ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮುರಿಗಂಗಾ ನದಿಯಲ್ಲಿ ಸರಕು ಹಡಗು ಮುಳುಗಡೆ; 12 ಬಾಂಗ್ಲಾದೇಶಿ ನಾವಿಕರ ರಕ್ಷಣೆ

ಗಂಗಾಸಾಗರದ ಮುರಿಗಂಗಾ ನದಿಯಲ್ಲಿ ಸರಕು ಹಡಗು ಮುಳುಗಿದ ಘಟನೆ ಬುಧವಾರ ಸಂಭವಿಸಿದ್ದು, ತಕ್ಷಣದ ಪೊಲೀಸ್ ರಕ್ಷಣಾ ಕಾರ್ಯಾಚರಣೆಯಿಂದ 12 ಬಾಂಗ್ಲಾದೇಶಿ ನಾವಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ, ತನಿಖೆ ಮುಂದುವರಿದಿದೆ ಎಂದು ಪೊಲೀಸರು

ಮುರಿಗಂಗಾ ನದಿಯಲ್ಲಿ ಸರಕು ಹಡಗು ಮುಳುಗಡೆ

ಮುಳುಗಡೆಯಾದ ಹಡಗು -

Profile
Sushmitha Jain Jan 23, 2026 1:54 PM

ಕೊಲ್ಕತ್ತಾ: ಗಂಗಾಸಾಗರ (Gangasagar) ಪ್ರದೇಶದ ಮುರಿಗಂಗಾ ನದಿ (Muriganga river)ಯಲ್ಲಿ ‘ಎಂವಿ ತಮ್ಜಿದ್ ಆ್ಯಂಡ್ ನಾಸಿರ್(MV Tamjid and Nasir)’ ಎಂಬ ಸರಕು ಹಡಗು ಮುಳುಗಿದ್ದು, ಅದರಲ್ಲಿ ಇದ್ದ 12 ಬಾಂಗ್ಲಾದೇಶಿ(Bangladeshi) ನಾವಿಕರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಬುಧವಾರ ಸಂಜೆ ಈ ಘಟನೆ ನಡೆದಿದ್ದು, ದಕ್ಷಿಣ 24 ಪರಗಣ (parganas) ಜಿಲ್ಲೆಯ ಕಾಚುಬೇರಿಯಾ (Kachuberia) ಪ್ರದೇಶದ ಬಳಿ ಮುರಿಗಂಗಾ ನದಿಯ ಮಧ್ಯದಲ್ಲಿ ಸರಕು ಹಡಗು ಮುಳುಗಿದೆ ಎಂಬ ಮಾಹಿತಿ ದೊರೆತಿದೆ.

ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಹಡಗಿನಲ್ಲಿ ಇದ್ದ ಎಲ್ಲಾ 12 ನಾವಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಡಗು ಕೊಲ್ಕತ್ತಾ(Kolkata) ಬಂದರಿನಿಂದ ಬಾಂಗ್ಲಾದೇಶಕ್ಕೆ ಸರಕು ಸಾಗಿಸುತ್ತಿದ್ದ ಸಂದರ್ಭದಲ್ಲಿ, ನದಿಯ ಮಧ್ಯದಲ್ಲಿ ಯಾಂತ್ರಿಕ ದೋಷ ಉಂಟಾಗಿ ಹಡಗು ಮುಳುಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಾಥಮಿಕ ವರದಿಗಳ ಪ್ರಕಾರ, ಯಾಂತ್ರಿಕ ದೋಷದ ಪರಿಣಾಮ ಹಡಗಿನ ಕೆಳಭಾಗದಲ್ಲಿ ಬಿರುಕು ಕಾಣಿಸಿಕೊಂಡು, ಅದರೊಳಗೆ ನೀರು ನುಗ್ಗತೊಡಗಿದೆ. ಪರಿಸ್ಥಿತಿಯನ್ನು ಅರಿತ ನಾವಿಕರು ತಕ್ಷಣ ಸಹಾಯಕ್ಕಾಗಿ ಕರೆ ಮಾಡಿದ ಬಳಿಕ, ಸಾಗರ್ ಪೊಲೀಸ್ ತಂಡ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ.

