ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗಣೇಶ ಮೂರ್ತಿ ಮೆರವಣಿಗೆ ಮೇಲೆ ಮೊಟ್ಟೆ ದಾಳಿ: ಬಿಗಿ ಭದ್ರತೆ

Eggs thrown at Ganesh idol procession: ಗಣೇಶ ಮೂರ್ತಿ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಭಾರಿ ಘರ್ಷಣೆ ನಡೆದ ಘಟನೆ ಮಹಾರಾಷ್ಟ್ರದ ಮುಂಬೈಯ ಮಜ್ಗಾಂವ್ ಪ್ರದೇಶದಲ್ಲಿ ನಡೆದಿದ್ದು, ಸ್ಥಳದಲ್ಲಿ ಭಾರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ಮತ್ತಷ್ಟು ಗಲಭೆ ನಡೆಯದಂತೆ ತಡೆಯಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಗಣೇಶ ಮೂರ್ತಿ ಮೆರವಣಿಗೆ ಮೇಲೆ ಮೊಟ್ಟೆ ದಾಳಿ, ಘರ್ಷಣೆ

ಮುಂಬೈಯಲ್ಲಿ ಗಣೇಶ ಮೂರ್ತಿ ಮೆರವಣಿಗೆ ಮೇಲೆ ಮೊಟ್ಟೆ ದಾಳಿ -

Priyanka P
Priyanka P Aug 24, 2026 2:44 PM

ಮುಂಬೈ, ಆ. 24: ಗಣೇಶ ಮೂರ್ತಿ ಮೆರವಣಿಗೆ ವೇಳೆ ಎರಡು ಗುಂಪುಗಳ ಮಧ್ಯೆ ಭಾರಿ ಘರ್ಷಣೆ ನಡೆದ ಘಟನೆ ಮಹಾರಾಷ್ಟ್ರದ (Maharashtra) ಮುಂಬೈಯ ಮಜ್ಗಾಂವ್ ಪ್ರದೇಶದಲ್ಲಿ ನಡೆದಿದ್ದು, ಸ್ಥಳದಲ್ಲಿ ಭಾರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ಗಣೇಶ ಮೂರ್ತಿ ಮೆರವಣಿಗೆ ವೇಳೆ ಈ ಘಟನೆ ಸಂಭವಿಸಿದೆ (Ganesh procession clash). ಗಣೇಶ ಮೂರ್ತಿ ಮೆರವಣಿಗೆ ವೇಳೆ ಮೊಟ್ಟೆಗಳನ್ನು ಎಸೆಯಲಾಗಿದ್ದು, ನಂತರ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿದೆ ಎಂದು ಗಣೇಶ ಉತ್ಸವದ ಆಯೋಜಕರು ಆರೋಪಿಸಿದ್ದಾರೆ.

ಮತ್ತಷ್ಟು ಗಲಭೆಗಳು ನಡೆಯದಂತೆ ತಡೆಯಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಶನಿವಾರ (ಆ. 22) ರಾತ್ರಿ ಮುಂಬೈಯ ಭುಲೇಶ್ವರ ಪ್ರದೇಶದಲ್ಲಿ 'ಭುಲೇಶ್ವರಚ ರಾಜ'ದ ಬೃಹತ್ ಗಣೇಶ ಮೂರ್ತಿ ಆಗಮನ ಮೆರವಣಿಗೆಯ ಸಮಯದಲ್ಲಿ ಬಿದ್ದು ಇಬ್ಬರು ಮೃತಪಟ್ಟು, ಐವರು ಗಾಯಗೊಂಡ ಒಂದು ದಿನದ ನಂತರ ಈ ಬೆಳವಣಿಗೆ ಸಂಭವಿಸಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಹೇಳಿದೆ.

