ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೇಶದಲ್ಲೇ ಗರಿಷ್ಠ ತಾಪಮಾನ ಉತ್ತರ ಪ್ರದೇಶದಲ್ಲಿ ದಾಖಲು; ಬರೋಬ್ಬರಿ 48°C ಉಷ್ಣಾಂಶಕ್ಕೆ ಜನಜೀವನ ಅಸ್ತವ್ಯಸ್ತ

ಉತ್ತರ ಪ್ರದೇಶದ ಜಿಲ್ಲೆಯೊಂದರಲ್ಲಿ ದೇಶದಲ್ಲೇ ಗರಿಷ್ಠ ತಾಪಮಾನ ದಾಖಲಾಗಿದೆ. ಉತ್ತರ ಪ್ರದೇಶದ ಹೆಚ್ಚಿನ ಭಾಗಗಳು ಗುರುವಾರ ತೀವ್ರ ಶಾಖದ ಅಲೆಯನ್ನು ಎದುರಿಸಿತ್ತು. ಸತತ ನಾಲ್ಕನೇ ದಿನ ಇಲ್ಲಿ 48 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಇದನ್ನು ರಾಜ್ಯದ ಜನರು ಅಗ್ನಿ ಪರೀಕ್ಷೆ ಎಂದು ಕರೆದಿದ್ದಾರೆ.

ಗರಿಷ್ಠ ತಾಪಮಾನ ಉತ್ತರಪ್ರದೇಶದಲ್ಲಿ ದಾಖಲು

ಸಂಗ್ರಹ ಚಿತ್ರ -

ನವದೆಹಲಿ: ದೇಶಾದ್ಯಂತ ಬಿಸಿಲಿನ ( hottest place) ತೀವ್ರತೆ ಹೆಚ್ಚಾಗಿದ್ದು, ಗರಿಷ್ಠ ತಾಪಮಾನ (hottest district) ಉತ್ತರಪ್ರದೇಶದಲ್ಲಿ (Uttar Pradesh) ದಾಖಲಾಗಿದೆ. ಸತತ ನಾಲ್ಕನೇ ದಿನವೂ ಇಲ್ಲಿ 48 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ತಾಪಮಾನ (Highest temperature) ದಾಖಲಾಗಿದೆ. ಇಲ್ಲಿನ ಜನರು ಇದನ್ನು ಅಗ್ನಿ ಪರೀಕ್ಷೆ ಎಂದು ಕರೆದಿದ್ದಾರೆ. ಉತ್ತರ ಭಾರತದ ಹೆಚ್ಚಿನ ಭಾಗಗಳು ಗುರುವಾರ ತೀವ್ರವಾದ ಶಾಖದ ಅಲೆಗೆ ಸಿಲುಕಿದೆ. ಅದರಲ್ಲೂ ಬಂಡಾ ಜಿಲ್ಲೆ ದೇಶದ ಅತ್ಯಂತ ಬಿಸಿಲಿನ ದಾಖಲಾಗಿದೆ. ಉತ್ತರ ಪ್ರದೇಶದ ಬಂಡಾ ಜಿಲ್ಲೆ ದೇಶದಲ್ಲೇ ಗರಿಷ್ಠ 48.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಿಸಿದೆ.

ಕಳೆದ ಕೆಲವು ದಿನಗಳಿಂದ ಬಂಡಾ ಜಿಲ್ಲೆಯು ದೇಶದ ಗರಿಷ್ಠ ತಾಪಮಾನವನ್ನು ಕಾಯ್ದುಕೊಂಡು ಅಗ್ರಸ್ಥಾನದಲ್ಲಿದೆ. ಇಲ್ಲಿ ಕಳೆದ ಒಂದು ವಾರದಿಂದ ಸುಮಾರು 45 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ.

ಕಾಕ್ರೋಚ್ ಜನತಾ ಪಕ್ಷವು 'ಜಿರಳೆ' ಚುನಾವಣಾ ಚಿಹ್ನೆ ಪಡೆಯಬಹುದೇ? ಈ ಬಗ್ಗೆ ತಜ್ಞರು ಹೇಳೋದೇನು?

