ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಜೀನಾಮೆ ಬಳಿಕ ಮೊದಲ ಬಾರಿ ಜೆನ್ ಜಿಗಳ ಕುರಿತು ಮಾತನಾಡಿದ ಧರ್ಮೇಂದ್ರ ಪ್ರಧಾನ್; ಹೇಳಿದ್ದೇನು?

ನನಗೆ ಹುದ್ದೆ ಮುಖ್ಯವಾಗಿರಲಿಲ್ಲ ಎಂದು ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿಗೆ ಮನದ ಮಾತನ್ನು ಸಚಿವ ಧರ್ಮೇಂದ್ರ ಪ್ರಧಾನ್ ಎಲ್ಲರ ಮುಂದಿಟ್ಟಿದ್ದಾರೆ. ಸಂಬಲ್ಪುರದ ಜಿಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿರುವ ಅವರು, ನೀಟ್ ಪತ್ರಿಕೆ ಸೋರಿಕೆ ವಿಷಯಕ್ಕೆ ಸಂಬಂಧಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಜೆನ್ ಜಿಗಳನ್ನು ದಾರಿತಪ್ಪಿಸುವ ಪ್ರಯತ್ನವನ್ನು ಕೆಲವರು ನಡೆಸಿದ್ದಾರೆ ಎಂದು ಆರೋಪಿಸಿದರು.

ಹುದ್ದೆ ನನಗೆ ಮುಖ್ಯವಾಗಿರಲಿಲ್ಲ: ಧರ್ಮೇಂದ್ರ ಪ್ರಧಾನ್

ಸಂಗ್ರಹ ಚಿತ್ರ -

ನವದೆಹಲಿ: ಕಾಕ್ರೋಚ್ ಜನತಾ ಪಕ್ಷದ (Cockroach Janata Party) ನೇತೃತ್ವದಲ್ಲಿ ಇತ್ತೀಚೆಗೆ ದೆಹಲಿಯಲ್ಲಿ (Dehli) ನೀಟ್ (NEET) ವಿವಾದಕ್ಕೆ ಸಂಬಂಧಿಸಿ ನಡೆದಿರುವ ಪ್ರತಿಭಟನೆಯ (CJP Protest) ಸಂದರ್ಭದಲ್ಲಿ ಕೆಲವರು ಜೆನ್ ಜಿಗಳ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ ಎಂದು ಬಿಜೆಪಿ (BJP) ಹಿರಿಯ ನಾಯಕ ಮತ್ತು ಸಂಬಲ್ಪುರ ಸಂಸದ ಧರ್ಮೇಂದ್ರ ಪ್ರಧಾನ್ (Dharmendra Pradhan) ಹೇಳಿದರು. ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿಗೆ ಸಂಬಲ್ಪುರದ ಜಿಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ಅವರು, ನೀಟ್ ವಿವಾದದ ನಡುವೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣದ ಬಗ್ಗೆ ತಿಳಿಸಿದರು.

ದೆಹಲಿ ಸೇರಿದಂತೆ ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸಂಪರ್ಕಿಸಿ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮೊದಲೇ ಮುಂದಾಗಿದ್ದೆ ಎಂದ ಅವರು, ಪ್ರತಿಭಟನೆಯ ಸಂದರ್ಭದಲ್ಲಿ ಜೆನ್ ಜಿಗಳ ದಾರಿತಪ್ಪಿಸುವ ಪ್ರಯತ್ನಗಳು ನಡೆದಿವೆ ಎಂದು ಆರೋಪಿಸಿದರು.

ದಾಂಪತ್ಯ ಕಲಹವನ್ನು ಕ್ರಿಮಿನಲ್ ಕ್ರೌರ್ಯವೆಂದು ಪರಿಗಣಿಸಲಾಗದು; ಕರ್ನಾಟಕ ಹೈಕೋರ್ಟ್

ನನಗೆ ಯಾವುದೇ ವೈಯಕ್ತಿಕ ಸಮಸ್ಯೆಗಳಿರಲಿಲ್ಲ. ಯುವ ಭಾರತೀಯರ ಆಕಾಂಕ್ಷೆಗಳು ತಮ್ಮ ಸಚಿವ ಸ್ಥಾನಕ್ಕಿಂತ ಹೆಚ್ಚು ಮುಖ್ಯವೆಂದು ನನಗೆ ಯಾವತ್ತೂ ಅನಿಸಿರಲಿಲ್ಲ. ಜೆನ್ ಜಿ ಕೂಡ ನನ್ನ ಮಕ್ಕಳು. ಆದರೆ ಕೆಲವರು ಅವರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದರು ಎಂದರು.

