ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಸ್ತೆಬದಿಯಲ್ಲಿ ಮಾಜಿ ಯೋಧನ ಮೃತದೇಹ ಪತ್ತೆ; ನಿವೃತ್ತ ಸೈನಿಕನ ಸಾವಿಗೆ ಏನು ಕಾರಣ?

Former Army Soldier’s Body Found: ಸ್ವಯಂ ನಿವೃತ್ತಿ ಪಡೆದಿದ್ದ ಮಾಜಿ ಯೋಧನೊಬ್ಬನ ಮೃತದೇಹ ರಸ್ತೆ ಬದಿಯಲ್ಲಿ ಪತ್ತೆಯಾಗಿರುವ ಘಟನೆ ಬಿಹಾರದ ರೋಹ್ತಾಸ್‌ನಲ್ಲಿ ನಡೆದಿದೆ. ಮೃತದೇಹದ ಸಮೀಪ ವಿಷ ಮಾತ್ರೆಗಳೂ ಪತ್ತೆಯಾಗಿದೆ. ರಸ್ತೆಯ ಪಕ್ಕದಲ್ಲಿ ಮೃತದೇಹ ಇರುವುದು ಕಂಡುಬಂದಿದ್ದು, ಗ್ರಾಮದಲ್ಲಿ ಭಯ ಮತ್ತು ಆತಂಕ ಮೂಡಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ರಸ್ತೆಬದಿಯಲ್ಲಿ ಮಾಜಿ ಯೋಧನ ಮೃತದೇಹ ಪತ್ತೆ

ಸಾಂದರ್ಭಿಕ ಚಿತ್ರ -

Priyanka P
Priyanka P Aug 17, 2026 1:53 PM

ಪಟನಾ, ಆ.17: ಸ್ವಯಂ ನಿವೃತ್ತಿ ಪಡೆದಿದ್ದ ಮಾಜಿ ಯೋಧನೊಬ್ಬನ (ex-serviceman) ಮೃತದೇಹ ರಸ್ತೆ ಬದಿಯಲ್ಲಿ ಪತ್ತೆಯಾಗಿರುವ ಘಟನೆ ಬಿಹಾರದ (Bihar) ರೋಹ್ತಾಸ್‌ನಲ್ಲಿ ನಡೆದಿದೆ. ಮೃತದೇಹದ ಸಮೀಪ ವಿಷ ಮಾತ್ರೆಗಳೂ ಪತ್ತೆಯಾಗಿದ್ದು, ಸಾವಿಗೆ ಏನು ಕಾರಣ ಇರಬಹುದು ಎಂಬ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಕರಕತ್ ಪೊಲೀಸ್ ಠಾಣೆ ವ್ಯಾಪ್ತಿಯ ಮೋಥಾ ಗ್ರಾಮದಲ್ಲಿ ನಡೆದಿದೆ.

ರಸ್ತೆಯ ಪಕ್ಕದಲ್ಲಿ ಮೃತದೇಹ ಇರುವುದು ಕಂಡುಬಂದಿದ್ದು, ಗ್ರಾಮದಲ್ಲಿ ಭಯ ಮತ್ತು ಆತಂಕ ಮೂಡಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಸುದ್ದಿ ತಿಳಿದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದರು. ಸಲ್ಫಾ ವಿಷದ ಪ್ಯಾಕೆಟ್‌ಗಳು ಮತ್ತು ಮಾತ್ರೆಗಳು ಮೃತದೇಹದ ಬಳಿಯಿಂದ ಪತ್ತೆಯಾಗಿದ್ದು, ಈ ಸಾವು ವಿಷಪ್ರಾಶನಕ್ಕೆ ಸಂಬಂಧಿಸಿರಬಹುದೇ ಎಂಬ ಬಗ್ಗೆ ಸಂಶಯ ಮೂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡವೂ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆಗೆ ಸಹಾಯ ಮಾಡಿದೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಸಾರಾಮ್ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿರಬಹುದಾದ ಯಾವುದೇ ಕಾಣೆಯಾದ ವ್ಯಕ್ತಿಗಳ ದೂರುಗಳು ದಾಖಲಾಗಿವೆಯೇ ಎಂದು ತಿಳಿಯಲು ಪೊಲೀಸರು ಸಮೀಪದ ಪೊಲೀಸ್ ಠಾಣೆಗಳಲ್ಲಿ ವರದಿಗಳನ್ನು ಪರಿಶೀಲಿಸುತ್ತಿದ್ದಾರೆ.

