ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ರೋಹಿತ್-ಜೈಸ್ವಾಲ್‌ ಓಪನರ್ಸ್‌, ಮೊದಲನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

India's Playing XI for 1st ODI: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ನವೆಂಬರ್‌ 30 ರಂದು ಮೊದಲನೇ ಏಕದಿನ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XI ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ. ಶುಭಮನ್‌ ಗಿಲ್‌ ಅವರ ಅನುಪಸ್ಥಿತಿಯಲ್ಲಿ ಕೆಎಲ್‌ ರಾಹುಲ್‌ ಅವರು ತಂಡವನ್ನು ಮುನ್ನೆಡಸಲಿದ್ದಾರೆ.

ಮೊದಲನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ. -

Profile
Ramesh Kote Nov 28, 2025 9:41 PM

ನವದೆಹಲಿ: ಎರಡು ಪಂದ್ಯಗಳ ಟೆಸ್ಟ್ ಸರಣಿಯ ನಂತರ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು (IND vs SA) ನವೆಂಬರ್ 30 ರಂದು ಪ್ರಾರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಾದಾಟ ನಡೆಸಲಿವೆ. ಈ ಸರಣಿಯ ಮೊದಲ ಏಕದಿನ ಪಂದ್ಯ ರಾಂಚಿಯಲ್ಲಿ ನಡೆಯಲಿದೆ. ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಭಾರತವನ್ನು ವೈಟ್‌ವಾಶ್ ಮಾಡಿತ್ತು. ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಮತ್ತೆ ಪುಟಿದೇಳಲು ಎದುರು ನೋಡುತ್ತಿದೆ. ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಮತ್ತೊಮ್ಮೆ ಏಕದಿನ ಸರಣಿಯಲ್ಲಿ ಭಾರತ ಪರ ಆಡುವುದನ್ನು ಕಾಣಬಹುದು. ಇದೀಗ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಪರ ಯಾರೆಲ್ಲಾ ಆಟಗಾರರು ಆಡಲಿದ್ದಾರೆಂದು ತೀವ್ರ ಕುತೂಹಲ ಕೆರಳಿಸಿದೆ. ಈ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

ಭಾರತದ ಏಕದಿನ ತಂಡದ ನಾಯಕ ಶುಭಮನ್ ಗಿಲ್ ಗಾಯಗೊಂಡಿದ್ದಾರೆ. ಆದ್ದರಿಂದ, ರೋಹಿತ್ ಶರ್ಮಾ ಜೊತೆ ಯಾರು ಆರಂಭಿಕರಾಗಿ ಆಡಲಿದ್ದಾರೆ ಎಂದು ಎಲ್ಲರೂ ಎದುರು ನೋಡುತ್ತಿದ್ದಾರೆ. ರೋಹಿತ್ ಶರ್ಮಾ ಜೊತೆ ಭಾರತಕ್ಕೆ ಆರಂಭಿಕರಾಗಿ ಮೂರು ಆಯ್ಕೆಗಳಿವೆ: ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಮತ್ತು ಕೆಎಲ್ ರಾಹುಲ್. ಆದಾಗ್ಯೂ, ರಾಂಚಿಯಲ್ಲಿ ನಡೆಯಲಿರುವ ಮೊದೊಲನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆ ಯಶಸ್ವಿ ಜೈಸ್ವಾಲ್ ಇನಿಂಗ್ಸ್‌ ಆರಂಭಿಸುವ ಸಾಧ್ಯತೆ ಹೆಚ್ಚು.

