ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶೀಘ್ರದಲ್ಲೇ ರದ್ದಾಗಲಿದೆ 1.58 ಕೋಟಿ ಪಡಿತರ ಚೀಟಿ; ಯಾಕೆ ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

Ration Card verification: ದೇಶಾದ್ಯಂತ ಬಳಸದೇ ಇರುವ ಸುಮಾರು 1.58 ಕೋಟಿ ಪಡಿತರ ಚೀಟಿಗಳು ಅಕ್ಟೋಬರ್‌ನಿಂದ ರದ್ದಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಪಡಿತರ ಚೀಟಿಯ ದತ್ತಾಂಶವನ್ನು ಪರಿಷ್ಕರಿಸಲು ಪ್ರಾರಂಭಿಸಿದೆ. ಈ ಮೂಲಕ ನಿಷ್ಕ್ರಿಯ, ನಕಲಿ, ಅನುಮಾನಾಸ್ಪದ ಫಲಾನುಭವಿಗಳನ್ನು ಪಟ್ಟಿಯಿಂದ ತೆಗೆದು ಹಾಕಲು ನಿರ್ಧರಿಸಿದೆ.

ನಿಷ್ಕ್ರಿಯ ಪಡಿತರ ಚೀಟಿ ರದ್ದು: ಕೇಂದ್ರದಿಂದ ನಿರ್ಧಾರ

ಸಂಗ್ರಹ ಚಿತ್ರ -

ನವದೆಹಲಿ: ದೇಶಾದ್ಯಂತ ಪಡಿತರ ಚೀಟಿಯ ಪರಿಷಕರಣೆ (Ration Card verification) ಕಾರ್ಯ ನಡೆಯುತ್ತಿದೆ. ಕಳೆದ ಆರು ತಿಂಗಳಿನಿಂದ ಪಡಿತರ ಚೀಟಿಗಳನ್ನು ಬಳಸದೇ ಇರುವ ಸುಮಾರು 1.58 ಕೋಟಿ ಪಡಿತರ ಚೀಟಿಗಳು ಅಕ್ಟೋಬರ್‌ ತಿಂಗಳಿನಿಂದ ರದ್ದಾಗಲಿದೆ ಎಂದು ಕೇಂದ್ರ ಸರ್ಕಾರ (central govt) ತಿಳಿಸಿದೆ. ಒಮ್ಮೆ ರದ್ದುಗೊಂಡ ಪಡಿತರ ಚೀಟಿಗಳನ್ನು ಮರುಸಕ್ರಿಯಗೊಳಿಸಲು, ಅರ್ಹತೆಯನ್ನು ದೃಢೀಕರಿಸಿಕೊಳ್ಳಲು ಫಲಾನುಭವಿಗಳಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಇ ಕೆವೈಸಿ (ration card ekyc) ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ ಎಂದು ಹೇಳಿದೆ.

ಪಡಿತರ ಚೀಟಿಯಲ್ಲಿನ ದತ್ತಾಂಶಗಳನ್ನು ಪರಿಷ್ಕರಿಸಲಾಗುತ್ತಿದೆ. ಈ ಮೂಲಕ ನಿಷ್ಕ್ರಿಯ, ನಕಲಿ ಮತ್ತು ಅನುಮಾನಾಸ್ಪದ ಫಲಾನುಭವಿಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಪರಿಷ್ಕರಣೆ ವೇಳೆ ತಕ್ಷಣವೇ ಹೆಸರನ್ನು ತೆಗೆದು ಹಾಕಲಾಗುವುದಿಲ್ಲ. ಆರಂಭದಲ್ಲಿ ಅವರ ಪಡಿತರ ಚೀಟಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ತಾವು ನಿಜವಾದ ಫಲಾನುಭವಿಗಳೆಂದು ಸಾಬೀತುಪಡಿಸಲು ಅವರಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ ಪಡಿತರ ಚೀಟಿ ಮರುಸಕ್ರಿಯಗೊಳಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಫ್ರಾನ್ಸ್ ಶಿಕ್ಷಣ ಸಚಿವರಿಗೆ 'ಬಿದ್ರಿವೇರ್' ಉಡುಗೊರೆ; ಬೀದರ್‌ನ ಐತಿಹಾಸಿಕ ಕಲೆಯ ಹಿರಿಮೆ ಹೆಚ್ಚಿಸಿದ ಸಚಿವ ಜೋಶಿ

ಸುಮಾರು ಆರು ತಿಂಗಳುಗಳಿಂದ ಯಾವುದೇ ಆಹಾರ ಧಾನ್ಯ ಪಡೆಯದೇ ಇರುವ ಪಡಿತರ ಚೀಟಿಗಳನ್ನೂ ಗುರುತಿಸಲಾಗಿದೆ. ಇವುಗಳನ್ನು ಮರು ಸಕ್ರಿಯಗೊಳಿಸಲು ಮೂರು ತಿಂಗಳ ಕಾಲಾವಕಾಶವನ್ನು ನೀಡಲಾಗಿದೆ. ತಿದ್ದುಪಡಿ ಮಾಡಲಾಗದ ಇಂತಹ ಚೀಟಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶಿಸಿರುವ ಕೇಂದ್ರ ಸರ್ಕಾರ ಕ್ಷೇತ್ರ ಮಟ್ಟದ ಪರಿಶೀಲನೆ ಮತ್ತು ಮೂರು ತಿಂಗಳೊಳಗೆ ಇ-ಕೆವೈಸಿ ಪ್ರಕ್ರಿಯೆ ನಡೆಸಿ ಅಂತಿಮ ನಿರ್ಣಯ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದೆ.

