Changoora Baba: RSS ಸದಸ್ಯ ಎಂದು ಡೋಂಗಿ, ಮೋದಿ ಫೋಟೋ ಬಳಸಿ ವಂಚನೆ; ಬಗೆದಷ್ಟು ಬಯಲಾಗುತ್ತಿದೆ ಛಂಗೂರ್ ಬಾಬಾ ವಂಚನೆ
ಉತ್ತರ ಪ್ರದೇಶದಲ್ಲಿ ಮತಾತಂರ ಮಾಡುತ್ತಿದ್ದ ಛಂಗೂರ್ ಬಾಬಾನನ್ನು ಬಂಧಿಸಲಾಗಿದೆ. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಕೆಲ ವಿಚಾರಗಳು ಬೆಳಕಿಗೆ ಬಂದಿವೆ. ಈತ ಅಧಿಕಾರಿಗಳನ್ನು ಭೇಟಿಯಾದಾಗ ತನ್ನನ್ನು ತಾನು ಆರ್‌ಎಸ್‌ಎಸ್ ಸಂಯೋಜಿತ ಸಂಸ್ಥೆಯ ಹಿರಿಯ ಕಾರ್ಯಕರ್ತನೆಂದು ಹೇಳಿಕೊಂಡಿದ್ದ.


ಲಖನೌ: ಉತ್ತರ ಪ್ರದೇಶದಲ್ಲಿ ಮತಾತಂರ ಮಾಡುತ್ತಿದ್ದ ಛಂಗೂರ್ ಬಾಬಾನನ್ನು (Changoora Baba) ಬಂಧಿಸಲಾಗಿದೆ. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಕೆಲ ವಿಚಾರಗಳು ಬೆಳಕಿಗೆ ಬಂದಿವೆ. ಈತ ಅಧಿಕಾರಿಗಳನ್ನು ಭೇಟಿಯಾದಾಗ ತನ್ನನ್ನು ತಾನು ಆರ್‌ಎಸ್‌ಎಸ್ ಸಂಯೋಜಿತ ಸಂಸ್ಥೆಯ ಹಿರಿಯ ಕಾರ್ಯಕರ್ತನೆಂದು ಹೇಳಿಕೊಂಡಿದ್ದ. ಅಷ್ಟೇ ಅಲ್ಲದೆ, ಸಂಘಟನೆಯ ಲೆಟರ್‌ಹೆಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ಸಹ ಬಳಸಿಕೊಂಡಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಛಂಗೂರ್ ಬಾಬಾ ಅಲಿಯಾಸ್ ಜಮಾಲುದ್ದೀನ್ ಅವರನ್ನು ಭಾರತ್ ಪ್ರತಿಕಾರ್ಥ್ ಸೇವಾ ಸಂಘ ಎಂಬ ಸಂಘಟನೆಯ ಪ್ರಧಾನ ಕಾರ್ಯದರ್ಶಿ (ಅವಧ್) ಆಗಿ ಮಾಡಲಾಯಿತು, ಇದನ್ನು ಮತ್ತೊಬ್ಬ ಪ್ರಮುಖ ಆರೋಪಿ ಈದುಲ್ ಇಸ್ಲಾಂ ನಡೆಸುತ್ತಿದ್ದ.
