ರೀಲ್ಸ್‌ಗಾಗಿ ರೈಲ್ವೇ ಸೇತುವೆ ಮೇಲೆ ನಿಂತು ಯುವಕರ ಅಪಾಯಕಾರಿ ಸಾಹಸ: ವಿಡಿಯೋ ನೋಡಿ
Viral Video: ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿನ ಮಧ್ಯೆ, ಬ್ರಿಡ್ಜ್ ಮೇಲೆ ನಿಂತೂ ರೀಲ್ಸ್ ರೆಕಾರ್ಡ್ ಮಾಡಿದ ಅನೇಕ ಘಟನೆಗಳು ವೈರಲ್ ಆಗಿವೆ. ಇದೀಗ ಮುಂಬೈನ ಭಾಯಂದರ್ ಖಾಡಿಯ ರೈಲ್ವೆ ಸೇತುವೆಯ ಕೆಳ ಭಾಗದಲ್ಲಿ ಯುವಕರ ಗುಂಪೊಂದು ಹುಚ್ಚಾಟ ಮೆರೆಯುತ್ತಿದೆ. ಈ ಅಪಾಯ ಕಾರಿ ಸಾಹಸ ಸೋಷಿಯಲ್ ಮೀಡಿಯಾ ಬಳಕೆದಾರರಲ್ಲಿ ಕಳವಳವನ್ನು ಹುಟ್ಟುಹಾಕಿದೆ.
ರೈಲ್ವೇ ಸೇತುವೆ ಮೇಲೆ ನಿಂತು ಹುಚ್ಚಾಟ ಮೆರೆದ ಯುವಕರ ಗುಂಪು -
ಮುಂಬೈ,ಆ.12: ಇತ್ತೀಚೆಗೆ ಅಪಾಯಕಾರಿ ಸ್ಥಳದಲ್ಲಿ ರೀಲ್ಸ್ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿನ ಮಧ್ಯೆ, ಬ್ರಿಡ್ಜ್ ಮೇಲೆ ನಿಂತೂ ರೀಲ್ಸ್ ರೆಕಾರ್ಡ್ ಮಾಡಿದ ಅನೇಕ ಘಟನೆಗಳು ವೈರಲ್ (Viral Video) ಆಗಿವೆ. ಇದೀಗ ಮುಂಬೈನ ಭಾಯಂದರ್ ಖಾಡಿಯ ರೈಲ್ವೆ ಸೇತುವೆಯ ಕೆಳ ಭಾಗದಲ್ಲಿ ಯುವಕರ ಗುಂಪೊಂದು ಹುಚ್ಚಾಟ ಮೆರೆಯುತ್ತಿದೆ. ಈ ಅಪಾಯಕಾರಿ ಸಾಹಸ ಸೋಷಿಯಲ್ ಮೀಡಿಯಾ ಬಳಕೆದಾರರಲ್ಲಿ ಕಳವಳವನ್ನು ಹುಟ್ಟುಹಾಕಿದೆ.
ಯುವಕರ ಗುಂಪೊಂದು ಏಣಿಯ ಸಹಾಯದಿಂದ ಸೇತುವೆಯ ಕೆಳಭಾಗಕ್ಕೆ ಪ್ರವೇಶಿಸುತ್ತಿದ್ದಾರೆ. ಅದರಲ್ಲಿ ಒಬ್ಬ ಯುವಕ ರೇಲಿಂಗ್‌ನಿಂದ ನೇತಾಡುತ್ತ ತೂಗಾಡುತ್ತಿರುವಂತೆ ಕಾಣುತ್ತಿದ್ದರೆ, ಇನ್ನೊಬ್ಬ ಯುವಕ ಪುಲ್-ಅಪ್‌ಗಳನ್ನು ಮಾಡುತ್ತಿರುವಂತೆ ಕಾಣುತ್ತಿದೆ. ಮತ್ತೊಬ್ಬ ಯುವಕ ಸೇತುವೆಯ ಗೋಡೆಯ ಮೇಲೆ ಗೀಚುಬರಹವನ್ನು ಚಿತ್ರಿಸುತ್ತಿರುವಂತೆ ಕಾಣುತ್ತಿದೆ. ಈ ಘಟನೆಯೂ ಸಾರ್ವಜನಿಕ ಭದ್ರತೆ ಮತ್ತು ರೈಲ್ವೆ ಆಸ್ತಿಗೆ ಹಾನಿ ಉಂಟು ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿವೆ.