“ಹೆತ್ತವರನ್ನು ಸ್ವರ್ಗಕ್ಕೆ ಕಳುಹಿಸಿದ್ದೇನೆ”: ಪೋಷಕರನ್ನು ಇರಿದು ಹತ್ಯೆಗೈದ ಪಾಪಿ ಪುತ್ರನ ಹೇಳಿಕೆಗೆ ಬಿಚ್ಚಿಬಿದ್ದ ಪೊಲೀಸರು

ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ಹೇಳಿದರು. ಈ ಸಾವು ಮೃತ ಸೈನಿಕನ ಕುಟುಂಬ ಮತ್ತು ಸ್ಥಳೀಯ ನಿವಾಸಿಗಳನ್ನು ಆಘಾತಕ್ಕೀಡು ಮಾಡಿದೆ. ತನಿಖಾಧಿಕಾರಿಗಳು, ವಿಧಿವಿಜ್ಞಾನ ಮತ್ತು ಮರಣೋತ್ತರ ಪರೀಕ್ಷೆಯ ವರದಿಗಳಿಗಾಗಿ ಕಾಯುತ್ತಿದ್ದಾರೆ.

ಪತ್ನಿಯನ್ನು ಕೊಂದು ಚಾವಣಿಯಿಂದ ಬಿದ್ದು ಮೃತಪಟ್ಟಳು ಎಂದು ಕಥೆ ಕಟ್ಟಿದ ಸೈನಿಕ

ಗಡಿ ಭದ್ರತಾ ಪಡೆ (BSF) ಸೈನಿಕನೊಬ್ಬ ರಜೆಯಲ್ಲಿದ್ದಾಗ ತನ್ನ ಮನೆಯಲ್ಲಿ ಪತ್ನಿಯ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಿದ್ದಾನೆ. ಬಳಿಕ ಚಾವಣಿಯಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ಬಿಂಬಿಸಿರುವ ಘಟನೆ ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ರಮ ಎಂದು ಗುರುತಿಸಲಾಗಿದೆ. ದಂಪತಿ ಸುಮಾರು 12 ವರ್ಷಗಳ ಹಿಂದೆ ಮದುವೆಯಾಗಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಸದ್ಯ ಆರೋಪಿ ಪತಿ ಅಮರ್‌ಜಿತ್ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ರಮ ಅವರ ಕುಟುಂಬ ಸಲ್ಲಿಸಿದ ದೂರಿನ ಪ್ರಕಾರ, ಅವರ ಪತಿ ಅಮರ್‌ಜಿತ್ ಸಿಂಗ್ ಆಗಸ್ಟ್ 13ರ ರಾತ್ರಿ ರಜೆಯ ಮೇಲೆ ಮನೆಗೆ ಮರಳಿದ್ದರು. ಬಳಿಕ ರಮ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ತೀವ್ರ ಗಾಯಗಳಿಂದ ರಮ ಮೃತಪಟ್ಟಿದ್ದಾರೆ. ಆಗಸ್ಟ್ 14ರಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಆಕೆ ಚಾವಣಿಯಿಂದ ಬಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಆಕೆಯ ಕುಟುಂಬಕ್ಕೆ ತಿಳಿಸಲಾಯಿತು. ಆದರೆ ಮನೆಯವರು ಆಸ್ಪತ್ರೆಗೆ ತಲುಪಿದಾಗ, ಅಷ್ಟರಲ್ಲಾಗಲೇ ರಮ ಮೃತಪಟ್ಟಿದ್ದರು.