ತಾನು ಆರ್‌ಎಸ್‌ಎಸ್ ಕಾರ್ಯಕರ್ತ ಎಂದು ಬಿಂಬಿಸಿಕೊಂಡಿದ್ದ ಈತ ಹಲವರ ಬಳಿ ಈ ಕುರಿತು ಮಾಹಿತಿ ನೀಡಿದ್ದ. ಆರೆಸ್ಸೆಸ್‌ನ ಪ್ರಧಾನ ಕಚೇರಿಯಾದ ನಾಗ್ಪುರದ ಬಳಿ ಈ ಆರೋಪಿಗಳು ಒಂದು ನಕಲಿ ಕೇಂದ್ರವನ್ನು ಸ್ಥಾಪಿಸಿದ್ದರು. ಅಧಿಕಾರಿಗಳು ಮತ್ತು ರಾಜಕೀಯ ನಾಯಕರೊಂದಿಗಿನ ಸಭೆಗಳ ಸಮಯದಲ್ಲಿ, ಛಂಗೂರ್ ಬಾಬಾ ಮತ್ತು ಆತನ ಸಹಚರರು ವಿಶ್ವಾಸಾರ್ಹತೆಯನ್ನು ನೀಡಲು ಹಲವಾರು ಪ್ರಮುಖ ಆರ್‌ಎಸ್‌ಎಸ್ ಕಾರ್ಯಕರ್ತರ ಹೆಸರನ್ನು ತಿಳಿಸುತ್ತಿದ್ದರು.
ಬಲರಾಂಪುರದ ಛಂಗೂರ್ ಬಾಬಾನನ್ನು ಈ ತಿಂಗಳ ಆರಂಭದಲ್ಲಿ ದೊಡ್ಡ ಪ್ರಮಾಣದ ಧಾರ್ಮಿಕ ಮತಾಂತರ ಜಾಲವನ್ನು ಸಂಘಟಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಛಂಗೂರ್ ಬಾಬಾ ಧಾರ್ಮಿಕ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಉತ್ತರ ಪ್ರದೇಶದ ಬಲರಾಂಪುರ್‌ನ 12 ಕಡೆಗೆ ಮುಂಬೈನ ಎರಡು ಸೇರಿದಂತೆ 14 ಸ್ಥಳಗಳಲ್ಲಿ ಶೋಧ ನಡೆಸಿತ್ತು. ಬಲರಾಂಪುರ್‌ನ ಉತ್ರೌಲಾ ಮತ್ತು ಮುಂಬೈನ ಬಾಂದ್ರಾ ಮತ್ತು ಮಾಹಿಮ್‌ನಲ್ಲಿ ಬೆಳಿಗ್ಗೆ 5 ಗಂಟೆಗೆ ದಾಳಿ ಪ್ರಾರಂಭವಾಯಿತು. ಮತಾಂತರ ದಂಧೆಯ ಆರೋಪಿ ನವೀನ್ ಅವರ ಬ್ಯಾಂಕ್ ಖಾತೆಯಿಂದ ಸುಮಾರು 2 ಕೋಟಿ ರೂ.ಗಳನ್ನು ಶೆಹಜಾದ್ ಶೇಖ್ ಎಂಬ ವ್ಯಕ್ತಿಗೆ ವರ್ಗಾಯಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಈ ಸುದ್ದಿಯನ್ನೂ ಓದಿ: Changoora Baba: ರಾಜಕಾರಣಿಗಳು, ಪೊಲೀಸರಿಗೂ ಹಣ ವರ್ಗಾವಣೆ; ಛಂಗೂರ್ ಬಾಬಾ 'ರೆಡ್ ಡೈರಿ'ಯಲ್ಲಿದೆ ಆ ರಹಸ್ಯ!
ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ, ಲವ್ ಜಿಹಾದ್ (Love Jihad) ನಡೆಸಿ ಮತಾಂತರ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಇದಕ್ಕಾಗಿ ಭರ್ಜರಿ ಹಣವನ್ನು ಕೂಡ ಪಡೆದುಕೊಂಡಿದ್ದಾನೆ ಎಂದು ಇ.ಡಿ.ಯ ಪ್ರಾಥಮಿಕ ಸಂಶೋಧನೆಗಳು ತಿಳಿಸಿವೆ. ಛಂಗೂರ್ ಬಾಬಾ ಅಥವಾ ಪೀರ್ ಬಾಬಾ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಜಮಾಲುದ್ದೀನ್, ನೇಪಾಳದ ಗಡಿಯಲ್ಲಿರುವ ಬಲರಾಂಪುರದ ರೆಹ್ರಾ ಮಾಫಿ ಗ್ರಾಮದ ನಿವಾಸಿ.