ದೇಣಿಗೆ ಕಳವು ಪ್ರಕರಣ: ಅಯೋಧ್ಯೆ ರಾಮಮಂದಿರ ಟ್ರಸ್ಟ್‌ನಿಂದ ಬ್ಯಾಂಕ್ ಲಾಕರ್‌ನಲ್ಲಿರುವ ಚಿನ್ನ, ಬೆಳ್ಳಿ ಪರಿಶೀಲನೆ
ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ ತನಿಖೆ ನಡುವೆಯೇ ರಾಮ ಮಂದಿರದ ಟ್ರಸ್ಟ್ ಬ್ಯಾಂಕ್ ಲಾಕರ್ ನಲ್ಲಿಟ್ಟಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿಯನ್ನು ಕೂಡ ಪರಿಶೀಲಿಸಿದೆ. ಅಯೋಧ್ಯೆ ರಾಮ ಮಂದಿರದಲ್ಲಿ ನಡೆದ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಎಂಟು ಮಂದಿಯನ್ನು ವಿಶೇಷ ತನಿಖಾ ತಂಡ ಬಂಧಿಸಿದೆ. ಇವರು ದೇಣಿಗೆ ಪೆಟ್ಟಿಗೆಯಿಂದ ಲಕ್ಷಾಂತರ ರೂಪಾಯಿ ಕಳ್ಳತನ ಮಾಡಿದ್ದರು ಎಂದು ಎಸ್ಐಟಿ ವರದಿ ತಿಳಿಸಿದೆ.
ಸಂಗ್ರಹ ಚಿತ್ರ -
ಉತ್ತರಪ್ರದೇಶ: ಅಯೋಧ್ಯೆ ರಾಮ ಮಂದಿರ (ayodhya Ram Mandir) ಕಳ್ಳತನ ಪ್ರಕರಣ (donation theft) ಬೆಳಕಿಗೆ ಬಂದ ಮೇಲೆ ದೇವಾಲಯಕ್ಕೆ ಸೇರಿದ ಪ್ರತಿಯೊಂದು ವಸ್ತುಗಳನ್ನು ರಾಮ ಮಂದಿರ ಟ್ರಸ್ಟ್ (Shri Ram Janmabhoomi Teerth Kshetra Trust) ಪರಿಶೀಲನೆ ನಡೆಸುತ್ತಿದೆ. ಇದೀಗ ವಿಶೇಷ ತನಿಖಾ ತಂಡದ ತನಿಖೆಯ ನಡುವೆಯೇ ರಾಮ ಮಂದಿರ ಟ್ರಸ್ಟ್ ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿಯನ್ನು ಪರಿಶೀಲಿಸಿದೆ. ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಎಂಟುಮಂದಿಯನ್ನು ಬಂಧಿಸಲಾಗಿದ್ದು, ಇವರು ಸುಮಾರು 40 ದಿನಗಳ ಕಾಲ ಮಂದಿರದ ದೇಣಿಗೆ ಪೆಟ್ಟಿಗೆಯಿಂದ ಲಕ್ಷಾಂತರ ರುಪಾಯಿ ಕಳ್ಳತನ ಮಾಡಿರುವುದಾಗಿ ವಿಶೇಷ ತನಿಖಾ ತಂಡದ ಪ್ರಾಥಮಿಕ ವರದಿ ತಿಳಿಸಿದೆ.
ಇದೀಗ ದೇಣಿಗೆ ಕಳ್ಳತನದ ತನಿಖೆಯನ್ನು ಪುನರಾರಂಭಿಸಲು ಎಸ್‌ಐಟಿ ಮುಂದಾಗುತ್ತಿದ್ದಂತೆ ರಾಮ ಮಂದಿರ ಟ್ರಸ್ಟ್ ಅಯೋಧ್ಯೆಯ ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ಇತರ ಅಮೂಲ್ಯ ವಸ್ತುಗಳನ್ನು ಪರಿಶೀಲಿಸಿದೆ.
ಉಕ್ಕಿ ಹರಿಯುವ ನದಿಯ ಮಧ್ಯೆ ಜೀವ ಪಣಕ್ಕಿಟ್ಟು ಶಾಲೆಗೆ ತೆರಳುವ ಮಕ್ಕಳು; ವೈರಲ್ ವಿಡಿಯೊ ಇಲ್ಲಿದೆ
ಈ ಕುರಿತು ದೇವಾಲಯದ ಮೂಲಗಳು ಮಂಗಳವಾರ ಮಾಹಿತಿ ನೀಡಿದ್ದು, ರಾಮ ಮಂದಿರ ಟ್ರಸ್ಟ್‌ನ ಮಧ್ಯಂತರ ಪ್ರಧಾನ ಕಾರ್ಯದರ್ಶಿ ಅಯೋಧ್ಯೆಯ ಬ್ಯಾಂಕ್ ಲಾಕರ್‌ನಲ್ಲಿ ಇರಿಸಲಾಗಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ಇತರ ಅಮೂಲ್ಯ ಲೋಹಗಳನ್ನು ಸಂಬಂಧಿತ ದಾಖಲೆಗಳೊಂದಿಗೆ ಪರಿಶೀಲಿಸಿದ್ದಾರೆ ಎಂದು ತಿಳಿಸಿದೆ.
