಿದ ವರ್ಗಗಳ ಮಠಗಳ ಸ್ಥಾಪನೆಯಲ್ಲಿ, ಹಾಗೂ ಆ ಮಠಗಳಿಗೆ ಗುರುಗಳನ್ನು ನೇಮಿಸುವಲ್ಲಿ ಶ್ರೀಬಾಲ ಗಂಗಾಧರನಾಥ ಮಹಾಸ್ವಾಮಿಗಳು ನೀಡಿದ ಸಹಕಾರ, ಪ್ರೋತ್ಸಾಹ ಸ್ಮರಣಾರ್ಹ. ಮಾತೃ ಹೃದಯದ ಸಂತ ತಮಿಳುನಾಡಿನಲ್ಲಿ ಸುನಾಮಿ ಬಂದಾಗ, ಗುಲ್ಬರ್ಗ ಮುಂತಾದೆಡೆ ನೆರೆ ಹಾವಳಿ ಸಂಭವಿಸಿದಾಗ, ಶಿವಮೊಗ್ಗದಲ್ಲಿ ಉಂಟಾದ ಕಾಡ್ಗಿಚ್ಚಿನಿಂದ ಜನತೆ ತೊಂದರೆಗೆ ಸಿಲುಕಿದಾಗ, ಉತ್ತರ ಕರ್ನಾಟಕ ಜನತೆ ನೆರೆಹಾವಳಿಯಿಂದ ತತ್ತರಿಸಿ ನೆಲೆ ಕಳೆದು ಕೊಂಡಾಗ ಹೀಗೆ ಜನತೆ ತೊಂದರೆಗೊಳಗಾದಾಗಲೆಲ್ಲ ಶ್ರೀಮಠದಿಂದ ತಕ್ಷಣವೇ ಸ್ಪಂದಿಸಿ ದ್ದರು; ತಾವೇ ಸ್ವತಃ ಹೊಗಿ ಸಂಕಷ್ಟಕ್ಕಿಡಾದವರಿಗೆ ನೆರವು ನೀಡುವ ಮೂಲಕ ಮಾನವೀ ಯತೆ ಮೆರೆದಿದ್ದರು.

ಶ್ರೀಬಾಲಗಂಗಾಧರನಾಥರು ಸಕಲ ಮಾನವ ಕುಲಕ್ಕೆ ಲೇಸನೇ ಬಯಸಿದ ಮಹಾನ್ ಮಾನವತಾವಾದಿ. ಸಮುದಾಯದ ಕಾವಲುಗಾರರು ಸ್ವಾಮೀಜಿಯವರು ರೈತರು, ಹಿಂದು ಳಿದ ವರ್ಗದ ಜನ ರೊಂದಿಗೆ ನಿಂತು ನ್ಯಾಯಕ್ಕಾಗಿ ಹೋರಾಡಿದ್ದಾರೆ ಮತ್ತು ಸ್ವಾಮೀಜಿ ಗಳು ರೈತರ ಕಲ್ಯಾಣಕ್ಕಾಗಿ ತಮ್ಮ ಇಡೀ ಜೀವನವನ್ನು ತ್ಯಾಗ ಮಾಡಿದ್ದಾರೆ.

ನಿತ್ಯ ದಾಸೋಹಿ

ಸ್ವಾಮೀಜಿ ಭಿಕ್ಷೆ ಬೇಡುವ ಮೂಲಕ ಬರಿಗಾಲಿನಲ್ಲಿ ತಿರುಗಾಡುವ ಮೂಲಕ ಆದಿ ಚುಂಚನಗಿರಿ ಮಠವನ್ನು ನಿರ್ಮಿಸಿದರು. ಸ್ವಾಮೀಜಿಯವರಿಗೆ ಹಸಿವಿನ ನೋವು ಗೊತ್ತಿತ್ತು, ಆದ್ದರಿಂದ ಶ್ರೀಗಳು ಬಡ ಮಕ್ಕಳ ಅನಾಥರಿಗೆ ಜಾತಿ-ಧರ್ಮದ ಭೇದವಿಲ್ಲದೆ ಉಚಿತ ಹಾಸ್ಟೆಲ್‌ಗಳನ್ನು ಪ್ರಾರಂಭಿಸಿದರು. ಇಂದಿಗೂ ಚುಂಚನಗಿರಿ ಮಹಾಸಂಸ್ಥಾನ ಮಠದಿಂದ ವಿದ್ಯಾರ್ಥಿಗಳಿಗೆ, ಭಕ್ತರಿಗೆ ಉಚಿತ ಊಟ ನೀಡಲಾಗುತ್ತಿದೆ.

ಸನಾತನ ಸಂಸ್ಕೃತಿಯ ಪರಿಪಾಲಕರು

ಶ್ರೀಗಳು ನಾಥ ಸಂಪ್ರದಾಯದ ಪರಿಪಾಲನೆಯ ಜೊತೆಗೇ, ಸನಾತನ ದರ್ಮದ ಸಂಸ್ಕಾರ ಗಳನ್ನು ತಿಳಿಸಲು ಇಂದಿನ ಯುವ ಜನಾಂಗಕ್ಕೆ ಹಲವು ಕಾರ್ಯಕ್ರಮಗಳ ಮೂಲಕ ದೇಶದ ಸಂಸ್ಕೃತಿ, ಪರಂಪರೆಗಳನ್ನು ತಿಳಿಸಿದಾರೆ, ದರ್ಮದ ಪ್ರವರ್ಧನೆಯಾಗಿ ಶ್ರೀಗಳು ಹಲವಾರು ಉಪ ಶಾಖೆಗಳನ್ನು ತೆರೆದರು.

ಶ್ರೀಗಳಿಗೆ ಸಿಕ್ಕ ಗೌರವ ಪುರಸ್ಕಾರಗಳು ಶ್ರೀಗಳ ಮಾನವೀಯ ಮೌಲ್ಯದ ಸೇವೆಗಳನ್ನ ಗುರುತಿಸಿ ಕೇಂದ್ರ ಸರಕಾರವು ಪದ್ಮ ವಿಭೂಷಣವನ್ನು ನೀಡಿ ಗೌರವನ್ನು ಸಮರ್ಪಿಸಿದೆ, ಅದೇ ರೀತಿಯಲ್ಲಿ ಚಿಕಾಗೊ ಧರ್ಮ ಸಂಸತ್ತಿನಿಂದ ಅಭಿನವ ವಿವೇಕಾನಂದ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ ಪರಿಸರ ರತ್ನ ಪ್ರಶಸ್ತಿ, ಜೈನ ಸಮಾಜದಿಂದ ವಿದ್ಯಾ ರತ್ನ ಪ್ರಶಸ್ತಿ, ನಿವಾರಣಾ ಸಂಸ್ಥೆಯಿಂದ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಹೆಮ್ಮೆಯಿಂದ ಗೌರವಿಸಿವೆ.

(ಲೇಖಕರು: ಸಂಸ್ಥಾಪಕ ಅಧ್ಯಕ್ಷರು -ಒಕ್ಕಲಿಗ ಯುವ ಬ್ರಿಗೇಡ್)

ಇದನ್ನೂ ಓದಿ: Harish Kera Column: ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ !

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