ವಿಬಿ ಜಿ ರಾಮ್ ಜಿ ಮಸೂದೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಮಂಡನೆ

ರಕ್ಷಣಾ ಕಾರ್ಯಾಚರಣೆ ನಂತರ, ನಾವಿಕರನ್ನು ಗಂಗಾಸಾಗರ ಪೊಲೀಸ್ ವ್ಯಾಪ್ತಿಯ ಆಶ್ರಯ ಕೇಂದ್ರದಲ್ಲಿ ಇರಿಸಲಾಗಿದೆ. ಜೊತೆಗೆ, ಹಡಗು ಮುಳುಗಿದ ಬಳಿಕ ಹಡಗಿನಲ್ಲಿದ್ದ ಯಾವುದಾದರೂ ಹಾನಿಕಾರಕ ರಾಸಾಯನಿಕಗಳು ನೀರಿಗೆ ಮಿಶ್ರಣವಾಗಿದೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಹಿಂದೆ ಮಂಗಳೂರಿನಿಂದ ಲಕ್ಷ ದೀಪಕ್ಕೆ ತೆರಳುತ್ತಿದ್ದ ಸರಕು ಹಡಗು ಮುಳುಗಡೆಯಾಗಿತ್ತು. ಆದರೆ ಅದೃಷ್ವವಶಾತ್‌ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಸುಮಾರು 60 ನಾಟಿಕಲ್ ಮೈಲು ದೂರದಲ್ಲಿದ್ದಾಗ ಎಂಎಸ್‌ವಿ ಸಲಾಮತ್ ಎಂಬ ಹೆಸರಿನ ಹಡಗು ಮುಳುಗಿದ್ದು, ಕರಾವಳಿ ರಕ್ಷಣಾ ಪಡೆ ಕಾರ್ಯಾಚರಣೆ ನಡೆಸಿ, 6 ಸಿಬ್ಬಂದಿಯನ್ನು ರಕ್ಷಣೆ ಮಾಡಿತ್ತು.

ಮಂಗಳೂರಿನ ಸರಕು ಸಾಗಣೆ ಹಡಗು ಮೇ 12ರಂದು ಮಂಗಳೂರು ಬಂದರಿನಿಂದ ಸಿಮೆಂಟ್ ಹಾಗೂ ನಿರ್ಮಾಣ ಸಾಮಗ್ರಿ ಹೊತ್ತು ಲಕ್ಷದ್ವೀಪದತ್ತ ಪ್ರಯಾಣ ಆರಂಭಿಸಿತ್ತು. ಮೇ18 ರಂದು ಲಕ್ಷದ್ವೀಪದ ಕಡಮತ್ ದ್ವೀಪಕ್ಕೆ ತಲುಪಬೇಕಾಗಿತ್ತು. ಆದರೆ ದಾರಿ ಮಧ್ಯೆ ತಾಂತ್ರಿಕ ಸಮಸ್ಯೆಯಿಂದ ಒಳಗಡೆ ನೀರು ನುಗ್ಗಿ ಹಡಗು ಮುಳುಗಿದೆ.

ಹಡಗಿನಲ್ಲಿ 6 ಭಾರತೀಯ ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಎಲ್ಲಾ ಸಿಬ್ಬಂದಿ ಹಡಗಿನಿಂದ ಹಾರಿ ಸಣ್ಣ ಡಿಂಗಿ ಬೋಟಿನಲ್ಲಿ ಪ್ರಾಣ ಉಳಿಸಿಕೊಂಡಿದ್ದಾರೆ. ಭಾರತೀಯ ಕರಾವಳಿ ರಕ್ಷಣಾ ಪಡೆಗೆ ಬಂದ ಮಾಹಿತಿ ಹಿನ್ನೆಲೆಯಲ್ಲಿ ಗಸ್ತು ತಿರುಗುತ್ತಿದ್ದ ಕೋಸ್ಟ್ ಗಾರ್ಡ್‌ನ ‘ವಿಕ್ರಂ’ ಶಿಪ್ ನಲ್ಲಿ ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿತ್ತು. ಇಸ್ಮಾಯಿಲ್ ಶರೀಫ್, ಅಲೆಮನ್ ಅಹ್ಮದ್ ಬಾಯ್ ಗಾವ್ಡ, ಕಾಕಲ್ ಸುಲೇಮಾನ್ ಇಸ್ಮಾಯಿಲ್, ಅಕ್ಬರ್ ಅಬ್ದುಲ್ ಸುರಾನಿ, ಕಸಂ ಇಸ್ಮಾಯಿಲ್ ಮತ್ತು ಅಜ್ಮಲ್ ಅವರನ್ನು ರಕ್ಷಿಸಲಾಗಿತ್ತು.