ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

TB-free: 'ಕ್ಷಯ ಮುಕ್ತ' ಕ್ಕಾಗಿ ದೆಹಲಿಯಲ್ಲಿ ಕರ್ನಾಟಕ, ಕೇರಳ ಸಂಸದರ ಸಭೆ: ಧಾರವಾಡ ಜಿಲ್ಲೆಯಲ್ಲಿ 72 ಗ್ರಾ.ಪಂ.ಗಳು 'ಕ್ಷಯ ಮುಕ್ತ'

ಕೇಂದ್ರ ಸರ್ಕಾರದ ಬದ್ಧತೆ ಹಾಗೂ ಜಿಲ್ಲಾಡಳಿತದ ಸತತ ಶ್ರಮದಿಂದಾಗಿ ಧಾರವಾಡ ಜಿಲ್ಲೆ ಸಂಪೂರ್ಣ ಕ್ಷಯ ರೋಗ ಮುಕ್ತವಾಗುತ್ತ ದಾಪುಗಾಲಿರಿಸಿದೆ. 130 ದಿನಗಳಲ್ಲಿ 161 ಎಕ್ಸ್-ರೇ ಶಿಬಿರಗಳನ್ನು ಆಯೋಜಿಸಿ, 7,800ಕ್ಕೂ ಹೆಚ್ಚು ಜನರ ತಪಾಸಣೆ ನಡೆಸಲಾಗಿದೆ. 2026ರ ಜನವರಿ-ಜುಲೈ ಅವಧಿಯಲ್ಲಿ ನಿಗದಿತ ಗುರಿ ಮೀರಿ ಶೇ.124ರಷ್ಟು (43,840 ಜನರು) ಸ್ಕ್ರೀನಿಂಗ್ ಮಾಡಲಾಗಿದೆ. ಜಿಲ್ಲೆಯಲ್ಲಿ ಚಿಕಿತ್ಸೆಯ ಯಶಸ್ಸಿನ ಪ್ರಮಾಣ ಸದ್ಯ ಶೇ.88 ರಷ್ಟಿದೆ

ಧಾರವಾಡ ಜಿಲ್ಲೆಯಲ್ಲಿ 72 ಗ್ರಾ.ಪಂ.ಗಳು 'ಕ್ಷಯ ಮುಕ್ತ'

-

Profile
Ashok Nayak Aug 12, 2026 10:12 AM

ನವದೆಹಲಿ: ತಮ್ಮ ಲೋಕಸಭಾ ಕ್ಷೇತ್ರ ಧಾರವಾಡ ಕ್ಷಯ ರೋಗ ನಿರ್ಮೂಲನೆಯಲ್ಲಿ ಮಹತ್ವದ ಪ್ರಗತಿ ಸಾಧಿಸುತ್ತಿದೆ ಎಂದ ಧಾರವಾಡ ಸಂಸದರೂ ಆಗಿರುವ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ, 2023ರಲ್ಲಿ ಕೇವಲ ಎರಡೇ ಕ್ಷಯ ಮುಕ್ತ ಗ್ರಾಮ ಪಂಚಾ ಯಿತಿಗಳ ಸಂಖ್ಯೆಯಿತ್ತು. ಈಗ 2025ರ ವೇಳೆಗೆ 72 ಗ್ರಾಮ ಪಂಚಾಯಿತಿಗಳು ಕ್ಷಯ ಮುಕ್ತವಾಗಿವೆ. ಈ ಮೂಲಕ ತಮ್ಮ ಧಾರವಾಡ ಜಿಲ್ಲೆಯಲ್ಲಿ ಚಿಕಿತ್ಸೆ ಶೇ.88ರಷ್ಟು ಪ್ರಗತಿ ಸಾಧಿಸಿದೆ ಎಂದು ಗಮನ ಸೆಳೆದರು.

ಕ್ಷಯ ರೋಗ ನಿರ್ಮೂಲನೆ ಕುರಿತಂತೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ(Union Health Minister J P Nadda) ಅವರ ಸಮ್ಮುಖದಲ್ಲಿ ಕರ್ನಾಟಕ ಮತ್ತು ಕೇರಳ ಸಂಸದರೊಂದಿಗೆ ಮಹತ್ವದ ಸಮಾಲೋಚನೆ ಸಭೆ ನಡೆಸಲಾಗಿದೆ.