ಭುಲೇಶ್ವರದ ಜಯ್ ಅಂಬೆ ಚೌಕ್‌ನಲ್ಲಿರುವ ಕಬುತರ್ಖಾನಾ ಬಳಿ ಈ ಘಟನೆ ಸಂಭವಿಸಿದೆ. ಘಟನೆಯ ನಂತರ, ಬಿಎಂಸಿ, ಮುಂಬೈ ಅಗ್ನಿಶಾಮಕ ದಳ, ಮುಂಬೈ ಪೊಲೀಸರು, ಸಂಚಾರ ಪೊಲೀಸರು, 108 ತುರ್ತು ಆಂಬ್ಯುಲೆನ್ಸ್ ಸೇವೆ ಮತ್ತು ಬಿಎಂಸಿ ವಾರ್ಡ್ ಸಿಬ್ಬಂದಿ ಸ್ಥಳಕ್ಕೆ ತೆರಳಿದರು.

ಇಲ್ಲಿದೆ ವಿಡಿಯೊ:





ಮೈಮೇಲೆಯೇ ವಿಗ್ರಹ ಬಿದ್ದ ಪರಿಣಾಮ ಅಖಿಲ್ ಭೂಲೇಶ್ವರ ಸಾರ್ವಜನಿಕ ಗಣೇಶ ಮಂಡಲದ ಅಧ್ಯಕ್ಷ ಸಂಕೇತ್ ನೆವಾಸೆ (33) ಮತ್ತು ಸ್ಥಳೀಯ ನಿವಾಸಿ ಬ್ರಿಜೇಶ್ ಹೇಮಂತ್ ಜೋಶಿ (30) ಸ್ಥಳದಲ್ಲೇ ಸಾವಿಗೀಡಾದ್ದಾರೆ. ವಿಗ್ರಹ ಬೀಳಲು ಏನು ಕಾರಣ ಎಂಬುದು ಇನ್ನೂ ತಿಳಿದುಬಂದಿಲ್ಲ. ಮಂಡಳಿಯು, ಈ ವರ್ಷ ಗಣೇಶೋತ್ಸವವನ್ನು ಆಚರಿಸಬೇಕೇ ಹಾಗೂ ಮತ್ತೊಂದು ವಿಗ್ರಹವನ್ನು ತರಬೇಕೇ ಎಂಬುದನ್ನು ನಿರ್ಧರಿಸಲು ಸಭೆ ನಡೆಸುವುದಾಗಿ ಭುಲೇಶ್ವರ್ ಮಂಡಳದ ಪದಾಧಿಕಾರಿ ಅಭಿ ಎಸ್. ತಿಳಿಸಿದ್ದಾರೆ.

ರೀಲ್ಸ್‌ಗಾಗಿ ರೈಲ್ವೇ ಸೇತುವೆ ಮೇಲೆ ನಿಂತು ಯುವಕರ ಅಪಾಯಕಾರಿ ಸಾಹಸ

ಮೃತಪಟ್ಟ ಬ್ರಿಜೇಶ್ ಜೋಶಿ ಫಿಲ್ಮ್ ಸಿಟಿಯ ಏಜೆನ್ಸಿಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಬ್ರಿಜೇಶ್ ಮಂಡಳಿಯ ಸದಸ್ಯರಲ್ಲದಿದ್ದರೂ ಸಹ, ಪ್ರತಿ ವರ್ಷ 'ಭುಲೇಶ್ವರ್ಚಾ ರಾಜ'ನ ಆಹ್ವಾನದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

ಭುಲೇಶ್ವರ ದುರಂತದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖಾ ವರದಿಯ ಮೂಲಕ ಎಲ್ಲಾ ವಿವರಗಳು ಹೊರಬರಲಿವೆ ಎಂದು ಮಹಾರಾಷ್ಟ್ರದ ಸಚಿವ ಆಶಿಶ್ ಶೆಲಾರ್ ತಿಳಿಸಿದ್ದಾರೆ. ಇದು ತೀವ್ರ ನೋವಿನ ಘಟನೆ ಎಂದು ಕರೆದ ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದರು.