Rahul Gandhi: ಬ್ಯಾನ್ ಆದ ಚೀನಿ ಡ್ರೋನ್ ಹಾರಿಸಿದ ರಾಹುಲ್ ಗಾಂಧಿ: ಭುಗಿಲೆದ್ದ ವಿವಾದ!
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಿಷೇಧಿತ ಚೀನಿ ಡ್ರೋನ್ ಹಾರಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಫೆ.15ರಂದು ರಾಹುಲ್ ಗಾಂಧಿ ಡಿಜೆಐ ಡ್ರೋನ್ ಹಾರಿಸಿದ್ದರು. ಆ ವಿಡಿಯೊವನ್ನು ತಮ್ಮ ಎಕ್ಸ್ ಖಾತೆಯಲ್ಲೂ ಹಂಚಿಕೊಂಡಿದ್ದರು. ಡ್ರೋನ್ ಬಳಕೆಯ ಲಾಭ ಪಡೆಯುವಲ್ಲಿ ನರೇಂದ್ರ ಮೋದಿ ವಿಫಲರಾಗಿದ್ದಾರೆ ಎಂದು ಮಾತಿನ ಮೂಲಕ ತಿವಿದಿದ್ದರು.

ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್(Congress) ಸಂಸದ ಮತ್ತು ಲೋಕಸಭೆಯ(Loksabha) ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಭಾರತದಲ್ಲಿ ಬ್ಯಾನ್ ಆಗಿರುವ ಚೀನಿ ಡ್ರೋನ್(China Drone) ಹಾರಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಫೆ.15ರಂದು ರಾಹುಲ್ ಗಾಂಧಿ ಡಿಜೆಐ ಡ್ರೋನ್ ಹಾರಿಸಿದ್ದರು. ಆ ವಿಡಿಯೊವನ್ನು ತಮ್ಮ ಎಕ್ಸ್ ಖಾತೆಯಲ್ಲೂ ಹಂಚಿಕೊಂಡಿದ್ದರು. ಇನ್ನು ವಿಡಿಯೊ ಮೂಲಕ ಪ್ರತಿಕ್ರಿಯಿಸಿದ್ದ ಅವರು ಉಕ್ರೇನ್ ಯುದ್ಧದಲ್ಲಿ ಡ್ರೋನ್‌ಗಳನ್ನು ಹೆಚ್ಚಾಗಿ ಬಳಸುತ್ತಿರುವುದನ್ನು ನಾವು ಕಾಣಬಹುದು. ಆದರೆ ದುರದೃಷ್ಟವಶಾತ್ ಡ್ರೋನ್ ಬಳಕೆಯ ಲಾಭ ಪಡೆಯುವಲ್ಲಿ ನರೇಂದ್ರ ಮೋದಿ ಸರ್ಕಾರ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಮಾತಿನ ಮೂಲಕ ತಿವಿದಿದ್ದರು.
ಡ್ರೋನ್ ಉದ್ಯಮವು ಒದಗಿಸಿದ ಅವಕಾಶವನ್ನು ಪ್ರಧಾನಿ ಮೋದಿ ಗ್ರಹಿಸಲು ವಿಫಲರಾಗಿದ್ದಾರೆ. ಭಾರತಕ್ಕೆ ಬಲವಾದ ಉತ್ಪಾದನಾ ವ್ಯವಸ್ಥೆ ಬೇಕೇ ಹೊರತು ಉದ್ದುದ್ದ ಭಾಷಣಗಳಲ್ಲ ಎಂದು ಸಹ ವಿಡಿಯೊದಲ್ಲಿ ಹೇಳಿದ್ದರು. ಆದರೆ ಇದೀಗ ರಾಹುಲ್ ಅವರು ವಿಡಿಯೊದಲ್ಲಿ ತೋರಿಸಿದ್ದ ಚೀನಿ ಡ್ರೋನ್ ವಿವಾದಕ್ಕೆ ಕಾರಣವಾಗಿದೆ. ಮೋದಿ ಸರ್ಕಾರವನ್ನು ಟೀಕಿಸುವ ಸಲುವಾಗಿ ರಾಹುಲ್ ಗಾಂಧಿ ನಿಷೇಧಿತ ಚೀನೀ ಡ್ರೋನ್ ಪ್ರದರ್ಶಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬ್ಯಾನ್ ಆಗಿರುವ ಚೀನೀ DJI ಡ್ರೋನ್ ಅನ್ನು ಹೆಮ್ಮೆಯಿಂದ ಪ್ರದರ್ಶಿಸಿರುವ ರಾಹುಲ್ ಗಾಂಧಿ ಭಾರತದ ಡ್ರೋನ್ ಉದ್ಯಮವನ್ನು ಅವಮಾನಿಸಿದ್ದಾರೆ ಎಂದು ಡ್ರೋನ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಸ್ಮಿತ್ ಶಾ ಕಟುವಾಗಿ ಟೀಕಿಸಿದ್ದಾರೆ.
Rahul Gandhi's statements dismiss India's drone industry while proudly showcasing a banned Chinese DJI drone.
— Smit Shah 🚀 (@BlameItOnSmit) February 16, 2025
Yes, the industry is still in its nascent stage and a lot has to be done, but arm chair criticism with zero tangible suggestions won’t help.
Collective efforts of… pic.twitter.com/48nOMttUFY
ಭಾರತದಲ್ಲಿ ನ ಚೀನಾದ ಈ ಡ್ರೋನ್ ಅನ್ನು ರಾಹುಲ್ ಗಾಂಧಿ ಹೇಗೆ ತರಿಸಿಕೊಂಡರು? ಕಳ್ಳಸಾಗಣೆ ಮೂಲಕ ತರಲಾಯಿತೆ? ಕಾನೂನಿನ ಪ್ರಕಾರ ಅದು ರಿಜಿಸ್ಟರ್ ಆಗಿದೆಯೇ? ರಾಹುಲ್ ಗಾಂಧಿಗೆ ನಿಯಮಗಳು ಅನ್ವಯಿಸುವುದಿಲ್ಲವೇ ಎಂದು ಗಂಭೀರವಾಗಿ ಪ್ರಶ್ನೆ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Modi-Trump Meet: ಭಾರತ-ಅಮೆರಿಕ ನಾಗರಿಕ ಪರಮಾಣು ಸಹಕಾರದಲ್ಲಿ ಮುಂದುವರಿಯಲು ಮೋದಿ-ಟ್ರಂಪ್ ಸಮ್ಮತಿ
ಅಲ್ಲದೇ ಬ್ಯಾಟರಿಗಳು, ಪ್ರೊಪೆಲ್ಲರ್‌ಗಳು, ಫ್ಲೈಟ್ ಕಂಟ್ರೋಲರ್‌ಗಳು ಮತ್ತು ಮೋಟಾರ್‌ಗಳು ಸೇರಿದಂತೆ ಡ್ರೋನ್ ಘಟಕ ತಯಾರಿಸುವ 50ಕ್ಕೂ ಹೆಚ್ಚು ಕಂಪನಿಗಳು ದೇಶದಲ್ಲಿವೆ. ಹೀಗಿರುವಾಗ ಡ್ರೋನ್ ಬಗ್ಗೆ ತಿಳಿವಳಿಕೆ ಇಲ್ಲದವರು ಟೀಕೆ ಮಾಡುವುದು ತಪ್ಪು ಎಂದು ಸ್ಮಿತ್ ಶಾ ತಿರುಗೇಟು ನೀಡಿದ್ದಾರೆ.