ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Ranveer Allahbadia: ನನ್ನ ಅಮ್ಮನ ಕ್ಲಿನಿಕ್‌ಗೆ ನುಗ್ಗಿ ಕೊಲೆ ಬೆದರಿಕೆ ಹಾಕಿದ್ದಾರೆ: ಯೂಟ್ಯೂಬರ್‌ ರಣವೀರ್‌ ಶಾಕಿಂಗ್‌ ಹೇಳಿಕೆ!

ಯೂಟ್ಯೂಬ್‌ ಶೋ ಒಂದರಲ್ಲಿ ಲೈಂಗಿಕತೆಯ ಕುರಿತು ಅಸಭ್ಯ ಹೇಳಿಕೆಯನ್ನು ನೀಡುವ ಮೂಲಕ ವಿವಾದಕ್ಕೆ ಸಿಲುಕಿ ಹಾಕಿಕೊಂಡಿರುವ ರಣವೀರ್‌ ಅಲಹಾಬಾದಿಯಾ ಇದೀಗ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ರಣವೀರ್‌ ವಿರುದ್ಧ ದೇಶದಾದ್ಯಂತ ಪ್ರಕರಣಗಳು ದಾಖಲಾಗುತ್ತಿದ್ದಂತೆ ಆತನ ತಾಯಿಯ ಕ್ಲಿನಿಕ್‌ಗೆ ಕಿಡಿಗೇಡಿಗಳು ರೋಗಿಗಳ ಸೋಗಿನಲ್ಲಿ ನುಗ್ಗಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ.

ಯೂಟ್ಯೂಬರ್‌ ರಣವೀರ್‌ ತಾಯಿಗೆ ಕೊಲೆ ಬೆದರಿಕೆ!

ರಣವೀರ್‌ ಅಲಹಾಬಾದಿಯಾ

Profile Deekshith Nair Feb 16, 2025 9:25 AM

ಮುಂಬೈ: ಯೂಟ್ಯೂಬ್‌ ಶೋ ಒಂದರಲ್ಲಿ ಲೈಂಗಿಕತೆಯ ಕುರಿತು ಅಸಭ್ಯ ಹೇಳಿಕೆಯನ್ನು ನೀಡುವ ಮೂಲಕ ವಿವಾದಕ್ಕೆ ಸಿಲುಕಿ ಹಾಕಿಕೊಂಡಿರುವ ರಣವೀರ್‌ ಅಲಹಾಬಾದಿಯಾ(Ranveer Allahbadia) ಇದೀಗ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ರಣವೀರ್‌ ವಿರುದ್ಧ ದೇಶದಾದ್ಯಂತ ಪ್ರಕರಣಗಳು ದಾಖಲಾಗುತ್ತಿದ್ದಂತೆ ಆತನ ತಾಯಿಯ ಕ್ಲಿನಿಕ್‌ಗೆ ಕಿಡಿಗೇಡಿಗಳು ರೋಗಿಗಳ ಸೋಗಿನಲ್ಲಿ ನುಗ್ಗಿ ಕೊಲೆ ಬೆದರಿಕೆ(Death Threat) ಹಾಕಿದ್ದಾರೆ ಎಂದು ಹೇಳಿದ್ದಾರೆ. ಸಮಯ್ ರೈನಾ ಅವರ ಇಂಡಿಯಾಸ್ ಗಾಟ್ ಲ್ಯಾಟೆಂಟ್( India’s Got Latent) ಕಾರ್ಯಕ್ರಮದಲ್ಲಿ 'ಪೋಷಕರ ಲೈಂಗಿಕತೆ' ಕುರಿತು ನೀಡಿದ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ರಣವೀರ್ ಅಲಹಾಬಾದಿಯಾ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ.

ರಣವೀರ್ ಅಲಹಾಬಾದಿಯಾ ವಿರುದ್ಧ ಹಲವು ಕೇಸ್​ಗಳು ದಾಖಲಾಗಿವೆ. ಈಗಾಗಲೇ ಸಾಕಷ್ಟು ಬಾರಿ ರಣವೀರ್ ತನ್ನಿಂದಾದ ತಪ್ಪಿಗೆ ಕ್ಷಮೆ ಯಾಚಿಸಿದ್ದಾರೆ. ತಮ್ಮ ಕುಟುಂಬದ ವಿರುದ್ಧದ ಕಿರುಕುಳ ಮತ್ತು ಕೊಲೆ ಬೆದರಿಕೆಗಳನ್ನು ನಿಲ್ಲಿಸುವಂತೆ ಸಾರ್ವಜನಿಕರ ಬಳಿ ಮನವಿ ಮಾಡಿದ್ದಾರೆ. ಇದೀಗ ಮತ್ತೊಂದು ಕ್ಷಮೆಯಾಚನೆಯ ವಿಡಿಯೊ ಮಾಡಿರುವ ಯೂಟ್ಯೂಬರ್ ರಣವೀರ್ ಅಧಿಕಾರಿಗಳೊಂದಿಗೆ ಸಹಕರಿಸುವುದಾಗಿ ಮತ್ತು ಸೂಕ್ತ ಕಾರ್ಯವಿಧಾನವನ್ನು ಅನುಸರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ತನಗೆ ಮತ್ತು ತನ್ನ ತಾಯಿಗಿರುವ ಕೊಲೆ ಬೆದರಿಕೆಗಳ ಬಗ್ಗೆ ರಣವೀರ್ ಅಲಹಾಬಾದಿಯಾ ಬಹಿರಂಗ ಪಡಿಸಿದ್ದಾರೆ.



