ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಯುಜಿಸಿ-ನೆಟ್‌ ಮರುಪರೀಕ್ಷೆ: ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಬೇಡ, ಕೇಂದ್ರದ ವಿರುದ್ಧ ರಾಹುಲ್‌ ಕಿಡಿ

‘ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಸಾಲು ಸಾಲು ತಪ್ಪುಗಳನ್ನು ಮಾಡುತ್ತಿದೆ. ಆದರೆ ಅದಕ್ಕೆ ಭಾರೀ ಬೆಲೆ ತೆರುತ್ತಿರುವುದು ಮಾತ್ರ ದೇಶದ ಲಕ್ಷಾಂತರ ಅಮಾಯಕ ವಿದ್ಯಾರ್ಥಿಗಳು’, ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಯುಜಿಸಿ-ನೆಟ್‌ ಮರುಪರೀಕ್ಷೆ: ಮೋದಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಕೇಂದ್ರದ ವಿರುದ್ಧ ರಾಹುಲ್‌ ಗಾಂಧಿ ಕಿಡಿ (ಸಂಗ್ರಹ ಚಿತ್ರ) -

Vishakha Bhat Heggar
Vishakha Bhat Heggar Aug 17, 2026 12:30 PM

ನವದೆಹಲಿ: ‘ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (National Testing Agency) ಸಾಲು ಸಾಲು ತಪ್ಪುಗಳನ್ನು ಮಾಡುತ್ತಿದೆ. ಆದರೆ ಅದಕ್ಕೆ ಭಾರೀ ಬೆಲೆ ತೆರುತ್ತಿರುವುದು ಮಾತ್ರ ದೇಶದ ಲಕ್ಷಾಂತರ ಅಮಾಯಕ ವಿದ್ಯಾರ್ಥಿಗಳು’, ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಯುಜಿಸಿ-ನೆಟ್ ಪರೀಕ್ಷೆನ್ನು ರದ್ದುಗೊಳಿಸಿ ಮರುಪರೀಕ್ಷೆಗೆ ಆದೇಶಿಸಿರುವ ಶಿಕ್ಷಣ ಸಚಿವಾಲಯದ ನಿರ್ಧಾರವನ್ನು ಖಂಡಿಸಿರುವ ಅವರು, ಇದು ಯುವಜನರ ಭವಿಷ್ಯದ ಜೊತೆ ಆಡುತ್ತಿರುವ ಚೆಲ್ಲಾಟ ಎಂದು ಕಿಡಿಕಾರಿದ್ದಾರೆ.

ಯುಜಿಸಿ-ನೆಟ್ ಪರೀಕ್ಷಾ ಆಕ್ರಮದ ಹಿನ್ನಲೆಯಲ್ಲಿ ಸಿಬಿಐ ತನಿಖೆಗೆ ಆದೇಶಿಸಿ ಪರೀಕ್ಷೆಯನ್ನು ರದ್ದುಗೊಳಿಸಿರುವುದನ್ನು ಉಲ್ಲೇಖಿಸಿ ಸೋಶಿಯಲ್ ಮೀಡಿಯಾ ಎಕ್ಸ್ನಲ್ಲಿ ಫೋಸ್ಟ ಮಾಡಿರುವ ರಾಹುಲ್ ಗಾಂಧಿ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪರೀಕ್ಷಾ ನಿರ್ವಹಣಾ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ್ದಾರೆ.

‘ಪ್ರಶ್ನೇಪತ್ರಕೆ ಸೋರಿಕೆ ಮತ್ತು ಅಕ್ರಮಗಳು ದೇಶದಲ್ಲಿ ನಿರಂತರವಾಗಿ ನಡೆಯುತ್ತಿವೆ. ನೀಟ್ ಪರೀಕ್ಷೆಯ ಅಕ್ರಮದ ಕಾವು ಆರುವ ಮುನ್ನವೇ ಈಗ ಯುಜಿಸಿ-ನೆಟ್ ಪರೀಕ್ಷೆ ರದ್ದುಗೊಳಿಸಲಾಗಿದೆ. ಪರೀಕ್ಷೆಗಾಗಿ ತಿಂಗಳುಗಟ್ಟಲೇ ರಾತ್ರಿ-ಹಗಲು ಶ್ರಮಿಸಿದ ವಿದ್ಯಾರ್ಥಿಗಳ ಶ್ರಮ ಮತ್ತು ಹಣ ಸಮಯವೆಲ್ಲವೂ ಎನ್‌ಟಿಎ ಮಾಡಿರುವ ಒಂದೇ ಒಂದು ತಪ್ಪಿನಿಂದ ನೀರು ಪಾಲಾಗಿದೆ’. ಎಂದು ಆರೋಪಿಸಿದರು.

