ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Child Rescued: 2ನೇ ಮದುವೆಗಾಗಿ ಮಗನನ್ನೇ ಅಡವಿಟ್ಟ ತಂದೆ; ರಾಜಸ್ಥಾನದಲ್ಲೊಂದು ಅಮಾನವೀಯ ಘಟನೆ

ಎರಡನೇ ಮದುವೆಗಾಗಿ ತಂದೆಯೊಬ್ಬ ಮಗನನ್ನೇ ಅಡವಿಟ್ಟ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ. ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಬಾಲಕನನ್ನು ಗುಜರಾತ್‌ನಲ್ಲಿ ರಕ್ಷಿಸಿದ್ದಾರೆ. ಮರು ಮದುವೆಯಾಗುವ ದುರಾಸೆಯಿಂದ ತಂದೆಯೇ ತನ್ನ ಒಂಬತ್ತು ವರ್ಷದ ಮಗನನ್ನು 45,000 ರೂ.ಗೆ ಅಡವಿಟ್ಟ ಈ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ.

ಸಾಲಗಾರರಿಂದ ಬಾಲಕನನ್ನು ರಕ್ಷಿಸಿದ ಶಿಕ್ಷಕ

ಸಾಂದರ್ಭಿಕ ಚಿತ್ರ.

ಜೈಪುರ: ಎರಡನೇ ಮದುವೆಗಾಗಿ ತಂದೆಯೊಬ್ಬ ಮಗನನ್ನೇ ಅಡವಿಟ್ಟ (Mortgages) ಘಟನೆ ರಾಜಸ್ಥಾನದ ಉದಯಪುರದಲ್ಲಿ (Udaipur) ನಡೆದಿದೆ. ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಬಾಲಕನನ್ನು (Child Rescued) ಗುಜರಾತ್‌ನಲ್ಲಿ ರಕ್ಷಿಸಿದ್ದಾರೆ. ಮರು ಮದುವೆಯಾಗುವ ದುರಾಸೆಯಿಂದ ತಂದೆಯೇ ತನ್ನ ಒಂಬತ್ತು ವರ್ಷದ ಮಗನನ್ನು 45,000 ರೂ.ಗೆ ಅಡವಿಟ್ಟಿರುವ ಈ ಘಟನೆ ಉದಯಪುರದ ಕೊಟಾಡಾದ ಅಂಬಾಡೆ ಪ್ರದೇಶದಲ್ಲಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಸ್ಥಳೀಯ ಪದ್ಧತಿಗಳ ಪ್ರಕಾರ ವರನ ಕಡೆಯವರು ಪಾವತಿಸಬೇಕಾದ ವಿವಿಧ ತೆರಿಗೆಗಳಿಗಾಗಿ ಬಾಲಕನ ತಂದೆ ತನ್ನ ಅಪ್ರಾಪ್ತ ಮಗನನ್ನೇ ಅಡವಿಟ್ಟಿದ್ದಾನೆ ಎನ್ನಲಾಗಿದೆ.

ಬಾಲಕನ ತಂದೆ ಮಿರ್ಖಾ ಎಂಬಾತ ಟೆಮಿ ಎಂಬ ಮಹಿಳೆಯೊಂದಿಗೆ ಎರಡನೇ ವಿವಾಹಕ್ಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಬಳಿಕ ಇಬ್ಬರೂ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದಾರೆ. ಸ್ಥಳೀಯ ಪಂಚರು ಅವರಿಗೆ ಸಾಮಾಜಿಕ ಪದ್ಧತಿಗಳ ಪ್ರಕಾರ ಮದುವೆಯಾಗಲು ಒತ್ತಾಯಿಸಿದರು. ಇದಕ್ಕೆ 45,000 ರೂ. ದಾಪ ಮೊತ್ತವನ್ನು ಮಿರ್ಖಾ ತೆರಿಗೆಯಾಗಿ ಪಾವತಿಸಬೇಕಿತ್ತು. ಈ ಹಣವನ್ನು ಹೊಂದಿಸಲು ಸಾಧ್ಯವಾಗದ ಮಿರ್ಖಾ ಸುಮಾರು 10 ತಿಂಗಳ ಹಿಂದೆ ತನ್ನ ಒಂಬತ್ತು ವರ್ಷದ ಮಗನನ್ನು ಕುರಿಗಾಹಿಯೊಬ್ಬನ ಬಳಿ 45,000 ರೂ. ಗಳಿಗೆ ಅಡಮಾನ ಇಟ್ಟದ್ದ. ಬಳಿಕ ಮಾಸಿಕ ಕಂತುಗಳಲ್ಲಿ ಹಣವನ್ನು ಪಾವತಿಸಿ ಮಗನನ್ನು ಬಿಡಿಸಿಕೊಳ್ಳುವುದಾಗಿ ಹೇಳಿದ್ದ.