ಸಭೆಯಲ್ಲಿ ಸಚಿವ ಪ್ರಲ್ಹಾದ ಜೋಶಿ(Pralhad Joshi), 'ಕ್ಷಯ ಮುಕ್ತ ಭಾರತಕ್ಕಾಗಿ ಜನಾಂದೋಲನ ರೂಪುಗೊಂಡಿದ್ದು, ನಿರ್ಮೂಲನೆಯಲ್ಲಿ ತಮ್ಮ ಧಾರವಾಡ ಜಿಲ್ಲೆ ಮಹತ್ತರ ಪ್ರಗತಿ ಸಾಧಿಸು ತ್ತಿದ್ದು, 72 ಗ್ರಾಮ ಪಂಚಾಯ್ತಿಗಳು ಟಿಬಿ ಮುಕ್ತ ಗ್ರಾಮ ಪಂಚಾಯ್ತಿಗಳಾಗಿವೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಬದ್ಧತೆ ಹಾಗೂ ಜಿಲ್ಲಾಡಳಿತದ ಸತತ ಶ್ರಮದಿಂದಾಗಿ ಧಾರವಾಡ ಜಿಲ್ಲೆ ಸಂಪೂರ್ಣ ಕ್ಷಯ ರೋಗ ಮುಕ್ತವಾಗುತ್ತ ದಾಪುಗಾಲಿರಿಸಿದೆ. 130 ದಿನಗಳಲ್ಲಿ 161 ಎಕ್ಸ್-ರೇ ಶಿಬಿರಗಳನ್ನು ಆಯೋಜಿಸಿ, 7,800ಕ್ಕೂ ಹೆಚ್ಚು ಜನರ ತಪಾಸಣೆ ನಡೆಸಲಾಗಿದೆ. 2026ರ ಜನವರಿ-ಜುಲೈ ಅವಧಿಯಲ್ಲಿ ನಿಗದಿತ ಗುರಿ ಮೀರಿ ಶೇ.124ರಷ್ಟು (43,840 ಜನರು) ಸ್ಕ್ರೀನಿಂಗ್ ಮಾಡಲಾಗಿದೆ. ಜಿಲ್ಲೆಯಲ್ಲಿ ಚಿಕಿತ್ಸೆಯ ಯಶಸ್ಸಿನ ಪ್ರಮಾಣ ಸದ್ಯ ಶೇ.88 ರಷ್ಟಿದೆ ಎಂದು ತಿಳಿಸಿದರು.

Health 2

ಟಿಬಿ ಮುಕ್ತ ಗುರಿ ತಲುಪಲು 'ನಿಕ್ಷಯ್ ಮಿತ್ರ' (Ni-kshay Mitra) ಯೋಜನೆ ಮೂಲಕ ರೋಗಿಗಳಿಗೆ ಪೌಷ್ಟಿಕಾಂಶದ ಬೆಂಬಲ ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಆಶಯದಂತೆ "ಕ್ಷಯ ಮುಕ್ತ ಭಾರತ"ದ ಕನಸನ್ನು ಸಾಕಾರಗೊಳಿಸಲು ಹಾಗೂ ನಮ್ಮ ಧಾರವಾಡ ಲೋಕಸಭಾ ಕ್ಷೇತ್ರದ ಪ್ರತಿಯೊಬ್ಬ ನಾಗರಿಕನಿಗೂ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸಲು ಸದಾ ಬದ್ಧರಾಗಿದ್ದೇವೆ ಪ್ರಲ್ಹಾದ ಜೋಶಿ ಭರವಸೆ ವ್ಯಕ್ತಪಡಿಸಿದರು.

ಆರೋಗ್ಯ ಸಚಿವ ಜೆಪಿ ನಡ್ಡಾ ಅವರ ನೇತೃತ್ವದಲ್ಲಿ ಕ್ಷಯ ನಿರ್ಮೂಲನೆ ಕುರಿತು ಕರ್ನಾಟಕ ಮತ್ತು ಕೇರಳ ಸಂಸದರೊಂದಿಗೆ ಮಹತ್ವದ ಸಮಾಲೋಚನೆ ಸಹ ನಡೆಸಲಾಯಿತು.

ಕ್ಷಯ ರೋಗ ಚಿಕಿತ್ಸೆಗೆ ಸಂಬಂಧಿಸಿದಂತೆ ಸ್ವದೇಶಿ ಸಂಶೋಧನೆ, AI ಆಧಾರಿತ ತಪಾಸಣೆ ಹಾಗೂ ರೋಗಿಗಳಿಗೆ ಉತ್ತಮ ಆಧುನಿಕ ಚಿಕಿತ್ಸೆ ಸೌಲಭ್ಯ ಕಲ್ಪಿಸುವ ಮೂಲಕ ಟಿಬಿ ಮುಕ್ತ ಭಾರತದ ಧ್ಯೇಯಕ್ಕೆ ಎರೆಡೂ ರಾಜ್ಯಗಳ ಸಂಸದರು ಸಂಕಲ್ಪ ಮಾಡಿದರು.

ಸಭೆಯಲ್ಲಿ ಕೇಂದ್ರದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಸುರೇಶ್ ಗೋಪಿ, ಅನುಪ್ರಿಯ ಪಟೇಲ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.