ಪರೀಕ್ಷಾ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಸರಣಿ ಅಕ್ರಮಗಳಿಗೆ ಸರ್ಕಾರದ ನೀತಿಗಳೇ ಕಾರಣ ಎಂದು ಆರೋಪಿಸಿರುವ ರಾಹುಲ್ ಗಾಂಧಿ, ‘ಬಿಜೆಪಿ ಸರ್ಕಾರವು ಶಿಕ್ಷಣ ಸಂಸ್ಥೆಗಳನ್ನು ಮತ್ತು ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದೆ. ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರವನ್ನು ಧ್ವಂಸಗೊಳಿಸಿರುವ ಈ ಕೇಂದ್ರಿಕೃತ ಪರೀಕ್ಷಾ ಮಾದರಿ ಸಂಪೂರ್ಣವಾಗಿ ವಿಫಲವಾಗಿದೆ, ಎಂದು ಪ್ರತಿಪಾದಿಸಿದರು.

ಕೇಂದ್ರ ಸರ್ಕಾರದ ಪರೀಕ್ಷಾ ನಿರ್ವಹಣಾ ಮಾದರಿಯನ್ನು ಕಟುವಾಗಿ ಟೀಕಿಸಿದ ರಾಹುಲ್ ಗಾಂಧಿ, ಪ್ರಚಲಿತ ಪರೀಕ್ಷಾ ವ್ಯವಸ್ಥೆಯುನ್ನು ‘ಎಕ್ಸ್ಟ್ರಾಕ್ಷನ್ ಮಿಷನ್’ಎಂದು ಕರೆದಿದ್ದಾರೆ. ‘ ನಾನು ಕೋಟಾ ಡೆಹ್ರಾಡೂನ್ ಮತ್ತು ಪ್ರಯಾಗ್‌ರಾಜ್‌ನಲ್ಲಿ ಇದನ್ನೇ ಹೇಳಿದ್ದೆ, ಈಗಲೂ ಅದನ್ನೇ ಹೇಳುತ್ತಿದ್ದೆನೆ. ಇದು ದೇಶದ ಶಿಕ್ಷಣ ವ್ಯವಸ್ಥೆಯಾಗಿ ಉಳಿದಿಲ್ಲ, ಇದು ವಿದ್ಯಾರ್ಥಿಗಳ ವರ್ಷಗಳ ಶ್ರಮ, ಹಣ, ಮಾನಸಿಕ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಹಿಂಡಿ ಹಿಪ್ಪೆ ಮಾಡುವ ಯಂತ್ರವಾಗಿದೆ. ಎಷ್ಟೆಲ್ಲಾ ಪಡೆದು ಇದು ವಿದ್ಯಾರ್ಥಿಗಳಿಗೆ ಏನನ್ನು ನೀಡುತ್ತಿದ್ದ? ಒಂದು ಸೂಕ್ತ ಉದ್ಯೋಗವನ್ನು ಕೊಡುತ್ತಿಲ್ಲಾ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ರಾಹುಲ್‌ ಗಾಂಧಿ ಜೊತೆ ಬೋಟ್‌ನಲ್ಲಿದ್ದ ಮಹಿಳೆ, ಮಗು ಯಾರು ಗೊತ್ತಾ? ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಯ್ತು ಫೋಟೋ

ಜೂನ್ 2026 ರಂದು ಎನ್‌ಟಿಎ ನಡೆಸಿದ ಯುಜಿಸಿ-ನೆಟ್‌ನ ಇಂಗ್ಲಿಷ್, ಕಾಮರ್ಸ್ ಹಾಗೂ ಸೋಷಿಯಾಲಜಿ ವಿಷಯಗಳ ಪ್ರಶ್ನೇಪತ್ರಿಕೆಗಳಲ್ಲಿ ಅಕ್ಷರ ದೋಷಗಳು, ತಾಂತ್ರಿಕ ಲೋಪಗಳು, ತಪ್ಪಾದ ಮಾಹಿತಿ ಮತ್ತು ಹಳೆಯ ಪರೀಕ್ಷೆಗಳ ಪ್ರಶ್ನೆಗಳ ಯಥಾವತಾಗಿ ಪುನರಾವರ್ತಿಸಿರುವುದು ಕಂಡುಬಂದಿದೆ. ಈ ಕಾರಣಗಳಿಂದ ಆ 3 ವಿಷಯಗಳ ಪರೀಕ್ಷೆಯನ್ನು ರದ್ದುಗೊಳಿಸಿ ಸೆಂಪ್ಟೆಂಬರ್‌ನಲ್ಲಿ ಪರುಪರೀಕ್ಷೆ ನಡೆಸುವುದಾಗಿ ಎನ್‌ಟಿಎ ಘೋಷಿಸಿದೆ.