ರಣವೀರ್‌ಗೆ ಸಪೋರ್ಟ್‌ ಮಾಡಿದ ನಟಿ ಊರ್ಫಿ ಜಾವೇದ್‌

ಅಸಭ್ಯವಾದ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಈಡಾಗಿರುವ ಪ್ರಖ್ಯಾತ ಯೂಟ್ಯೂಬರ್‌ ರಣವೀರ್‌ಗೆ ನಟಿ ಊರ್ಫಿ ಜಾವೇದ್‌ ಸಪೋರ್ಟ್‌ ಮಾಡಿದ್ದಾರೆ. "ನೀವು ಕೆಲವು ಜನರನ್ನು ಇಷ್ಟಪಡುವುದಿಲ್ಲ. ಅವರು ಮಾಡುವ ಅಥವಾ ಹೇಳುವ ವಿಷಯಗಳನ್ನು ನೀವು ಇಷ್ಟಪಡುವುದಿಲ್ಲ. ರಣವೀರ್ ಅವರನ್ನು ಜೈಲಿಗೆ ಕಳುಹಿಸಬೇಕೆಂದು ಒತ್ತಾಯಿಸುತ್ತಿದ್ದೀರಿ. ನಿಮಗೆ ಪ್ರಜ್ಞೆ ಇದೆಯಾ? ಹೂಂ! ಗೊತ್ತಿಲ್ಲ. ಸಮಯ್ ನನ್ನ ಗೆಳೆಯ. ನಾನು ಅವನ ಜೊತೆಗಿದ್ದೇನೆ. ಆದರೆ ಉಳಿದ ಪ್ಯಾನೆಲ್‌ನವರು ಹೇಳಿದ್ದು ಸರಿಯಿಲ್ಲ. ಹೌದು, ಆದರೆ ಇದಕ್ಕಾಗಿ ಅವರು ಜೈಲಿಗೆ ಹೋಗಬೇಕೆಂದು ನಾನು ಭಾವಿಸುವುದಿಲ್ಲ" ಎಂದು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ:Apoorva Mukhija: ರಣವೀರ್ ವಿವಾದದ ಬಳಿಕ ಅಪೂರ್ವ ಮುಖಿಜಾಗೆ ಅತ್ಯಾಚಾರ ಬೆದರಿಕೆ; ಗೆಳತಿಯಿಂದ ಆಘಾತಕಾರಿ ಮಾಹಿತಿ

ರಣವೀರ್‌ ಜೊತೆ ಬ್ರೇಕಪ್‌ ಮಾಡಿಕೊಂಡ ಗರ್ಲ್ ಫ್ರೆಂಡ್?

ಇಂಡಿಯಾಸ್ ಗಾಟ್ ಲ್ಯಾಟೆಂಟ್ ಶೋನಲ್ಲಿ ಅಸಭ್ಯ ಪ್ರಶ್ನೆ ಕೇಳಿದ ಖ್ಯಾತ ಯೂಟ್ಯೂಬರ್‌ ರಣವೀರ್‌ ಅಲಾಹಾಬಾದಿಯಾ ವಿರುದ್ಧ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ವಿವಾದಗಳು ಭುಗಿಲೆದ್ದಿವೆ. ವಿವಾದದ ಬೆನ್ನಲ್ಲೇ ರಣವೀರ್‌ ಗರ್ಲ್‌ ಫ್ರೆಂಡ್‌ ನಿಕ್ಕಿ ಶರ್ಮಾ ಆತನೊಂದಿಗೆ ಬ್ರೇಕಪ್‌ ಮಾಡಿಕೊಂಡಿದ್ದಾಳೆ ಎಂಬ ಸುದ್ದಿ ಹರಿದಾಡಿತ್ತು. ಪರಸ್ಪರ ಇಬ್ಬರೂ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅನ್‌ಫಾಲೋ ಮಾಡಿದ್ದು,ರಿಲೇಷನ್‌ಶಿಪ್‌ ಗೆ ಗುಡ್‌ ಬೈ ಹೇಳಿದ್ದಾರೆ ಎನ್ನಲಾಗಿತ್ತು.