ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bihar Election Result 2025: ವರ್ಕ್‌ಔಟ್‌ ಆಗಿಲ್ಲ ಪ್ರಶಾಂತ್‌ ಕಿಶೋರ್‌ ಮ್ಯಾಜಿಕ್‌; ಚುನಾವಣಾ ಚಾಣಕ್ಯ ಫ್ಲಾಪ್‌ ಆಗಿದ್ದೇಗೆ?

Prashant Kishore: ಬಿಹಾರದಲ್ಲಿ ನಡೆದ ಚುನಾವಣಾ ಫಲಿತಾಂಶ ಬಹುತೇಕ ಹೊರಬಿದ್ದಿದ್ದು, ಎನ್‌ಡಿಎ ಭರ್ಜರಿ ಗೆಲುವನ್ನು ಕಾಣುವ ನಿರೀಕ್ಷೆ ಹೆಚ್ಚಿದೆ. ಬಿಹಾರದಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಪ್ರಶಾಂತ್‌ ಕಿಶೋರ್‌ ಅವರ ಯಾವುದೇ ಟ್ರಿಕ್‌ ಫಲ ಕೊಟ್ಟಿಲ್ಲ. ಪ್ರಶಾಂತ್‌ ಕಿಶೋರ್‌ ಅವರು ಚುನಾವಣೆಗೆ ಸ್ಪರ್ಧೆ ಮಾಡದೇ ಇದ್ದರೂ 240 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು.

ವರ್ಕ್‌ಔಟ್‌ ಆಗಿಲ್ಲ ಪ್ರಶಾಂತ್‌ ಕಿಶೋರ್‌ ಮ್ಯಾಜಿಕ್‌

ಸಂಗ್ರಹ ಚಿತ್ರ -

Vishakha Bhat
Vishakha Bhat Nov 14, 2025 12:53 PM

ಪಟನಾ: ಬಿಹಾರದಲ್ಲಿ ನಡೆದ ಚುನಾವಣಾ ಫಲಿತಾಂಶ ಬಹುತೇಕ (Bihar Election Result 2025) ಹೊರಬಿದ್ದಿದ್ದು, ಎನ್‌ಡಿಎ (NDA) ಭರ್ಜರಿ ಗೆಲುವನ್ನು ಕಾಣುವ ನಿರೀಕ್ಷೆ ಹೆಚ್ಚಿದೆ. ಬಿಹಾರದಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಪ್ರಶಾಂತ್‌ ಕಿಶೋರ್‌ (Prashant Kishore) ಅವರ ಯಾವುದೇ ಟ್ರಿಕ್‌ ಫಲ ಕೊಟ್ಟಿಲ್ಲ. ಪ್ರಶಾಂತ್‌ ಕಿಶೋರ್‌ ಅವರು ಚುನಾವಣೆಗೆ ಸ್ಪರ್ಧೆ ಮಾಡದೇ ಇದ್ದರೂ 240 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು. ಆದರೆ ಒಂದು ಕಡೆಯೂ ಗೆಲುವನ್ನು ಸಾಧಿಸದೆ ಸೊನ್ನೆ ಸುತ್ತಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆ 2025ರಲ್ಲಿ ಪ್ರಶಾಂತ್ ಕಿಶೋರ್ ಅವರ ಪಕ್ಷ 'ಜನ ಸುರಾಜ್ ಪಾರ್ಟಿ ಕಮಾಲ್‌ ಮಾಡಬಹುದು ಎಂದು ಊಹಿಸಿದ್ದು ಸುಳ್ಳಾಗಿದೆ.

ಸಮೀಕ್ಷೆಗಳಲ್ಲಿ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಾರ್ಟಿ ಬಿಹಾರದ 243 ಸ್ಥಾನಗಳಲ್ಲಿ 5 ವಿಧಾನಸಭಾ ಕ್ಷೇತ್ರಗಳಲ್ಲಿ ಜಯ ಸಾಧಿಸಬಹುದು ಎಂದು ಊಹಿಸಲಾಗಿತ್ತು. ಆದರೆ ಇದೀಗ ಅದು ಸಂಪೂರ್ಣ ಹುಸಿಯಾಗಿದೆ. ಚುನಾವಣಾ ಚಾಣಕ್ಯ ಎಂದು ಹೆಸರುವಾಸಿಯಾಗಿದ್ದ ಪ್ರಶಾಂತ್‌ ಈ ಮೊದಲು ವಿವಿಧ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದರು. 2012 ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಯಶಸ್ವಿ ಪ್ರಚಾರಕ್ಕಾಗಿ ಭಾಗವಹಿಸುವುದರೊಂದಿಗೆ ಕಿಶೋರ್ ಅವರ ರಾಜಕೀಯ ಪ್ರವೇಶ ಪ್ರಾರಂಭವಾಯಿತು.

ಈ ಸುದ್ದಿಯನ್ನೂ ಓದಿ: Bihar Election Result 2025: ಬಿಹಾರದಲ್ಲಿ ಎನ್‌ಡಿಎ ‌ಗೆಲುವು: ಸಿಎಂ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್‌‌ ಏನು?