ಪ್ರಧಾನ ಕಾರ್ಯದರ್ಶಿ ಕೃಷ್ಣ ಮೋಹನ್ ಅವರು ಸೋಮವಾರ ಸಂಜೆ ಅಯೋಧ್ಯೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಭೇಟಿ ನೀಡಿ ತಡರಾತ್ರಿಯವರೆಗೆ ಅಲ್ಲೇ ಇದ್ದರು. ಈ ಸಂದರ್ಭದಲ್ಲಿ ಬ್ಯಾಂಕ್ ಲಾಕರ್‌ನಲ್ಲಿರುವ ಚಿನ್ನ, ಬೆಳ್ಳಿ ಮತ್ತು ಇತರ ಅಮೂಲ್ಯ ಲೋಹದ ವಸ್ತುಗಳ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲಾಯಿತು. ಕೃಷ್ಣ ಮೋಹನ್ ಅವರು ಕಳೆದ ಮೂರು ದಿನಗಳಿಂದ ಟ್ರಸ್ಟ್‌ನ ಖಾತೆಗಳು ಮತ್ತು ಇತರ ದಾಖಲೆಗಳನ್ನು ಪರಿಶೀಲಿಸುತ್ತಿದ್ದರು. ಈ ಬಳಿಕ ದೇವಾಲಯಕ್ಕೆ ಸೇರಿದ ಅಮೂಲ್ಯವಾದ ವಸ್ತುಗಳ ಅಂತಿಮ ಪಟ್ಟಿಯನ್ನು ತಯಾರಿಸಲಾಗಿದೆ ಎನ್ನಲಾಗಿದೆ.
Ayodhya, Uttar Pradesh: Interim General Secretary of the Shri Ram Janmabhoomi Teerth Kshetra Trust, Krishna Mohan, visited the State Bank of India branch as an inventory of gold and silver stored in bank lockers was prepared. The exercise comes ahead of the expected arrival of a… pic.twitter.com/DVszd4W11b
— IANS (@ians_india) August 4, 2026
ಆದರೆ ಈ ಕುರಿತು ಮಾಧ್ಯಮಗಳು ಕೇಳಿರುವ ಪ್ರಶ್ನೆಗೆ ಕೃಷ್ಣ ಮೋಹನ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಾಮ ಮಂದಿರದಲ್ಲಿನ ವ್ಯವಸ್ಥೆಗಳನ್ನು ಬಂದು ನೋಡಿ. ಯಾವುದೇ ನ್ಯೂನತೆ ಇದ್ದರೆ ನಮಗೆ ತಿಳಿಸಿ ಎಂದು ಹೇಳಿದರು.
ರಾಮ ಮಂದಿರದ ದೇಣಿಗೆ ಕಳವು ಪ್ರಕರಣ ಜೂನ್ ಮೊದಲ ವಾರದಲ್ಲಿ ಬೆಳಕಿಗೆ ಬಂದಿದ್ದು ಇದರ ತನಿಖೆಗೆ ಉತ್ತರ ಪ್ರದೇಶ ಸರ್ಕಾರ ಜೂನ್ 13 ರಂದು ವಿಶೇಷ ತನಿಖಾ ತಂಡವನ್ನು ರಚಿಸಿತು. ಜೂನ್ 23 ರಂದು ಪ್ರಾಥಮಿಕ ಎಸ್‌ಐಟಿ ವರದಿ ಸಲ್ಲಿಸಿದ್ದು, ಜೂನ್ 25 ರಂದು ಎಫ್‌ಐಆರ್ ದಾಖಲಿಸಲಾಗಿದೆ.
ಉಕ್ಕಿ ಹರಿಯುವ ನದಿಯ ಮಧ್ಯೆ ಜೀವ ಪಣಕ್ಕಿಟ್ಟು ಶಾಲೆಗೆ ತೆರಳುವ ಮಕ್ಕಳು; ವೈರಲ್ ವಿಡಿಯೊ ಇಲ್ಲಿದೆ
ಇದರಲ್ಲಿ ದಾಖಲಿಸಿರುವ ಎಂಟು ಪ್ರಮುಖ ಆರೋಪಿಗಳಾದ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವ್‌ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಅವರನ್ನು ಬಂಧಿಸಲಾಗಿದೆ. ಇದೀಗ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ವಿಶೇಷ ತನಿಖಾ ತಂಡ ಮತ್ತೆ ಮಂಗಳವಾರದಿಂದ ತನಿಖೆ ಆರಂಭಿಸಲಿದೆ ಎನ್ನಲಾಗಿದೆ.