IND vs SA: ರಾಂಚಿಯಲ್ಲಿ ಬ್ಯಾಟಿಂಗ್‌ ಅಭ್ಯಾಸ ಆರಂಭಿಸಿದ ಕೊಹ್ಲಿ, ರೋಹಿತ್‌

ರಿಷಭ್ ಪಂತ್ ಅವರಿಗೆ ಪ್ಲೇಯಿಂಗ್‌ XIನಲ್ಲಿ ಅವಕಾಶ ಸಿಗುವುದು ಅನುಮಾನ. ಕೆಎಲ್ ರಾಹುಲ್ ಬಹಳ ಸಮಯದಿಂದ ಭಾರತದ ಏಕದಿನ ಪಂದ್ಯಗಳಲ್ಲಿ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ ಪಂತ್ ಏಕದಿನ ತಂಡದಿಂದ ದೀರ್ಘ ಸಮಯ ಹೊರಗೆ ಉಳಿದಿದ್ದರು. ಆದ್ದರಿಂದ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್, ರಿಷಭ್ ಪಂತ್ ಬದಲಿಗೆ ಸ್ಥಾನ ಪಡೆಯಬಹುದು ಮತ್ತು ತಿಲಕ್ ವರ್ಮಾ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಅವಕಾಶ ಪಡೆಯಬಹುದು.

ಆಲ್‌ರೌಂಡರ್‌ಗಳಾಗಿ ರವೀಂದ್ರ ಜಡೇಜಾ, ನಿತೀಶ್ ಕುಮಾರ್‌ ರೆಡ್ಡಿ ಹಾಗೂ ವಾಷಿಂಗ್ಟನ್‌ ಸುಂದರ್‌ ಆಡಬಹುದು. ಪೂರ್ಣ ಪ್ರಮಾಣದ ಸ್ಪಿನ್ನರ್‌ ಆಗಿ ಕುಲ್ದೀಪ್‌ ಯಾದವ್‌ಗೆ ಅವಕಾಶ ನೀಡಬಹುದು. ವೇಗದ ಬೌಲಿಂಗ್‌ ವಿಭಾಗದಲ್ಲಿ ಹರ್ಷಿತ್‌ ರಾಣಾ ಹಾಗೂ ಅರ್ಷದೀಪ್‌ ಸಿಂಗ್‌ ಆಡಿದರೆ, ಇವರಿಗೆ ಮೂರನೇ ವೇಗಿಯಾಗಿ ನಿತೀಶ್‌ ಕುಮಾರ್‌ ರೆಡ್ಡಿ ಸಾಥ್‌ ನೀಡಬಹುದು.

IND vs SA: ಭಾರತ ತಂಡದ ಹೆಡ್‌ ಕೋಚ್‌ ಸ್ಥಾನದಿಂದ ಗೌತಮ್‌ ಗಂಭೀರ್‌ರನ್ನು ಕಿತ್ತಾಕಿ ಎಂದ ಮನೋಜ್‌ ತಿವಾರಿ!

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

  1. ರೋಹಿತ್ ಶರ್ಮಾ (ಓಪನಿಂಗ್‌ ಬ್ಯಾಟ್ಸ್‌ಮನ್‌)
  2. ಯಶಸ್ವಿ ಜೈಸ್ವಾಲ್ (ಓಪನಿಂಗ್‌ ಬ್ಯಾಟ್ಸ್‌ಮನ್)
  3. ವಿರಾಟ್ ಕೊಹ್ಲಿ (ಬ್ಯಾಟ್ಸ್‌ಮನ್‌)
  4. ತಿಲಕ್ ವರ್ಮಾ (ಬ್ಯಾಟ್ಸ್‌ಮನ್‌)
  5. ಕೆಎಲ್ ರಾಹುಲ್ (ನಾಯಕ ಮತ್ತು ವಿಕೆಟ್ ಕೀಪರ್)
  6. ನಿತೀಶ್ ಕುಮಾರ್ ರೆಡ್ಡಿ (ಆಲ್‌ರೌಂಡರ್‌)
  7. ವಾಷಿಂಗ್ಟನ್ ಸುಂದರ್ (ಆಲ್‌ರೌಂಡರ್‌)
  8. ರವೀಂದ್ರ ಜಡೇಜಾ (ಆಲ್‌ರೌಂಡರ್‌)
  9. ಕುಲ್‌ದೀಪ್ ಯಾದವ್ (ಸ್ಪಿನ್ನರ್‌)
  10. ಹರ್ಷಿತ್ ರಾಣಾ (ವೇಗದ ಬೌಲರ್‌)
  11. ಅರ್ಷದೀಪ್ ಸಿಂಗ್ (ವೇಗದ ಬೌಲರ್‌)