ಭಾರತದಲ್ಲಿ ಪ್ರತಿ ವರ್ಷ ಸುಮಾರು ಎರಡು ಕೋಟಿ ಮಕ್ಕಳ ಜನನವಾಗುತ್ತಿದೆ. ಹಿಂದಿನ ದಶಕದಲ್ಲಿ ಸುಮಾರು 20 ಕೋಟಿ ಮಕ್ಕಳು ಜನಿಸಿದ್ದಾರೆ. ಮಕ್ಕಳಿಗೆ ಆಕಾಂಕ್ಷೆಗಳಿವೆ, ಮತ್ತು ಅವರು ಭಾರತವನ್ನು ವಿಶ್ವ ಗುರುವನ್ನಾಗಿ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.

ಇದರ ಬಳಿಕ ರೈರಾಖೋಲ್‌ನಲ್ಲಿ ನಡೆದ ಮತ್ತೊಂದು ಸಭೆಯಲ್ಲಿ ಮಾತನಾಡಿದ ಧರ್ಮೇಂದ್ರ ಪ್ರಧಾನ್, ಒಡಿಶಾದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ವಿರುದ್ಧ ನಡೆದ ಪ್ರತಿಭಟನೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ವಿಮಾನ ನಿಲ್ದಾಣದ ಬಳಿ ಬಿಜೆಡಿ ಯುವ ಮತ್ತು ವಿದ್ಯಾರ್ಥಿ ವಿಭಾಗದ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು ಇಂತಹ ಪ್ರತಿಭಟನೆಗಳಿಂದ ನಾನು ಪ್ರಭಾವಿತವಾಗುವುದಿಲ್ಲ ಎಂದರು.

ಬಿಜೆಡಿ ಅಧ್ಯಕ್ಷ ನವೀನ್ ಬಾಬು ಪಾಟ್ನಾಯಕ್ ಹೇಳಿಕೆಗೆ ತಿರುಗೇಟು ನೀಡಿದ ಪ್ರಧಾನ್, ನಾನು ರೈತನ ಮಗ. ನನ್ನನ್ನು ಹಿಂತಿರುಗಿ ಹೋಗಲು ಹೇಳದಿದ್ದರೂ ನಾನು ಹಿಂತಿರುಗುತ್ತೇನೆ. ನಾನೆಂದರೆ ಒಡಿಶಾ ಜನರಿಗೆ ಅವಮಾನ ಮತ್ತು ಕೆಟ್ಟ ವ್ಯಕ್ತಿ ಎನ್ನುತ್ತಾರೆ ಬಿಜೆಡಿ ಅಧ್ಯಕ್ಷರು. ನನ್ನ ವಿರುದ್ಧ ಯುವಕರನ್ನು ಸೇರಿಸಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಒಡಿಶಾದ ಜನರು ನಾಚಿಕೆಪಡಿಸುವಂತಹದ್ದನ್ನು ನಾನು ಎಂದಾದರೂ ಮಾಡಿದ್ದೇನೆಯೇ ಎಂದು ಪ್ರಶ್ನಿಸಿದರು.

ಒಡಿಶಾಗೆ ಕೀರ್ತಿಯನ್ನು ತಂದುಕೊಡದಿದ್ದರೂ ನಾನು ನನ್ನ ಕೆಲಸದ ಮೂಲಕ ರಾಜ್ಯಕ್ಕೆ ಅವಮಾನವನ್ನು ತರುವ ಯಾವುದನ್ನೂ ಎಂದಿಗೂ ಮಾಡಿಲ್ಲ. ರಾಜ್ಯದ ಖ್ಯಾತಿಗೆ ಕಳಂಕ ತರುವ ಯಾವುದೇ ಕೆಲಸವನ್ನು ನಾನು ಎಂದಿಗೂ ಮಾಡುವುದಿಲ್ಲ ಎಂದು ತಿಳಿಸಿದರು.

