ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bihar Assembly Election: ವಿಧಾನಸಭೆ ಚುನಾವಣೆ: ಬಿಹಾರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಭರ್ಜರಿ ರ‍್ಯಾಲಿ

Pralhad Joshi: ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಶುಕ್ರವಾರ ಸೀತಾಮರ್ಹಿಯಲ್ಲಿ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸೇರಿ ಬಿಜೆಪಿ ಅಭ್ಯರ್ಥಿಗಳ ಪರ ಬೃಹತ್‌ ರ‍್ಯಾಲಿ ನಡೆಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ವಿಧಾನಸಭೆ ಚುನಾವಣೆ: ಬಿಹಾರಲ್ಲಿ ಪ್ರಲ್ಹಾದ್‌ ಜೋಶಿ ಭರ್ಜರಿ ರ‍್ಯಾಲಿ

-

Profile Siddalinga Swamy Oct 17, 2025 10:41 PM

ನವ ದೆಹಲಿ: ಬಿಹಾರ ವಿಧಾನಸಭೆ ಚುನಾವಣೆ (Bihar Assembly Election) ರಂಗೇರುತ್ತಿದ್ದು, ಬಿಜೆಪಿಯ ಧೀಮಂತ ನಾಯಕರು ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಶುಕ್ರವಾರ ಸೀತಾಮರ್ಹಿಯಲ್ಲಿ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸೇರಿ ಬಿಜೆಪಿ ಅಭ್ಯರ್ಥಿಗಳ ಪರ ಬೃಹತ್‌ ರ‍್ಯಾಲಿ ನಡೆಸಿದ್ದಾರೆ. ಬಿಹಾರ ಸಿಎಂ ನಿತೀಶ್‌ ಕುಮಾರ್‌, ರಾಜಸ್ಥಾನ ಮುಖ್ಯಮಂತ್ರಿ ಭಜನ್‌ ಲಾಲ್‌ ಶರ್ಮಾ, ಉತ್ತರಾಖಂಡ ಮತ್ತು ಗೋವಾ ಮುಖ್ಯಮಂತ್ರಿಗಳೊಡಗೂಡಿ ಬಿಹಾರದ ವಿವಿಧ ಕ್ಷೇತ್ರಗಳಲ್ಲಿ ಬಹಿರಂಗ ಸಭೆ ನಡೆಸಿ, ಎನ್‌ಡಿಎ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದ್ದಲ್ಲದೆ, ಸ್ಥಳೀಯ ಮುಖಂಡರುಗಳ ಜತೆ ಮಹತ್ವದ ಸಭೆ ಸಹ ನಡೆಸಿದ್ದಾರೆ.

ಬಿಹಾರದಲ್ಲಿ ರಾಜಕೀಯ ಕದನ ಜೋರಾಗಿ ನಡೆಯುತ್ತಿದೆ. ಶುಕ್ರವಾರ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರ ಸಮ್ಮುಖದಲ್ಲಿ ಬಿಜೆಪಿ ಪ್ರಚಾರ ಸಭೆ, ನಾಮಪತ್ರ ಸಲ್ಲಿಕೆ, ಸಾರ್ವಜನಿಕ ಸಭೆ ಜೋಶ್‌ ಪಡೆದಿತ್ತು. ಜೋಶಿ ಅವರು ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸೇರಿ ಮಹತ್ವದ ಸಭೆಗಳನ್ನು ನಡೆಸಿ ಚುನಾವಣಾ ಗೆಲುವಿಗೆ ರಣತಂತ್ರ ಹೆಣೆದಿದ್ದು, ಎನ್‌ಡಿಎ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರಲ್ಲಿ ಮತ್ತಷ್ಟು ಹುಮ್ಮಸ್ಸಿಗೆ ಕಾರಣವಾಗಿದೆ.

Bihar Assembly Election

ಸೀತಾಮರ್ಹಿಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿ ರ‍್ಯಾಲಿ ನಡೆಸಿದ ಸಚಿವ ಪ್ರಲ್ಹಾದ್‌ ಜೋಶಿ, ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಿದರಲ್ಲದೆ, ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿಗಳಿಗೆ ಸಾಥ್‌ ನೀಡಿದರು. ಬಿಹಾರದ ನೆಲದಲ್ಲಿ ನಿಂತು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಘರ್ಜಿಸಿದರು.‌

ಈ ಸುದ್ದಿಯನ್ನೂ ಓದಿ | Harsh Sanghavi: ಗುಜರಾತ್ ಉಪಮುಖ್ಯಮಂತ್ರಿಯಾಗಿ ಹರ್ಷ ಸಾಂಘವಿ ಪ್ರಮಾಣ ವಚನ

ಬಿಹಾರ ಚುನಾವಣೆ ಎದುರಿಸಲು ಬಿಜೆಪಿ ಸೈನ್ಯ ಸನ್ನದ್ಧವಾಗಿದೆ. ಎನ್‌ಡಿಎ ಐತಿಹಾಸಿಕ ಜನಾದೇಶ ಪಡೆದು ಮತ್ತೆ ಸರ್ಕಾರ ರಚಿಸಲಿದೆ. ಎನ್‌ಡಿಎ ಆಡಳಿತಾವಧಿಯಲ್ಲಿ ಬಿಹಾರ ಅಭಿವೃದ್ಧಿಯ ಹಾದಿಯಲ್ಲಿದೆ. ಜನರು ಬಿಜೆಪಿ ಬೆಂಬಲಿತ ಎನ್‌ಡಿಎ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದು, ಮತ್ತೆ ಗೆಲುವಿನ ಘೋಷ ಪ್ರತಿಧ್ವನಿಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.