ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Spy For Pakistan: ಪಾಕಿಸ್ತಾನಿ ಹ್ಯಾಂಡ್ಲರ್‌ಗಳಿಗಾಗಿ ಸೇನಾ ನೆಲೆಗಳ ಮೇಲೆ ಬೇಹುಗಾರಿಕೆ; ಇಬ್ಬರು ಅರೆಸ್ಟ್

Spying On Army Installations: ಅರುಣಾಚಲ ಪ್ರದೇಶದಲ್ಲಿ ಪಾಕಿಸ್ತಾನದ ಹ್ಯಾಂಡ್ಲರ್‌ಗಳಿಗೆ ಸಹಾಯ ಮಾಡಲು ಸೇನೆಯ ಚಲನವಲನಗಳನ್ನು ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನಜೀರ್ ಅಹ್ಮದ್ ಮಲಿಕ್ ಮತ್ತು ಸಬೀರ್ ಅಹ್ಮದ್ ಮಿರ್ ಎಂದು ಗುರುತಿಸಲಾಗಿದ್ದು, ಹೆಚ್ಚಿನ ತನಿಖೆ ಪ್ರಾರಂಭವಾಗಿದೆ.

ಸೇನಾ ನೆಲೆಗಳ ಮೇಲೆ ಬೇಹುಗಾರಿಕೆ; ಇಬ್ಬರು ಅರೆಸ್ಟ್

ಬೇಹುಗಾರಿಕೆ ನಡೆಸುತ್ತಿದ್ದ ಇಬ್ಬರು ಅರೆಸ್ಟ್ (ಸಾಂದರ್ಭಿಕ ಚಿತ್ರ) -

Priyanka P
Priyanka P Dec 11, 2025 4:33 PM

ಇಟಾನಗರ: ಗಡಿ ರಾಜ್ಯದಲ್ಲಿ ಭಾರತೀಯ ಸೇನೆಯ ಚಲನವಲನಗಳು ಮತ್ತು ರಕ್ಷಣಾ ಸ್ಥಾಪನೆಗಳ ಮೇಲೆ ಬೇಹುಗಾರಿಕೆ (spy) ನಡೆಸಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಅರುಣಾಚಲ ಪ್ರದೇಶದ (Arunachal Pradesh) ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ನಜೀರ್ ಅಹ್ಮದ್ ಮಲಿಕ್ ಮತ್ತು ಸಬೀರ್ ಅಹ್ಮದ್ ಮಿರ್ ಎಂದು ಗುರುತಿಸಲಾಗಿದ್ದು, ಅವರನ್ನು ಇಟಾನಗರದ ಗಂಗಾ ಗ್ರಾಮ ಮತ್ತು ಅಬೋಟಾನಿ ಕಾಲೋನಿಯಿಂದ ಬಂಧಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕುಪ್ವಾರಾ ನಿವಾಸಿಯಾಗಿರುವ ನಜೀರ್ ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ಪ್ರಮುಖ ಕೊಂಡಿ ಎಂದು ಹೇಳಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಈ ಇಬ್ಬರು ಅರುಣಾಚಲ ಪ್ರದೇಶದ ಸೇನಾ ನಿಯೋಜನೆಗಳು ಮತ್ತು ಪ್ರಮುಖ ಮಿಲಿಟರಿ ಸೌಲಭ್ಯಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸುತ್ತಿದ್ದರು. ಗಡಿಯಾಚೆಗಿನ ಹ್ಯಾಂಡ್ಲರ್‌ಗಳೊಂದಿಗೆ ರಹಸ್ಯ ಸಂವಹನಕ್ಕಾಗಿ ಬಳಸಲಾಗುತ್ತಿದ್ದ AL AQSA ಹೆಸರಿನ ಎನ್‌ಕ್ರಿಪ್ಟ್ ಮಾಡಿದ ಟೆಲಿಗ್ರಾಮ್ ಚಾನೆಲ್ ಮೂಲಕ ಪಾಕಿಸ್ತಾನಕ್ಕೆ ಈ ವಿವರಗಳನ್ನು ರವಾನಿಸಿದ್ದರು ಎಂದು ಆರೋಪಿಸಲಾಗಿದೆ.

ಮನೆಗೆ ಬಂದು ಆಹಾರ ಕೇಳಿದ ಭಯೋತ್ಪಾದಕರು: ಬಕರಾಲ್ ಕುಟುಂಬದಿಂದ ಸ್ಪೋಟಕ ಮಾಹಿತಿ, ಭದ್ರತಾ ಪಡೆಗಳಿಂದ ತೀವ್ರ ಶೋಧ

ರಾಜ್ಯದಲ್ಲಿ ಸೇನಾ ನೆಲೆಗಳನ್ನು ಅಸ್ಥಿರಗೊಳಿಸುವ ಗುರಿಯನ್ನು ಹೊಂದಿರುವ ನಿರ್ದೇಶನಗಳು ಸೇರಿದಂತೆ, ನಿರ್ವಾಹಕರಿಂದ ನಜೀರ್ ನೇರ ಸೂಚನೆಗಳನ್ನು ಪಡೆಯುತ್ತಿದ್ದಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೇಹುಗಾರಿಕೆ ಜಾಲದ ಸಂಪೂರ್ಣ ವ್ಯಾಪ್ತಿಯನ್ನು ಬಯಲು ಮಾಡಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅರುಣಾಚಲ ಪೊಲೀಸರು ಇನ್ನೂ ಕೆಲವು ವ್ಯಕ್ತಿಗಳನ್ನು ಗುರುತಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