ಈ ಬಗ್ಗೆ ಮಾಹಿತಿ ತಿಳಿದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಬಾಲಕನನ್ನು ಗುಜರಾತ್‌ನಲ್ಲಿ ಪತ್ತೆ ಹಚ್ಚಿದ್ದಾರೆ. ಸಾಲ ನೀಡಿದವರ ಹಿಡಿತದಿಂದ ಬಾಲಕನನ್ನು ರಕ್ಷಿಸಿದ್ದಾರೆ.

ಉದಯಪುರದ ರೈಲ್ವೆ ತರಬೇತಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕೆಲಸ ಮಾಡುವ ಶಿಕ್ಷಕ ದುರ್ಗಾರಾಮ್ ಮುವಾಲ್ ಅವರಿಗೆ ಅಂಬಾದೆಯಲ್ಲಿರುವ ಕುಟುಂಬವು ತಮ್ಮ ಅಪ್ರಾಪ್ತ ಮಗುವನ್ನು ಅಡವಿಟ್ಟಿದ್ದು ತಿಳಿಯಿತು. ಬಾಲಕನನ್ನು ಬಿಡಿಸಿಕೊಳ್ಳಲು ಹೋದವರಿಗೆ ಬಾಲಕನನ್ನು ಗುಜರಾತ್‌ನ ಇಡಾರ್‌ಗೆ ಕಳುಹಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿತು.

ಬಾಲಕನ ತಂದೆ ಮಾಸಿಕ ಕಂತುಗಳನ್ನು ಪಾವತಿಸುತ್ತಿದ್ದ. ಆದರೆ ಅವರಿಗೆ ಬಾಲಕನನ್ನು ಭೇಟಿ ಮಾಡಿ ಮಾತನಾಡಲು ಅವಕಾಶ ನೀಡಿರಲಿಲ್ಲ. ಸಾಂದರ್ಭಿಕವಾಗಿ ಮಾತ್ರ ಫೋನ್‌ನಲ್ಲಿ ಮಾತನಾಡಬಹುದಿತ್ತು. ಸಾಲ ನೀಡಿದವರ ಬಗ್ಗೆ ಆತನಿಗೆ ಯಾವುದೇ ಮಾಹಿತಿ ಇರಲಿಲ್ಲ. ದುರ್ಗಾರಾಮ್ ಅವರು ಬಾಲಕನ ತಂದೆಯನ್ನು ಭೇಟಿಯಾದಾಗ ಆತ ಮಗುವನ್ನು ಭೇಟಿಯಾಗುವ ಬಯಕೆ ವ್ಯಕ್ತಪಡಿಸಿದ್ದ. ಇದಕ್ಕೆ ಸಾಲ ನೀಡಿದವರ ಬಳಿ ಒಪ್ಪಿಗೆ ಪಡೆಯಲಾಯಿತು. ದುರ್ಗಾರಾಮ್ ತಮ್ಮ ಸಹೋದ್ಯೋಗಿ ಕುನಾಲ್ ಚೌಧರಿ ಅವರೊಂದಿಗೆ ಗುಜರಾತ್‌ನ ಇಡಾರ್‌ಗೆ ತೆರಳಿ ಬಾಲಕನನ್ನು ಪತ್ತೆ ಮಾಡಿದ್ದಾರೆ.

ಇದನ್ನೂ ಓದಿ: Viral Video: ರಾವಲ್ಪಿಂಡಿಯಲ್ಲಿ ಪ್ರತಿಭಟನೆ: ಕೆಎಫ್‌ಸಿ ಮಳಿಗೆ ಮೇಲೆ ದಾಳಿ

ಶಿಕ್ಷಕರು ಇಡಾರ್‌ಗೆ ಹೋದಾಗ ಅವರನ್ನು 100 ಕಿ.ಮೀ. ದೂರದ ನಿರ್ಜನ ಕಾಡಿಗೆ ಕರೆದೊಯ್ಯಲಾಯಿತು. ಅಲ್ಲಿನ ಹತ್ತಿರದ ಹಳ್ಳಿಯಲ್ಲಿ ಸಾಲಗಾರನ ಮನೆಯಲ್ಲಿ ಹಲವಾರು ಮಕ್ಕಳು ಪತ್ತೆಯಾಗಿದ್ದಾರೆ. ಅಲ್ಲಿದ್ದ ಮಹಿಳೆಯೊಬ್ಬರು ಆರಂಭದಲ್ಲಿ ಮಕ್ಕಳು ತಮ್ಮವರು ಎಂದು ಹೇಳಿಕೊಂಡರು. ಆದರೆ ಶಿಕ್ಷಕ ಉದಯಪುರದ ಬಾಲಕನನ್ನು ಪತ್ತೆ ಹಚ್ಚಿ ಬಿಡಿಸಿಕೊಂಡು ಬಂದಿದ್ದಾರೆ. ಅವರು ವಾಪಾಸ್ ಹೊರಟ ಮೇಲೆ ಅಪರಾಧಿಗಳು ಅವರನ್ನು ಸುಮಾರು 10 ಕಿ. ಮೀ.ವರೆಗೆ ಹಿಂಬಾಲಿಸಿಕೊಂಡು ಬಂದಿದ್ದಾರೆ ಮತ್ತು ಅವರ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.