ಮೋದಿ ಜೊತೆ ಪ್ರಶಾಂತ್‌

2014 ರ ಲೋಕಸಭಾ ಚುನಾವಣೆಗೆ ಮುನ್ನ, ಕಿಶೋರ್ ಸಿಟಿಜನ್ಸ್ ಫಾರ್ ಅಕೌಂಟಬಲ್ ಗವರ್ನನ್ಸ್ (ಸಿಎಜಿ) ಅನ್ನು ಸಹ-ಸ್ಥಾಪಿಸಿದರು ಮತ್ತು ಬಿಜೆಪಿಯ ಮೇಲುಗೈ ಸಾಧಿಸುವಲ್ಲಿ ಪ್ರಶಾಂತ್‌ ಪ್ರಮುಖ ಪಾತ್ರ ವಹಿಸಿದ್ದರು. ಪ್ರಮುಖ ಕ್ಯಾಂಪೇನ್‌ಗಳಾದ ಚಾಯ್ ಪೆ ಚರ್ಚಾ, 3D ರ್ಯಾಲಿಗಳು, ರನ್ ಫಾರ್ ಯೂನಿಟಿ, ಮಂಥನ್ ಮತ್ತು ಆನ್‌ಲೈನ್ ವೀಕ್ಷಕರೊಂದಿಗೆ ಸಂಪರ್ಕ ಸಾಧಿಸಲು ವಿವಿಧ ಸಾಮಾಜಿಕ ಮಾಧ್ಯಮ ಅಭಿಯಾನಗಳ ರೂವಾರಿ ಪ್ರಶಾಂತ್‌ ಆಗಿದ್ದರು ಎನ್ನಲಾಗಿದೆ. ಕಿಶೋರ್ ಅವರ ಒಡನಾಟ ಕೇವಲ ಬಿಜೆಪಿಗೆ ಸೀಮಿತವಾಗಿಲ್ಲ. ಕೇವಲ ಒಂದು ವರ್ಷದ ನಂತರ, ಅವರು ಬಿಹಾರದಲ್ಲಿ ಅಸಂಭವ ರಾಷ್ಟ್ರೀಯ ಜನತಾದಳ (ಆರ್‌ಜೆಡಿ), ಜನತಾದಳ (ಯುನೈಟೆಡ್) ಮತ್ತು ಕಾಂಗ್ರೆಸ್ ಮೈತ್ರಿಕೂಟವನ್ನು ರೂಪಿಸಿದರು. 2017 ರವರೆಗೆ ನಿತೀಶ್ ಕುಮಾರ್ ಸರ್ಕಾರವನ್ನು ಮುನ್ನಡೆಸಿದರು. ನಂತರ ಜೆಡಿಯು ಅದನ್ನು ಬಿಟ್ಟು ಬಿಜೆಪಿಯೊಂದಿಗೆ ಕೈಜೋಡಿಸಿದರು. 2017 ರಲ್ಲಿ 2017 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಿಶೋರ್ ಅವರನ್ನು ನೇಮಿಸಿತು. ಆದರೆ ಆ ಬಾರಿ ಕಾಂಗ್ರೆಸ್‌ ಸೋಲು ಕಂಡಿತು.

2018 ರಲ್ಲಿ ಖುದ್ದು ಪ್ರಶಾಂತ್‌ ಅವರೇ ಅಖಾಡಕ್ಕಿಳಿದರು. ನಿತೀಶ್ ಕುಮಾರ್ ಅವರ ಜೆಡಿ (ಯು) ಸೇರಿದರು. ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಎರಡು ವರ್ಷಗಳ ನಂತರ, ಅವರನ್ನು ನಿತೀಶ್ ಕುಮಾರ್ ಹೊರಹಾಕಿದರು. 2019 ರ ಆಂಧ್ರಪ್ರದೇಶ ಚುನಾವಣೆಯಲ್ಲಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್ಸಿಪಿಗೆ ಮತ್ತು ನಂತರ 2020 ರಲ್ಲಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸಹಾಯ ಮಾಡಿದರು. 2021 ರಲ್ಲಿ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಜೊತೆ ಕೆಲಸ ಮಾಡಿದರು, ಎರಡೂ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳನ್ನು ಉತ್ತಮ ಸಂಖ್ಯೆಗಳೊಂದಿಗೆ ಗೆದ್ದರು.

ಈ ಸುದ್ದಿಯನ್ನೂ ಓದಿ: Bihar Election Results 2025 LIVE: ಬಿಹಾರದಲ್ಲಿ ಎನ್‌ಡಿಎ ಕ್ಲೀನ್‌ ಸ್ವೀಪ್‌.... ನಿತೀಶ್‌ಗೆ ಸಿಎಂ ಪಟ್ಟ ಖಚಿತ

ಮೂರು ವರ್ಷಗಳ ಬಳಿಕ 2024 ರಲ್ಲಿ ಬಿಹಾರಕ್ಕೆ ಮರಳಿದ ಪ್ರಶಾಂತ್‌ ಅಧಿಕೃತವಾಗಿ ಜನ್ ಸುರಾಜ್ ಪಕ್ಷವನ್ನು ಪ್ರಾರಂಭಿಸಿದರು. ಈ ಬಿಹಾರ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಅವರ ಮಾತುಗಳು, ರಾಜ್ಯದ ಸಮಸ್ಯೆಗಳನ್ನು ಎತ್ತಿ ತೋರಿಸಿದ ಬಗೆ ಜನರನ್ನು ಸೆಳೆಯಿತಾದರೂ ಸಹ ಜನ ಅವರತ್ತ ಒಲವು ತೋರಿಲ್ಲ. ಬಿಹಾರದಲ್ಲಿ ಉದ್ಯೋಗ ಮತ್ತು ವಲಸೆಯ ವಿಷಯವನ್ನು ಮುಖ್ಯ ಭೂಮಿಕೆಗೆ ತಂದ ಅವರು ಪಾದ ಯಾತ್ರೆಗಳನ್ನು ಕೈಗೊಂಡಿದ್ದರು. ಆದರೆ ಅದ್ಯಾವುದಕ್ಕೂ ಬಿಹಾರದ ಜನರು ಒತ್ತು ನೀಡಿಲ್ಲ ಎಂದು ಈ ಬಾರಿಯ ಫಲಿತಾಂಶ ಹೇಳುತ್ತದೆ.