ವಿಡಿಯೋ ನೋಡಿ:
Urgent attention required!
— Bharatiya Trainspotter (@Bh_trainspotter) August 11, 2026
Damage to railway property at Bhayandar Creek Bridge is a serious safety concern. Request @WesternRly @drmbct @rpfwr1 @RailMadad @RailMinIndia to urgently inspect the site, secure the area and take appropriate action against those responsible. pic.twitter.com/eUHAgsSHLL
ಆಳವಾಗಿ ನೀರು ಹರಿಯುತ್ತಿದ್ದರೂ ಸೇತುವೆಯ ಕಂಬಿಗಳನ್ನು ಹಿಡಿದುಕೊಂಡು ಮೂವರು ಯುವಕರು ನೇತಾಡುತ್ತಿದ್ದಾರೆ. ಮತ್ತೊಬ್ಬ ಯುವಕ ಕಂಬಿ ಹಿಡಿದು ಪುಲ್-ಅಪ್ಸ್ ಮಾಡುತ್ತಿ ರುವುದು ವೀಡಿಯೋದಲ್ಲಿದೆ. ಈ ಅಪಾಯಕಾರಿ ಸಾಹಸದಲ್ಲಿ ಭಾಗಿಯಾಗಿರುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಮತ್ತು ರೈಲ್ವೆ ಅಧಿಕಾರಿಗಳು ಸ್ಥಳವನ್ನು ಪರಿಶೀಲಿಸಿ ಸುರಕ್ಷಿತಗೊಳಿಸಲು ಒತ್ತಾಯಿಸಿದ್ದಾರೆ.
Viral Video: ಗದ್ದೆಯಲ್ಲಿದ್ದ ಆನೆಗೆ ಟಾರ್ಚ್ ತೋರಿಸಿ ಕೆರಳಿಸಿದ ಜನ; ನುಗ್ಗಿ ದಾಳಿ ಮಾಡಿದ ಒಂಟಿ ಸಲಗ
ಕೆಲವರು ರೈಲ್ವೇ ಸಚಿವಾಲಯವನ್ನು ಟ್ಯಾಗ್ ಮಾಡಿ, ಭದ್ರತಾ ಲೋಪದ ಕುರಿತು ನೆಟ್ಟಿಗರು ಗಮನ ಸೆಳೆದಿದ್ದಾರೆ. ಈ ವೀಡಿಯೊವನ್ನು ಆರಂಭದಲ್ಲಿ ಸೆಕ್ಟೋರ್ಬೆಕ್ಸ್ ಖಾತೆಯಿಂದ ಶೇರ್ ಮಾಡ ಲಾಗಿದ್ದು, ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಹಾಗೂ 4,500 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.
ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿಗಳನ್ನು ಗುರುತಿಸಲಾಗಿದೆಯೇ ಅಥವಾ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದರ ಕುರಿತು ಇಲ್ಲಿಯವರೆಗೆ ಯಾವುದೇ ದೃಢೀಕೃತ ಮಾಹಿತಿ ಇಲ್ಲ. ರೈಲ್ವೆ ಅಧಿಕಾರಿಗಳು ಈ ವಿಚಾರದ ಕುರಿತು ಹೆಚ್ಚಿನ ವಿವರಗಳನ್ನು ಇನ್ನೂ ನೀಡಿಲ್ಲ..