12 ವರ್ಷಗಳ ಹಿಂದೆ ಜಗನ್ನಾಥ ದೇವರು ಮತ್ತು ಸಂಬಲ್ಪುರದ ಪೀಠಾಧಿಪತಿ ಸಮಲೇಶ್ವರಿ ದೇವಿಯ ಆಶೀರ್ವಾದದಿಂದ ತಾನು ಕೇಂದ್ರ ಸಚಿವನಾಗಿರುವುದಾಗಿ ಹೇಳಿದ ಅವರು, ಕೇಂದ್ರ ಸಚಿವನಾದೆ ಎಂದು ಹೇಳಿದರು.

ಬಿಜೆಡಿ ಶಾಸಕ ಮತ್ತು ಒಡಿಶಾ ವಿಧಾನಸಭೆಯ ಉಪ ನಾಯಕ ಪ್ರಸನ್ನ ಆಚಾರ್ಯ ಅವರು ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ್ ಅವರು, ಬಿಜೆಡಿ ಪ್ರತಿಭಟನೆ ಹಿನ್ನೆಲೆಯಲ್ಲಿ ಇಲ್ಲಿಗೆ ಬರಬೇಕೆ ಬೇಡವೇ ಎಂದು ಪ್ರಸನ್ನ ಅವರನ್ನು ಕೇಳಿದ್ದೆ. ಆದರೆ ಅವರು ನನಗೆ ಬರಲು ಹೇಳಿದರು. ನನ್ನನ್ನು ಸ್ವಾಗತಿಸಲಾಗುವುದು ಎಂದು ಭರವಸೆ ನೀಡಿದರು. ಹೀಗಾಗಿ ಇಲ್ಲಿಗೆ ಬಂದೆ ಎಂದು ತಿಳಿಸಿದರು.

Actor Yash: ಯಶ್‌ಗಾಗಿ ರೂಲ್ ಬ್ರೇಕ್ ಮಾಡಿದ ನಯನತಾರಾ! ರಾಕಿ ಬಾಯ್‌ ಬಗ್ಗೆ ಹೇಳಿದ್ದೇನು?

ಬಿಜೆಡಿ ತಿರುಗೇಟು

ಧರ್ಮೇಂದ್ರ ಪ್ರಧಾನ್ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಡಿಯ ಸಂಬಲ್‌ಪುರ ಜಿಲ್ಲಾಧ್ಯಕ್ಷ ಮತ್ತು ಮಾಜಿ ಸಚಿವ ರೋಹಿತ್ ಪೂಜಾರಿ, ವಿದ್ಯಾರ್ಥಿ ಪ್ರತಿಭಟನೆಗಳನ್ನು ಸರ್ಕಾರ ನಿರ್ವಹಿಸಿದ ರೀತಿಯಿಂದಾಗಿ ಬಿಜೆಪಿ ನಾಯಕ ಧರ್ಮೇಂದ್ರ ಪ್ರಧಾನ್ ಟೀಕೆಗಳನ್ನು ಎದುರಿಸಿದ್ದಾರೆ. ಯಾರೂ ಕೂಡ ಅವರನ್ನು ದೂಷಿಸಿಲ್ಲ ಅವರ ಪಕ್ಷ ಮತ್ತು ಸರ್ಕಾರವೇ ಅವರ ಮಾನಹಾನಿ ಮಾಡಿದೆ. ಪೊಲೀಸ್ ಕ್ರಮಕ್ಕೆ ಅವರನ್ನು ಏಕೆ ದೂಷಿಸಬೇಕು ಎಂದು ಪ್ರಶ್ನಿಸಿದ ಅವರು, ಪ್ರಧಾನ್‌ಗೆ ಕೆಟ್ಟ ಹೆಸರು ತಂದಿದ್ದು ಬಿಜೆಪಿ ಸರ್ಕಾರದ ತಪ್ಪು ನೀತಿಗಳು ಎಂದು ಹೇಳಿದರು.

ಧರ್ಮೇಂದ್ರ ಪ್ರಧಾನ್ ಆಗಮನದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಂಬಲ್ಪುರ ಪೊಲೀಸರು ಸುಮಾರು 30 ಬಿಜೆಡಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದರು. ತೀವ್ರ ಪ್ರತಿಭಟನೆ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಬಂಧನ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.