ರಾಜ್ಯದಲ್ಲಿನ ಹಲವಾರು ಸ್ಥಳೀಯ ಸಂಸ್ಥೆಗಳು ಇತ್ತೀಚೆಗೆ ಅನಿಯಂತ್ರಿತ ಮಸೀದಿ ನಿರ್ಮಾಣ ಮತ್ತು ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳ ಬಗ್ಗೆ ಸಕ್ರಿಯವಾಗಿವೆ. ಅಧಿಕಾರಿಗಳಲ್ಲಿ ಕಟ್ಟುನಿಟ್ಟಾದ ಜಾಗರೂಕತೆಯನ್ನು ಕಾಪಾಡಲು ಒತ್ತಾಯಿಸುತ್ತಿವೆ.

ಒಡಿಶಾದಲ್ಲಿ ರ್ಯಾಗಿಂಗ್ ಕ್ರೌರ್ಯ

ಒಡಿಶಾದ ಭುವನೇಶ್ವರದ ಹೊರವಲಯದಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ರ್ಯಾಗಿಂಗ್ ಮತ್ತು ದೈಹಿಕ ದೌರ್ಜನ್ಯದ ಭಯಾನಕ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯು ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಒಡಿಶಾದ ಶಿಕ್ಷಣ ಸಂಸ್ಥೆಗಳಲ್ಲಿ ರ್ಯಾಗಿಂಗ್ ವಿರೋಧಿ ನಿಯಮಗಳ ಪರಿಣಾಮಕಾರಿತ್ವದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕೇಂದ್ರಪಾರ ಜಿಲ್ಲೆಯ ಔಲ್‌ನ ವಿದ್ಯಾರ್ಥಿ ಮತ್ತು ಎರಡನೇ ವರ್ಷದ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಯಾಗಿರುವ ಸಂತ್ರಸ್ಥ, ತನ್ನ ಸಹಪಾಠಿ ಮತ್ತು ಹಿರಿಯ ವಿದ್ಯಾರ್ಥಿಯೊಬ್ಬರು ಮಾದಕ ದ್ರವ್ಯ ಸೇವಿಸುವಂತೆ ಒತ್ತಾಯಿಸಿದ್ದಾರೆ. ಅವರು ನಿರಾಕರಿಸಿದಾಗ ಕ್ರೂರ ಚಿತ್ರಹಿಂಸೆ ನೀಡಲಾಗಿದೆ ಎಂದು ಹೇಳಿದರು.

ನವೆಂಬರ್ 24 ರಂದು ತನ್ನನ್ನು ಸಂಸ್ಥೆಯ ಎರಡನೇ ಮಹಡಿಗೆ ಕರೆಸಿ, ಶೌಚಾಲಯಕ್ಕೆ ಕರೆದೊಯ್ದು, ಅಲ್ಲಿ ಕ್ರೂರವಾಗಿ ಥಳಿಸಲಾಯಿತು ಎಂದು ವಿದ್ಯಾರ್ಥಿ ಹೇಳಿದ್ದಾನೆ. ಆರೋಪಿಗಳು ಅವನ ಮುಖವನ್ನು ಶೌಚಾಲಯದ ಕಮೋಡ್‍ಗೆ ತಳ್ಳಿದರು, ಕೊಳಕು ನೀರು ಕುಡಿಯುವಂತೆ ಒತ್ತಾಯಿಸಿದರು, ನೆಲವನ್ನು ನೆಕ್ಕುವಂತೆ ಒತ್ತಾಯಿಸಿದರು ಹಾಗೂ ಮುಖ, ಕುತ್ತಿಗೆ, ಎದೆ, ಹೊಟ್ಟೆ ಮತ್ತು ಮೊಣಕಾಲುಗಳಿಗೆ ಪದೇ ಪದೇ ಹೊಡೆದರು. ವಿದ್ಯಾರ್ಥಿ ಹೇಳುವಂತೆ ಅವರು ತನ್ನ ಬೆರಳುಗಳನ್ನು ಮುರಿಯಲು ಪ್ರಯತ್ನಿಸಿದರು, ತಲೆಯನ್ನು ಗೋಡೆಗೆ ಬಡಿದರು ಮತ್ತು ತನ್ನನ್ನು ವಿವಸ್ತ್ರಗೊಳಿಸಲು ಸಹ ಪ್ರಯತ್ನಿಸಿದರು ಎಂದು ಆರೋಪಿಸಲಾಗಿದೆ.

ವಿದ್ಯಾರ್ಥಿಯ ತಾಯಿ ಪಿಪಿಲಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದು, ಅದರ ಆಧಾರದ ಮೇಲೆ ಪೊಲೀಸರು ಪ್ರಕರಣ ಸಂಖ್ಯೆ 656/25 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರಿನಲ್ಲಿ ಆರೋಪಿಗಳು ಥಳಿಸುವುದು, ಮಾದಕ ದ್ರವ್ಯಗಳನ್ನು ಒತ್ತಾಯಿಸುವುದು ಮತ್ತು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಸ್ಪಷ್ಟವಾಗಿ ಆರೋಪಿಸಲಾಗಿದೆ.