ನೈಜ್ಯ ಫಲಾನುಭವಿಗಳಿಗೆ ಆಹಾರ ಧಾನ್ಯಗಳು ತಲುಪುವುದನ್ನು ಖಚಿತ ಪಡಿಸಿಕೊಳ್ಳಲು ದತ್ತಾಂಶದ ಪರಿಷ್ಕರಣೆ ಅಗತ್ಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದ್ದು, ಇದನ್ನು ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ರಾಜೇಂದ್ರನ್ ನಾರಾಯಣನ್ ಪ್ರಶ್ನಿಸಿದ್ದಾರೆ.

ಒಬ್ಬ ವ್ಯಕ್ತಿಯ ಹೆಸರನ್ನು ತೆಗೆದುಹಾಕಿ ಬಳಿಕ ಇ-ಕೆವೈಸಿ ಅಥವಾ ಅಂತಹ ವಿಧಾನಗಳ ಮೂಲಕ ವ್ಯವಸ್ಥೆಗೆ ಮರುಸೇರ್ಪಡೆಯಾಗುವಂತೆ ಕೇಳುವ ಈ ಪ್ರಕ್ರಿಯೆಯು ಹೊಣೆಗಾರಿಕೆಯ ಹೊರೆಯನ್ನು ಸರ್ಕಾರದ ಬದಲಿಗೆ ನಾಗರಿಕರ ಮೇಲೆ ಹೊರಿಸುವ ಕ್ರಮವಾಗಿದೆ ಎಂದು ಅವರು ಹೇಳಿದ್ದಾರೆ.

ಯಾರು ಪಡಿತರ ಪಡೆಯುತ್ತಿದ್ದಾರೆ ಎಂಬುದರ ಕುರಿತು ನಿರಂತರ ಮೌಲ್ಯಮಾಪನ ಮುಖ್ಯ. ಆದರೆ ಇದು ಪಂಚಾಯತ್ ಮಟ್ಟದ ಸಮಿತಿಗಳ ಮೂಲಕ ಕೆಳಗಿನಿಂದ ಮೇಲ್ಮುಖವಾಗಿರುವ ಪ್ರಕ್ರಿಯೆಯಾಗಿ ನಡೆಯಬೇಕು. ಒಬ್ಬ ವ್ಯಕ್ತಿಯು ಪಡಿತರವನ್ನು ಏಕೆ ನಿಲ್ಲಿಸಿದ್ದಾನೆ ಎಂಬುದರ ತನಿಖೆಯಾಗಬೇಕು. ಅದಕ್ಕಾಗಿ ಸಮಿತಿಗಳನ್ನು ಸ್ಥಾಪಿಸಬೇಕು. ಅದರ ಬದಲು ಮೊದಲು ಹೆಸರು ಅಳಿಸಿ ಹಾಕಿ ಅನಂತರ ರಾಜ್ಯದ ತಾಂತ್ರಿಕ ಅವಶ್ಯಕತೆಗಳಿಗೆ ಅನುಗುಣವಾಗಿ ನಾಗರಿಕರ ಮೇಲೆ ಹೊಣೆಗಾರಿಕೆಯನ್ನು ಹೇರುವುದು ಅನ್ಯಾಯವಾಗಿದೆ ಎಂದು ಅವರು ಹೇಳಿದ್ದಾರೆ.

ತೃಣಮೂಲ vs ತೃಣಮೂಲ ಚಿಹ್ನೆ ವಿವಾದ: ಚುನಾವಣಾ ಆಯೋಗಕ್ಕೆ 3 ತಿಂಗಳ ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್

2024ರಲ್ಲಿ ಆಹಾರ ಸಚಿವಾಲಯವು ಇಂತಹ ಪರಿಷ್ಕರಣೆ ನಡೆಸಿ ಸುಮಾರು 58 ಮಿಲಿಯನ್ ಪಡಿತರ ಚೀಟಿಗಳನ್ನು ತೆಗೆದು ಹಾಕಿತ್ತು. ಇದೀಗ ಮತ್ತೆ ಸರ್ಕಾರವು ಇ-ಕೆವೈಸಿಯನ್ನು ನಡೆಸಲು ಜನರನ್ನು ಒತ್ತಾಯಿಸುತ್ತಿದೆ ಎಂದು ಅವರು ಹೇಳಿದ್ದಾರೆ.