ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Weight Loss: ಯೂಟ್ಯೂಬ್‌ ವಿಡಿಯೋ ನೋಡಿ ಡಯಟ್ ಮಾಡಿದ್ದ ಕೇರಳದ ಯುವತಿ ಸಾವು !

ಯೂಟ್ಯೂಬ್ ನಲ್ಲಿ ಡಯಟ್ ಮಾಡುವ ವಿಡಿಯೋ ನೋಡಿದ 18 ವರ್ಷದ ಯುವತಿಯೊಬ್ಬಳು ಗಂಭೀರವಾದ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಮೃತಪಟ್ಟಿರುವ ಯುವತಿಯನ್ನು ಕಣ್ಣೂರಿನ ಕೂತುಪರಂಬ ನಿವಾಸಿ ಎಂ. ಶ್ರೀನಂದ ಎಂದು ಗುರುತಿಸಲಾಗಿದೆ.

ಯೂಟ್ಯೂಬ್‌ ವಿಡಿಯೋ ನೋಡಿ ಡಯಟ್ ಮಾಡಿದ್ದ ಯುವತಿ ಸಾವು !

ಮೃತಪಟ್ಟ ಯುವತಿ

Profile Vishakha Bhat Mar 10, 2025 3:32 PM

ತಿರುವನಂತಪುರಂ: ಯೂಟ್ಯೂಬ್ ನಲ್ಲಿ ಡಯಟ್ ಮಾಡುವ ವಿಡಿಯೋ ನೋಡಿದ 18 ವರ್ಷದ ಯುವತಿಯೊಬ್ಬಳು ಗಂಭೀರವಾದ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಮೃತಪಟ್ಟಿರುವ ಯುವತಿಯನ್ನು ಕಣ್ಣೂರಿನ ಕೂತುಪರಂಬ ನಿವಾಸಿ ಎಂ. ಶ್ರೀನಂದ ಎಂದು ಗುರುತಿಸಲಾಗಿದ್ದು, ಆಕೆ ಅಧಿಕ ತೂಕ (Weight Loss) ಹೊಂದಿದ್ದಾಳೆಂದು ಭಾವಿಸಿ ಯೂಟ್ಯೂಬ್ ನಲ್ಲಿ ನೋಡಿದ ಆಹಾರ ಕ್ರಮವನ್ನು ಅನುಸರಿಸುತ್ತಿದ್ದಳು. ದೇಹಕ್ಕೆ ಬೇಕಾಗಿರುವ ಆಹಾರಕ್ಕಿಂತ ಕಡಿಮೆ ಆಹಾರ ಸೇವಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಕೆಲ ದಿನಗಳಿಂದ ಆಕೆ ನೀರನ್ನು ಮಾತ್ರ ಸೇವಿಸುತ್ತಿದ್ದಳು ಎಂದು ಹೇಳಲಾಗಿದೆ.

ಮಟ್ಟನ್ನೂರಿನ ಪಳಸ್ಸಿ ರಾಜಾ ಎನ್‌ಎಸ್‌ಎಸ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ ಶ್ರೀನಂದಳನ್ನು ತೀವ್ರ ಆಯಾಸ ಮತ್ತು ವಾಂತಿಯ ಲಕ್ಷಣಗಳು ಕಾಣಿಸಿಕೊಂಡ ನಂತರ ಒಂದು ವಾರದ ಹಿಂದೆ ತಲಶ್ಶೇರಿ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್‌ ಮೂಲಕ ಆಕೆ ಉಸಿರಾಡುತ್ತಿದ್ದಳು. ತಲಶ್ಶೇರಿ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಶನಿವಾರ ಕೊನೆಯುಸಿರೆಳೆದಿದ್ದಾಳೆ. ಶ್ರೀನಂದ ಅಧಿಕ ತೂಕ ಹೊಂದಿದ್ದಾಳೆಂದು ಭಾವಿಸಿ ಯೂಟ್ಯೂಬ್‌ ನೋಡಿ ಆಹಾರ ಕ್ರಮವನ್ನು ಅನುಸರಿಸುತ್ತಿದ್ದಳು. ದೇಹಕ್ಕೆ ಬೇಕಾಗಿರುವ ಆಹಾರಕ್ಕಿಂತ ಕಡಿಮೆ ಆಹಾರ ಸೇವಿಸಿ ನಂತರ ಆಕೆಯ ಹೊಟ್ಟೆ ಮತ್ತು ಅನ್ನನಾಳ ಕುಗ್ಗಿ ಅನಾರೋಗ್ಯಕ್ಕೆ ಒಳಗಾಗಿ ಪ್ರಾಣ ಬಿಟ್ಟಿದ್ದಾಳೆ ಎಂದು ವರದಿಯಾಗಿದೆ.

ಅವಳು ಸುಮಾರು ಆರು ತಿಂಗಳಿನಿಂದ ಸರಿಯಾಗಿ ಏನೂ ತಿಂದಿರಲಿಲ್ಲ. ತೂಕ ಇಳಿಸಿಕೊಳ್ಳಲು ಬಯಸಿದ್ದರಿಂದ ತುಂಬಾ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸುತ್ತಿದ್ದಳು. ಆಕೆಯ ದೇಹದ ಮೇಲೆ ಗಂಭೀರ ಪರಿಣಾಮ ಬೀರಿದ್ದರಿಂದ, ಹುಡುಗಿಯ ಕುಟುಂಬವು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿತು. ಆದರೆ ಚಿಕಿತ್ಸೆ ಫಲಕಾರಿಯಾದೆ ಯುವತಿ ಮೃತಪಟ್ಟಿದ್ದಾಳೆ.

ಈ ಸುದ್ದಿಯನ್ನೂ ಓದಿ: Weight Loss Journey: 150 ಕೆಜಿಯಿಂದ 68 ಕೆಜಿಗೆ ತೂಕ ಇಳಿಸಿಕೊಂಡ ಮಹಿಳೆ; ಇಲ್ಲಿದೆ ನೋಡಿ ಅವರ ವೈಟ್‌ಲಾಸ್‌ ಜರ್ನಿ!

ಅವರಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ. ನಾಗೇಶ್ ಪ್ರಭು, ಶ್ರೀನಂದಾ ಅನೋರೆಕ್ಸಿಯಾ ನರ್ವೋಸಾ (anorexia nervosa)ಎಂಬ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದಳು ಎಂದು ಹೇಳಿದ್ದಾರೆ. ಈ ಖಾಯಿಲೆಯು ತೂಕ ಹೆಚ್ಚಾಗುವ ತೀವ್ರ ಭಯದಿಂದ ಉಂಟಾಗುವ ಅಸ್ವಸ್ಥತೆಯಾಗಿದೆ. ಈ ಕಾಯಿಲೆಯ ಪ್ರಕಾರ ರೋಗಿಗಳು ಅಂತಿಮವಾಗಿ ತಮ್ಮ ಹಸಿವಿನ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಾರೆ, ಮತ್ತು ಶ್ರೀನಂದ ಅವರ ಪ್ರಕರಣದಲ್ಲಿ, ಅವರ ಸೋಡಿಯಂ ಮತ್ತು ಸಕ್ಕರೆ ಮಟ್ಟ ಸಂಪೂರ್ಣವಾಗಿ ಕುಸಿದಿತ್ತು ಎಂದು ವೈದ್ಯರು ಹೇಳಿದ್ದಾರೆ.