ಈ ಕುರಿತು ಪ್ರತಿಕ್ರಿಯಿಸಿರುವ ಹವಾಮಾನ ತಜ್ಞರಾದ ಡಾ. ದಿನೇಶ್, ಉತ್ತರ ಪ್ರದೇಶದಲ್ಲಿ ಬಿಸಿಲಿನ ತೀವ್ರತೆಗೆ ಕರ್ಕಾಟಕ ವೃತ್ತದ ಸಾಮೀಪ್ಯ ಕಾರಣ. ಯಾಕೆಂದರೆ ಇದರಿಂದಾಗಿಯೇ ನೇರ ಸೂರ್ಯನ ಬೆಳಕು, ಸ್ಪಷ್ಟ ಆಕಾಶ, ಕಡಿಮೆ ಮಣ್ಣಿನ ತೇವಾಂಶ ಹೊಂದಿರುವ ಪ್ರಸ್ಥಭೂಮಿ, ಒಣಗುತ್ತಿರುವ ನದಿಗಳು, ಅರಣ್ಯನಾಶ ಮತ್ತು ಗಣಿಗಾರಿಕೆ ಪ್ರಮುಖ ಕಾರಣಗಳಾಗಿವೆ ಎಂದು ತಿಳಿಸಿದರು.

ಮುಂದಿನ ಮೂರು ದಿನಗಳವರೆಗೆ ರಾಜ್ಯಾದ್ಯಂತ ತೀವ್ರ ಶಾಖದ ಅಲೆಯ ರೆಡ್ ಅಲರ್ಟ್ ಅನ್ನು ಘೋಷಿಸಲಾಗಿದೆ. ಬಳಿಕದ ದಿನಗಳಿಗೆ ಕಿತ್ತಳೆ ಎಚ್ಚರಿಕೆಯನ್ನು ನೀಡಲಾಗಿದೆ. ಇಲ್ಲಿ ರಾತ್ರಿ ಕೂಡ ಬಿಸಿಯಾಗಿರುವ ಎಚ್ಚರಿಕೆ ನೀಡಲಾಗಿದೆ ಎಂದು ಲಕ್ನೋ ಹವಾಮಾನ ಕಚೇರಿ ನಿರ್ದೇಶಕ ಮನೀಶ್ ಆರ್. ರನಾಲ್ಕರ್ ತಿಳಿಸಿದ್ದಾರೆ.

ಬಂಡಾದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಇಲ್ಲಿ ಅರಣ್ಯನಾಶ ಮತ್ತು ಅಕ್ರಮ ಗಣಿಗಾರಿಕೆಯ ಕಾರಣದಿಂದ ತಾಪಮಾನ ತೀವ್ರ ಹೆಚ್ಚಳವಾಗಿದೆ. ಇದು ಜಿಲ್ಲೆಯ ನಿವಾಸಿಗಳಿಗೆ ಅಗ್ನಿ ಪರೀಕ್ಷೆಯಾಗಿದೆ ಎಂದು ಸ್ಥಳೀಯರಾದ ಪುನೀತ್ ಸಕ್ಸೇನಾ ಹೇಳಿದ್ದಾರೆ.

ವಾಯುಭಾರ ಕುಸಿತದ ಕಾರಣದಿಂದಾಗಿ ದಕ್ಷಿಣ ಉತ್ತರ ಪ್ರದೇಶದಲ್ಲಿ ಬಿಸಿ ಮತ್ತು ಶುಷ್ಕ ಗಾಳಿ ಉಂಟಾಗಿದ್ದು, ಇದು ಮಣಿಪುರದವರೆಗೆ ವಿಸ್ತರಿಸಿಸೈಡ್. ರಾಜ್ಯದ ಉತ್ತರ ಭಾಗಗಳಲ್ಲಿ ತೇವಾಂಶದಿಂದ ತುಂಬಿದ ಪೂರ್ವ ಗಾಳಿ ಬೀಸುವುದರಿಂದ ಶಾಖ ಮತ್ತು ತೇವಾಂಶದ ಮಟ್ಟ ಏರಿಕೆಯಾಗಿದೆ ಎಂದು ಲಕ್ನೋದ ಹವಾಮಾನ ಕೇಂದ್ರ ತಿಳಿಸಿದೆ.

Indira Kit: ಅಕ್ಕಿಯ ಜೊತೆಗೆ ಇಂದಿರಾ ಕಿಟ್: ಸರ್ಕಾರದ ಘೋಷಣೆ ಮೇಲೆ ಜನರ ಕಣ್ಣು

ಮೇ 21 ರಿಂದ ಮೇ 25 ರವರೆಗೆ ಪಶ್ಚಿಮ ಉತ್ತರ ಪ್ರದೇಶಕ್ಕೆ ಹಗಲಿನಲ್ಲಿ ಉಷ್ಣ ಅಲೆ, ಮೇ 22 ಮತ್ತು ಮೇ 24 ರ ನಡುವೆ ಕೆಲವು ಸ್ಥಳಗಳಲ್ಲಿ ಬೆಚ್ಚಗಿನ ರಾತ್ರಿ ಇರಲಿದೆ. ರಾಜ್ಯಾದ್ಯಂತ ಒಣ ವಾತಾವರಣ ಮುಂದುವರಿಯುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.